28th March 2024
Share

TUMAKURU:SHAKTHIPEETA FOUNDATION

  ರಾಜ್ಯ ಮಟ್ಟದ ದಿಶಾ ಸಮಿತಿ ಮತ್ತು 31 ಜಿಲ್ಲಾ ಮಟ್ಟದ ದಿಶಾ ಸಮಿತಿ ಆನ್‍ಲೈನ್ ಸಭೆಗಳನ್ನು ನಡೆಸುವ ಮೂಲಕ ಕೊರೋನಾ ಪೀಡಿತರಿಗೆ ಮತ್ತು ರಾಜ್ಯದ ಜನತೆಗೆ ಆತ್ಮ ಸ್ಥೈರ್ಯ ತುಂಬಲು ಮಾನ್ಯ ಮುಖ್ಯ ಮಂತ್ರಿಯವರಿಗೆ ಮತ್ತು ರಾಜ್ಯದ ಎಲ್ಲಾ ಸಂಸದರಿಗೆ ಒತ್ತಾಯಿಸಿ ಡಿಜಿಟಲ್ ಪತ್ರ ಬರೆಯಲಾಗಿದೆ.

ಸಭೆಯ ಅಜೆಂಡಾಗಳು

1.ಕೊರೊನಾ ಹಿನ್ನಲೆಯಲ್ಲಿ ರಾಜ್ಯದ ಬೇಡಿಕೆಗಳೇನು ಹಾಗೂ ಕೇಂದ್ರ ಸರ್ಕಾರ ಸ್ಪಂದಿಸಿರುವ ಬಗ್ಗೆ.

2.ಪ್ರತಿಯೊಂದು ತಾಲ್ಲೋಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಇರುವ ಆಸ್ಪತ್ರೆವಾರು ಬೆಡ್ ಎಷ್ಟು, ಕೊರೊನಾ ಪೀಡಿತರ ಸಂಖ್ಯೆ ಎಷ್ಟು, ಆಕ್ಸಿಜನ್ ಸಿಲಿಂಡರ್ ಸ್ಥಿತಿಗತಿ ಬಗ್ಗೆ.

3.ಸೋಂಕು ಪೀಡಿತರಿಗೆ ಪ್ರತಿ ದಿವಸದ ಬೆಡ್ ಮತ್ತು ಆಕ್ಸಿಜನ್ ಲಭ್ಯತೆಯ ಡಿಜಿಟಲ್ ಮಾಹಿತಿ ನೀಡುವ ಬಗ್ಗೆ.

4.ಸೋಂಕಿತರವಾರು ಖಾಸಗಿ ಆಸ್ಪತ್ರೆಗಳ ಬಿಲ್ ಮತ್ತು ಅಗತ್ಯ ಔಷಧಿಗಳ ಸರಬರಾಜು ಆಗುತ್ತಿರುವ ಬಗ್ಗೆ.

5.ಆಯುಷ್ಮಾನ್ ಕಾರ್ಡ್ ವಿತರಣೆ ಮತ್ತು ಇತರೆ ಅರೋಗ್ಯ ಕಾರ್ಡ್ ಇನ್‍ಸೂರೆನ್ಸ್ ಕಾರ್ಡ್‍ಗಳಿಂದ ಆಗುವ ಅನೂಕೂಲಗಳ ಬಗ್ಗೆ ಚರ್ಚೆ.

6.ಕೊರೊನಾ ಸೋಂಕಿತರಿಗೆ ಯಾವುದೇ ಆರ್ಥಿಕ ಹೊರೆಯಾಗದ ರೀತಿಯಲ್ಲಿ ಎಲ್ಲಾ ಉಚಿತ ನೆರವು ನೀಡುವ ಬಗ್ಗೆ.

7.ಶೇ 100 ರಷ್ಟು ಜನರಿಗೆ ಲಸಿಕೆ ಹಾಕುವ ಬಗ್ಗೆ.

8.ಈ ವೇಳೆಯಲ್ಲಿ ಜನರ ಹಸಿವು ನೀಗಿಸುವ ಬಗ್ಗೆ.

9.ಆಯುಷ್ ಇಲಾಖೆ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಬಗ್ಗೆ.

ಕನಿಷ್ಟ ವಾರಕ್ಕೆ ಎರಡು ಭಾರಿ ಆನ್‍ಲೈನ್ ಸಭೆ ಮಾಡಿ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡುವುದು ಅಗತ್ಯವಾಗಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದ ದಿಶಾ ಸಮಿತಿಗಳು ಮಾಧ್ಯಮ ವಕ್ತಾರರನ್ನು ನೇಮಿಸಿ ಸೂಕ್ತ ಕ್ರಮ ಕೈಗೊಳ್ಳಲು ಮನವಿ.

ರಾಜ್ಯ ಮಟ್ಟದ ದಿಶಾ ಸಮಿತಿಯಲ್ಲಿ ಎಲ್ಲಾ ಪಕ್ಷದ ಸಂಸದರು ಮತ್ತು ಶಾಸಕರು ಇರುವುದರಿಂದ ಅವರ ಪಕ್ಷದ ನಿಲುವುಗಳನ್ನು ಸಭೆಯಲ್ಲಿ ರೆಕಾರ್ಡ್ ಮಾಡುವುದು ಕಡ್ಡಾಯ ಮಾಡ ಬೇಕಿದೆ. ಈ ಸಮಯ ಹಾದಿ ಬೀದಿ ರಂಪಾಟ ಮಾಡುವುದಲ್ಲ, ಎಲ್ಲರೂ ಒಗ್ಗಟ್ಟಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಮತ್ತು ಜನತೆಗೆ ಆತ್ಮಸ್ಥೈರ್ಯ ತುಂಬುವುದಾಗಿದೆ.