22nd December 2024
Share

TUMAKURU:SHAKTHIPEETA FOUNDATION

ತುಮಕೂರಿನ ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ’ ವತಿಯಿಂದ  ದಿನಾಂಕ:14.03.2023 ರಿಂದ ಮುಂದಿನ ವಿಧಾನಸಭಾ ಚುನಾವಣೆ ನಂತರ, ನೂತನ ಮುಖ್ಯ ಮಂತ್ರಿ ಪ್ರಮಾಣ ವಚನ ಸ್ವೀಕರಿಸುವವರೆಗೂ, ‘ಇಂಡಿಯಾ @ 100 : ನಾನು ಮುಖ್ಯ ಮಂತ್ರಿಯಾದರೇ:ಯೋಜನೆ -1 ರಿಂದ— ‘ಎಷ್ಟು ಯೋಜನೆಗಳು ಆಗುತ್ತವೋ, ಅಷ್ಟು ಯೋಜನೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಒಂದು ನಿರ್ಧಿಷ್ಠವಾದ ಕಾರ್ಯ ಯೋಜನೆ ಆರಂಭಿಸಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

ರಾಜ್ಯದ ಮೂಲೆ ಮೂಲೆಯಿಂದ, ಯಾರು ಬೇಕಾದರೂ ಬರೆಯ ಬಹುದು, ಜ್ಞಾನ ದಾನ’ ಮಾಡಬಹುದು. ಯಾರು ಯಾವ ಐಡಿಯಾ ಕೊಡುತ್ತಾರೋ ಅವರ ಹೆಸರಿನಲ್ಲಿ ಪ್ರಕಟಿಸಲಾಗುವುದು. ಒಂದು ವೇಳೆ ಯಾರೂ ಐಡಿಯಾ ಕೊಡದೇ ಇದ್ದರೆ, ನಾನೇ ಬರೆದು, ಯಾರಾದರೂ ಹೊಣೆಗಾರಿಕೆ ವಹಿಸಿಕೊಳ್ಳಲು ಮನವಿ ಮಾಡಲಾಗುವುದು.

ಇಂಡಿಯಾ @ 100: ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಅನ್ನು ಛಾಲೇಂಜ್ ಆಗಿ ಎಲ್ಲಾ ವರ್ಗದವರೂ ಪರಿಗಣಿಸಬೇಕಿದೆ. ಜನ ಜಾಗೃತಿ, ವಿದ್ಯಾರ್ಥಿ ಜಾಗೃತಿ, ಯುವಜಾಗೃತಿ, ಅಧಿಕಾರಿಗಳ ಜಾಗೃತಿ, ಮಾಧ್ಯಮದವರ ಜಾಗೃತಿ ಮತ್ತು ಚುನಾಯಿತ ಜನ ಪ್ರತಿನಿಧಿಗಳಿಗೆ ಅಭಿವೃದ್ಧಿ ಜಾಗೃತಿ ಮೂಡಿಸುವುದೇ ಪ್ರಮುಖ ಉದ್ದೇಶವಾಗಿದೆ.

ನನ್ನ ಕಳೆದ 35 ವರ್ಷಗಳ ಅಭಿವೃದ್ಧಿ ತಪಸ್ಸಿನ ಅನುಭವವೇ ನನಗೆ ಸ್ಪೂರ್ತಿಯಾಗಿದೆ. ರಾಜ್ಯದ ಸರ್ವಪಕ್ಷಗಳ ನೇತೃತ್ವದಲ್ಲಿ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸುವ ಗುರಿ ಇರುವುದರಿಂದ, ಯಾವುದೇ ಕಾರಣಕ್ಕೂ ಪಕ್ಷ ರಾಜಕಾರಣ, ಜಾತಿ ರಾಜಕಾರಣ ಬರದ ಹಾಗೆ ನೋಡಿಕೊಳ್ಳುವ ಭರವಸೆ ಇದೆ.

‘ಯಾರು ಎಷ್ಟು ಅಪಮಾನ ಮಾಡಿದರೂ, ಟೀಕೆ ಟಿಪ್ಪಣೆ ಮಾಡಿದರೂ, ಹೊಗಳಿದರೂ, ತೆಗಳಿದರೂ ನನ್ನ ಭಾವನೆ ಮಾತ್ರ ಬದಲಾಗುವುದಿಲ್ಲ. ವಿಶ್ವದ 108 ಶಕ್ತಿಪೀಠಗಳ ದೇವತೆಗಳ ಶ್ರೀ ರಕ್ಷೆ ನನಗಿದೆ ಎಂಬ ಭಾವನೆ ನನಗಿದೆ.’

ನಮ್ಮ ಗುರಿ ರಾಜ್ಯದಲ್ಲಿ 500 ಅಧ್ಯಯನ ಪೀಠಗಳ ಮೂಲಕ, ಎಲ್ಲಾ ವರ್ಗದ 500 ಜನರಿಗೆ RANKING ‘ ನೀಡುವ ಮೂಲಕ, ಅವರ ಕರ್ತವ್ಯದ ಬಗ್ಗೆ ಅರಿವು ಮೂಡಿಸುವುದೇ ನಮ್ಮ ಉದ್ದೇಶವಾಗಿದೆ. ಇದು ಇಂಡಿಯಾ @ 100 ಗೆ ಭಧ್ರ ಅಡಿಪಾಯವಾಗಲಿದೆ ಎಂಬ ಪರಿಕಲ್ಪನೆ ನನ್ನದಾಗಿದೆ.

ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಕರೆ ನೀಡಿದಂತೆ, ಜೈ ಅನುಸಂಧಾನ್‘ ಘೋಷಣೆಯೊಂದಿಗೆ, 2047 ಕ್ಕೆ ಅಭಿವೃದ್ಧಿಯಲ್ಲಿ ರಾಜ್ಯ, ರಾಜ್ಯಗಳ ಮಧ್ಯೆ, ಅಭಿವೃದ್ಧಿ ಪೈಪೋಟಿ ಸೃಷ್ಠಿಸಲು, ಸರ್ಕಾರಗಳಿಂದ ಏನೇನು ಸವಲತ್ತು ದೊರೆಯುತ್ತದೆಯೋ ಅದನ್ನು 500 ಅಧ್ಯಯನ ಪೀಠಗಳಿಗೆ, ಅಧ್ಯಯನ ಮಾಡುವ ವ್ಯಕ್ತಿಗಳಿಗೆ, ಕುಟುಂಬಗಳಿಗೆ ದೊರಕಿಸಲು ನಿರಂತರವಾಗಿ ಶ್ರಮಿಸಲಾಗುವುದು.

ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಹೇಳುವ ಹಾಗೆ, ಮುಂದಿನ ಯುಗ- ಜ್ಞಾನ ಯುಗ’ ಹಾಗೂ ದುಡ್ಡೇ ದೊಡ್ಡಪ್ಪನಲ್ಲ-ದುಡಿಮೆಯೇ ದೊಡ್ಡಪ್ಪ’ ಎಂಬ ಮಾತಿಗೂ ಅರ್ಥ ಪೂರ್ಣ ಜನಾಂದೋಲನವಾಗಲಿದೆ.

ಕೈಜೋಡಿಸುವವರಿಗೆ ಮುಕ್ತ ಅವಕಾಶವಿದೆ.