22nd November 2024
Share

TUMAKURU: SHAKTHI PEETA FOUNDATION

  ತುಮಕೂರು ಜಿಲ್ಲಾ ಪಂಚಾಯತ್‌ನಲ್ಲಿ ’ಜಲಾಮೃತ’ ಯೋಜನೆಯ ಬಗ್ಗೆ ಒಂದು ಕಾರ್ಯಾಗಾರ ನಡೆಯಿತು. ವೇದಿಕೆಯ ಮೇಲೆ ಕುಳಿತು ಕೊಂಡು ತುಮಕೂರು ಜಿಲ್ಲಾ ಪಂಚಾಯತ್ ಸಿಇಓ ಹಾಗೂ ತುಮಕೂರು ಜಿಲ್ಲಾ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯಾದ ಶ್ರೀಮತಿ ಶುಭಕಲ್ಯಾಣ್ ರವರೊಂದಿಗೆ ಮಾತನಾಡುವಾಗ ಮೇಡಂ ನಾವು ಆರಂಭಿಸಿರುವ TUMAKURU-GIS ಯೋಜನೆಗಳ ಶೇ 100 ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಹಾಗೂ ಚುನಾಯಿತ ಜನಪ್ರನಿಧಿಗಳಿಗೆ ಪ್ರತಿಯೊಂದು ಜಿಐಎಸ್ ಲೇಯರ್‍ಸ್ ಬಗ್ಗೆ ನಿರಂತರ ತರಬೇತಿ ನೀಡಬೇಕು, ಒಂದು ಕಟ್ಟಡದ ಅಗತ್ಯವಿದೆ ಎಂದು ಚರ್ಚೆ ಆರಂಭವಾಯಿತು.

   ನಾನು ಮೊದಲು ಕೃಷಿ ವಿಜ್ಞಾನ ಕೇಂದ್ರದಲ್ಲಿ ಉಳಿದು ಕೊಳ್ಳಲು ವ್ಯವಸ್ಥೆಯಿದೆ, ತಕ್ಷಣ ನಾವು ಅಲ್ಲಿ ತರಬೇತಿ ಆರಂಭ ಮಾಡುವುದು ಉತ್ತಮ ಎಂಬ ಮಾತು ಆರಂಭಿಸಿದಾಗ ಮೇಡಂ, ನಮ್ಮಲ್ಲಿ ಸಂಪನ್ಮೂಲ ಕೇಂದ್ರದ ಕಟ್ಟಡ ಪೂರ್ಣಗೊಂಡಿದೆ, ಉದ್ಗಾಟನೆ ಮಾಡಬೇಕು ಎಂದಾಗ ನನಗೆ ನಿಜವಾಗಲು ಖುಷಿಯಾಯಿತು. ಎಲ್ಲಿದೆ ಕಟ್ಟಡ ಎಂದಾಗ ನಮ್ಮ ಈ ಆವರಣದಲ್ಲಿಯೇ ಎಂದರು, ಸಭೆ ಮುಗಿದ ಮೇಲೆ ನೋಡುತ್ತೇನೆ ಎಂದು ಹೇಳಿದೆ.

   ನಿನ್ನೆ ಬೆಳಿಗ್ಗೆ ಜಿಲ್ಲಾ ಪಂಚಾಯತ್ ಕಚೇರಿಗೆ ಭೇಟಿ ನೀಡಿ ಸಂಬಂದ ಪಟ್ಟ ಅಧಿಕಾರಿಗಳಿಂದ ಅಪೂರ್ಣ ಮಾಹಿತಿ ಪಡೆದೆ, ಕಟ್ಟಡ ನಿರ್ಮಾಣ ಮಾಡಿದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿ ನಿಗಮದ ಇಂಜಿನಿಯರ್ ಕರೆದು ಕಟ್ಟಡ ವೀಕ್ಷಣೆ ಮಾಡಿದೆ.

    ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯವು ರಾಷ್ಟ್ರಾಧ್ಯಾಂತ ಅನುಷ್ಠಾನಗೊಳಿಸುತ್ತಿರುವ  e-PANCHAYATH, ಪಂಚಾಯತ್ ಎಂಪವರ್‌ಮೆಂಟ್‌ಅಂಡ್ ಅಕೌಂಟಬಿಲಿಟಿ ಇನ್ಸೆಂಟೀವ್ ಸ್ಕೀಮ್  (PEAIS)   ಹಾಗೂ ಮಹಿಳಾ ಏವಂ ಯುವಶಕ್ತಿ ಅಭಿಯಾನ  PMEYSA ಯೋಜನೆಯಡಿಯಲ್ಲಿ ಅಳವಡಿಸಿಕೊಳ್ಳಲಾಗಿದ್ದ ಸಾಮಾರ್ಥ್ಯಾಭಿವೃದ್ಧಿ ಹಾಗೂ ತರಬೇತಿ ಕಾರ್ಯ ಕ್ರಮ ಹಮ್ಮಿಕೊಳ್ಳಲು  ಅಧಿಕಾರಿಗಳಿಗೆ ಹಾಗೂ ಚುನಾಯಿತ ಜನಪ್ರನಿಧಿಗಳಿಗೆ ತರಬೇತಿ ನೀಡಲು ನಿರ್ಮಿಸಿರುವ ಕಟ್ಟಡದ ಮಾಹಿತಿ ತಿಳಿದು ಅದ್ಭುತ ಎನಿಸಿತು.

   2013 ರಲ್ಲಿ ಆರಂಭವಾದ ಈ ಯೋಜನೆ ಇಷ್ಟು ವಿಳಂಭ ಏಕೆ ಆಯಿತು? ಉದ್ಘಾಟನೆಗೆ ಏಕೆ ವಿಳಂಭವಾಗಿದೆ ಮತ್ತು ಇನ್ನೂ ಅಗತ್ಯವಿರುವ ಅನುದಾನದ ವಿವರಗಳನ್ನು ಪಡೆದು ಶೀಘ್ರವಾಗಿ ಕಟ್ಟಡದ ಉದ್ಘಾಟನೆ ಮಾಡಲು SUBHA KALYAN IAS ರವರಲ್ಲಿ ಮನವಿ.

  ಮೇಡಂ ತಾವು ತುಮಕೂರು ಸ್ಮಾರ್ಟ್ ಸಿಟಿಯ ICCC ಯೋಜನೆ, ಜಿಐಎಸ್ ಯೋಜನೆ ಮತ್ತು ತುಮಕೂರು ಮಹಾನಗರ ಪಾಲಿಕೆ ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಆರಂಭಿಸಿರುವ ಜಿಐಎಸ್ ಆಧಾರಿತ ಮಾಸ್ಟರ್ ಪ್ಲಾನ್ ಯೋಜನೆ ಗಮನಿಸಿ, ನಂತರ ಸಂಬಂದ ಪಟ್ಟ ಅಧಿಕಾರಿಗಳ ಸಭೆ ನಡೆಸಿ ಈ ಕಟ್ಟಡ TUMAKURU-GIS ಭವನ ಅಥವಾ ತುಮಕೂರು ದಿಶಾ ಭವನದ’ ರೀತಿ ಆಗಬೇಕು.

   ತಾವು ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯಾಗಿರುವುದರಿಂದ ಕೇಂದ್ರ ಸರ್ಕಾರದ ಆರ್ಥಿಕ ನೆರವು /ಅನುದಾನವಿರುವ ಎಲ್ಲಾ ಯೋಜನೆಗಳ/ಇಲಾಖೆಗಳ ಯೋಜನೆ ತಪಾಸಣೆ ಮಾಡಿ ವರದಿ ನೀಡಬಹುದಾಗಿದೆ.

  ಮೇಡಂ ನಾನು ದಿಶಾ ಸಮಿತಿ ಸದಸ್ಯನಾಗಿ ಕಾಫಿ, ತಿಂಡಿ ತಿಂದು ಹೋದರೆ ಆತ್ಮ ಗೌರವಕ್ಕೆ ಅಡ್ಡಿ ಬರಲಿದೆ. ಜಿಲ್ಲೆಯಲ್ಲಿನ ಪ್ರತಿ ಯೋಜನೆ ಬಗ್ಗೆ ಮಾಹಿತಿ ಬೆರಳ ತುದಿಯಲ್ಲಿರಬೇಕು. ಈ ಸಮಿತಿ ರಚನೆ ಉದ್ದೇಶವೂ ಅದೇ ಆಗಿದೆ.

  ದಿಶಾ ನಾಲ್ಕನೇ ಮೀಟಿಂಗ್ ವೇಳೆಗೆ  ತುಮಕೂರು ಜಿಲ್ಲೆಯಲ್ಲಿ ಯಾವುದೇ ಇಲಾಖೆಯಡಿಯಲ್ಲಿ ಕೇಂದ್ರ ಸರ್ಕಾರದಿಂದ ಒಂದು ರೂ ಆರ್ಥಿಕ ನೆರವು /ಅನುದಾನವಿರುವ ಯೋಜನೆ ಮಾಹಿತಿಯ ಇಂಡೆಕ್ಸ್ ಒಂದೇ ಕಡೆ ಇರಬೇಕು. ಎಲ್ಲಾ ವಿವರ ಒಂದೇ ಕಡೆ ಲಭ್ಯವಾಗಬೇಕು ಎಂದರೆ ಈ ಕಟ್ಟಡದ ಅಗತ್ಯ ಬಹಳವಿದೆ.

  ಮೊದಲು ಈ ಕಟ್ಟಡ ಇಷ್ಟು ವಿಳಂಬ ಏಕೆ? ಆರಂಭ ಯಾವಾಗ? ನಿಮ್ಮ ಕನಸಿನ ಯೋಜನೆ ಜಾರಿಗೆ ಶೀಘ್ರವಾಗಿ ಅಂತಿಮ ರೂಪುರೇಷೆ ಮಾಡುವುದು ಸೂಕ್ತವಾಗಿದೆ.

SUBHA KALYAN IAS: ಸಂಪನ್ಮೂಲ ಕೇಂದ್ರ ಉದ್ಘಾಟನೆ ಯಾವಾಗ?

TUMAKURU: SHAKTHIPEETA FOUNDATION