20th December 2024
Share

 ಕರ್ನಾಟಕ ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳಾಗಿದ್ದ ಶ್ರೀ ಎನ್.ಧರ್ಮಸಿಂಗ್‌ರವರೊಂದಿಗೆ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಯೋಜನೆ ಜಾರಿಗೆ ಮನವಿ.

ಮಾನ್ಯ ಮುಖ್ಯ ಮಂತ್ರಿಗಳಾಗಿದ್ದ ಶ್ರೀ ಎನ್.ಧರ್ಮಸಿಂಗ್‌ರವರ ಬಳಿ ಶ್ರೀ ಹನುಮಂತರಾವ್‌ರವರು ಓಎಸ್‌ಡಿ ಆಗಿದ್ದರು. ಅವರು ಒಂದು ದಿವಸ 2001 ರಲ್ಲಿ ತುಮಕೂರು ಲೋಕಸಭಾ ಸದಸ್ಯರಾಗಿದ್ದ ಶ್ರೀ ಜಿ.ಎಸ್.ಬಸವರಾಜ್‌ರವರ ಕಚೇರಿಗೆ ಬಂದು ದೇವರಾಯನ ದುರ್ಗಕ್ಕೆ ಬೀದಿ ದೀಪ ಹಾಕಲು ಮನವಿ ಸಲ್ಲಿಸಿದರು.

  ನನಗೂ ಅವರಿಗೂ ಪರಿಚಯವಿರಲಿಲ್ಲ ಜೊತೆಯಲ್ಲಿ ತುಮಕೂರಿನ ಆಡಿಟರ್ ಶ್ರೀ ರಾಮಚಂದ್ರರವರು ಬಂದಿದ್ದರು. ಅವರು ನನಗೆ ಪರಿಚಯ ಮಾಡಿದರು. ಅವರ ಬೇಡಿಕೆ ಮೂರು ದಿವಸದಲ್ಲಿ ಒಂದು ಲಕ್ಷ ರೂಗಳ ಬೀದಿ ದೀಪ ಹಾಕಿಸಲೇ ಬೇಕು. ದೇವರಾಯನ ದುರ್ಗಕ್ಕೆ ಶ್ರೀ ಎನ್.ಧರ್ಮಸಿಂಗ್‌ರವರು ಬರುತ್ತಾರೆ ಎಂದು ಮನವಿ ಮಾಡಿದರು.

   ಜಿ.ಎಸ್.ಬಿ ರವರು ಎಂಪಿಎಲ್‌ಎಡಿಯಲ್ಲಿ ಮಾಡಿಸೋಣ, ಆದರೇ ಲೇಟ್ ಅಗುತ್ತೆ ಎಂದರು, ನೋಡಪ್ಪಾ ಎಂದು ನನಗೆ ಹೇಳಿ ಹೊರಟರು. ಆಡಿಟರ್ ಶ್ರೀ ರಾಮಚಂದ್ರರವರು ಬಿಡಬೇಕಲ್ಲಾ ಈ ಕೆಲಸ ಆಗಲೇಬೇಕು ಪಟ್ಟು ಹಿಡಿದರು,

   ಸರಿ ಆ ಕೆಲಸಕ್ಕೆ ಮಹೂರ್ತ ಫಿಕ್ಸ್ ಆಯಿತು ಮೂರು ದಿವಸದಲ್ಲಿ ಬೀದಿ ದೀಪಕ್ಕೆ ಚಾಲನೆ ದೊರಕಿತು. ನಂತರ ಅವರು ಲೋಕೋಪಯೋಗಿ ಸಚಿವರಾಗಿದ್ದಾಗ ಜಿಎಸ್‌ಬಿ ರವರು ನಬಾರ್ಡ್ ರಸ್ತೆಗಳ ಅನುದಾನಕ್ಕೆ  ಸುಮಾರು ರೂ ೨೫ ಕೋಟಿ ಪಟ್ಟಿ ಮಾಡಿ ನನ್ನನ್ನು ಅವರ ಬಳಿ ಕಳುಹಿಸಿದರು. ಅವರು ದೆಹಲಿಗೆ ಹೋದರು.

ಶ್ರೀ ಹನುಮಂತರಾವ್‌ರವರಿಗೆ ಫೋನ್ ಮಾಡಿದೆ ಸಮಯ ನಿಗದಿ ಮಾಡಿದರು. ವಿಧಾನಸೌಧದಲ್ಲಿ ಕುಳಿತ್ತಿದ್ದರು. ನಾನು ಹೋಗಿ ಪರಿಚಯ ಮಾಡಿಕೊಂಡು ಪಟ್ಟಿ ನೀಡಿದೆ.

ಶ್ರೀ ಧರ್ಮಸಿಂಗ್ ರವರು ಶುರು ಮಾಡಿದರು: ನಿಮ್ಮ ಬಸವರಾಜ್ ಕತೆ ಗೊತ್ತಾ? ಎಂದರು,

ನಾನು: ಯಾವ ವಿಚಾರ ಸಾರ್

ಶ್ರೀ ಧರ್ಮಸಿಂಗ್ : ಅವರು ಸಣ್ಣವ ಇದ್ದಾಗ ಎಂಪಿ ಆಗಿ ಬಿಟ್ಟರು, ಮುಖ್ಯ ಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಮತ್ತು ಪ್ರಧಾನಿ ಶ್ರೀ ರಾಜೀವ್ ಗಾಂಧಿಯವರ ಬಳಿ ಚಲೋ ಇದ್ದವ, ನಾನು ಖರ್ಗೆ ಒಂದು ದಿವಸ ಅವರ ಬಳಿ ಹೋದರೇ ಕತ್ತು ಹಾಕಿಕೊಂಡು ಸುಮ್ಮನೆ ಹೋರಟೆ ಬಿಟ್ಟರು ಎಂದು ಹಾಸ್ಯ ಮಾಡಿದರು.

ನಾನು: ಸ್ವಾಮಿ ನಿವೆಲ್ಲಾ ದೊಡ್ಡವರು.

ಶ್ರೀ ಧರ್ಮಸಿಂಗ್: ಆಮೇಲೆ ಮೊದಲು ಎಪಿಎಂಸಿ ಚೇರ್‍ಮನ್ ಆಗಿದ್ದಾಗ ನಾನು ಖರ್ಗೆ ತುಮಕೂರಿಗೆ ಬಂದು ಇಳಿದು ಇಡ್ಲಿ ತಿಂದು ಬೆಂಗಳೂರಿಗೆ ಬರುತ್ತಿದ್ದೋ, ಆವಾ ಏನು ಆಥಿತ್ಯ ಮಾಡುವ ಅಂದರೆ ಊರಿಗೆ ಹೋದರೇ ನಮ್ಮ ಮನೇಲಿ ತುಮಕೂರು ಬಸವರಾಜ್ ಹಣ್ಣಿನ ಪುಟ್ಟಿಗೆ ಕಾಯುತ್ತಿದ್ದರು ಎಂದು ಎಲ್ಲರಿಗೂ ತಿಳಿಸಿದರು.

ನಾನು: ಸಾರ್ ಪಟ್ಟಿ,

ಶ್ರೀ ಧರ್ಮಸಿಂಗ್ : ನಿನಗೆ ಅರ್ಜೆಂಟ್ ಪೋನ್ ಮಾಡಿ ಹೇಳಿದ್ದಾರೆ, ಆದರೆ ಒಂದು ಕೋಟಿ ಕೆಲಸ ಹಾಕುತ್ತೇನೆ ಎಂದರು. ಯಾವುದು ಹಾಕ ಬೇಕು ನೀನೇ ಹೇಳು ಅಂದರು.

ಶ್ರೀ ಹನುಮಂತರಾವ್: ಪಟ್ಟಿ ನೋಡಿ ಈ ಕೆಲಸ ಹಾಕನಾ ಸಾರ್ ಅಂದರು,

ಶ್ರೀ ಧರ್ಮಸಿಂಗ್: ಅದೇನು ನಿಮಗೆ ಈ ಕೆಲಸದ ಬಗ್ಗೆ ಆಸಕ್ತಿ ಎಂದರು.

ಶ್ರೀ ಹನುಮಂತರಾವ್:  ಸಾರ್ ರಮೇಶ್‌ರವರ ಊರಿನ ರಸ್ತೆ,

ಶ್ರೀ ಧರ್ಮಸಿಂಗ್: ಹಾಕಪ್ಪಾ ಅದನ್ನೆ ಅಂದು ಆವಾಗ ಸುಮಾರು ರೂ 90 ಲಕ್ಷದ ಕೆಲಸ ಹಾಕಿದರು

ಬಿ.ಹೆಚ್ ರಸ್ತೆ 206 ರಿಂದ ಕುಂದರನಹಳ್ಳಿ, ಅದಲಗೆರೆ ಮಾರ್ಗವಾಗಿ, ಹರದಗೆರೆವರೆಗೂ ಅಭಿವೃದ್ಧಿ ಆಯಿತು.

 ಮುಖ್ಯ ಮಂತ್ರಿ ಆದ ನಂತರ ತುಮಕೂರಿಗೆ ಬಂದರು, ಅವರ ಜೊತೆಯಲ್ಲಿ ಶ್ರೀ ಎಂ.ಮಲ್ಲಿಕಾರ್ಜುನ ಖರ್ಗೆ ರವರು ಸಹ ಆಗಮಿಸಿದ್ದರು. ಈ ಸಂದರ್ಭದಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ವರದಿ ಅನುಷ್ಠಾನಗೊಳಿಸಲು ಮನವಿ ನೀಡಿದಾಗ ಶ್ರೀ ಜಿ.ಎಸ್.ಬಸವರಾಜ್ ರವರು, ದಿ. ಕೆ.ಆರ್.ನಾಯಕ್ ಇನ್ನೂ ಮುಂತಾದವರು ಹಾಜರಿದ್ದರು.

 ಶ್ರೀ ಎಂ.ಮಲ್ಲಿಕಾರ್ಜುನ ಖರ್ಗೆರವರು ಏನ್ ಬಸವರಾಜ್ ಯಾರು ಚೀಫ್ ಮಿನಿಸ್ಟರ್ ಆದ್ರು ನೀರು ನೀರು ಅಂತ ನೀನು ಅರ್ಜಿ ಕೊಟ್ಟಿದ್ದೆ ಕೊಟ್ಟಿದ್ದು, ಆದು ಆಗಿಂಗಲ್ಲ, ನೀನು ಬಿಡಂಗಿಲ್ಲ ಎಂದು ಜೋಕ್ ಮಾಡಿದರು.

 ಕೆ.ಆರ್.ನಾಯಕ್ರವರು ಯಾವ ಕೆಲಸ ಮಾಡ್ತಿರೋ ಬಿಡ್ತಿರೋ ನೀರು ಕೋಡಿ ಸ್ವಾಮಿ ಎಂದು ಗುಡುಗಿದರು. ಬಸವರಾಜ್ ಅವರು ತಕ್ಷಣ ಇವರು ಕಾಮ್ರೆಡ್ ಕೆ.ಆರ್.ನಾಯಕ್ ಆಂತ ಪರಿಚಯ ಮಾಡಿದರು. ಖರ್ಗೆಯವರು ಅವರ ಸೈಲ್ ಗೊತ್ತಾಗುತ್ತೆ ಬಸವರಾಜ್ ನಿನ್ನ ಕತೆ ಹೇಳಪ್ಪಾ ಇವರ ಜೊತೆ ಎಂದಾಗ ಎಲ್ಲರು ನಕ್ಕರು.

 ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ನಾನು ಸಾಯೋದರೊಳಗೆ ನೀರು ಹರಿಸಿ ನೋಡಿ ಸಾಯಿತ್ತಿನಿ ಅಂದಿದ್ದರು. ಅವರ ಯೋಜನೆಯ ಒಂದು ಭಾಗವಾಗಿ ಎತ್ತಿನಹೊಳೆ ಯೋಜನೆ ಕೆಲಸ ಪ್ರಗತಿಯಲ್ಲಿದೆ. ಆದರೇ ಅವರು ನಮ್ಮೊಂದಿಗಿಲ್ಲ.

ದಿನಾಂಕ:12.02.2020 ರಂದು ಅವರ ಜನ್ಮ ದಿವಸ ಆಚರಿಸುವ ಸಂದರ್ಭದಲ್ಲಿ ಅವರ ಹೋರಾಟದ ಹಲವಾರು ಅನುಭವಗಳ ಹಂಚಿಕೆ.