19th September 2024
Share

TUMAKURU:SHAKTHIPEETA FOUNDATION

    ತುಮಕೂರು ಜಿಲ್ಲೆಯ ಎಲ್ಲಾ ವಿಧವಾದ ಜಲಸಂಗ್ರಹಾಗಾರಗಳನ್ನು ದತ್ತು ಪಡೆದು, ಜಲಸಂಗ್ರಹಾಗಾರಗಳು ಗಂಗಾಮಾತೆ ದೇವಾಲಯ ಎಂದು ಪೂಜಿಸಿ, ನಿರ್ವಹಣೆ ಮಾಡಲು,  ಎನ್.ಆರ್.ಐ/ಎನ್.ಆರ್.ಕೆ/ ಎನ್.ಆರ್.ವಿ ಅಂದರೆ, ದೇಶಬಿಟ್ಟು ಹೊರದೇಶಗಳಲ್ಲಿರುವ, ರಾಜ್ಯ ಬಿಟ್ಟು ಹೊರರಾಜ್ಯಗಳಲ್ಲಿ ಇರುವ ಮತ್ತು ಹುಟ್ಟೂರು ಬಿಟ್ಟು ಬೇರೆ ಗ್ರಾಮ/ನಗರಗಳಲ್ಲಿ ವಾಸಿಸುವ, ಆಯಾ ಊರುಗಳ/ಬಡಾವಣೆಗಳ ಅನಿವಾಸಿಗಳಿಗೆ ಮನವಿ ಮಾಡುವ ಸಂಬಂಧ ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿರುವ ಎನ್.ಆರ್.ಐ ಫೋರಂ ಸದಸ್ಯ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮಮ್ಮ ಯವರೊಂದಿಗೆ ಸಮಾಲೋಚನೆ ನಡೆಸಲಾಯಿತು. ಮಾನ್ಯ ಮುಖ್ಯಮಂತ್ರಿಯವರು ಈ ಫೋರಂ ಅಧ್ಯಕ್ಷರಾಗಿದ್ದಾರೆ.

  ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್‍ರವರು, ಕೇಂದ್ರ ಸಚಿವರಾದ ಶ್ರೀ ವಿ.ಸೋಮಣ್ಣನವರು ಮತ್ತು ಜಿಲ್ಲೆಯ ಸಚಿವರಾದ ಶ್ರೀ ಕೆ.ಎನ್.ರಾಜಣ್ಣನವರು ಸೇರಿದಂತೆ, ಸ್ವಾತಂತ್ರ್ಯ ಪೂರ್ವದಿಂದ, ತುಮಕೂರು ಜಿಲ್ಲೆಯ ಕೆಳಕಂಡ ಚುನಾಯಿತ ಜನಪ್ರತಿನಿಧಿಗಳ  ಉನ್ನತ ಮಟ್ಟದ ಸಮಿತಿ ರಚಿಸಿ ರೂಪುರೇಷೆ ನಿರ್ಧರಿಸಲು, ತುಮಕೂರು ವಿಶ್ವ ವಿದ್ಯಾನಿಲಯದಲ್ಲಿನ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಪೀಠ ಚಿಂತನೆ ನಡೆಸುತ್ತಿದೆ.

1.      ತುಮಕೂರು ಜಿಲ್ಲೆಯನ್ನು ಆಳ್ವಿಕೆ ಮಾಡಿದ ರಾಜರು/ಅರಸರುಗಳು

2.      ಎಂ.ಆರ್.ಎ ಗಳು.

3.      ಹಾಲಿ ಮತ್ತು ಮಾಜಿ ಉಪಮುಖ್ಯಮಂತ್ರಿಯವರು.

4.      ಹಾಲಿ ಮತ್ತು ಮಾಜಿ ಕೇಂದ್ರ ಸರ್ಕಾರದ ಸಚಿವರು.

5.      ಹಾಲಿ ಮತ್ತು ಮಾಜಿ ರಾಜ್ಯ ಸರ್ಕಾರದ ಸಚಿವರು.

6.      ಹಾಲಿ ಮತ್ತು ಮಾಜಿ ಲೋಕಸಭಾ ಸದಸ್ಯರು.

7.      ಹಾಲಿ ಮತ್ತು ಮಾಜಿ ರಾಜ್ಯÀಸಭಾ ಸದಸ್ಯರು.

8.      ಹಾಲಿ ಮತ್ತು ಮಾಜಿ ವಿಧಾನಸಭಾ ಸದಸ್ಯರು.

9.      ಹಾಲಿ ಮತ್ತು ಮಾಜಿ ವಿಧಾನಪರಿಷತ್ ಸದಸ್ಯರು.

10.     ಹಾಲಿ ಮತ್ತು ಮಾಜಿ ವಿಧಾನಸಭಾ ಸದಸ್ಯರು.

11.      ಹಾಲಿ ಮತ್ತು ಮಾಜಿ ದೆಹಲಿ ವಿಶೇಷ ಪ್ರತಿನಿಧಿ.

12.     ಹಾಲಿ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು.

  ಕೇಂದ್ರ ಸರ್ಕಾರ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ರಚಿಸುವ ಮಾದರಿಯಲ್ಲಿ, ಜಿಲ್ಲೆಯ ಪ್ರತಿ ಗ್ರಾಮದಲ್ಲಿ/ಬಡಾವಣೆಯಲ್ಲಿ, ಆಯಾ ವ್ಯಾಪ್ತಿಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ಆಯಾ ಗ್ರಾಮದ/ಬಡಾವಣೆ ವ್ಯಾಪ್ತಿಯ ರೀಸರ್ಚ್ ಫೌಂಡೇಷನ್ @ 2047 ರಚಿಸಲು, ತುಮಕೂರು ವಿಶ್ವ ವಿದ್ಯಾನಿಲಯದಲ್ಲಿನ ತುಮಕೂರು ರೀಸರ್ಚ್ ಫೌಂಡೇಷನ್ @ 2047 ಆಲೋಚನೆ ನಡೆಸಿದೆ.

   ಕೇಂದ್ರ ಸರ್ಕಾರ ರಚಿಸಿರುವ ನ್ಯಾಷನಲ್ ರೀಸರ್ಚ್ ಫೌಂಡೇಷನ್, ರಾಜ್ಯ ಸರ್ಕಾರ ರಚಿಸಿರುವ ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್‍ಗಳಿಗೆ, ಮಾದರಿಯಾಗಿ ಕಾರ್ಯನಿರ್ವಹಿಸಲು ತುಮಕೂರು ರೀಸರ್ಚ್ ಫೌಂಡೇಷನ್ @ 2047 ಶ್ರಮಿಸುತ್ತಿದೆ.

  ನೂತನವಾಗಿ ನಿರ್ಮಾಣ ಮಾಡಲು ಉದ್ದೇಶಿರುವ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯÀ ಅಧ್ಯಯನ ಪೀoದÀ ಕಟ್ಟಡದ  ಆವರಣದಲ್ಲಿ ಅಥವಾ ತುಮಕೂರು ರೀಸರ್ಚ್ ಫೌಂಡೇಷನ್ @ 2047 ಕ್ಯಾಂಪಸ್‍ನಲ್ಲಿ ರಾಜ್ಯ ಮಟ್ಟz ಮೊದಲÀ ಎನ್.ಆರ್. ಭವನ ನಿರ್ಮಾಣ ಮಾಡಲು ಸಮಾಲೋಚನೆ ನಡೆಸಲಾಗಿದೆ.