20th April 2024
Share
PANCHAVATI PLANTS

TUMAKURU:SHAKTHI PEETA FOUNDATION

ಶಕ್ತಿಪೀಠ ಕ್ಯಾಂಪಸ್ ನಲ್ಲಿ ಮನುಷ್ಯ ತಿನ್ನುವ ಎಷ್ಟು ತರಹದ ಸೊಪ್ಪು ಬೆಳೆಯುತ್ತದೆಯೋ ಅಷ್ಟು ಜಾತಿಯ ಸೊಪ್ಪು ಸಂಗ್ರಹ ಮಾಡಿ ಬೆಳೆಸಲು ಪಾರಂಪರಿಕ ವೈದ್ಯ ಶ್ರೀ ಗುರುಸಿದ್ಧರಾಧ್ಯರವರು-9901010013 ಮತ್ತು ನಿವೃತ್ತ ಅರಣ್ಯ ಡೆಪ್ಯೂಟಿ ರೇಂಜ್ ಆಫೀಸರ್ ಶ್ರೀ ಗೋವಿಂದಪ್ಪನವರು-9535566405 ಚಿಂತನೆ ನಡೆಸಿದ್ದಾರೆ.

ಗೋವಿಂದಪ್ಪನವರು ಅವರ ಮನಸ್ಸಿಗೆ ಬಂದ ಸೊಪ್ಪುಗಳ ಪಟ್ಟಿ ಮಾಡಿದ್ದಾರೆ. ಕೆಲವು ಸೊಪ್ಪುಗಳ ಹೆಸರು ತಪ್ಪು ಇರಬಹುದು, ಕೆಲವು ಸೊಪ್ಪುಗಳ ಹೆಸರು ಬಿಟ್ಟಿರಬಹುದು, ಜ್ಞಾನವುಳ್ಳವರು ಸೊಪ್ಪು-ಸೆದೆ-ಬೇರು-ಬೀಜ ದಾನ ಮಾಡಲು ಮನವಿ.

ನಾನು ಮೊದಲ ಭಾರಿ ಶ್ರೀ ಗೋವಿಂದಪ್ಪನವರ ಮನೆಗೆ ಭೇಟಿ ನೀಡಿದಾಗ ಅವರು  ನನಗೆ ಎಲ್ಲಾ ಜಾತಿಯ ಸೊಪ್ಪುಗಳನ್ನು ಒಂದು ಕಡೆ ಬೆಳೆಯ ಬೇಕು ಎಂಬ ಕನಸು ಇದೆ ಸಾರ್, ಆದರೆ ಸರಿಯಾದ ಜಾಗ ಮತ್ತು ಅನೂಕೂಲ ಇದೂವರೆಗೂ ದೊರಕಿಲ್ಲ ಎಂದರು.

ನಾನು ನಿಮ್ಮ ಕನಸು ನನಸು ಮಾಡಲು ಒಬ್ಬ ಹುಚ್ಚ ಸಿಗಬೇಕು, ನಮ್ಮ ಕ್ಯಾಂಪಸ್ ನಲ್ಲಿ ಬೆಳಿಸಿರಿ ಎಂದೆ. ಅವರು ಈಗ ಕನಸು ನನಸು ಮಾಡಲು ಸಜ್ಜಾಗಿದ್ದಾರೆ. ಅವರಿಗೆ ಸಹಕಾರ ನೀಡುವಿರಾ? ಜೊತೆಗೆ ಯಾವ ಸೊಪ್ಪನ್ನು ಏಕೆ ತಿನ್ನ ಬೇಕು ಎಂಬ ಬಗ್ಗೆಯೂ ಮಾಹಿತಿ ಸಂಗ್ರಹಮಾಡುತ್ತಿದ್ದಾರೆ ಅವರು.

ಇಂದು ಬೆಳಿಗ್ಗೆ ಮಾತನಾಡಿದ ಅವರಿಬ್ಬರು ಈ ಬಗ್ಗೆ ಚರ್ಚೆ ಮಾಡಿದರು ಹೆಚ್ಚಿನ ಮಾಹಿತಿಗಾಗಿ ನಿಮಗೆ ಈ ಮನವಿ. ಗಿಡ ಬೆಳೆಸುತ್ತಿರುವ ಶ್ರೀ ಬಸವರಾಜ್-9663288190 ಇವರು ಸಹ ಕ್ಯಾಂಪಸ್ ಸುತ್ತ ಇರುವ ಸೊಪ್ಪುಗಳ ಬೇರು, ಬೀಜ ಸಂಗ್ರಹ ಮಾಡುತ್ತಿದ್ದಾರೆ.

  1. ಅರಿವೆ ಸೊಪ್ಪು
  2. ದಂಟಿನ ಸೊಪ್ಪು
  3. ಮೈಂಥ್ಯೆ ಸೊಪ್ಪು
  4. ಪುದಿನಾ ಸೊಪ್ಪು
  5. ಹೊನಗೊನೆ ಸೊಪ್ಪು
  6. ಸಬಸೀಗೆ ಸೊಪ್ಪು
  7. ಕೊತ್ತಂಬರಿ ಸೊಪ್ಪು
  8. ಕರಿಬೇವು ಸೊಪ್ಪು
  9. ಬಸಳೆ ಸೊಪ್ಪು
  10. ಅಗಸೆ ಸೊಪ್ಪು
  11. ಗೋಣಿ ಸೊಪ್ಪು
  12. ಹಕ್ಕರಿಕೆ ಸೊಪ್ಪು
  13. ಕಾಕಮಾಚಿ ಸೊಪ್ಪು
  14. ಪುಂಡಿ ಸೊಪ್ಪು
  15. ಚಕ್ಕೋತ ಸೊಪ್ಪು
  16. ಕಿರಕಸಾಲೆ ಸೊಪ್ಪು
  17. ಮೂಲಂಗಿ ಸೊಪ್ಪು
  18. ಕಸುವಿನ ಸೊಪ್ಪು
  19. ನಾಟಿ ನುಗ್ಗೆ ಸೊಪ್ಪು
  20. ಚಕ್ರಮುನಿ ಸೊಪ್ಪು
  21. ತೋಟz ಸೊಪ್ಪುÀ
  22. ಶತಾವರಿ ಸೊಪ್ಪು
  23. ಎಲೆಕೋಸು ಸೊಪ್ಪು
  24. ಹುಳಿ ಸೊಪ್ಪು
  25. ದೊಡ್ಡಪತ್ರೆ ಸೊಪ್ಪು
  26. ಸೂರ್ಯಕಾಂತಿ ಸೊಪ್ಪು
  27. ಮುಳ್ಳುಕಿರೆ ಸೊಪ್ಪು
  28. ಅಣ್ಣೆ ಸೊಪ್ಪು
  29. ಹಾಲೆ ಸೊಪ್ಪು
  30. ಸಣ್ಣ ನೆಗ್ಗಿಲ ಸೊಪ್ಪು
  31. ವಿಳೆದೆಲೆ ಸೊಪ್ಪು
  32. ಕೊಮ್ಮೆ ಸೊಪ್ಪು
  33. ಕನ್ನೆ ಸೊಪ್ಪು
  34. ಮಳದಪ್ಲೆ ಸೊಪ್ಪು
  35. ಗೋರ್ಚಿಸೊಪ್ಪು
  36. ಕೊಟ್ಟಗೋರ್ಚಿ ಸೊಪ್ಪು
  37. ಪಾಲಾಕ್ ಸೊಪ್ಪು
  38. ದೇವದಾರ್ ಸೊಪ್ಪು
  39. ಒಂದೆಲಗ ಸೊಪ್ಪು
  40. ದಾಗಡಿ ಸೊಪ್ಪು
  41. ಕಲ್ ಗೋಣಿ ಸೊಪ್ಪು
  42. ಬುಡ್ಡಕಡಲೆ ಸೊಪ್ಪು
  43. ಕಾಡುಸಬ್ಬಸೀಗೆ ಸೊಪ್ಪು
  44. ಕಡ್ಡಿಮುರಕನ ಸೊಪ್ಪು
  45. ಸೀಗೆ ಸೊಪ್ಪು
  46. ಮಂಗರಬಳ್ಳಿ ಸೊಪ್ಪು
  47. ಪುರುಷ ರತ್ನ ಸೊಪ್ಪು
  48. ನಾರಬಳ್ಳಿ ಸೊಪ್ಪು
  49. ಸೆಣಬಿನ ಸೊಪ್ಪು
  50. ನುಚ್ಚುಗೋಣಿ ಸೊಪ್ಪು
  51. ಬೇಳೆಕಾಳು ಸೊಪ್ಪು
  52. ಕೊಳವಂಕಿ ಸೊಪ್ಪು
  53. ಕೋಳಿಕಾಲನ ಸೊಪ್ಪು
  54. ಹುಣಸೆ ಸೊಪ್ಪು
  55. ಗಂಧದ ಸೊಪ್ಪು
  56. ಕೇಲಕೇಸರಿ ಸೊಪ್ಪು
  57. ದೊಡ್ಡಗುಣಿ ಸೊಪ್ಪು
  58. ಪುನರ್ ಜನ್ಮ ಸೊಪ್ಪು
  59. ಕೇಗ್ ಹುಣಿಸೆ ಸೊಪ್ಪು
  60. ನೇಗಿಲ ಸೊಪ್ಪು
  61. ಎರಂಬಳ್ಳಿ ಸೊಪ್ಪು
  62. ಹುಳಿಹುಣಸೆ ಸೊಪ್ಪು
  63. ಬಿದಿರು ಕುಡಿ ಸೊಪ್ಪು
  64. ಕೆಸವೆ ದಂಟು ಸೊಪ್ಪು
  65. ಸೊಗದೆ ಬೇರು