26th April 2024
Share

TUMAKURU:SHAKTHIPEETA FOUNDATION

ದಿನಾಂಕ:14.07.2021 ರಂದು ಶಕ್ತಿಪೀಠ ಕ್ಯಾಂಪಸ್ ನಲ್ಲಿ ಅಲೊವೇರಾ ಗಿಡಹಾಕುವ ಮೂಲಕ ಔಷಧಿ ಗಿಡ ಹಾಕುವ ಯೋಜನೆಗೆ ಚಾಲನೆ ನೀಡಲಾಯಿತು.

ತುಮಕೂರಿನ ಸಾಯಿಬಾಬಾ ದೇವಾಲಯದಲ್ಲಿನ ಉದಿ, ಹಾರ, ತೀರ್ಥದ ಜೊತೆ ಆಗಮಿಸಿದ್ದ ಶ್ರೀ ಸಾಯಿ ಗುರುಸಿದ್ಧಪ್ಪನವರು ಮೊಟ್ಟಮೊದಲ ಗಿಡ ಹಾಕಿದರು.ಆರಂಭದಿಂದಲೂ ಶಕ್ತಿಪೀಠ ಕ್ಯಾಂಪಸ್ ನಲ್ಲಿ ಯಾವುದೇ ಅಬ್ಬರದ, ಆಡಂಬರದ ಕಾರ್ಯಕ್ರಮ ರೂಪಿಸಿಲ್ಲ.

ಸಾಯಿಬಾಬಾ ದೇವಾಲಯದಲ್ಲಿ ಬಾಬಾಗೆ ಹಾಕಿದ ಹೂಗಳನ್ನು ತಂದು ಭೂಮಿಯ ಮೇಲೆ ಹಾಕುವ ಮೂಲಕವೇ ಎಲ್ಲಾ ಕೆಲಸ ಪ್ರಾರಂಭಿಸಲಾಗಿದೆ. ಇಂದು ಸಹ ಅದೇ ರೀತಿ ಎಲ್ಲಾ ತೆಗೆದು ಕೊಂಡು ಹೊರಟಾಗ ತುಮಕೂರು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ತೀರ್ಥವನ್ನು ತೆಗೆದುಕೊಂಡು ಹೋಗಿ ಗಿಡಕ್ಕೆ ಹಾಕಿ, ಬಾಬಾ ಚೆನ್ನಾಗಿ ಗಿಡಗಳನ್ನು ಬೆಳೆಸುತ್ತಾರೆ ಎಂದು ಸಲಹೆ ನೀಡುವ ಮೂಲಕ ಹೊಸ ಸಂಪ್ರದಾಯ ಆರಂಭಿಸಲು ಸಲಹೆ ನೀಡಿದರು.

ಇಂದಿನಿಂದ ರಾಜ್ಯದಲ್ಲಿ ದೊರಕುವ/ಲಭ್ಯವಾಗುವ ಎಲ್ಲಾ ಜಾತಿಯ ಔಷಧಿ ಗಿಡಗಳನ್ನು ತಂದು ಹಾಕಲಾಗುವುದು. ತಮ್ಮಲ್ಲಿರುವ ಗಿಡಗಳನ್ನು ತಂದು ಹಾಕುವ ಮೂಲಕ, ತಾವೂ ಸಹ ಕೈಜೋಡಿಸಿ, ತಾಯಿ ಶಕ್ತಿದೇವತೆಯ ಹಸಿರು ಸೇವೆಗೆ ಸಹಕರಿಸಲು ಮನವಿ.

ಶ್ರೀ ಜಿ.ಎಸ್.ಚಂದ್ರಶೇಖರ್ ರವರು ಮತ್ತು ಶ್ರೀ ವಡ್ಡನಹಳ್ಳಿ ಬಸವರಾಜ್ ರವರು ಸಹಕರಿಸಿದರು.