18th April 2024
Share

TUMAKURU : SHAKTHIPEETA FOUNDATION

ತುಮಕೂರು ಸ್ಮಾರ್ಟ್ ಸಿಟಿ ಇಂಜಿನಿಯರ್‌ಗಳೊಂದಿಗೆ ಸಮಾಲೋಚನೆ

15  ದಿವಸದಲ್ಲಿ ನೂರು ಲೇಯರ್‍

   ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಕನಸಿಗೆ ಪೂರಕವಾಗಿ ತುಮಕೂರು ಮಹಾನಗರದ ಪ್ರತಿಯೊಂದು ಅಭಿವೃದ್ಧಿ ಕಾರ್ಯವನ್ನು ಜಿಯೋಗ್ರಫಿಕ್ ಇನ್‌ಫಾರ್ಮೆಷನ್ ಸಿಸ್ಟಮ್(ಜಿಐಎಸ್)ನಲ್ಲಿ ದಾಖಲಿಸುವ ಮಹತ್ವದ ಯೋಜನೆಗೆ ಸಿದ್ಧರಾಗಿದ್ದೇವೆ  ಎಂದು ತುಮಕೂರು ಸ್ಮಾರ್ಟ್ ಸಿಟಿ ಮುಖ್ಯ ಇಂಜಿನಿಯರ್ ಶ್ರೀ ಸಿದ್ಧಗಂಗಪ್ಪನವರು  ತಿಳಿಸಿದರು. ತುಮಕೂರು ನಗರ ವ್ಯಾಪ್ತಿಯಲ್ಲಿ ಯಾವುದೇ ಯೋಜನೆ ಡೂಪ್ಲಿಕೇಷನ್ ಆಗಿದ್ದಲ್ಲಿ ಪರಿಶೀಲಿಸಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಒಂದೇ ಯೋಜನೆಗೆ ಹಲವಾರು ಕೋಟಿ ವ್ಯಯ ನಿಖರವಾದ ಮಾಹಿತಿ ನೀಡಿ.

1. ತುಮಕೂರು ನಗರಸಭೆಯಿದ್ದಾಗ   ಜಿಐಎಸ್  ಮ್ಯಾಪ್ ಮಾಡಿಸಲು ಹಣ ವ್ಯಯಿಸದರೂ ಸಾಪ್ಟ್ ವೇರ್ ಸರಿಯಿಲ್ಲ ಎಂದು ಮೂಲೆಗೆ ಎಸೆದಿದ್ದಾರೆ. 

2. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆಯಿಂದ ರೂ 2  ಕೋಟಿ ವೆಚ್ಚದಲ್ಲಿ ಡ್ರೋಣ್ ಸಮೀಕ್ಷೆ ಮಾಡಿಸಿದೆ. 

3.ಪುನಃ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ತುಮಕೂರು ನಗರದ ವ್ಯಾಪ್ತಿಯ ಲೇಯರ್‌ಗಾಗಿ ರೂ 1  ಕೋಟಿ ಯೋಜನೆ ರೂಪಿಸಿದೆ.

4. ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರ ಜಿ.ಐಎಸ್ ಬೇಸ್ ಮ್ಯಾಪ್ ಮಾಡಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿದೆ. (ವೆಚ್ಚ ಎಷ್ಟು) 

5.ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಜಿಐಎಸ್ ಮಾಸ್ಟರ್ ಪ್ಲಾನ್ ಮಾಡುತ್ತಿದೆ. (ವೆಚ್ಚ ಎಷ್ಟು) 

6.ಕರ್ನಾಟಕ ನಗರ ನೀರು ಸರಬರಾಜು ಮಂಡಳಿ 24/7 ಕುಡಿಯುವ ನೀರಿನ ಯೋಜನೆಗೆ ಮತ್ತು ಒಳಚರಂಡಿ ಯೋಜನೆಗೆ ಜಿಐಎಸ್ ಆಧಾರಿತ ಸಮೀಕ್ಷೆ ನಡೆಸಿದೆ. (ವೆಚ್ಚ ಎಷ್ಟು)

  ಈ ಎಲ್ಲಾ ಯೋಜನೆಗಳಿಗೆ ಖರ್ಚು ಮಾಡಿದ ಹಣ ಮತ್ತು ಒಂದೇ ಕೆಲಸಕ್ಕೆ ಪದೇ, ಪದೇ ಹಣ ವ್ಯಯ ಮಾಡಲಾಗಿದೆಯೇ ಅಥವಾ ಸರಿಯಾಗಿದೆಯೇ ಎಂಬ ಬಗ್ಗೆ ನಿಖರವಾದ ಈ ಮಾಹಿತಿಯನ್ನು ಮುಂದಿನ ದಿಶಾ ಸಮಿತಿಯ ಮುಂದೆ ಮಂಡಿಸುವುದಾಗಿ ಮುಖ್ಯ ಇಂಜಿನಿಯರ್ ತಿಳಿಸಿದ್ದಾರೆ.  

     ತುಮಕೂರು ಮಹಾನಗರದ ಭೌಗೋಳಿಕ ಚಿತ್ರಣ, ಪರಿಸರ, ಮೂಲ ಸೌಕರ್ಯ, ಪ್ರತಿಯೊಂದು ಅಭಿವೃದ್ಧಿ ಯೋಜನೆಗಳು, ಕಾಮಗಾರಿಗಳು ಜಿಐಎಸ್ ಬೇಸ್ ಮ್ಯಾಪ್/ ಡಿಜಿಟಲ್ ಲೇಯರ್‌ನಲ್ಲಿ ದಾಖಲೀಕರಣ ಮಾಡಲಾಗುತ್ತದೆ. ಈವರೆಗೆ ಜಾರಿ ಆಗಿರುವ ಯೋಜನೆಗಳು, ಕಾಮಗಾರಿಗಳು, ಪ್ರಗತಿಯಲ್ಲಿರುವ, ಅಪೂರ್ಣ ಕಾಮಗಾರಿಗಳು, ಹೊಸ ಯೋಜನೆಗಳು, ನಗರದ ಯಾವುದೇ ಪ್ರದೇಶದಲ್ಲಿ ಕೈಗೆತ್ತಿಕೊಳ್ಳುವ ಯೋಜನೆಗಳ ಮಾಹಿತಿ ಜಿಐಎಸ್ ಲೇಯರ್‌ನಲ್ಲಿ ದಾಖಲಾಗುತ್ತದೆ ಮತ್ತು ಸಾರ್ವಜನಿಕರಿಗೆ ವೀಕ್ಷಣೆಗೆ ಲಭ್ಯವಾಗುತ್ತದೆ ಎಂದು ತುಮಕೂರು ಸ್ಮಾರ್ಟ್ ಸಿಟಿ ಇಇ ಶ್ರೀ ಬಸವರಾಜೇಗೌಡ ತಿಳಿಸಿದರು.

   ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರ, ತುಮಕೂರು ಮಹಾನಗರ ಪಾಲಿಕೆ, ತುಮಕೂರು ಸ್ಮಾರ್ಟ್‌ಸಿಟಿ ಕಂಪನಿ, ಟೂಡಾ, ಒಳಚರಂಡಿ ಮಂಡಳಿ ಹಾಗೂ ಎಲ್ಲ ಸರ್ಕಾರಿ ಇಲಾಖೆಗಳ ತುಮಕೂರು ನಗರದಲ್ಲಿ ಕೈಗೊಂಡಿರುವ ಯೋಜನೆಗಳ ಮಾಹಿತಿ ಪಡೆದು ಮುಂದಿನ 15 ದಿವಸದಲ್ಲಿ ಕನಿಷ್ಠ ನೂರು ಜಿಐಎಸ್ ಲೇಯರ್‌ಗಳನ್ನು TUMAKURU GIS ಗೆ ಅಫ್ ಲೋಡ್ ಅಥವಾ ಲಿಂಕ್ ಮಾಡಲಾಗುವುದು ಎಂದು ಶ್ರೀ ಅಶ್ವಿನ್ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಶ್ರೀ ಶ್ರೀನಿವಾಸ್ ಜೊತೆಯಲ್ಲಿದ್ದರು.