22nd December 2024
Share

   ತುಮಕೂರು ವಿಶ್ವವಿದ್ಯಾನಿಲಯ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಸ್ಥಾಪಿಸಿದೆ. ಈ ಅಧ್ಯಯನ ಪೀಠದ ಉದ್ದೇಶ ಕರ್ನಾಟಕ ರಾಜ್ಯದ ಸಮಗ್ರ ನೀರಾವರಿ ಅಧ್ಯಯನ’ ಮಾಡುವುದಾಗಿದೆ. ಈ ಕೇಂದ್ರಕ್ಕೆ ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮನವಿ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಅಧೀನದಲ್ಲಿರುವ ವಿಶ್ವೇಶ್ವರಯ್ಯ ಜಲ ನಿಗಮದ ವತಿಯಿಂದ ಆರಂಭದಲ್ಲಿ ರೂ 50  ಲಕ್ಷ ಹಣ ನೀಡಿದೆ.

   ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ಜನ್ಮ ಸ್ಥಳವಾದ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ 11 ನೇ ವಾರ್ಡ್‌ನ ಗಂಗಸಂದ್ರದಲ್ಲಿ ಜಿಲ್ಲಾಡಳಿತ 30 ಗುಂಟೆ ಜಮೀನು ಮಂಜೂರು ಮಾಡಿದೆ. ಇವರಿಗೆ ಮತ್ತು ಗ್ರಾಮದ ಜನತೆಗೆ ನನ್ನ ಹೃದಯಪೂರ್ವಕ ನಮನ.

  ಜಿಲ್ಲಾಧಿಕಾರಿ ಶ್ರೀ ರಾಕೇಶ್‌ಕುಮಾರ್, ಎಡಿಡಿಸಿ ಶ್ರೀ ಚನ್ನಬಸಪ್ಪ, ಎಸಿ ಶ್ರೀ ಅಜಯ್, ತಹಶಿಲ್ಧಾರ್ ಶ್ರೀ ಮೋಹನ್ ಮತ್ತು ಅವರ ಎಲ್ಲಾ ತಂಡದವರಿಗೂ ಅಭಿನಂದನೆ ಸಲ್ಲಿಸಲೇಬೇಕು. ಆರಂಭದಲ್ಲಿ ಗಂಗಸಂದ್ರ ಗ್ರಾಮಕ್ಕೆ ಸಮೀಕ್ಷೆಗಾಗಿ ಹೋಗಿದ್ದ ಒಬ್ಬ ರೆವಿನ್ಯೂ ಅಧಿಕಾರಿ ಆ ಗ್ರಾಮದ ಜನರ ಮುಂದೆ ಕುಂದರನಹಳ್ಳಿ ರಮೇಶ್ ಎನೋ ಎಸಿ ರೂಮ್‌ನಲ್ಲಿ ಕುಳಿತುಕೊಂಡು ಹೇಳಿಬಿಡುತ್ತಾರೆ. ಇಲ್ಲಿ ಜಾಗ ಇದ್ದರಲ್ಲವಾ ಕೊಡೋದು ಎಂದು ಹೇಳಿದ ಅಧಿಕಾರಿಗೆ ಅಭಿನಂದನೆ.

   ತುಮಕೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಮತ್ತು ಅಕಡಮಿಕ್ ಸಭೆಯಲ್ಲಿ ವಿಷಯ ಮಂಡಿಸಿ ನಿಯಾಮಾನುಸಾರ ಕಟ್ಟಡ ನಿರ್ಮಾಣ ಮಾಡಲು ಅಗತ್ಯ ಕ್ರಮಕೈಗೊಳ್ಳಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು  ಪತ್ರ ಬರೆದಿದ್ದಾರೆ.

  ಈ ಅಧ್ಯಯನ ಪೀಠ ಅಂತರರಾಷ್ಟ್ರೀಯ ಮಟ್ಟದ ವಿಷಯಗಳ ಬಗ್ಗೆ ಅಧ್ಯಯನ ಮಾಡಲು. ಕೇಂದ್ರ ಸರ್ಕಾರ 2020-21 ನೇ ಸಾಲಿನಲ್ಲಿ ಪ್ರಕಟಿಸಿರುವ ಡೇಟಾ ಪಾರ್ಕ್ ಸ್ಥಾಪಿಸಲು ಮತ್ತು ಪ್ಯಾರೀಸ್ ಒಪ್ಪಂದದ ಬಗ್ಗೆ ಅಧ್ಯಯನ ಮಾಡಿ  ದೇಶ ವಿದೇಶಗಳಲ್ಲಿನ ಜನತೆಯ ಗಮನ ಸೆಳೆಯಲು ಮುಂದಾಗಲಿ ಎಂದು ಮನವಿ ಮಾಡಲಾಗಿದೆ.

   ಈ ಸಂಬಂದ ವಿಶ್ವವಿದ್ಯಾನಿಯಲದ ಕುಲಪತಿ, ಕುಲಸಚಿವರು, ಸಿಂಡಿಕೇಟ್ ಮತ್ತು ಅಕಡಮಿಕ್ ಸದಸ್ಯರು ಮತ್ತು ಅಧ್ಯಯನ ಪೀಠದ ಪದಾಧಿಕಾರಿಗಳ ಬಳಿ ಸಮಾಲೋಚನೆ ನಡೆಸಲು ಸಂಸದರು ಒಲವು ತೋರಿದ್ದಾರೆ. ಹಾಗೆಯೇ ವಿಶ್ವವಿದ್ಯಾನಿಲಯದಲ್ಲಿರುವ ಇತರೆ ಎಲ್ಲಾ ಅಧ್ಯಯನ ಪೀಠಗಳು ಮತ್ತು ರೀಸರ್ಚ್ ಸಂಸ್ಥೆಗಳ ಪ್ರಗತಿ ಬಗ್ಗೆಯೂ ಸಮಾಲೋಚನೆ ನಡೆಸಲಿದ್ದಾರೆ.

ದೆಹಲಿಗೆ ನಿಯೋಗ: ದೇಶದಲ್ಲಿರುವ ವಿಶ್ವವಿದ್ಯಾನಿಲಯಗಳಲ್ಲಿ ಯಾವ ರೀತಿ ಅಧ್ಯಯನ ಪೀಠಗಳು ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ನೀತಿ ನಿಯಮಗಳು ಹೇಗಿವೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಣ ನೀಡುವುದನ್ನು ಬಿಟ್ಟರೆ ಅಧ್ಯಯನ ಪೀಠಗಳು ನೀಡುವ ವರದಿ ಬಗ್ಗೆ ಏನು ಕ್ರಮ ಕೈಗೊಂಡಿವೆ ಎಂಬ ಬಗ್ಗೆ ಯೂಜಿಸಿ ಛೇರ್‍ಮನ್‌ರವರೊಂದಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ನೇತೃತ್ವದ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ನಿಯೋಗ ದೆಹಲಿಗೆ ತೆರಳಿ ಚರ್ಚಿಸಲಿದೆ.