29th March 2024
Share

TUMAKURU- SHAKTHIPEETA FOUNDATION

    ತುಮಕೂರು ಲೋಕಸಭಾ ಕ್ಷೇತ್ರ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹಳ ಸುದ್ದಿ ಮಾಡಿದ ಕ್ಷೇತ್ರ. ರಾಜ್ಯದ ಮಾಜಿ ಮುಖ್ಯ ಮಂತ್ರಿ, ದೇಶದ ಮಾಜಿ ಪ್ರಧಾನಿ, ಜನತಾದಳದ ಧುರೀಣರಾದ ಶ್ರೀ ಹೆಚ್.ಡಿ.ದೇವೇಗೌಡರವರು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದು ಪ್ರಮುಖ ಕಾರಣ.

   ಶ್ರೀ ಜಿ.ಎಸ್.ಬಸವರಾಜ್‌ರವರು ಸಹ ರಾಜಕಾರಣದಲ್ಲಿ ಹಿರಿಯರು 5 ಭಾರಿ ಲೋಕಸಭೆಗೆ ಆಯ್ಕೆಯಾದವರು. 8 ಭಾರಿ ಲೋಕಸಭೆಗೆ ಸ್ಪರ್ಧಿಸಿದ್ದವರು. ಇಲ್ಲಿನ ಮತದಾರರು ಅನಧಿಕೃತವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು ಇತಿಹಾಸ. ಚುನಾವಣೆ ಮುಗಿದಿದೆ ಕ್ಷೇತ್ರದ ಅಭಿವೃದ್ಧಿ, ರಾಜ್ಯದ ಅಭಿವೃದ್ಧಿ ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದು ಸಂಸದರ ಆಧ್ಯ ಕರ್ತವ್ಯ.

ಶ್ರೀ ಜಿ.ಎಸ್.ಬಸವರಾಜ್‌ರವರು ಚುನಾವಣೆಯಲ್ಲಿ ಸದ್ದು ಮಾಡಿದ್ದಕ್ಕಿಂತ ಜಾಸ್ತಿ ಅಭಿವೃದ್ಧಿಯಲ್ಲಿ ಸದ್ದು ಮಾಡಲು ಮೌನವಾಗಿ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಅವರಿಗೆ ದೇಶದ ಎಲ್ಲಾ ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಆಯಾ ಜಿಲ್ಲೆಯ ಕೇಂದ್ರ ಸರ್ಕಾರದ ಯೋಜನೆಗಳ ಪರಿಶೀಲನೆಗಾಗಿ ಮಾನ್ಯ ಪ್ರಧಾನಿಯವರು ರಚಿಸಿರುವ ದಿಶಾ’ ಎಂಬ ಸಮಿತಿಯ ಅಸ್ತ್ರ ದೊರಕಿದೆ.

  ಮೋದಿಯವರು ಅಭಿವೃದ್ಧಿಯಲ್ಲಿ ಆನೇಕ ಕನಸುಗಳನ್ನು ಕಂಡಿದ್ದಾರೆ. ಸದಾ ಕಾಣುತ್ತಲೇ ಇದ್ದಾರೆ. ಆದರೇ ಅವುಗಳ ಅನುಷ್ಠಾನ ಅಷ್ಟು ಸುಲಭವಾಗಿಲ್ಲ/ ಅಷ್ಟು ಕಷ್ಟವೂ ಅಲ್ಲ. ಕಳೆದ ನಾಲ್ಕು ದಶಕಗಳ ಅಭಿವೃದ್ದಿ ಅನುಭವ ಜಿಎಸ್‌ಬಿರವರಿಗೆ ಇದೆ. ಸುಮಾರು ಯೋಜನೆಗಳನ್ನು ಅವರ ಅವಧಿಯಲ್ಲಿ ಮಂಜೂರು ಮಾಡಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಯಲ್ಲಿ ಸಿಂಹಪಾಲು ಪಡೆದಿದ್ದಾರೆ.

  ಅವುಗಳ ದಾಖಲೆ ಎಲ್ಲೂ ಆಗಿರಲಿಲ್ಲ. ಈಗ TUMAKURU-GIS ನಿಂದ ತುಮಕೂರು ಜಿಲ್ಲೆಯ ಪ್ರತಿಯೊಂದು ಯೋಜನೆಯ ಮಾಹಿತಿ ಒಂದೇ ಕಡೆ ಲಭ್ಯವಾಗುವ ಕನಸು ಕಾಣಲಾಗಿದೆ. ಯೋಜನೆಗೆ ಜಿಲ್ಲಾಡಳಿತ ಚಾಲನೆ ನೀಡಿದೆ.

  ಕಳೆದ ಒಂದು ಪತ್ರಿಕಾ ಘೋಷ್ಠಿಯಲ್ಲಿ ಒಂದು ಟಿವಿ ಮಾಧ್ಯಮದ ಪ್ರತಿನಿಧಿ ಜಿಎಸ್‌ಬಿ ರವರನ್ನು ಕೇಳಿದ ಪ್ರಶ್ನೆ ಸಾರ್ ಶ್ರೀ ಹೆಚ್.ಡಿ.ದೇವೇಗೌಡರವರು ತುಮಕೂರು ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಾರಂತೆ ನಿಮ್ಮ ಪ್ರತಿಕ್ರಿಯೆ ಏನು? ಎಂಬ ಪ್ರಶ್ನೆಗೆ ಜಿಎಸ್‌ಬಿ ರವರ ಪ್ರತಿಕ್ರೀಯೇ ಪಕ್ಷದ ಸಂಘಟನೆಗೆ ಪ್ರವಾಸ ಕೈಗೊಂಡರೇ ಅದು ಅವರ ಪಕ್ಷದ ವಿಚಾರ. ಒಂದು ವೇಳೆ ಅಭಿವೃದ್ಧಿಗಾಗಿ ಪ್ರವಾಸ ಕೈಗೊಂಡಲ್ಲಿ ನಾನು ಸಹ ಅವರ ಜೊತೆ ಪ್ರವಾಸ ಮಾಡಿ ಅವರು ಸಲಹೆ ನೀಡುವ ಎಲ್ಲಾ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸುತ್ತೇನೆ.

  ಹಿರಿಯರ ಮಾರ್ಗದರ್ಶನ ನನಗೂ ಬೇಕು. ಚುನಾವಣೆಯಲ್ಲಿ ಹೋರಾಡಿದ್ದು, ಟೀಕೆ- ಟಿಪ್ಪಣೆ ಬೇರೆ. ಅಭಿವೃದ್ಧಿಯಲ್ಲಿ ಅವರು ಸಹ ಪರಿಣಿತರು ಮತ್ತು ಮಾಜಿ ಲೋಕಸಭಾ ಸದಸ್ಯ ಶ್ರೀ ಎಸ್.ಪಿ. ಮುದ್ದುಹನುಮೇಗೌಡರವರ ಸಲಹೆಯನ್ನು ಸ್ವೀಕರಿಸಲು ಸಿದ್ಧ ಎಂದಾಗ ಇಡೀ ಪತ್ರಿಕಾ ಘೋಷ್ಠಿಯಲ್ಲಿ ನಗು ಮತ್ತು ಮೌನ.

  ಪ್ರಸ್ತುತ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಯಾರು, ಯಾವುದೇ ಯೋಜನೆಯ ಸಲಹೆ ನೀಡಿದಲ್ಲಿ TUMAKURU-GIS ನಲ್ಲಿ ಡಿಜಿಟಲ್ ದಾಖಲು ಮಾಡಿ, ಆ ಯೋಜನೆಗೆ ಶ್ರಮಿಸುವ ಮಹತ್ತರವಾದ ನಿರ್ಣಯಕ್ಕೆ ಬಂದಿದ್ದಾರೆ.

  ಏಫ್ರಿಲ್ 14 ರಂದು ನಡೆಯುವ ಡಾ.ಬಿ.ಆರ್. ಅಂಬೇಡ್ಕರ್‌ರವರ ಜನ್ಮ ದಿನದ ವೇಳೆಗೆ ತುಮಕೂರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಈಗಾಗಲೇ ವಿವಿಧ ಇಲಾಖೆಗಳು ಸಿದ್ಧಪಡಿಸಿರುವ ಎಲ್ಲಾ ಲೇಯರ್‍ಸ್‌ಗಳನ್ನು ಒಂದೇ ಕಡೇ ಅಫ್ ಲೋಡ್ ಅಥವಾ ಲಿಂಕ್ ಮಾಡಿಸಲು ಗುರಿ ಹಾಕಿ ಕೊಂಡಿದ್ದಾರೆ.

   ನಂತರ ಜಿಎಸ್‌ಬಿ ಮತ್ತು ದಿಶಾ ಸಮಿತಿಯ ಎಲ್ಲಾ ಸದಸ್ಯರ ಸಲಹೆಗಳನ್ನು ಡಿಜಿಟಲ್ ದಾಖಲೆ ಮಾಡಿಸಲು ಕಾಲಮಿತಿ ನಿಗದಿ ಮಾಡಿದ್ದಾರೆ. ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿ ಅವರ ಕನಸಿನ ಯೋಜನೆಗಳನ್ನು ಸಹ ಗಣನೆಗೆ ತೆಗೆದುಕೊಂಡು ಎಲ್ಲಾ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸುವುದು ಜಿಎಸ್‌ಬಿ ಅವರ ಗುರಿಯಾಗಿದೆ.

  ಈ ಯೋಜನೆಯ ಅನುಷ್ಠಾನಕ್ಕೆ ಶ್ರಮಿಸಲು ಇಲಾಖಾವಾರು ವಿಷನ್ ಮತ್ತು ಪ್ರಷರ್ ಗ್ರೂಪ್’ ರಚಿಸಲು ಸಹ ಚಿಂತನೆ ನಡೆಸಿದ್ದಾರೆ. ಮುಂದಿನ ದಿಶಾ ಸಮಿತಿಯಲ್ಲಿ ಈ ಬಗ್ಗೆ ಚರ್ಚೆ ನಡೆಸಲು ತಯಾರಿ ಮಾಡುತ್ತಿದ್ದಾರೆ. ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ’ ಗ್ರೂಪ್ ಮೊದಲ ವಿಷನ್ ಗ್ರೂಪ್ ಆಗಿ  TUMAKURU-GIS ಯಶಸ್ವಿಗಾಗಿ ಶ್ರಮಿಸಲು ಮುಂದಾಗಿದೆ.