TUMAKURU:SHAKTHIPEETA FOUNDATION
ದಿನಾಂಕ:03.06.2024 ರಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ, ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕುಂದರನಹಳ್ಳಿ ಗ್ರಾಮದಲ್ಲಿ ಕೈಗೊಳ್ಳುವÀ ನಿರ್ಣಯಗಳನ್ನು ‘ಕುಂದರನಹಳ್ಳಿ ಘೋಷಣೆ’ ಎಂದು ಪ್ರಕಟಿಸಿ, ಅನುಷ್ಠಾನಕ್ಕಾಗಿ ನಿರಂತರವಾಗಿ ಶ್ರಮಸಲಾಗುವುದು.
ದಿನಾಂಕ:01.08.1988 ರಂದು ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕುಂದರನಹಳ್ಳಿ ಗ್ರಾಮದಲ್ಲಿನ ಗ್ರಾಮದೇವತೆ ಗಂಗಮಲ್ಲಮ್ಮ ದೇವಿಯನ್ನು ಪೂಜಿಸಿ, ಹರಕೆ ಮಾಡಿಕೊಂಡು ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕು, ಬಿದರೆಹಳ್ಳ ಕಾವಲ್‍ನಲ್ಲಿರುವ ‘ಹೆಚ್.ಎ.ಎಲ್ ಘಟಕ’ ವನ್ನು ಸ್ಥಾಪಿಸಲು, ಸುಮಾರು 33 ವರ್ಷಗಳ ಕಾಲ ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆಗೂಡಿ ಶ್ರಮಿಸಿ, ಸಾಧಿಸಿದ ಹಿನ್ನಲೆಯಲ್ಲಿ.
ಇದೇ ಗ್ರಾಮದಲ್ಲಿ ಗ್ರಾಮದೇವತೆ ಗಂಗಮಲ್ಲಮ್ಮ ದೇವಿ, ಶ್ರೀ ರಾಮೇಶ್ವರ, ಶ್ರೀ ಆಂಜನೇಯ ಮತ್ತು ವಿಶ್ವದ 108 ಶಕ್ತಿಪೀಠಗಳಲ್ಲಿ ಹರಕೆ ಮಾಡಿಕೊಂಡು. ನನ್ನ ಹುಟ್ಟೂರು ಕುಂದರನಹಳ್ಳಿ ಗ್ರಾಮದ ಜನತೆಯ ಮುಂದೆ ನಿರ್ಣಯ ಮಾಡಲಾಗುವುದು.
ತುಮಕೂರಿನ ಶಕ್ತಿಪೀಠ ಫೌಂಡೇಷನ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಭಾರತ ಸ್ವಾತಂತ್ರ್ಯ ಸೇನೆ @ 2047 ಇವುಗಳ ಸಂಯಕ್ತಾಶ್ರಯದಲ್ಲಿ, ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಪರಿಕಲ್ಪನೆ ‘ವಿಕಸಿತ ಭಾರತ @ 2047’ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಪರಿಕಲ್ಪನೆ ‘ಕರ್ನಾಟಕ ಅಭಿವೃದ್ಧಿ ಮಾದರಿ’ ಮತ್ತು ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರ ಪರಿಕಲ್ಪನೆ ‘ಬ್ರ್ಯಾಂಡ್ ಬೆಂಗಳೂರು’ ಇವುಗಳ ಅನುಷ್ಠಾನದಿಂದ ‘2047 ರ ವೇಳೆಗೆ ನಂಬರ್ ಒನ್ ಕರ್ನಾಟಕ ರಾಜ್ಯ ಮಾಡಲು’ ನಿರಂತರವಾಗಿ ಶ್ರಮಿಸುವ ಬಗ್ಗೆ.
ರಾಜ್ಯಮಟ್ಟದ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಮತ್ತು ವಿದ್ಯಾರ್ಥಿ ಕೆ.ಆರ್.ಸೋಹನ್, ರಾಜ್ಯ ಸರ್ಕಾರದೊಂದಿಗೆ ಉಚಿತ ಎಂ.ಓ.ಯು ಮಾಡಿಕೊಂಡು ರಚಿಸಿದ, ‘ನಂಬರ್ ಒನ್ ಕರ್ನಾಟಕ ಜ್ಞಾನ ದಾನ ಮಾಡಿ’ ಕರಡು ಪ್ರತಿಯಲ್ಲಿನ ಪ್ರಮುಖ ಅಂಶಗಳ ಜಾರಿಗೆ, ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕು, ಕುಂದರನಹಳ್ಳಿಯಲ್ಲಿ, ತುಮಕೂರು ಜಿಲ್ಲೆ, ತುಮಕೂರು ನಗರದ ಶಕ್ತಿಭವನದಲ್ಲಿ.ತುಮಕೂರು ಜಿಲ್ಲೆ, ವಸಂತನರಸಾಪುರದ ಶಕ್ತಿಪೀಠ ಡಾಟಾ ಪಾರ್ಕ್‍ನಲ್ಲಿ,ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕು, ಬಗ್ಗನಡು ಕಾವಲ್‍ನ ಶಕ್ತಿಪೀಠ ಕ್ಯಾಂಪಸ್ ನಲ್ಲಿ,ಕರ್ನಾಟಕ ರಾಜ್ಯದ ಬೆಂಗಳೂರು ನಗರದಲ್ಲಿ, ಭಾರತದ ರಾಜಧಾನಿ ದೆಹಲಿಯಲ್ಲಿ, ಕರ್ನಾಟಕ ರಾಜ್ಯಾದ್ಯಂತ ಮೊಬೈಲ್ ವಾಹನದಲ್ಲಿ, ವಿವಿಧ ಕಚೇರಿ, ಕ್ಯಾಂಪಸ್, ಗೆಸ್ಟ್ ಹೌಸ್ ಆರಂಭಿಸಲಾಗುವುದು.
- ಶಕ್ತಿಪೀಠ: ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆಯಲ್ಲಿ ವಿಶ್ವದ ಭಾರತ, ಶ್ರೀಲಂಕಾ, ಭೂತಾನ್, ಬಾಂಗ್ಲಾದೇಶ, ಚೀನಾ, ಟಿಬೆಟ್, ನೇಪಾಳ, ಪಾಕಿಸ್ಥಾನ ಮತ್ತು ಆಪ್ಘಾನಿಸ್ಥಾನ ದೇಶಗಳಲ್ಲಿ ಇವೆ ಎನ್ನಲಾಗುತ್ತಿರುವ ‘108 ಶಕ್ತಿಪೀಠಗಳ ಅಧ್ಯಯನ ಮಾಡಿ ಡಿಜಿಟಲೀಕರಣ’ ಮಾಡಿಸಲು ಶ್ರಮಿಸುವುದು.
- ಜಲಪೀಠ: ‘ಊರಿಗೊಂದು ಕೆರೆ– ಆ ಕೆರೆಗೆ ನದಿ ನೀರು’ ಘೋಷಣೆಯೊಂದಿಗೆ, ಕರ್ನಾಟಕ ರಾಜ್ಯದ ಸುಮಾರು 30000 ಗ್ರಾಮಗಳಿಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನದಿ ನೀರು ಅಲೋಕೇóಷನ್ ಮಾಡಿಸಲು ಶ್ರಮಿಸುವುದು.
- ಅಭಿವೃದ್ಧಿ ಪೀಠ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ‘ನಂಬರ್ ಒನ್ ಕರ್ನಾಟಕ ಜ್ಞಾನ ದಾನ ಮಾಡಿ’ ಕರಡು ಪ್ರತಿಯಲ್ಲಿರುವ ಉದ್ದೇಶಿತ ‘545 ಅಧ್ಯಯನ ಪೀಠ’ ಗಳನ್ನು, ತಲಾ 5 ಕೋಟಿಯಂತೆ ಸುಮಾರು ರೂ 2725 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಶ್ರಮಿಸುವುದು.
- ರಾಜ್ಯದ ವಿವಿಧ ವಿಶ್ವ ವಿದ್ಯಾನಿಲಯಗಳ ಮೂಲಕ, ತುಮಕೂರು ವಿಶ್ವ ವಿದ್ಯಾನಿಲಯ ಆರಂಭಿಸಿರುವ ‘ಊರಿಗೊಂದು/ಬಡಾವಣೆಗೊಂದು ಪುಸ್ತಕ/ ವಿಷನ್ ಡಾಕ್ಯುಮೆಂಟ್ @ 2047’ ಸಿದ್ಧಪಡಿಸಲು ಶ್ರಮಿಸುವುದು.
- ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕು, ಬಿದರೆಹಳ್ಳ ಕಾವಲ್‍ನಲ್ಲಿರುವ ಹೆಚ್.ಎ.ಎಲ್ ಘಟಕದ ಬಳಿ ಇರುವ ಸರ್ಕಾರಿ ಜಮೀನಿನಲ್ಲಿ, ತುಮಕೂರು ವಿಶ್ವ ವಿದ್ಯಾನಿಲಯ ಮೂಲಕ ಸುಮಾರು ರೂ 108 ಕೋಟಿ ವೆಚ್ಚದಲ್ಲಿ, ತುಮಕೂರು ಜಿಲ್ಲೆಯನ್ನು ನಿರುದ್ಯೋಗಿ ರಹಿತ ಜಿಲ್ಲೆಯಾಗಿ ಘೋಷಣೆ ಮಾಡಲು, ‘ಸ್ಟೂಡೆಂಟ್ ಸ್ಪೆಷಲ್ ಎಕನಾಮಿಕ್ ಝೋನ್’ ಸ್ಥಾಪಿಸಲು ಶ್ರಮಿಸುವುದು.
- ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗ¼, ರಾಜ್ಯದ ಬಡÀ ವಿದ್ಯಾರ್ಥಿಗಳಿಗೆ, ರಾಜ್ಯ ಸರ್ಕಾರದ ಮೂಲಕ ‘ಸ್ಪರ್ಧಾತ್ಮಕ ಪರೀಕ್ಷೆಗಳ ಹಾಸ್ಟೆಲ್’ ನಿರ್ಮಾಣ ಮಾಡಿಸಲು ಶ್ರಮಿಸುವುದು.
- ರಾಜ್ಯದ 28 ಜನ ಲೋಕಸಭಾ ಸದಸ್ಯರ, 12 ಜನ ರಾಜ್ಯಸಭಾ ಸದಸ್ಯರ, ಇಬ್ಬರು ನಾಮನಿರ್ದೇಶಿತ ರಾಜ್ಯಸಭಾ ಸದಸ್ಯರ ಮತ್ತು ಇಬ್ಬರು ದೆಹಲಿ ವಿಶೇಷ ಪ್ರತಿನಿಧಿಗಳ ನೇತೃತ್ವದಲ್ಲಿ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹೆಚ್ಚಿಗೆ ಅನುದಾನ ಪಡೆಯಲು ‘ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಆಪ್ ಇಂಡಿಯಾ ಫಂಡ್ಸ್ (CENTER OF EXCELLENCE-CAPTURING GOI FUNDS -1947 TO 2047) ಮತ್ತು ನಾಲೇಡ್ಜ್ ಬ್ಯಾಂಕ್ @ 2047 (KNOWLEDGE BANK @ 2047)’ ಸ್ಥಾಪಿಸಲು ಶ್ರಮಿಸುವುದು.
- ತುಮಕೂರು ಜಿಲ್ಲೆಯನ್ನು ‘ಡಾಟಾ ಜಿಲ್ಲೆ’ ಯಾಗಿ ಘೋಷಣೆ ಮಾಡಲು, ಫೈಲಟ್ ಯೋಜನೆಯಾಗಿ ‘ತುಮಕೂರು ಲೋಕಸಭಾ ಅಧ್ಯಯನ ಪೀಠ’ ಸ್ಥಾಪಿಸಲು ಶ್ರಮಿಸುವುದು.
- 2047 ರವರೆಗೆ ಸುಮಾರು 23 ವರ್ಷಗಳ ಕಾಲ ನಿರ್ವಹಣೆಗೆ ‘ಹಣಕಾಸಿನ ಮೂಲ’ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ. OR ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ದಾನಿಗಳ ಮತ್ತು ಸಿ.ಎಸ್.ಆರ್ ಫಂಡ್ ಮೂಲಕ ‘ಜಿ.ಎಸ್.ಬಿ-85 ಭವನ’ ನಿರ್ಮಾಣ ಮಾಡಿ ಬರುವ ಬಾಡಿಗೆ ಹಣದಲ್ಲಿ ನಿರ್ವಹಣೆ ಮಾಡುವುದು. OR ಕುಂದರನಹಳ್ಳಿ ರಮೇಶ್ ಕುಟುಂಬದ ಆಸ್ತಿ ಮಾರಾಟ ಮಾಡಿ, ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡಿ, ಬರುವ ಬಾಡಿಗೆ ಹಣದಲ್ಲಿ ನಿರ್ವಹಣೆ ಮಾಡುವುದು.OR 108 ಶಕ್ತಿಪೀಠ ಕೃಪೆಯಿಂದ ನಿರ್ವಹಣೆ ಮಾಡುವುದು.
ಯಾವುದಾದರೂ ಆಸಕ್ತ ಸಂಸ್ಥೆಯ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡುವುದು.
ದಿನಾಂಕ:15.06.2024 ರೊಳಗೆ ತಮ್ಮ ಸಲಹೆಗಳನ್ನು ನೀಡಲು ಬಹಿರಂಗ ಮನವಿ.
–ಕುಂದರನಹಳ್ಳಿ ರಮೇಶ್