21st November 2024
Share

  ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಹೌಸಿಂಗ್ ಫಾರ್ ಆಲ್ – 2022 ನ ಶೇ 100 ರಷ್ಟು ಜಾರಿಗೆ ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾಗಿರುವ ಗುಬ್ಬಿ ತಾಲ್ಲೂಕು ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಮತ್ತು ಹೆಚ್.ಎ.ಎಲ್ ಸ್ಮಾರ್ಟ್ ವಿಲೇಜ್ ವ್ಯಾಪ್ತಿಯ ಎಲ್ಲಾ 71 ಗ್ರಾಮಗಳಲ್ಲಿ ಅನುಷ್ಠಾನಕ್ಕೆ ತರಲು ಈ ವ್ಯಾಪ್ತಿಯ ಗ್ರಾಮ ಪಂಚಾಯಿತ್ ಪಿಡಿಗಳು ಪಣ ತೊಡಲು ಮುಂದಾಗಿದ್ದಾರೆ.

 ಈ ಯೋಜನೆಯ ಅನುಷ್ಠಾನಕ್ಕೆ ಗ್ರಾಮಗಳ ಜನತೆಯ ಸಹಭಾಗಿತ್ವ ಬಹು ಮುಖ್ಯವಾಗಿದೆ. ಗ್ರಾಮಠಾಣಗಳಲ್ಲಿ ಹಾಲಿ ಇರುವ ಎಲ್ಲಾ ಮನೆಗಳು/ಕಟ್ಟಡಗಳು//ನಿವೇಶನಗಳನ್ನು ಹಾಗೂ ಆಯಾ ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿರುವ ಎಲ್ಲಾ ಕಟ್ಟಡಗಳನ್ನು ಡಿಜಿಟಲೈಸ್ ಮಾಡಿ, ಇ-ಸ್ವತ್ತು ಮಾಡಲು ಒಂದು ನಂಬರ್ ಗೆ  ತಲಾ ರೂ 800 ಪಾವತಿಸುವ ಮೂಲಕ ಜನರು ಮುಂದೆ ಬರಲು ಜಾಗೃತಿ ಮಾಡಿಸುವ ಕೆಲಸವನ್ನು ಗುಬ್ಬಿ ಸಿಐಟಿ ಕಾಲೇಜಿನ ವಿದ್ಯಾರ್ಥಿಗಳು ಆಕ್ಟಿವಿಟಿ ಪಾಯಿಂಟ್ ಕಾರ್ಯಕ್ರಮವಾಗಿ ಮಾಡಲು ಕಾಲೇಜಿನ ನಿರ್ಧೇಶಕರಾದ ಶ್ರೀ ಸುರೇಶ್ ಕುಮಾರ್ ರವರು ಚಿಂತನೆ ನಡೆಸುತ್ತಿದ್ದಾರೆ.

  ಗ್ರಾಮ ಪಂಚಾಯಿತಿ ಪಿಡಿಓಗಳು ಇ-ಸ್ವತ್ತು ಮಾಡಿಸಲು ಒಂದೇ ಭಾರಿಗೆ ಬಾಕಿ ಇರುವ ಎಲ್ಲಾ ಕಂದಾಯ ಪಾವತಿಯನ್ನು ಮಾಡಲೇ ಬೇಕು ಎಂಬ ಷರತ್ತು ವಿಧಿಸದೇ ಸ್ವಲ್ಪ ಸರಳಗೊಳಿಸಲು ಮುಂದಾಗಬೇಕಿದೆ.

  ಸರ್ವೆ ನಂಬರ್‌ಗಳಲ್ಲಿರುವ ಕಟ್ಟಡಗಳ ಭೂ ಪರಿವರ್ತನೆಗೆ ದಾಖಲೆಗಳನ್ನು ಅಫ್ ಲೋಡ್ ಮಾಡುವ ಮೂಲಕ ಒಂದೇ ಭಾರಿ ಆಂದೋಲನ ರೂಪದಲ್ಲಿ ಜನ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

  ಇ-ಸ್ವತ್ತಿಗೆ ಎಲ್ಲರೂ ಅರ್ಜಿ ಹಾಕಿದ ದಿನವೇ ಈ ಗ್ರಾಮಗಳಲ್ಲಿ ಯಾರಿಗೆ ಮನೆಯಿಲ್ಲ, ಯಾರಿಗೆ ನಿವೇಶನವಿದೆ, ಯಾರ ಮನೆ ಬೀಳುವ ಹಾಗಿದೆ ಎಂಬ ಕರಾರುವಕ್ಕಾದ ಪಟ್ಟಿ ದೊರೆಯಲಿದೆ. ನಂತರ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಓರವರ ಮೂಲಕ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್‌ರಿಗೆ. ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರಿಗೆ, ಜಿಲ್ಲಾ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರಿಗೆ ಮತ್ತು ವಸತಿ ಸಚಿವರಾದ ಶ್ರೀ ವಿ.ಸೋಮಣ್ಣನವರಿಗೆ ಪಟ್ಟಿ ನೀಡಲು ಮುಂದಾಗಿದ್ದಾರೆ.

ಇ-ಸ್ವತ್ತು ಸಮೀಕ್ಷೆ ಮಾಡಲು ಸರ್ವೇಯರ್‌ಗಳನ್ನು ನೇಮಕ ಮಾಡಲು ಅಥವಾ ಖಾಸಗಿ ಸಲಹೆಗಾರರಿಗೆ ಜಿಐಎಸ್ ಆಧಾರಿತ ಗ್ರಾಮ ಠಾಣದ ನಕ್ಷೆ ಸಿದ್ಧಪಡಿಸಲು ಹೊರಗುತ್ತಿಗೆ ಅಥವಾ ಪಿಪಿಪಿ ಮಾದರಿಯಲ್ಲಿ ನೀಡಿ ಒಂದು ಸ್ವತ್ತಿಗೆ ಸ್ವತ್ತಿನ ಮಾಲೀಕರು ಇಂತಿಷ್ಟು ಹಣ ಪಾವತಿಸ ಬೇಕು ಎಂದು ನಿಗದಿಗೊಳಿಸಲು   ತುಮಕೂರು ಜಿಲ್ಲಾ ದಿಶಾ ಸಮಿತಿ ನಿಯಾಮಾನುಸಾರ ನಿರ್ಣಯ ಕೈಗೊಂಡು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಬೇಕಿದೆ.

   ದೇಶದಲ್ಲಿಯೇ ವಿನೂತನ ಯೋಜನೆಯಾದ, ಡೇಟಾ ಬೇಸ್ ಪೂರಕವಾದ, ಕೇಂದ್ರ /ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳಿಗೆ ಒಂದೇ ಮ್ಯಾಪ್, ಒಂದೇ ಡೇಟಾ ಮಾದರಿಯ ಜಿಐಎಸ್ ಆಧಾರಿತ 71 ಗ್ರಾಮಗಳ ಡಿಜಿಟಲೈಸ್ ನಕ್ಷೆ ಮತ್ತು ಜಲಗ್ರಾಮ ಕ್ಯಾಲೆಂಡರ್ ಮಾಡಲು ಹೆಚ್.ಎ.ಎಲ್ ವತಿಯಿಂದ ಸಿ.ಎಸ್.ಆರ್ ಫಂಡ್ ಪಡೆಯಲು ಚಿಂತನೆ ನಡೆಸಲಾಗಿದೆ. ಈಗಾಗಲೇ ಸಂಸದರು, ಜಿಲ್ಲಾಧಿಕಾರಿ ಮತ್ತು ಸಿಇಓ ರವರು ಸಿಎಸ್‌ಆರ್ ಫಂಡ್ ನೀಡುವ ಬಗ್ಗೆ ಹೆಚ್.ಎ.ಎಲ್ ನವರೊಂದಿಗೆ ಮಾತನಾಡಿದ್ದಾರೆ ಅವರು ಸಹ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ.

  ನಿವೇಶನ ರಹಿತರಿಗೆ ನಿವೇಶನ ನೀಡಲು ಸರ್ಕಾರಿ ಜಮೀನು ಇದ್ದಲ್ಲಿ ಸರ್ಕಾರಿ ಜಮೀನಿನ ವಿವರ, ಸರ್ಕಾರಿ ಜಮೀನು ಇಲ್ಲದಿದ್ದಲ್ಲಿ ಖಾಸಗಿ ಜಮೀನು ಮಾರಾಟ ಮಾಡುವವರ ಜಮೀನು ದಾಖಲೆ ಅಥವಾ ಭೂ ಸ್ವಾಧೀನ ಮಾಡಿಕೊಳ್ಳುವ ಜಮೀನು ಮಾಹಿತಿಯನ್ನು ಸಲ್ಲಿಸುವುದು ನಿಯಮವಾಗಿದೆ.

 ಈ ಬಗ್ಗೆ ಸಂಸದರ ಆದರ್ಶ ಗ್ರಾಮ ಯೋಜನೆಯ ನೋಡೆಲ್ ಅಧಿಕಾರಿಗಳಾದ ಜಿಪಂನ ಡಿಎಸ್-2 ಶ್ರೀ ರಮೇಶ್ ಅವರು ಒಂದು ಸುತ್ತೋಲೆಯನ್ನು ಹೊರಡಿಸುವುದು ಅಗತ್ಯವಾಗಿದೆ.

 ವಸತಿ ಸಚಿವರಾದ ಶ್ರೀ ವಿ.ಸೋಮಣ್ಣನವರು ಹೌಸಿಂಗ್ ಫಾರ್ ಆಲ್ – 2022 ಯೋಜನೆಯ ಶೇ.100 ರ ಜಾರಿಗೆ ಅಗತ್ಯವಿರುವ ಎಲ್ಲಾ ಅನುದಾನ ನೀಡುವ ಭರವಸೆ ಇದೆ. ಪಕ್ಕಾ ಮಾಹಿತಿಗಳೊಂದಿಗೆ ನಿಯೋಗ ಹೋಗಲು ಚಿಂತನೆ ನಡೆಸಲಾಗಿದೆ.

  ಈ ಎಲ್ಲಾ ಚಟುವಟಿಕೆಗಳನ್ನು ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ರವಾನಿಸುವ ಕೆಲಸವನ್ನು ಬೆಂಗಳೂರಿನ ಐಸಿಎಸ್‌ಟಿ ಸಂಸ್ಥೆ ಮಾಡಲು ಒಪ್ಪಿದೆ.