22nd November 2024
Share

TUMAKURU:SHAKTHIPEETA FOUNDTION

ಮುಖ್ಯ ಮಂತ್ರಿಯವರ ಗೃಹ ಕಚೇರಿಯಲ್ಲಿ ದಿನಾಂಕ:15.11.2021 ರಂದು ಶ್ರೀ ಬಸವರಾಜ್ ಬೊಮ್ಮಾಯಿರವರು ಮತ್ತು ಐಟಿಬಿಟಿ ಸಚಿವರಾದ ಶ್ರೀ ಅಶ್ವತ್ ನಾರಾಯಣರವರಿಗೆ  ಶ್ರೀ ಜಿ.ಎಸ್.ಬಸವರಾಜ್ ರವರು ಪತ್ರ ನೀಡಿ ತುಮಕೂರಿನಲ್ಲಿ ಇಎಸ್ ಡಿಎಂ ಕ್ಲಸ್ಟರ್ ಸ್ಥಾಪಿಸಲು ಸಮಾಲೋಚನೆ ನಡೆಸಿದರು. ಸಚಿವರು ಸ್ಥಳದಲ್ಲಿ ಇದ್ದ ಕೆಬಿಟ್ಸ್ ನಿರ್ದೇಶಕರಾದ ಶ್ರೀಮತಿ ಮೀನಾನಾಗರಾಜ್ ರವರಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು. ಈ ಸಂದರ್ಭದಲ್ಲಿ ಕುಂದರನಹಳ್ಳಿ ರಮೇಶ್ ಹಾಜರಿದ್ದರು.

– ಇವರಿಗೆ

               ಸನ್ಮಾನ್ಯ ಬಸವರಾಜ್ ಬೊಮ್ಮಾಯಿ          ಅವರಿಗೆ,

ಮಾನ್ಯ ಮುಖ್ಯ ಮಂತ್ರಿಗಳು,

               ಕರ್ನಾಟಕಸರಕಾರ, ವಿಧಾನ ಸೌಧ,

               ಬೆಂಗಳೂರು

               ಸನ್ಮಾನ್ಯರೇ,

ವಿಷಯ:“ತುಮಕೂರು ಇಎಸ್ ಡಿಎಂ ಕ್ಲಸ್ಟರ್”  ಪ್ರಾಜೆಕ್ಟ್ ಸಾಕಾರ ಆಗಲು ಪ್ರಾಜೆಕ್ಟ್ ಇಂಪ್ಲಿಮೆಂಟ್ ಏಜನ್ಸಿ  ಮೂಲಕ ಗುರುತಿಸಿಕೊಂಡು  ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಏಜನ್ಸಿಗೆ ಪ್ರಸ್ಥಾವನೆ ರಾಜ್ಯ ಸರಕಾರದ ಕ್ರಮಕ್ಕೆ ಮನವಿ:-

ಉಲ್ಲೇಖ:[1] ನನ್ನ ಪತ್ರ ಸಂಖ್ಯೆ ಟಿಕೆ/161/2016-17 ದಿನಾಂಕ 20/8/2017 ಅಂದಿನ ಐ.ಟಿಮತ್ತು ಬಿಟಿ ಸಚಿವರು ಕರ್ನಾಟಕ ಸರ್ಕಾರ, ಇಎಂಸಿ.1.0 ಯೋಜನೆ ಅಡಿ ತುಮಕೂರು ಇಎಸ್ ಡಿಎಂ ಕ್ಲಸ್ಟರ್ ಸಾಕರಆಗಲು ಕೋರಿ ಬರೆದ ಪತ್ರ

[2]ನನ್ನಪತ್ರಸಂಖ್ಯೆಟಿಕೆ..160/2016-17ದಿನಾಂಕ20/8/2017ರಂದು ಕೇಂದ್ರಸರಕಾರದ ಎಲೆಟ್ರಾನಿಕ್ಸ ಮತ್ತುಐ.ಟಿ ಸಚಿವ ರಾದ ಶ್ರಿರವಿ ಶಂಕರ್ ಪ್ರಸಾದ್ ಅವರಿಗೆ  ಬರೆದ ಪತ್ರ

 [3]ನನ್ನ ಪತ್ರ ಸಂಖ್ಯೆ ಎಂಪಿ.ಸಿಆರ್.300/ ದಿನಾಂಕ 10/7/2019 ರಂದು ಕೇಂದ್ರಸರಕಾರದಎಲೆಟ್ರಾನಿಕ್ಸ ಮತ್ತುಐ.ಟಿ ಸಚಿವ ರಾದ ಶ್ರಿರವಿ ಶಂಕರ್ ಪ್ರಸಾದ್‍ಅವರಿಗೆ ಬರೆದ ಪತ್ರ

[4] ಕೇಂದ್ರಸರ್ಕಾರ ಮಿನಿಸ್ಟ್ರಿ ಆ¥sóï ಎಲೆಟ್ರಾನಿಕ್ಸ ಮತ್ತುಐ.ಟಿ ಸಚಿವರು ಪತ್ರ ಸಂಖ್ಯೆ ಡಬ್ಲು-ಡಿ.ಒ 36[29]/2015-ಐಪಿಡಬ್ಲು- /ದಿನಾಂಕ 4/9/2019

[5]ನನ್ನ ಪತ್ರ ಸಂಖ್ಯೆ ಎಂಪಿ.ಸಿಆರ್.406/1/8/2020 ರಂದು ಕೇಂದ್ರಸರಕಾರದ ವಿತ್ತ ಸಚಿವರು ಹಾಗೂ ಛೇರ್‍ಪರ್ಸನ್ ಅಪೆಕ್ಸ್ ಮಾನಿಟರಿಂಗ್ ಅಥಾರಿಟಿ, ಎನ್.ಐ.ಸಿ.ಡಿ.ಐ.ಟಿ ಅವರಿಗೆ ಬರೆದ ಪತ್ರ

[6] ನನ್ನ ಪತ್ರ ಸಂಖ್ಯೆ ಎಂಪಿ.ಸಿಆರ್.407/1/8/2020 ರಂದು ಕೇಂದ್ರಸರಕಾರದಎಲೆಟ್ರಾನಿಕ್ಸ ಮತ್ತುಐ.ಟಿ ಸಚಿವ ರಾದ ಶ್ರಿರವಿ ಶಂಕರ್ ಪ್ರಸಾದ್ ಅವರಿಗೆ  ಬರೆದ ಪತ್ರ

[7]ದಿನಾಂಕ 1/8/2020 ರಪತ್ರ ಸಂಖ್ಯೆ ಎಂಪಿ.ಸಿಆರ್.424/2020-21 ತಮಗೆ ಬರೆದ್ ಪತ್ರ

[8] ಕೇಂದ್ರಸರ್ಕಾರ ಮಿನಿಸ್ಟ್ರಿ ಆ¥sóï ಎಲೆಟ್ರಾನಿಕ್ಸ ಮತ್ತುಐ.ಟಿ ಸಚಿವರು ಪತ್ರ ಸಂಖ್ಯೆ ಡಬ್ಲು-45/12/2019-ಐಪಿಡಬ್ಲು-ಮೇಟಿ/ದಿನಾಂಕ 24/10/2020       

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಮೇಲಿನ ಉಲ್ಲೇಖ ಪತ್ರದಲ್ಲಿ ತುಮಕೂರು ಇ.ಎಸ್.ಡಿ.ಎಂ ಕ್ಲಸ್ಟರ್”  ಪ್ರಾಜೆಕ್ಟ ಸಾಕಾರ ಆಗಲು  ಕೇಂದ್ರ ಸರ್ಕಾರದ ಇ.ಎಂ.ಸಿ 1.0 ಮಾರ್ಗಸೂಚಿ ಅನುಸರಣೆ ಹಾಗೂ ಪ್ರಾಜೆಕ್ಟ್ ಐ.ಡಿ ಕೆಕೆ1 ರಅಡಿ ಗುರುತಿಸಿರುವುದನ್ನು ಅಂದಿನ ರಾಜ್ಯಸರಕಾರದ  ಐ.ಟಿ ಮತ್ತು ಬಿಟಿ ಸಚಿವರು ಕರ್ನಾಟಕ ಸರ್ಕಾರ, ಇವರಿಗೆ  ಉಲ್ಲೇಖ ಪತ್ರ ಸಂಖ್ಯೆ[1] ರಲ್ಲಿ ಕೋರಲಾಗಿತ್ತು.

ತದ ನಂತರವೂ ನನ್ನ ನಿರಂತರ ಪ್ರಯತ್ನ ಮುಂದುವರೆಸಲಾಗಿತ್ತು.ದಯಮಾಡಿ ನನ್ನ ಪತ್ರದ ಉಲ್ಲೇಖಿತ ಪತ್ರ ಸಂಖ್ಯೆಗಳನ್ನು ಅವಗಾಹಿಸುವುದು.  ಆಂದಿನ ಕರ್ನಾಟಕ ಸರಕಾರದ ಅನುಸರಣೆ ಕ್ರಮವಿಲ್ಲದೇ , ಬೆಂಗಳೂರು ಸಮೀಪದ ದೇವನಹಳ್ಳಿ ಮತ್ತು ‘ತುಮಕೂರು ಇಎಸ್ ಡಿಎಂ ಕ್ಲಸ್ಟರ್”ಗಳು ಸಾಕರ ಆಗಲಿಲ್ಲ. ಉಲ್ಲೇಖದ ಪತ್ರ ಸಂಖ್ಯೆ 4 .

> ಕರ್ನಾಟಕ ಐ.ಟಿ ಮತ್ತು ಹಾರ್ಡ್ವೇರ್ ಪಾಲಿಸಿ 2011 ಆಡಿ ಬೆಂಗಳೂರು-ತುಮಕೂರು ಕಾರಿಡಾರ್ ನ್ನು ಹಾರ್ಡ್ವೇರ್ ಆಧ್ಯತಾ ವಲಯವಾಗಿ ಗುರುತಿಸಿದೆ.

> ಕರ್ನಾಟಕ ಇ.ಎಸ್.ಡಿ.ಎಂ ಪಾಲಿಸಿ 2013 ಅಡಿ ತುಮಕೂರು ಗೆ ಆಧ್ಯತೆ ಇದೆ.

>ಕರ್ನಾಟಕ ಇ.ಎಸ್.ಡಿ.ಎಂ ಪಾಲಿಸಿ 2017-22 ರ ಅಡಿ ಬೆಂಗಳೂರು –ತುಮಕೂರು ವಲಯವನ್ನು ಸಿಮಿ ಕನ್ ಕಂಡ್ಟರ್ ವಲಯ್,ಏರೋಸ್ಫೆಸ್, ಮತ್ತು ಸೋಲಾರ್ ಎನರ್ಜಿ ಸಂಭಂಧಿ ಸಿದ ಕ್ಲಸ್ಟರ್ ಸ್ಥಾಪನೆಗೆ ಆಧ್ಯತಾವಲಯವಾಗಿ ಗುರುತಿಸಿದೆ.

ಆದರೆ ತುಮಕೂರು ಜಿಲ್ಲೆಯಲ್ಲಿ ಈ ಕ್ಷೇತ್ರದ ಹೂಡಿಕೆ ಆಹ್ವಾನ ಅಂಶ ಉತ್ಸಾಹ ಕಂಡು ಬರುತ್ತಿಲ್ಲ.ಬೆಂಗಳೂರು ಸಮೀಪದ ನಗರಗಳಲ್ಲಿ ಹಾರ್ಡ್ವೇರ್ ಕ್ಲಸ್ಟರ್ ಸ್ಥಾಪನೆಗೆ ಕ್ರಮವಹಿಸದಿದ್ದರೆ ತಮಿಳು ನಾಡು ಸರ್ಕಾರ ಬೆಂಗಳೂರು ಮೂಲಭೂತ ಸೌಕರ್ಯ ಬಳಸಿ ಹೊಸೂರು ಮತ್ತು ಆಂದ್ರ ಸರ್ಕಾರ ಹಿಂದುಪುರ ಈ ಅವಕಾಶ ಬಾಚಿ ಕೊಳ್ಳುವ ಸಾಧ್ಯತೆ ಇದೆ

2020 ರ ದಿನಾಂಕ ಎಪ್ರಿಲ್ 1 ರಂದು ಕೇಂದ್ರ ಸರಕಾರದ ಮಿನಿಸ್ಟ್ರಿ OF ಎಲೆಟ್ರಾನಿಕ್ಸ ಮತ್ತುಐ.ಟಿ ಸಚಿವಾಲಯ  ಇಎಮ್ ಸಿ-2.0 / 21.3.2020 ರ  ಆದೇಶದಂತೆ ಕ್ರಮವಹಿಸಲು ರಾಜ್ಯ ಸರಕಾರಕ್ಕೆ ಕೋರಲಾಗಿತ್ತು. ಕೇಂದ್ರ ಸರ್ಕಾರ ಮಿನಿಸ್ಟ್ರಿ OF ಎಲೆಟ್ರಾನಿಕ್ಸ ಮತ್ತುಐ.ಟಿ ಸಚಿವರು ಉಲ್ಲೇಖದ 4 ರ ಪತ್ರಸಂಖ್ಯೆಯಲ್ಲಿ ಉತ್ತರಿಸಿ  ‘ತುಮಕೂರು ಇಎಸ್ ಡಿಎಂ ಕ್ಲಸ್ಟರ್’ ನಿರ್ಮಾಣಕ್ಕೆ ತಾವು ಕೋರಿರುವಂತೆ ಕ್ರಮವಹಿಸಲು ಬದ್ದತೆ ಇರುವುದಾಗಿ ತಿಳಿಸಿ, ಅದಕ್ಕೆ ಪೂರಕ ಕ್ರಮವಹಿಸಲು ತಿಳಿಸಿ ಇಎಮ್ ಸಿ-2.0  ಅಡಿ ಪ್ರಸ್ಥಾವನೆ ಯನ್ನು ಕರ್ನಾಟಕ ರಾಜ್ಯ ಸರಕಾರದಿಂದ ಎದರು ನೋಡುತ್ತಿರುವುದಾಗಿ ತಿಳಿಸಿರುತ್ತಾರೆ. ಈ ಹಿನ್ನಲೆಯಲ್ಲಿ ತುಮಕೂರು ಇಎಸ್ ಡಿಎಂ ಕ್ಲಸ್ಟರ್”  ಪ್ರಾಜೆಕ್ಟ್ ಸಾಕಾರ ಆಗಲು ಅಗತ್ಯ ಕ್ರಮ ವಹಿಸಬೇಕೆಂದು ಈ ಮೂಲಕ ಮನವಿ ಮಾಡಲಾಗಿದೆ.

ಗೌರವ ಪೂರ್ವಕವಾಗಿ,                       ತಮ್ಮ ವಿಶ್ವಾಸಿ,

                                                                                          [ಜಿಎಸ್. ಬಸವರಾಜ್]