TUMAKURU:SHAKTHIPEETA FOUNDATION
ಶಕ್ತಿಪೀಠ ಫೌಂಡೇಷನ್ ‘2022-2047 ರ ನವಕರ್ನಾಟಕ ಸಮಗ್ರ ಅಭಿವೃದ್ಧಿ ಗ್ರಂಥ’ ಸಿದ್ಧಪಡಿಸುತ್ತಿದ್ದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಗಳಿಗೂ ಭೇಟಿ ನೀಡುವುದು ಅಗತ್ಯವಾಗಿದೆ.
ಜೊತೆಗೆ ಪ್ರತಿಯೊಂದು ಯೋಜನೆಯ ಬಗ್ಗೆ ಪರಿಣಿತರೊಂದಿಗೆ, ವಿವಿಧ ವರ್ಗದ ಜನರೊಂದಿಗೆ, ಸರ್ವಪಕ್ಷಗಳ ನಾಯಕರೊಂದಿಗೆ ಸಮಾಲೋಚನೆ ನಡೆಸಲು, ‘ಹ್ಯೂಮನ್ ಲೈಬ್ರರಿ’ ಆರಂಭಿಸಲಾಗಿದೆ.
ಬೆಂಗಳೂರಿನಲ್ಲೂ ಒಂದು ಗೆಸ್ಟ್ ಹೌಸ್ ಅಗತ್ಯವಿದ್ದು, ತುಮಕೂರು ರಸ್ತೆಯಲ್ಲಿರುವ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ಗೆಸ್ಟ್ ಹೌಸ್ ಆರಂಭಿಸಲು ಯೋಚಿಸಲಾಗಿದೆ. ಈ ಹಿನ್ನಲೆಯಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಪಿಜೆಸಿಗೆ ಭೇಟಿ ನೀಡಿ ಪ್ರಾಜೆಕ್ಟ್ ಹೆಡ್ ಶ್ರೀ ನೀರಜ್ ಕುಮಾರ್‍ರವರು, ಜನರಲ್ ಮ್ಯಾನೇಜರ್ ಶ್ರೀ ಶಿವಯೋಗಿರವರ ಜೊತೆ ಸಮಾಲೋಚನೆ ನಡೆಸಿದರು. ಇಲ್ಲಿಯೇ ಗೆಸ್ಟ್ ಹೌಸ್ ಆರಂಭಿಸಲು ಸಲಹೆ ನೀಡಿದರು,
ಆದರೇ ಶಕ್ತಿಪೀಠ ಫೌಂಡೇಷನ್ ಸಿಇಓ ರವರು ನೀವೂ ಅಪಾರ್ಟ್ ಮೆಂಟ್‍ನಲ್ಲಿ ಹೊಂದಿಕೊಳ್ಳುವುದು ಕಷ್ಟ, ಕೂಗಾಡಿಕೊಂಡು ಬೆಳೆದವರು ನೀವೂ, ಜೋರಾಗಿ ಕಾಲಿಟ್ಟರೂ ಆಕ್ಷೇಪಣೆ ಮಾಡುವ ಅಪಾರ್ಟ್‍ಮೆಂಟ್‍ನಲ್ಲಿ ಹೇಗೆ ಕಾಲ ಕಳೆಯುತ್ತೀರಿ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಬಾಡಿಗೆ ಪ್ಲಾಟ್‍ನ ಮಾಲೀಕರಾದ, ತುಮಕೂರಿನವರೇ ಆದ ಶ್ರೀ ಜಗದೀಶ್‍ರವರು ಮತ್ತು ಶ್ರೀಮತಿ ಕುಸುಮರವರು ನೂರಾರು ಜನರ ಸಂಪರ್ಕ ಇರುವವರು ಇಲ್ಲಿ ಹೇಗೆ ಇರುತ್ತೀರಿ ಎಂದಾಗ, ನಾನು ಅವರಿಗೆ ಹೇಳಿದ ಮಾತು, ಸಂಸದರು ಹಾಗೂ ಶಾಸಕರು ಇಬ್ಬರು ಬಿಟ್ಟರೆ ಬೇರೆ ಯಾರನ್ನು ಗೆಸ್ಟ್ ಹೌಸ್ ಗೆ ಕರೆಯುವುದಿಲ್ಲ, ಸಿಟಿ ಕ್ಲಬ್ ನಲ್ಲಿಯೇ ಚರ್ಚೆ ಮಾಡಿ ಕಳುಹಿಸುತ್ತೇನೆ ಎಂದಾಗ ಷರತ್ತಿನೊಂದಿಗೆ ಬಾಡಿಗೆ ನೀಡಿದ್ದಾರೆ.
ನೋಡೋಣ ಅಪಾರ್ಟ್ ಮೆಂಟ್ ಜೀವನ ಹೇಗಿರುತ್ತೆ. ಮೌನ ಮತ್ತು ತಾಳ್ಮೆಗೆ ಒತ್ತು ನೀಡುವುದು ನನ್ನ ಆದ್ಯತೆಯು ಆಗಿದೆ.