24th April 2024
Share

TUMAKURU:SHAKTHIPEETA FOUNDATION

  ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ರಾಜ್ಯದ ಎಲ್ಲಾ 6021 ಗ್ರಾಮ ಪಂಚಾಯಿತಿಗಳು ಮತ್ತು 29340 ಗ್ರಾಮಗಳಲ್ಲೂ   GP & VILLAGE TASK FORCE   ರಚಿಸುವ ಮೂಲಕ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

  ನಿಜಕ್ಕೂ ಮೆಚ್ಚುವಂತ ಕೆಲಸ ಪ್ರತಿ ಮನೆ ಮನೆಯ ಮೇಲೆ, ಪ್ರತಿ ವ್ಯಕ್ತಿಯ ಮೇಲೆ ಕೊರೊನಾ ವೈರಸ್ ನಿಗಾ ಇಡಲು ಈ ಟಾಸ್ಕ್ ಫೋರ್ಸ್ ಸಹಕಾರಿಯಾಗಲಿದೆ. ವಿಶೇಷವಾಗಿ ವಿದೇಶದಲ್ಲಿ ಯಾರ ಮನೆಯವರು ಇದ್ದಾರೆ. ಯಾರು ವಿದೇಶದಿಂದ ಈಗ ಬಂದಿದ್ದಾರೆ ಎಂಬ ತಾಜಾ ಮಾಹಿತಿ ದೊರೆಯಲಿದೆ. ಬೆಂಗಳೂರಿನಲ್ಲಿ ಯಾರ ಮನೆಯವರಿದ್ದಾರೆ, ಯಾರು ಬೆಂಗಳೂರಿನಿಂದ ಈಗ ಬಂದಿದ್ದಾರೆ ಎಂಬ ಮಾಹಿತಿಯೂ ದೊರೆಯಲಿದೆ.

   ಒಂದು ಗ್ರಾಮದ ಜನರ ಜೀವನ ಹಾಳು ಮಾಡಲು ಕೊರೊನಾ ವೈರಸ್ ಸೊಂಕು ಇರುವ  ಕೇವಲ ಒಬ್ಬ ವ್ಯಕ್ತಿ ಸಾಕು. ನಮ್ಮ ಗ್ರಾಮದ ಜನರಿಗೆ ಆ ಊರಿನಲ್ಲಿರುವವರಿಗಿಂತ ಹೊರಭಾಗದಲ್ಲಿ ಇರುವವರ ಮೇಲೆ ಪ್ರೀತಿ ಜಾಸ್ತಿ. ನಮ್ಮ ಹುಡುಗ/ಹುಡುಗಿ ಏನೂ ಅಗಲ್ಲ ಎಂದರೆ ಢಮಾರ್ ನಮ್ಮ ಎಚ್ಚರಿಕೆ ನಮಗೆ ಇರಲೇಬೇಕು ಎಂಬುದು ಸರ್ಕಾರದ ಉದ್ದೇಶ.

  ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಾಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜೊತೆಗೆ ಪಟ್ಟಿಯಲ್ಲಿರುವವರನ್ನು ಸದಸ್ಯರಾಗಿ ಸೇರ್ಪಡೆ ಮಾಡಿದ್ದಾರೆ. ವಿಧ್ಯುತ್ ಪ್ರತಿನಿಧಿ, ಗ್ರಾಮದ ಸರಪಂಚರು, ಗ್ರಾಮದ ತೋಟಿ/ತಳವಾರ/ ದೇವಾಲಯದ ಪೂಜಾರಿರವರನ್ನು ಸೇರ್ಪಡೆ ಮಾಡಬಹುದಿತ್ತು. ಜಾಸ್ತಿ ಜನ ಆಗುತ್ತಾರೆ ಎಂಬ ದೃಷ್ಠಿಯಿಂದ ಕಡಿಮೆ ಮಾಡಿರಬಹುದು.

  ಮಾನ್ಯ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪನವರಲ್ಲಿ ಮನವಿ, ಈ ಕಾರ್ಯಪಡೆಗಳು ಏನಾಗಿವೆ, ಕಾರ್ಯಪಡೆಯಲ್ಲಿರುವವರಿಗೆ ಮೊದಲು ನಾವು ಸಹ ಈ ಸಮಿಯಿಲ್ಲದ್ದೇವೆ ಎಂಬ ಮಾಹಿತಿಯೂ ಇರಲಿಕ್ಕಿಲ್ಲ. ಈ ಕಾರ್ಯಪಡೆಗಳ ಕಾರ್ಯನಿರ್ವಹಣೆ ಬಗ್ಗೆ  ಮಾನಿಟರ್ ಮಾಡುವವರು ಯಾವ ಇಲಾಖೆಯವರು ಎಂಬ ಮಾಹಿತಿ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಮಿತಿಯಲ್ಲಿ ಬಿಸಿ,ಬಿಸಿ ಚರ್ಚೆ ನಡೆಯಿತು.

 ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 2111 ಆಶಾ ಕಾರ್ಯಕರ್ತೆಯರು ಇದ್ದಾರಂತೆ, ಅವುಗಳಲ್ಲಿ 2095 ಜನ ಮಾತ್ರ ಕಾರ್ಯನಿರ್ವಹಿಸುತ್ತಾರಂತೆ, ಆಶಾ ಕಾರ್ಯತರವಾರು ಸೋಂಕಿತರು ಎಷ್ಟು ಜನರಿದ್ದಾರೆ ಮಾಹಿತಿ ಕೊಡಿ ಎಂದರೆ ಮಾಹಿತಿ ಇಲ್ಲವಂತೆ.

ಇವೆಲ್ಲಾ ನಾಮಕವಸ್ಥೆ ಟಾಸ್ಕ್ ಪೋರ್ಸ್ ಗಳಾಗಿವೆ ಎಂದು ನನಗೆ ಅನಿಸಿತು. ಪ್ರತಿಯೊಂದು ಗ್ರಾಮಗಳ ಮತ್ತು ಗ್ರಾಮಪಂಚಾಯಿತಿಗಳ ಟಾಸ್ಕ್ ಪೋರ್ಸ್ ಸಭೆ ವರದಿ ತರಿಸುವ ಕೆಲಸ ಮಾಡಿ, ಗ್ರೌಂಡ್ ರಿಯಾಲಿಟಿ ತಿಳಿದು ಕೊಳ್ಳಿ, ನಾಟಕವಾಡುವುದನ್ನು ಈಗಲಾದರೂ ನಿಲ್ಲಿಸಿ. ಜಿಲ್ಲಾ ಪಂಚಾಯತ್ ಸಿಇಓ ರವರು ಈ ಬಗ್ಗೆ ಉತ್ತರ ನೀಡಲೇ ಬೇಕು. ಇದು ಆವರ ಕರ್ತವ್ಯವೂ ಹೌದು. ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಈ ಬಗ್ಗೆ ಗಮನ ಹರಿಸಲಿ.

ತುಮಕೂರು ಜಿಲ್ಲೆಯಲ್ಲಿನ ನಗರ ಸ್ಥಳೀಯ ಸಂಸ್ಥೆಗಳ 253 ಕೋವಿಡ್ ವಾರ್ಡ್ ಕಮಿಟಿಗಳು ಆಕ್ಟೀವ್ ಆಗಲು ಆರಂಭಿಸಿವೆ. ಗ್ರಾಮ ಮತ್ತು ಗ್ರಾಮಪಂಚಾಯಿತಿ ಮಟ್ಟದ ಕೋವಿಡ್ ಟಾಸ್ಕ್ ಪೋರ್ಸ್ ಆಕ್ಟೀವ್ ಆಗುವವೇ ಕಾದು ನೋಡಬೇಕು.