19th April 2024
Share

ತುಮಕೂರು ಲೋಕಸಭಾ ಸದಸ್ಯರಾದ  ಶ್ರೀ ಜಿ.ಎಸ್.ಬಸವರಾಜ್‌ರವರು ಗುಬ್ಬಿ ತಾಲ್ಲೂಕು ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯನ್ನು 2019-20 ರ ಅವಧಿಯ ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಿದ್ದಾರೆ.

ಒಬ್ಬ ಲೋಕಸಭಾ ಸದಸ್ಯರು ತನ್ನ ಐದು ವರ್ಷದ ಅವಧಿಯಲ್ಲಿ ಪ್ರತಿ ವರ್ಷ ಒಂದೊಂದು ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿ ಅಭಿವೃದ್ಧಿ ಪಡಿಸುವುದು ಕೇಂದ್ರ ಸರ್ಕಾರದ ನಿಯಮದಲ್ಲಿದೆ.

ಬಸವರಾಜ್‌ರವರು ಒಂದು ವಿಶಿಷ್ಠ ರೀತಿಯಲ್ಲಿ ಚಿಂತನೆ ನಡೆಸಿದ್ದಾರೆ. ಆರಂಭದಲ್ಲಿಯೇ ತನ್ನ ಲೋಕಸಭಾ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಒಂದೊಂದು ಗ್ರಾಮ ಪಂಚಾಯಿತಿಯನ್ನು ಈಗಲೇ ಆಯ್ಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

  ಗುಬ್ಬಿ ವಿಧಾನ ವಿಧಾನಸಭಾ ಕ್ಷೇತ್ರದಲ್ಲಿ ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್‌ನಲ್ಲಿ ಆರಂಭವಾಗುವ ಹೆಚ್.ಎ.ಎಲ್ ಘಟಕದ ಸುತ್ತಮುತ್ತ ಸುಮಾರು ಏಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 71 ಗ್ರಾಮಗಳನ್ನು ಹೆಚ್.ಎ.ಎಲ್ ಸ್ಮಾರ್ಟ್ ವಿಲೇಜ್ ಆಗಿ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಿದ್ದಾರೆ. ಈಗಾಗಲೇ ಮಾನ್ಯ ಮುಖ್ಯ ಮಂತ್ರಿಗಳು ಸಹ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

 ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ತುಮಕೂರು ನಗರದ ಕಸ ಹಾಕುವ ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ವಸ್ತು ಘಟಕದ ಸುತ್ತ ಮುತ್ತ ಸುಮಾರು ಮೂರು ಕೀ.ಮೀ ವ್ಯಾಪ್ತಿಯ ಸುಮಾರು ನಾಲ್ಕು ಗ್ರಾಮ ಪಂಚಾಯಿತಿಯ ಸುಮಾರು ಹದಿನಾರು ಗ್ರಾಮಗಳನ್ನು ಆಯ್ಕೆ ಮಾಡಲು ಚಿಂತನೆ ನಡೆಸಿದ್ದಾರೆ.

  ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಆಯುಷ್‌ಗೆ ವಿಶ್ವ ವಿಖ್ಯಾತ ಹೆಸರು ಪಡೆದಿರುವ ಸಿದ್ಧರಬೆಟ್ಟದ ಸುತ್ತವಿರುವ ಕರುಂಕೋಟೆ ಮತ್ತು ಇತರೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿ ಸೇರಿದಂತೆ ಕೆಲವು ಗ್ರಾಮಗಳನ್ನು ಆಯ್ಕೆ ಮಾಡಲು ಚಿಂತನೆ ನಡೆಸಿದ್ದಾರೆ.

ಉಳಿದ ಐದು ವಿಧಾನಸಭಾ ಕ್ಷೇತ್ರದಲ್ಲಿ ಇನ್ನೂ ಆಯ್ಕೆ ಮಾಡಿಲ್ಲ.

ಅವರು ಆಯ್ಕೆ ಮಾಡಿರುವ ಮೂರು ಪ್ರದೇಶಗಳು ಒಂದು ವಿಶಿಷ್ಠ ರೀತಿಯಲ್ಲಿವೆ, ಒಂದು ಬೃಹತ್ ಘಟಕದ ಸುತ್ತಮುತ್ತ ಜನತೆಗೆ ಆಗುವ ತೊಂದರೆಗಳ ಅಧ್ಯಯನ ಮತ್ತು ಪರಿಹಾರ,

ಒಂದು ಘನತ್ಯಾಜ್ಯ ವಸ್ತು ಘಟಕದ ಸುತ್ತಮುತ್ತ ಜನತೆಗೆ ಆಗುವ ತೊಂದರೆಗಳ ಅಧ್ಯಯನ ಮತ್ತು ಪರಿಹಾರ

ಆಯುಷ್‌ಗೆ ವಿಶ್ವ ವಿಖ್ಯಾತ ಹೆಸರು ಪಡೆದಿರುವ ಸ್ಥಳದ ಸುತ್ತ ಮುತ್ತ ಯಾವ ರೀತಿ ಅಭಿವೃದ್ಧಿ ಪಡಿಸಬೇಕು. ಅಷ್ಟೊಂದು ಹೆಸರು ಪಡೆದಿರುವ ಸ್ಥಳದ ಮಹಿಮೆಯನ್ನು ಒಳಗೊಂಡಂತೆ ಸಮಗ್ರ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಿರುವುದು ಶ್ಲಾಘನೀಯ

 ದಿನಾಂಕ:20.01.2020 ರಂದು ದೆಹಲಿ ಮಟ್ಟದ ಅಧಿಕಾರಿಯಾದ ಶ್ರೀಮತಿ ಉಮಾ ಮತ್ತು ತಂಡದವರ ತುಮಕೂರಿಗೆ ಭೇಟಿ ನಿಡಿದ್ದರು. ತುಮಕೂರು ಜಿಲ್ಲಾ ಪಂಚಾಯತ್‌ನಲ್ಲಿ ಒಂದು ಔಪಚಾರಿಕ ಸಮಾಲೋಚನೆ ನಡೆಯಿತು. ಆ ಸಭೆಯಲ್ಲಿ ಈ ಬಗ್ಗೆ ಅವರ ಗಮನ ಸೆಳೆದಾಗ ಇದು ಬಹಳ ಒಳ್ಳೆಯ ಬೆಳವಣಿಗೆ ಕೂಡಲೇ ದಿಶಾ ಸಭೆಯಲ್ಲಿ ನಿರ್ಣಯ ಕ್ಯಗೊಂಡು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವರಿಗೆ ವರದಿ ಸಲ್ಲಿಸಲು ಸೂಚನೆ ನೀಡಿದರು.

 ಕಳೆದ ದಿಶಾ ಸಮಿತಿಯಲ್ಲಿ ತುಮಕೂರು ಜಿಲ್ಲಾಧಿಕಾರಿಗಳಾದ ಶ್ರೀ ಡಾ.ರಾಕೇಶ್ ಕುಮಾರ್ ರವರು ಹಿಂದಿನ ಲೋಕಸಭಾ ಸದಸ್ಯರುಗಳು ಜಿಲ್ಲೆಯಲ್ಲಿ ಕೈಗೊಂಡಿರುವ ಗ್ರಾಮ ಪಂಚಾತಿಯಿಗಳಾದ ಶ್ರೀ ಎಸ್.ಪಿ.ಮುದ್ದುಹನುಮೇಗೌಡರವರು ಆಯ್ಕೆ ಮಾಡಿದ್ದ ಮಧುಗಿರಿ ತಾಲ್ಲೂಕು ಚಿಕ್ಕದವಳಘಟ್ಟ ಗ್ರಾಮ ಪಂಚಾಯಿತಿ.

ಶ್ರೀ ಡಿ.ಕೆ.ಸುರೇಶ್ ರವರು ಒಂದನೇ ಹಂತದಲ್ಲಿ ಆಯ್ಕೆ ಮಾಡಿದ್ದ ಕುಣಿಗಲ್ ತಾಲ್ಲೂಕಿನ ಮಡಿಕೆಹಳ್ಳಿ ಗ್ರಾಮ ಪಂಚಾಯಿತಿ ಮತ್ತು ಎರಡನೇ ಹಂತದಲ್ಲಿ ಆಯ್ಕೆ ಮಾಡಿರುವ ಯಲಚವಾಡಿ ಗ್ರಾಮ ಪಂಚಾಯಿತಿ.

ರಾಜ್ಯಸಭಾ ಸದಸ್ಯರಾದ ಶ್ರೀಮತಿ ಜಯಶ್ರೀರವರು ಆಯ್ಕೆ ಮಾಡಿರುವ ತುಮಕೂರು ತಾಲ್ಲೂಕು ಗೂಳೂರು ಗ್ರಾಮ ಪಂಚಾಯಿತಿಗಳ ಸಂಸದರ ಆದರ್ಶ ಗ್ರಾಮ ಯೋಜನೆಗಳ ಪ್ರಗತಿಪರಿಶಿಲನೆ ಮಾಡಲು ಸಹ ಸೂಚಿಸಿದ್ದಾರೆ.

 ಒಬ್ಬ ಲೋಕಸಭಾ ಸದಸ್ಯರ ವ್ಯಾಪ್ತಿಗೆ ಒಬ್ಬ ನೋಡೆಲ್ ಅಧಿಕಾರಿ ಆಯ್ಕೆ ನಿಯಮ ಎಂದು ಹೇಳಲಾಗುತ್ತಿದೆ. ಕೂಡಲೇ ಈ ಬಗ್ಗೆ ದಿಶಾ ಸಮಿತಿ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳುವುದು ಸೂಕ್ತವಾಗಿದೆ.

 ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಸದರು ನಡೆಸಿದ ಸಭೆ ನಡವಳಿಕೆ ಬಗ್ಗೆ ಅನುಪಾಲನಾ ವರದಿಯನ್ನು ದಿಶಾ ಸಭೆಯಲ್ಲಿ ಮಂಡಿಸ ಬೇಕಿದೆ. ಇದು ನೋಡೆಲ್ ಆದಿಕಾರಿಗಳ ಹೊಣೆಯಾಗಿರುತ್ತದೆ.