13th October 2025
Share

TUMAKURU:SHAKTHI PEETA FOUNDATION

ಸ್ವಾತಂತ್ರ್ಯ ಬಂದು 80 ವರ್ಷಗಳಿಗೆ ಪಾದಾರ್ಪಣೆ ಮಾಡಿದರೂ, ಈವರೆಗೂ ಕರ್ನಾಟಕ ರಾಜ್ಯದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣ ಮಾಡಲು, ಇದೂವರೆಗೂ ಅಡಳಿತ ನಡೆಸಿರುವ ಯಾವುದೇ ರಾಜ್ಯ ಸರ್ಕಾರಗಳಿಗೂ ಸಾದ್ಯವಾಗಿರಲಿಲ್ಲ.

ಈಗಿನ ರಾಜ್ಯ ಸರ್ಕಾರ ಛಲ ಬಿಡದ ವಿಕ್ರಮನಂತೆ  ಕಡತದ ಹಿಂದೆ ಬಿದ್ದಕಾರಣ, ಎಸ್.ಸಿ/ ಎಸ್.ಟಿ ವಿದ್ಯಾರ್ಥಿಗಳಿಗೆ ಅರ್ಧ ಎಕರೆ ಜಮೀನನ್ನು ಕೇಂದ್ರ ಸರ್ಕಾರ ಮಂಜೂರು ಮಾಡುವ ಮನ್ಸೂಚನೆ ಬಲ್ಲ ಮೂಲಗಳಿಂದ ದೊರಕಿದೆ. ಇಲ್ಲಿ ಯಾವ ಮಲತಾಯಿ ಧೋರಣೆನೂ ಇಲ್ಲ. ಕಡತದ ಅನುಸರಣೆ ಮುಖ್ಯ.

ಇನ್ನೂ ಎಲ್ಲಾ ಜನಾಂಗದ ವಿದ್ಯಾರ್ಥಿಗಳಿಗೆ 2 ಎಕರೆ ಜಮೀನು ಮಂಜೂರು ಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಕೂಡಲೇ ಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ ರವರು ಇನ್ನೊಂದು ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಬರೆಯಲು ಮನವಿ ಮಾಡಲಾಗುವುದು.

ನಿಜಕ್ಕೂ ಮಾನ್ಯ ಮುಖ್ಯಮಂತ್ರಿಯªರಾದ ಶ್ರೀ ಸಿದ್ಧರಾಮಯ್ಯನವÀರಿಂದ ಆರಂಭಿಸಿ, ಲೋಕೊಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳೆರವರು, ದೆಹಲಿ ಪ್ರತಿ ನಿಧಿ ಟಿ.ಬಿ.ಜಯಚಂದ್ರರವರು, ಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ ರವರು ಸೇರಿದಂತೆ, ದೆಹಲಿಯಲ್ಲಿ ಕಡತದ ಅನುಸರಣೆ ಮಾಡಲು ಟೇಬಲ್ ಟೇಬಲ್ ಅಲೆದಾಡಿದವರಿಗೂ ಹೃದಯ ಪೂರ್ವಕ ಅಭಿನಂದನೆಗಳು.

ಕೂಡಲೇ ಹಣ ಪಾವತಿಸಿ, ಜಮೀನು ಹಸ್ತಾಂತರ ಮಾಡಿಸಿಕೊಂಡು ಭೂಮಿ ಪೂಜೆ ಮಾಡಲು ಲೋಕೋಪಯೋಗಿ ಮುಖ್ಯ ಇಂಜಿನಿಯರ್ ಮಂಜಪ್ಪ ಮತ್ತು ಅವರ ತಂಡ ಸಮೋರಾಪದಿಯಲ್ಲಿ ಶ್ರಮಿಸಲಿದ್ದಾರೆ.

‘ದೆಹಲಿಯಲ್ಲಿ ಕರ್ನಾಟಕ ಭವನದ ಉದ್ಘಾಟನೆ ದಿವಸ, ಲೋಕೊಪಯೋಗಿ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ಸೆಲ್ವಕುಮಾರ್ ರವರು ಏನ್ ಕುಂದರನಹಳ್ಳಿ ತಿಂಡಿ ತಿನ್ನಿ ಎಂದಾಗ, ಮುಂದೆ ನಡೆದ ಮಾತುಕತೆ ನಂತರ, ಲೋಕೋಪಯೋಗಿ ಕಾರ್ಯದರ್ಶಿಯವರಾದ ಶ್ರೀ ಸತ್ಯಾನಾರಾಯಣರವರು, ಮುಖ್ಯ ಇಂಜಿನಿಯರ್ ಶ್ರೀ ಮಂಜಪ್ಪನವರು, ಇಂಜಿನಿಯರ್ ಶರತ್ ರವರು ನಿಜಕ್ಕೂ ಒಂದು ರೀತಿ ಛಾಲೇಂಜ್ ಆಗಿ ತೆಗೆದುಕೊಂಡರು ಎಂದರೆ ತಪ್ಪಾಗಲಾರದು’.

 ಪ್ರಥಮವಾಗಿ ದೆಹಲಿಯಲ್ಲಿ ತುಮಕೂರು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಮುರುಳೀಧರ್‍ನಾಯಕ್‍ರವರು ಮತ್ತು ನಾನು ಶ್ರೀ ಸತೀಶ್ ಜಾರಕಿಹೊಳೆ ರವರಿಗೆ ಮನವಿ ಸಲ್ಲಿಸಿದ ದಿನದಿಂದ ಕಡತದ ಅನುಸರಣೆ ಮಾಡುತ್ತಾ ಬಂದಿದ್ದು. 2023 ರಿಂದ ಈ ಯೋಜನೆಗೆ ಶ್ರಮಿಸಿದ ನನಗೆ ನಿಜಕ್ಕೂ ಅತ್ಯಂತ ಸಂತೋಷವಾಗಿದೆ. ನಿಜಕ್ಕೂ ನನ್ನ ಮಗ ಶ್ರೀ ಕೆ.ಆರ್.ಸೋಹನ್ ರವರು, ಮೊದಲು ಈ ಕೆಲಸ ಮಾಡಿ ಎಂದು ನನಗೆ ಛಾಟಿ ಬೀಸಿದ ನಂತರ, ವಿಶ್ವದ 108 ಶಕ್ತಿದೇವತೆಗಳನ್ನೂ ಪೂಜಿಸಿ, ನಾನು ಸಹ ಛಾಲೇಂಜ್ ಆಗಿ ತೆಗೆದುಕೊಂಡಿದ್ದೆ.