15th September 2024
Share

ಮಾನ್ಯ ಪ್ರಧಾನ ಮಂತ್ರಿಗಳು ಮತ್ತು ಮಾನ್ಯ ರಾಷ್ಟ್ರಪತಿಗಳು ಭಾಗವಹಿಸುವ ಸಭೆಗೆ ಯಾವುದೇ ಪ್ರೋಟೋಕಾಲ್ ಇರುವುದಿಲ್ಲವಂತೆ. ಪ್ರತಿಯೊಂದು ಸಭೆಗೂ ಸಹ ಯಾರ ಹೆಸರುಗಳನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಬೇಕು ಎಂಬುದನ್ನು Principal Secretary to PMO   ತೀರ್ಮಾನ ಮಾಡುತ್ತಾರಂತೆ. ಮಧ್ಯೆ ಯಾರ ಹಸ್ತಕ್ಷೇಪವೂ ಇಲ್ಲಿ ನಡೆಯುವುದಿಲ್ಲಾ. ಪ್ರತಿ ಸಭೆಗೂ ಎಸ್ಪಿಜಿಯವರ ಸಲಹೆಯನ್ನು ತೆಗೆದುಕೊಳ್ಳುತ್ತಾರಂತೆ.  

ಕರ್ನಾಟಕದ ಬೆಂಗಳೂರಿನಲ್ಲಿ ನಡೆದ ಒಂದು ಸಭೆಗೆ ಆಗಿನ ಮಾನ್ಯ ಮುಖ್ಯಮಂತ್ರಿಗಳಾದ  ಶ್ರೀ ಸಿದ್ಧರಾಮಯ್ಯನವರ ಹೆಸರನ್ನು ಸಹ ಪ್ರಿಂಟ್ ಮಾಡಿರಲಿಲ್ಲವಂತೆ, ಇದನ್ನು ಯಾರು ಸಹ ಪ್ರಶ್ನೆ ಮಾಡುವ ಹಾಗಿಲ್ಲ. ಆದರೂ ಶ್ರೀ ಸಿದ್ಧರಾಮಯ್ಯನವರು ಏರ್ ಪೋರ್ಟ್ಗೆ ಹೋಗಿ ಮಾನ್ಯ ಪ್ರಧಾನ ಮಂತ್ರಿಗಳನ್ನು ಆಹ್ವಾನಿಸಿ ಸಭೆಗೆ ಹೋಗದೆ ನೇರವಾಗಿ ಬಂದ ಇತಿಹಾಸವೂ ಇದೆಯಂತೆ.

ವೇದಿಕೆಯ ಮೇಲೂ  ಯಾರು ಕುಳಿತು ಕೊಳ್ಳಬೇಕು ಹಾಗೂ ಎಲ್ಲಿ ಕುಳಿತು ಕೊಳ್ಳಬೇಕು ಎಂಬ ಬಗ್ಗೆಯೂ ಸಹ ಅಲ್ಲಿಂದಲೇ ನೀರ್ಣಯ ಆಗ ಬೇಕಂತೆ. ಇಲ್ಲಿಯೂ ಸಹ ರಾಜ್ಯ ಸರ್ಕಾರದ ಯಾವ ಪಾತ್ರವೂ ಇರುವುದಿಲ್ಲಾ. ಸಂಸದರನ್ನು ಸಾಮಾನ್ಯವಾಗಿ ದೇಶದ ಯಾವುದೇ ಸಭೆಯಲ್ಲಿ ವೇದಿಕೆ ಮೇಲೆ ಕೂರಲು ಅವಕಾಶ ಕಲ್ಪಿಸಿರುತ್ತಾರಂತೆ.

ಆಯಾ ಕ್ಷೇತ್ರದ ಶಾಸಕರನ್ನು ವೇದಿಕೆಯ ಮೇಲೆ ಕೂರಿಸಬೇಕು ಎಂಬುದು ನಿಯಮವಿಲ್ಲವಂತೆ.

ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಮಾತ್ರ ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಯಬೇಕು ಎಂಬ ನಿಯಮವಿದೆಯಂತೆ.

ಹೆಸರು ಹೇಳಲು ಇಚ್ಚಿಸಿದ ಪ್ರೋಟೋಕಾಲ್ನಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಯೊಬ್ಬರೂ ತಿಳಿಸಿದ ಮಾಹಿತಿ.

ಇದಕ್ಕೆ ದಾಖಲೆ ಸಹಿತ ಹೇಳಲು ಯಾವುದೇ ದಾಖಲೆಯೂ ಇರುವುದಿಲ್ಲವಂತೆ

ದೇಶದ ಕೆಲವು ಸಂಸದರು ಹಿಂದೆ ಲೋಕಸಭೆಯಲ್ಲಿ ಪ್ರಶ್ನೆ ಮಾಡಿದವರಿಗೂ ಇದೇ ಉತ್ತರ ನೀಡಿದ್ದಾರಂತೆ.