21st November 2024
Share

TUMAKURU:SHAKTHIPEETA FOUNDATION

ದೇಸಿ ಹಸುಗಳ ಒಡನಾಟ (COW CUDDLING)  ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ  ವ್ಯಾಪಕವಾಗಿ ಜಾರಿಯಾಗಿದೆ. ಇದೊಂದು ಒಳ್ಳೆಯ ಉದ್ದಿಮೆಯಾಗಿ ರೂಪುಗೊಳ್ಳುತ್ತಿದೆ. ವಿದೇಶಗಳಲ್ಲಿ ಒಳ್ಳೆಯ ಟೂರಿಸಂ ಕೇಂದ್ರಗಳಾಗುತ್ತಿವೆಯಂತೆ.

 ದೇಸಿ ಹಸುಗಳ ಒಡನಾಟ ದಿಂದ ಮನುಷ್ಯರಿಗೆ ಬರುವ ನೂರಾರು ಕಾಯಿಲೆಗಳು ಗುಣ ಮುಖ ವಾಗುತ್ತವೆ ಎಂಬುದು ಒಂದು ನಂಬಿಕೆ ಅಥವಾ ಧಾರ್ಮಿಕ ಭಾವನೆ ಅಥವಾ ವೈಜ್ಞಾನಿಕವಾದ ಆಯುರ್ವೇದ ಸಂಶೋಧನೆ  ಆಗಿರುವ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ, ಮೆಡಿಕಲ್ ರೀಸರ್ಚ್  ಮಾಡಲು ಒಬ್ಬ ದೇಸಿ ಹಸುಗಳನ್ನು ಸಾಕಿರುವ ರೈತ ಮುಂದಾಗಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ.  ಆತ ಈಗಲೇ ನನ್ನ ಹೆಸರು ಪ್ರಚಾರ ಆಗುವುದು ಬೇಡ ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

1.      ದೇಸಿಹಸುಗಳ ಬಗ್ಗೆ ಪೂರ್ವದಿಂದಲೂ ಎಲ್ಲೆಲ್ಲಿ, ಅಧ್ಯಯನಗಳು ನಡೆದಿವೆ.

2.      ಭಾರತ ದೇಶದಲ್ಲಿ ಎಷ್ಟು ನಾಟಿ ಹಸುಗಳು ಇವೆ.

3.      ಎಷ್ಟು ಜಾತಿ ಹಸುಗಳು ಕಣ್ಮರೆಯಾಗಿವೆ ?

4.      ನಮ್ಮನ್ನು ಆಳಿದ ಬ್ರಿಟೀಷರು ಹಲವಾರು ತಳಿಗಳನ್ನು ದೋಚಿ, ಅಲ್ಲಿ ಈಗಲೂ ಅಭಿವೃದ್ಧಿ ಪಡಿಸುತ್ತಿರುವ ಅಂಶಗಳು.

5.      ಹಸುವಿನಿಂದ ಉತ್ಪತ್ತಿಯಾಗುವ ಔಷಧಿಯ ಗುಣವುಳ್ಳ ಮೌಲ್ಯವರ್ದೀತ ಉತ್ಪನ್ನಗಳು.

6.      ಯಾವ ಕಾಯಿಲೆಗಳು ಹಸುವಿನ ಯಾವ ಉತ್ಪನ್ನದಿಂದ ಗುಣಮುಖವಾಗುತ್ತಿವೆ.

7.      ಹಸುವಿನ ಕೊಟ್ಟಿಗೆಯ ಪಕ್ಕ ಮಲಗುವುದರಿಂದ, ಹಸುವಿನ ಉಸಿರಾಟದಿಂದ, ಗಂಜಲು, ಸಗಣಿಗಳ ವಾಸನೆಯಿಂದ ಯಾವ ಕಾಯಿಲೆಗಳ ಗುಣಮುಖವಾಗುತ್ತವೆ.

8.      ರಾಜ್ಯದಲ್ಲಿ ದೇಸಿಹಸುಗಳ ಗೋಶಾಲೆ, ಗೋಮಂದಿರ ಮಾಡಿರುವವರ ಅನುಭವ.

9.      ಸಂಶೋಧಕರ ಅನುಭವ.

10.     ಹಿರಿಯರ ಅನುಭವ.

11.      ಸರ್ಕಾರಗಳಿಂದ ಸಂಶೋಧನೆಗೆ ದೊರೆಯುವ ಸೌಲಭ್ಯ.

12.     ವಿವಿಧ ಧರ್ಮದವರು ಹಸುಗಳ ಬಗ್ಗೆ ಯಾವ ಭಾವನೆಯನ್ನು ಹೊಂದಿದ್ದಾರೆ.

13.     ದೇಸಿ ಹಸುಗಳ ಬಗ್ಗೆ ಧಾರ್ಮಿಕ ಪರಂಪರೆಯ ಸಂಶೋಧನೆಗಳು.

14.     ಗೋಮಾತೆ, ಶಕ್ತಿಪೀಠಗಳಿಗೆ ಮತ್ತು  ದೇವರುಗಳಿಗೆ ಇರುವ ಸಂಭಂದಗಳು.

ಇತ್ಯಾದಿ ಹಲವಾರು ವಿಚಾರಗಳನ್ನು ತೆರಿದಿಟ್ಟಿದ್ದಾರೆ. ದೇಸಿ ಹಸುಗಳ ವಾರ್ಡ್ ಕಂ ರೆಸಾರ್ಟ್/ COW MUSEUM ಮಾಡುವ ಆಲೋಚನೆಯನ್ನು ವ್ಯಕ್ತಪಡಿಸಿದ್ದಾರೆ. ಹೊರದೇಶಗಳಲ್ಲಿ ಜಾರಿಗೆ ಬಂದಿರುವಂತೆ, ಹಸುಗಳ ಪಕ್ಕ ವಿವಿಧ ಕಾಯಿಲೆಗಳ ಜನರನ್ನು ಮಲಗಿಸುವುದು, ಮೈ ಹುಜ್ಜಿಸುವುದು, ತಾಜಾ ಉತ್ಪÀನ್ನಗಳನ್ನು ಸವಿಯುವುದು. ಹೀಗೆ ಹಲವಾರು ಕನಸುಗಳನ್ನು ಬಿಚ್ಚಿಟ್ಟಿದ್ದಾರೆ.

ಇದೊಂದು ಹುಚ್ಚಾಟ ಎಂದು ಅವರ ಸ್ನೇಹಿತರೆ ಜರಿದಿದ್ದಾರಂತೆ. ಅವರಿಗೆ ಧೈರ್ಯ ತುಂಬಿ, ಈ ಬಗ್ಗೆ ರಾಷ್ಟ್ರೀಯ ಮಟ್ಟದ ಸಮಾವೇಶ ನಡೆಸಲು ಮತ್ತು ಸರ್ಕಾರಗಳಿಗೆ ಸಂಶೋಧನೆಗಾಗಿ ಅನುದಾನ ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಲು ಪರಿಕಲ್ಪನಾ ವರದಿ ಸಿದ್ಧಪಡಿಸಲು ಸಲಹೆ ನೀಡಲಾಗಿದೆ. 

ಈ ಬಗ್ಗೆ ಅನುಭವ ಇರುವ ಜ್ಞಾನಿಗಳು ಅಥವಾ ಇವರ ಕನಸುಗಳಿಗೆ ಕೈಜೋಡಿಸುವವರು ಸಂಪರ್ಕಿಸಲು ಮನವಿ.