9th October 2024
Share

  ಹುತ್ತ ಕಟ್ಟುವುದು ಯಾರೋ, ಅದರೊಳಗೆ ವಾಸ ಮಾಡುವುದು ಯಾರೋ?

  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀರಿನ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿವೆ, ಜನತೆಯು ಸಹ ನೀರನ್ನು ದ್ರವರೂಪದ ಬಂಗಾರ, ತುಪ್ಪ ಬಳಸಿದ ಹಾಗೆ ಬಳಸಿ, ಹೀಗೆ ಅವರಿಗೆ ಬೇಕಾದ ರೀತಿಯಲ್ಲಿ ವರ್ಣಿಸಲು ಆರಂಭಿಸಿದ್ದಾರೆ.

  ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮತ್ತು ಅಟಲ್ ಭೂಜಲ್ ಯೋಜನೆ, ಜಲಸಂವರ್ಧನಾ ಯೋಜನೆ, ಕೃಷಿ ಹೊಂಡಾ ಹೀಗೆ ಇಲಾಖೆಗಳು ಸಹ ನೂರಾರು ಹೆಸರಿನಲ್ಲಿ ಯೋಜನೆ ರೂಪಿಸಿವೆ, ಕೋಟ್ಯಾನುಕೋಟಿ ಖರ್ಚು ಮಾಡಿವೆ. ಇದೂವರೆಗೂ ಕರಾರು ವಕ್ಕಾದ ತಾಜಾ ಡೇಟಾ ಯಾವುದೇ ಇಲಾಖೆಯಲ್ಲೂ ಇಲ್ಲ. ಇಲಾಖೆಗಳ  ಮಧ್ಯೆ ಸಮನ್ವಯತೆಯೂ ಇಲ್ಲ.

  ಈಗ ಒಬ್ಬರಿಗೊಬ್ಬರೂ ದೂರು ಹೇಳುವ ಕಾಲವಲ್ಲ, ಎಲ್ಲಾ ಇಲಾಖೆಗಳು ಮತ್ತು ಜನತೆ ಒಟ್ಟಿಗೆ ಸೇರಿ ಪ್ರತಿಯೊಂದು ಗ್ರಾಮದ  WATER BUDGET- WATER AUDIT- WATER STRTAGY   ಸಿದ್ಧಪಡಿಸಲು ಸುವರ್ಣ ಅವಕಾಶ ದೊರಕಿದೆ.

 ಕೇಂದ್ರ ಸರ್ಕಾರದ ಅಟಲ್ ಭೂಜಲ್ ಯೋಜನೆಯೂ ಮಂಜೂರಾಗಿದೆ, ಶ್ರೀ ಜಿ.ಎಸ್.ಬಸವರಾಜ್ ಮನವಿ ಮೇರೆಗೆ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂಪ್ಪನವರು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರಮೋದಿಜಿಯವರಿಗೆ ಬರೆದ ಪತ್ರದಲ್ಲಿ ತುಮಕೂರು ಜಿಲ್ಲೆಯನ್ನು ಫೈಲಟ್ ಯೋಜನೆಯಾಗಿ ತೆಗೆದು ಕೊಂಡು ’ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆ ಜಾರಿ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

  ತುಮಕೂರು ಜಿಲ್ಲೆಯವರೇ ಆದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಸಣ್ಣ ನೀರಾವರಿ ಇಲಾಖೆಯ ಸಚಿವರಾಗಿದ್ದಾರೆ. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಅವರು ಕೇಂದ್ರ ಜಲಶಕ್ತಿ ಸಚಿವಾಲಯದ ಸಮಿತಿಯ ಸದಸ್ಯರೂ ಆಗಿದ್ದಾರೆ.

  ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀ ರಾಕೇಶ್ ಸಿಂಗ್ ಮತ್ತು ತುಮಕೂರು ಜಿಲ್ಲೆಯ ಬಗ್ಗೆ ಕಾಳಜಿ ಇರುವ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಶ್ರೀ ಮೃತ್ಯುಂಜಯ ಸ್ವಾಮಿ, ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಶ್ರೀ ಲಕ್ಷ್ಮಣ ರಾವ್ ಪೇಶ್ವೆ ಮತ್ತು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ಧೇಶಕರಾದ ಶ್ರೀ ಕೆ.ಜೈಪ್ರಕಾಶ್  ಅವರ ಪಾತ್ರ ಮಹತ್ತರವಾಗಿದೆ.

   ಇವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ, ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲು ಈಗಾಗಲೇ ಸಜ್ಜಾಗಿದೆ.

ಒಗ್ಗಟ್ಟಿನ ಈ ಮಾತು ಏಕೆ: ನೋಡಿ 2015-16  ರಲ್ಲಿ ಕೇಂದ್ರ ಸರ್ಕಾರ ಅಟಲ್ ಭೂಜಲ್ ಯೋಜನೆ ರೂಪಿಸಲು ಚಿಂತನೆ ನಡೆಸಿತು. ಕೇಂದ್ರದಲ್ಲಿ ಬಿಜೆಪಿ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ. ಕೇಂದ್ರದಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿ ಅಧಿಕಾರದಲ್ಲಿದ್ದ ಶ್ರೀ ಮತಿ ಅಮಿತಾಪ್ರಸಾದ್ ಅವರಿಗೆ ಕರ್ನಾಟಕ ರಾಜ್ಯಕ್ಕೇ ಈ ಯೋಜನೆ ಕೊಡಬೇಕು ಎಂಬ ಮನಸ್ಸು/ಛಲ.

  ಯೋಜನೆ ಪ್ರಸ್ತಾವನೆ ಸಲ್ಲಿಸಲು ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಪತ್ರ ಬರುತ್ತದೆ. ಈ ಯೋಜನೆ ಅಂತರ್ಜಲ ಇಲಾಖೆಗೆ ಸಂಬಂಧಿಸಿದ್ದು, ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಸಣ್ಣ ನೀರಾವರಿ ಇಲಾಖೆಯ ಒಬ್ಬ ಮಹಾನುಭಾವ ಈ ಯೋಜನೆ ಬರಲ್ರಿ ನಾವು ಪ್ರಸ್ತಾವನೆ ಕಳುಹಿಸುವುದು ಬೇಡ ಎಂಬ ನಿರ್ಧಾರಕ್ಕೆ ಬರುತ್ತಾರೆ.

   ಅಮಿತಾಪ್ರಸಾದ್ ರವರಿಗೆ ನಿರಾಸೆಯಾಗಿ ಜಲಸಂಪನ್ಮೂಲ ಇಲಾಖೆಗೆ ಮನವಿ ಮಾಡುತ್ತಾರೆ. ಅಲ್ಲಿದ್ದ ಇನ್ನೊಬ್ಬ ಮಹಾನುಭಾವ ಅವರ ಇಲಾಖೆಯ ಕೆಲಸ ನಾವು ಏಕೆ ಮಾಡಬೇಕು ಎಂದು ನೀರಾಕರಿಸುತ್ತಾರೆ. ಆ ವೇಳೆಗೆ ಜಲಸಂಪನ್ಮೂಲ ಇಲಾಖೆಗೆ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ರಾಕೇಶ್ ಸಿಂಗ್ ಬರುತ್ತಾರೆ.

 ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್, ಅಮಿತಾಪ್ರಸಾದ್ ಮತ್ತು ರಾಕೇಶ್ ಸಿಂಗ್ ರವರ ದೂರದೃಷ್ಠಿಯಿಂದ ರಾಜ್ಯದ  ADVANCED CENTRE FOR INTEGRATED WATER RESOURCES MANAGEMENT (ACIWRM) ಈ ಸಂಸ್ಥೆಯ ರಾವ್, ಮಾಧವ್ ಹೀಗೆ ಹಲವಾರು ಅಧಿಕಾರಿಗಳ ತಂಡ ವಿಶೇಷ ಶ್ರಮ ಹಾಕಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಾರೆ.

  ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕೇಂದ್ರದಲ್ಲಿ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಯ ಬಗ್ಗೆ ತುಮಕೂರಿನ ದಿಶಾ ಸಮಿತಿಯಲ್ಲಿ ಪ್ರಸ್ತಾಪವನ್ನು ಮಾಧವ್ ಮಾಡುತ್ತಾರೆ. ತಕ್ಷಣ ಈ ಯೋಜನೆ ಬಗ್ಗೆ ಜಿಎಸ್‌ಬಿ ವಿಶೇಷ ಕಾಳಜಿ ವಹಿಸುತ್ತಾರೆ. ಮಾನ್ಯ ಮುಖ್ಯ ಮಂತ್ರಿಗಳು ಸಹ ವಿಶೇಷ ಆಸಕ್ತಿ ವಹಿಸುತ್ತಾರೆ. ಕೊನೆಗೂ ಯೋಜನೆ ಲಾಭ ನಮ್ಮ ರಾಜ್ಯಕ್ಕೆ ದೊರೆಯಿತು.

 ಸುಮಾರು ರೂ 6000 ಕೋಟಿ ಹಣ ನೋಡುತ್ತಲೇ ಸಣ್ಣ ನೀರಾವರಿ ಇಲಾಖೆಗೆ ಈಗ ಜ್ಞಾನೋದಯವಾಗಿದೆ. ನೋಡಿ ಈ ಯೋಜನೆ ಮಂಜೂರಾತಿ ಹಿಂದಿನ ಕರಾಮತ್ತು.