13th September 2025
Share

TUMAKURU:SHAKTHI PEETA FOUNDATION

ತುಮಕೂರು ನಗರ, ಬೆಂಗಳೂರಿಗೆ ಹತ್ತಿರದಲ್ಲಿದೆ, ರಾಜ್ಯದ ಸುಮಾರು 19 ಜಿಲ್ಲೆಗಳಿಗೆ ಹೆಬ್ಬಾಗಿಲು ಅಂದರೆ ತಪ್ಪಾಗಲಾರದು. ಬೆಂಗಳೂರು ಬೆಳೆಯ ಬೇಕಾಗಿರುವುದು, ಬೆಂಗಳೂರು ಜಿಲ್ಲೆಯ ಸುತ್ತ ಮುತ್ತ ವ್ಯಾಪ್ತಿಯಲ್ಲಿ. 

ನಂತರ ತುಮಕೂರಿನಿಂದ ಉತ್ತರ ಕರ್ನಾಟಕ ಗಡಿವರೆಗೆ ಅಲ್ಲಲ್ಲಿ ಕ್ಲಸ್ಟರ್ ಮಾದರಿಯಲ್ಲಿ ಹಾಗೂ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ಬೆಳೆಯ ಬೇಕು. ಆಗ ನಂಬರ್ ಒನ್ ಕರ್ನಾಟಕ-ನಾಲೇಡ್ಜ್ ಬ್ಯಾಂಕ್’ ಕೂಗಿಗೆ ಅರ್ಥ ಬರಲಿದೆ.

ಈ ಹಿನ್ನಲೆಯಲ್ಲಿ ಕೃಷಿ ಆಶ್ರಮಗಳ ಜೊತೆ ಸೇರಿ, ನಾಲೇಡ್ಜಬಲ್ ಪರ್ಸನ್ ಮತ್ತು ವಿದ್ಯಾರ್ಥಿಗಳ  ನೇತೃತ್ವದಲ್ಲಿ ಜನ ಜಾಗೃತಿ ಮೂಡಿಸುವ ಕನಸು ನನ್ನದಾಗಿದೆ.

ಚನ್ನೈ – ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್’ ಅನ್ನು ಚಿತ್ರದುರ್ಗದವರೆಗೆ ವಿಸ್ತರಿಸಲು, ತುಮಕೂರು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಚಿತ್ರದುರ್ಗ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜನಾರ್ಧನ ಸ್ವಾಮಿರವರು ಮಹತ್ವದ ಪಾತ್ರ ವಹಿಸಿದ್ದರು.

‘ಬೆಂಗಳೂರು – ಮುಂಬೈ ಎಕನಾಮಿಕ್ ಕಾರಿಡಾರ್’ ಘೋಶಿಸಲು ಮಾಜಿ ರಾಷ್ಟ್ರಪತಿ ಶ್ರೀ ಪ್ರಣವ್ ಮುಖರ್ಜಿರವರ ಪಾತ್ರ ಪ್ರಮುಖವಾಗಿತ್ತು. ಇದರ ಹಿಂದೆ ತುಮಕೂರು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಶ್ರಮ ಬಹಳಷ್ಟಿದೆ.

2001 ರಿಂದ ತುಮಕೂರು ನಗರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾಗಿ ಅಭಿವೃದ್ಧಿ ಪಡಿಸಲು ನಿರಂತರವಾಗಿ ಅಭಿವೃದ್ಧಿ ತಂಡದೊಂದಿಗೆ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ರಚಿಸಿಕೊಂಡು ಶ್ರಮಿಸುತ್ತಿರುವುದು ನನಗೆ ಹಮ್ಮೆ ಇದೆ.

 ದಿಶಾ ಸಮಿತಿ ಮಾಜಿ ಸದಸ್ಯರಾದ ಶ್ರೀ ಟಿ.ಆರ್.ರಘೋತ್ತಮರಾವ್ ರವರು, ಜಿ.ಎಸ್.ಬಸವರಾಜ್ ರವರ ಸುಮಾರು 10000 ಕ್ಕೂ ಹೆಚ್ಚು ಪತ್ರಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗೆ ಬರೆದಿರುವುದೂ ಒಂದು ದಾಖಲೆ.

ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸದಸ್ಯನಾಗಿ, ಲೋಕಸಭಾ ಸದಸ್ಯರ ಅಧ್ಯಕ್ಷತೆಯ, ತುಮಕೂರು ಜಿಲ್ಲಾ ಮಟ್ಟದ ದಿಶಾ ಮತ್ತು ಮುಖ್ಯ ಮಂತ್ರಿಯವರ ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ ಬಹಳಷ್ಟು ಶ್ರಮಿಸಿದ್ದೇನೆ.

ತುಮಕೂರು ನಗರದ ಸುತ್ತ ಇರುವ   ಕೆಳಕಂಡ 6 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ, ಹಳೆ ರಾಷ್ಟ್ರೀಯ ಹೆದ್ದಾರಿ-4, ಹೊಸ ರಾಷ್ಟ್ರೀಯ ಹೆದ್ಧಾರಿ 48 ರಿಂದ ಆರಂಭಿಸಿ, ಮತ್ತೆ 48 ಕ್ಕೆ ಜೋಡಣೆಯಾಗುವ  ಒಂದು ಸುಸಜ್ಜಿತವಾದ ರಿಂಗ್ ರಸ್ತೆ ನಿರ್ಮಾಣ ಮಾಡಿಸಿ, ಇದರ ಒಳ ಭಾಗದಲ್ಲಿ ತುಮಕೂರು ನಗರದಿಂದ ರಿಂಗ್ ರಸ್ತೆವರೆಗೆ ರೇಡಿಯಲ್ ರಿಂಗ್ ರಸ್ತೆಗಳನ್ನು ಮಾಡಿಸುವ ಕನಸು ಹೊತ್ತಿದ್ದು, ಜಿ.ಎಸ್.ಬಸವರಾಜ್ ಅದ್ಯಕ್ಷತೆಯ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿ ಒಂದು ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಹಾಳಾದ ಕೊರನಾ ನನ್ನ ಕನಸಿಗೆ ಅಡ್ಡಿಯಾಗಿತ್ತು.

1.            ತುಮಕೂರು ನಗರ ವಿಧಾನಸಭಾ ಕ್ಷೇತ್ರ.

2.            ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ.

3.            ಗುಬ್ಬಿ ವಿಧಾನಸಭಾ ಕ್ಷೇತ್ರ.

4.            ಶಿರಾ ವಿಧಾನಸಭಾ ಕ್ಷೇತ್ರ.

5.            ಮಧುಗಿರಿ ವಿಧಾನಸಭಾ ಕ್ಷೇತ್ರ.

6.            ಕೊರಟಗೆರೆ ವಿಧಾನಸಭಾ ಕ್ಷೇತ್ರ.

ಈ ವ್ಯಾಪ್ತಿಯ ಒಳಭಾಗದಲ್ಲಿ ತುಮಕೂರು ಇಂqಸ್ಟ್ರಿಯಲ್ ನೋಡ್, ಜಾಲಗುಣಿ ಬಫರ್ ಡ್ಯಾಂ (ವಾಟರ್ ಬ್ಯಾಂಕ್), ಅಂತರರಾಷ್ಟ್ರೀಯ ಮಟ್ಟದ ವಿಮಾನ ನಿಲ್ಧಾಣ, ವಿಜ್ಞಾನ ಗುಡ್ಡ ಸೇರಿದಂತೆ, ತುಮಕೂರು ಮಹಾನಗರ ಪಾಲಿಕೆಯ 10 ಕೀಮಿ ಸುತ್ತಳತೆಯಲ್ಲಿ ಇರುವ ಸುಮಾರು ಮೂರು ಸಾವಿರ ಎಕರೆ ಸರ್ಕಾರಿ ಜಮೀನು ಗುರುತಿಸಿ, ಜಿ.ಐ.ಎಸ್ ಲೇಯರ್ ಮಾಡಲು ಜಿ.ಎಸ್.ಬಸವರಾಜ್ ಅದ್ಯಕ್ಷತೆಯ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಲಾಗಿತ್ತು.

ಪ್ರಸ್ತುತ ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ, ರಚಿಸುತ್ತಿರುವ ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ನೇತೃತ್ವದಲ್ಲಿ, ರಾಜ್ಯದ್ಯಾಂತ ರಚಿಸುತ್ತಿರುವ  ಕೃಷಿ ಆಶ್ರಮಗಳ ಸಹಕಾರವನ್ನು ಪಡೆದು, ಕೃಷಿ ಆಧಾರಿತ ಸಂಶೋಧನೆ ಮತ್ತು ಅಭಿವೃದ್ಧಿ ನಗರವಾಗಿ ನಿರ್ಮಾಣ ಮಾಡಲು ಜನಜಾಗೃತಿ ಮೂಡಿಸಲು ಗುರಿ ಹೊಂದಿದ್ದೇನೆ.

‘ಈ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಇರುವ ಎಲ್ಲಾ ಧರ್ಮ, ಜಾತಿ, ಉಪಜಾತಿಗಳಿಗೂ, ಅವರವರವ ಜಾತಿಯ ಜನರ ಅಭಿವೃದ್ಧಿಗಾಗಿ ಸಂಶೋಧನೆ ಮಾಡಲು ಅವಕಾಶ ಕಲ್ಪಿಸುವ ಆಲೋಚನೆ ಮೊಳಕೆಯೊಡಿದಿದೆ. ಸರ್ಕಾರದ ಗಮನ ಸೆಳೆಯುವ ಕೆಲಸ ಆರಂಭವಾಗಿದೆ.’

 ರಾಜ್ಯದ ಎರಡು ಕಡೆ ಅಂದರೆ ವಾಣಿ ವಿಲಾಸ ಕಾಲುವೆಯ ಅಕ್ಕ-ಪಕ್ಕದ ಸರ್ಕಾರಿ ಜಮೀನು ಅಥವಾ ತುಮಕೂರು ನಗರದ ಸುತ್ತಮುತ್ತಲಿನ ಸರ್ಕಾರಿ ಜಮೀನುUಳಲ್ಲಿ ನನ್ನ ಕನಸಿನ ಯೋಜನೆ ಆರಂಭಿಸಲು ಸರ್ಕಾರದ ಗಮನ ಸೆಳೆಯುವ ಪ್ರಕ್ರಿಯೇ ಆರಂಭವಾಗಿದೆ.

ಮುಂದಿನ ತಿಂಗಳು ತುಮಕೂರು ನಗರದಲ್ಲಿ ನಡೆಯುವ ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಸಮಾವೇಶದಲ್ಲಿ, ಈ ಯೋಜನೆಯ ರೂಪು ರೇಷೆ ನಿರ್ಧರಿಸಲಾಗುವುದು. ಜಾತಿ ಜನ ಗಣತಿಯ ಆಧಾರದಂತೆ, ರಾಜ್ಯದಲ್ಲಿ ವಾಸಿಸುವ ಎಲ್ಲಾ ಧರ್ಮ, ಜಾತಿ, ಉಪಜಾತಿಯವರು ಒಂದೊಂದು ಪ್ರಭೇಧಗಳ ಗಿಡಗಳನ್ನು ಸಂಶೋದನೆ ಮಾಡುವ ಜೊತೆಗೆ, ಅವರ ಧರ್ಮ, ಜಾತಿ, ಉಪಜಾತಿಗಳ ನಾಲೇಡ್ಜ್ ಬ್ಯಾಂಕ್ ಮಾಡಲು ಅರಿವು ಮೂಡಿಸಲಾಗುವುದು.’

ಆಸಕ್ತರು ಕೈಜೋಡಿಸಲು ಮನವಿ ಮಾಡಲಾಗಿದೆ.