12th September 2024
Share

TUMAKURU:SHAKTHIPEETA FOUNDATION

  ಕರ್ನಾಟಕ ರಾಜ್ಯ ಸರ್ಕಾರದ ಆಯವ್ಯಯ 2020-21 ರಲ್ಲಿ 50 ನೇ ವಿಷಯವಾಗಿ  ನೀರು ಸಂರಕ್ಷಣೆಯ ಹಿತದೃಷ್ಟಿಯಿಂದ ರಾಜ್ಯದ ಬೃಹತ್ ನೀರಾವರಿ ಯೋಜನೆಯಡಿಯಲ್ಲಿನ ಅಚ್ಚುಕಟ್ಟು ದೇಶಗಳಲ್ಲಿ Flood Irrigation ಪದ್ಧತಿಯನ್ನು ಇಸ್ರೇಲ್ ಮಾದರಿಯಲ್ಲಿ ಸೂಕ್ಷ್ಮ ನೀರಾವರಿಗೆ ಪರಿವರ್ತಿಸಲು ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗುವುದು. ಇದೇ ವೇಳೆ 2020-21 ನೇ ಸಾಲಿನಲ್ಲಿ ಒಂದು ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯವನ್ನು ಜಲಸಂಪನ್ಮೂಲ ಇಲಾಖೆಯ ಮೂಲಕ ಕಲ್ಪಿಸಲಾಗುವುದು. ಎಂಬ ವಿಷಯನ್ನು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಂಡಿಸಿದ್ದಾರೆ.

ಊರಿಗೊಂದು ಕೆರೆ ಕೆರೆಗೆ ನದಿ ನೀರು

   ರಾಜ್ಯದಲ್ಲಿರುವ ಒಟ್ಟು ಕೆರೆಗಳ ಸಂಖ್ಯೆ 38608 (ಖಚಿತ ಮಾಹಿತಿ ಎಲ್ಲೂ ಇಲ್ಲ) ಈ ಕೆರೆಗಳ ನೀರಿನ  ಸಾಮರ್ಥ್ಯ ಸುಮಾರು 350ಟಿ.ಎಂ.ಸಿ. ಅಡಿ. ಇವುಗಳಲ್ಲಿ, ಈಗಾಗಲೇ  ಕೆಲವು ಕೆರೆಗಳು ನದಿ ನೀರಿನಿಂದ ತುಂಬುತ್ತಿವೆ. ಈ ಕೆರೆಗಳು ಸಾಮಾನ್ಯವಾಗಿ  25% ಹೂಳಿನಿಂದ ತುಂಬಿವೆ. ಮಳೆನೀರಿನಿಂದ ಕೆರೆಗಳಿಗೆ ಸಾಮಾನ್ಯವಾಗಿ 25%. ರಷ್ಟು ನೀರು ಸಂಗ್ರಹವಾಗುತ್ತಿದೆ. ಅಂದರೆ, ಈ ಕೆರೆಗಳನ್ನು ನದಿ ನೀರಿನಿಂದ ತುಂಬಿಸಲು  ಶೇ 50% ಬೇಕಾಗಲಿದೆ. ಈ ಲೆಕ್ಕಚಾರದಂತೆ ರಾಜ್ಯದಲ್ಲಿರುವ ಎಲ್ಲ ಕೆರೆಗಳನ್ನು ತುಂಬಿಸಲು ಸುಮಾರು 175 ಟಿ.ಎಂ.ಸಿ ಅಡಿ ನೀರು ಸಾಕಾಗಲಿದೆ.

   ರಾಜ್ಯದಲ್ಲಿ ಯಾವುದೇ ವಿವಾದವಿಲ್ಲದೆ ಬಳಸಬಹುದಾದ 1246.38 ಟಿ.ಎಂ.ಸಿ. ಅಡಿ ನೀರನ್ನು (ಟೇಬಲ್ ಗಮನಿಸಿ) ಈ ಉದ್ದೇಶಕ್ಕಾಗಿ ಬಳಸಬಹುದಾಗಿದೆ. ಇದಕ್ಕಾಗಿ ಈಗಿರುವ ನೀರಾವರಿ ಪ್ರದೇಶದಲ್ಲಿ ಬೆಳೆ ಪದ್ಧತಿ’ ಬದಲಾಯಿಸಬೇಕು. ಅಂದರೆ ವಿವಾದವಿಲ್ಲದೆ ರಾಜ್ಯವು ಈಗ ಬಳಸುತ್ತಿರುವ/ ಬಳಸಲು ಯೋಜನೆ ರೂಪಿಸುತ್ತಿರುವ  1246.38 ಟಿ.ಎಂ.ಸಿ. ಅಡಿ ನೀರಿನಲ್ಲಿ ಶೇ 15 ರಷ್ಟು ನೀರು ತೆಗೆದುಕೊಂಡರೂ ಅದು  186.952   ಟಿ.ಎಂ.ಸಿ. ಅಡಿ ನೀರಾಗಲಿದೆ.ನೀರಿನಿಂದ ರಾಜ್ಯದ 29340 ಗ್ರಾಮಗಳ ಕೆರೆ-ಕಟ್ಟೆಗಳು ಮತ್ತು ಕೆರೆ-ಕಟ್ಟೆಗಳಿಲ್ಲದೆ ಗ್ರಾಮಗಳಲ್ಲಿ ಹೊಸದಾಗಿ ಕೆರೆ-ಕಟ್ಟೆ ನಿರ್ಮಿಸಿ ತುಂಬಿಸಬಹುದಾಗಿದೆ’. ಹಾಗೆಯೇ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ‘ಕಿಂಡಿ ಯೋಜನೆ’ ರೂಪಿಸುವ ಮೂಲಕ ನದಿ ನೀರು ಸಂಗ್ರಹ ಮಾಡಬೇಕಿದೆ.

ಅಥವಾ

  ರಾಜ್ಯದಲ್ಲಿ ಉತ್ಪತ್ತಿ ಆಗುವ ಒಟ್ಟು ನೀರು  3425.27   – ರಾಜ್ಯದಲ್ಲಿ ಬಳಸಿಕೊಳ್ಳಲು ಯೋಜನೆ ರೂಪಿಸುತ್ತಿರುವ ಒಟ್ಟು  ನೀರು 1246.38  = ಬಳಸಿಕೊಳ್ಳದೇ ಇರುವ ಉಳಿಕೆ ನೀರು 2178.89   ಈ ನೀರಿನಲ್ಲಿ ಶೇ 10 ರಷ್ಟು (218) ಬಳಕೆಗೆ ಯೋಜನೆ ರೂಪಿಸಿದರೂ ರಾಜ್ಯದ ಎಲ್ಲಾ ಕೆರೆ ಕಟ್ಟೆಗಳಿಗೆ ನದಿ ನೀರು ತುಂಬಿಸ ಬಹುದು. ಈ ಯೋಜನೆ ರಾಜ್ಯದ ನದಿ ಜೋಡಣೆ’ ಆಗಲಿದೆ.

ಅಥವಾ

  ಕನ್ನಡಿಯೊಳಗಿನ ಗಂಟು ಕೇಂದ್ರ ಸರ್ಕಾರ ರೂಪಿಸುತ್ತಿರುವ ಎಲ್ಲಾ ನದಿ ಜೋಡಣೆ ಯೋಜನೆಗಳಿಂದ ಕೆರೆಗಳಿಗೆ ನದಿ ನೀರು ತುಂಬಿಸಲು ಚಿಂತನೆ ನಡೆಸ ಬಹುದಾಗಿದೆ. ಇದು ಕನಸು ಕಾಣಲು ಚೆನ್ನಾಗಿದೆ.

  ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮೂರು ವಿಷಯಗಳ ಶೀಘ್ರ ಜಾರಿಗೆ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. 

   ಜೊತೆಗೆ ಆಯವ್ಯಯದಲ್ಲಿ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲು ಪ್ರಕಟಿಸಿರುವುದು ನಿಜಕ್ಕೂ ಸ್ವಾಗಾತಾರ್ಹ. ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆ ರವರ ಪಾತ್ರ ಮಹತ್ತರವಾಗಿದೆ. ಆಯವ್ಯಯ ಮಂಡನೆ ಆದ ಬಳಿಕ ಮೊದಲನೆ ಸಚಿವ ಸಂಪುಟದಲ್ಲಿ ವಿಷಯ ಮಂಡಿಸಲು ಜಲಸಂಪನ್ಮೂಲ ಪ್ರಧಾನ ಕಾರ್ಯದರ್ಶಿ ಶ್ರೀ ರಾಕೇಶ್ ಸಿಂಗ್‌ರವರು ಮತ್ತು ಅವರ ತಂಡ ಕಾರ್ಯಪ್ರವೃತ್ತರಾಗಿದ್ದಾರೆ ಎಂಬುದು ರಾಜ್ಯದ ಜನತೆ ಖುಷಿಪಡುವ ವಿಚಾರ.