TUMAKURU: SHAKTHIPEETA FOUNDATION
ತುಮಕೂರು ವಿಶ್ವವಿದ್ಯಾಲಯದ ಉಪ ಕುಲಪತಿಪಗಳಾದ ಶ್ರೀ ವೈ.ಎಸ್. ಸಿದ್ದೇಗೌಡರವರೊಂದಿಗೆ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ವಿವಿಧ ಅಧ್ಯಯನಗಾರರ ತಂಡ ಭೇಟಿಯಾಗಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಮತ್ತು ವಿಶ್ವದ್ಯಾಲಯದಲ್ಲಿರುವ ಸುಮಾರು ಹದಿಮೂರಕ್ಕೂ ಹೆಚ್ಚು ಅಧ್ಯಯನ ಪೀಠಗಳು ಹಾಗೂ ರೀಸರ್ಚ್ ಸೆಂಟರ್ ಸ್ಥಿತಿಗತಿ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿ ಬಗ್ಗೆ ವಸ್ತು ಸ್ಥಿತಿ ಮಾಹಿತಿಯನ್ನು ಸ್ಪಷ್ಟಪಡಿಸುವ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠಕ್ಕೆ ಮಾತ್ರ ವಿಶೇಷ ಆಸಕ್ತಿ ವಹಿಸಿದ್ದಾರೆ ಉಳಿದ ಅಧ್ಯಯನ ಪೀಠಗಳ ಬಗ್ಗೆ ಈ ಕಾಳಜಿ ಏಕೆ ಇಲ್ಲ ಎಂಬ ಚರ್ಚೆಗಳು ಆರಂಭವಾಗಿವೆ.
ಆದ್ದರಿಂದ ಹೆಸರಿಗೆ ಮಾತ್ರ ವಿವಿಯಲ್ಲಿ ಅಧ್ಯಯನ ಪೀಠಗಳು ಇವೆಯೋ ಅಥವಾ ಯಾವ ಪೀಠ/ ರೀಸರ್ಚ್ ಸಂಸ್ಥೆಗಳವಾರು ಅಧ್ಯಯನ ಮಾಡಿರುವ ವಿಷಯಗಳವಾರು ವರದಿಗಳು ಯಾವು ಯಾವು ಇವೆ. ಅವುಗಳ ಅನುಷ್ಠಾನಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿ ಈ ಪೀಠಗಳ ನಿರಂತರ ಚಟುವಟಿಕೆಗೆಗಾಗಿ ಏನೇನು ಅಗತ್ಯವಿದೆ ಎಂಬ ಬಗ್ಗೆ ಶ್ರೀ ಜಿ.ಎಸ್.ಬಸವರಾಜ್‌ರವರ ಸಮ್ಮುಖದಲ್ಲಿಯೇ ಸಮಾಲೋಚನೆ ನಡೆಸಲು ಚರ್ಚಿಸಲಾಯಿತು.
ವಿವಿಯ ಸಿಂಡಿಕೇಟ್ ಸದಸ್ಯರಾದ ಶ್ರೀ ಶ್ರೀನಿವಾಸ್‌ರವರು ತುಮಕೂರು ವಿವಿ ಕ್ಯಾಂಪಸ್‌ನಲ್ಲಿಯೇ ಎಲ್ಲಾ ಪೀಠಗಳಗಳಿಗೆ ಒಂದೇ ಕಟ್ಟಡದಲ್ಲಿ ಅವಕಾಶ ಮಾಡಿ ’ರೀಸರ್ಚ್ ಹಬ್’ ಮಾದರಿಯ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ನನ್ನೊಂದಿಗೆ ಚರ್ಚೆ ಮಾಡಿದ್ದಾರೆ. ಆ ಬಗ್ಗೆಯೂ ಸಮಾಲೋಚನೆ ನಡೆಸಲು ಸಂಸದರು ವಿವಿಗೆ ಬರುವ ದಿವಸ ಸಿಂಡಿಕೇಟ್ ಮತ್ತು ಅಕಡಮಿಕ್ ಸದಸ್ಯರು, ಪೀಠಗಳ ಮುಖ್ಯಸ್ಥರು ಇರುವುದು ಸೂಕ್ತವಾಗಿದೆ ಎಂಬ ಅಂಶವನ್ನು ಉಪಕುಲಪತಿಗಳ ಗಮನಕ್ಕೆ ತರಲಾಯಿತು.
ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಕುಮಾರವ್ಯಾಸ ಅಧ್ಯಯನ ಪೀಠದ ಹೊರತಾಗಿ ಉಳಿದ ಪೀಠಗಳು ನಿಯಾಮನಾಸಾರ ಸ್ಥಾಪಿತವಾಗಿಲ್ಲ ಎಂದಿದೆ, ಈ ಬಗ್ಗೆ ಸ್ಪಷ್ಟ ಅಭಿಪ್ರಾಯ ತಿಳಿಸಲು ಮನವಿ ಮಾಡಿದಾಗ, ಸಂಸದರು ಬಂಸ ದಿವಸವೇ ಅವರ ಸಮ್ಮುಖದಲ್ಲಿಯೇ ಈ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸೋಣ ಎಂಬುದಾಗಿ ತಿಳಿಸಿದರು.
ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠಕ್ಕೆ ಜಿಲ್ಲಾಡಳಿತ ಸುಮಾರು ಮುವತ್ತು ಗುಂಟೆ ಜಮೀನು ನೀಡಿದೆ. ಇಲ್ಲಿ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ಸಿಂಡಿಕೇಟ್ ಮತ್ತು ಅಕಡಮಿಕ್ ಸಭೆಗಳಲ್ಲಿ ನಿರ್ಣಯ ಮಾಡಿ ತುಮಕೂರು ಸ್ಮಾರ್ಟ್ ಸಿಟಿ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳಿಗೆ ಕಟ್ಟಡ ನಿರ್ಮಾಣ ಮಾಡಲು ಅನುದಾನ ಕೇಳಲು, ನೀರಾವರಿ ’ಡೇಟಾ ಪಾರ್ಕ್’ ಸ್ಥಾಪಿಸಲು ಮತ್ತು ’ಪ್ಯಾರೀಸ್ ಒಪ್ಪಂದ ಹಾಗೂ ಸಸ್ಟೆನಬಲ್ ಡೆವಲಪ್‌ಮೆಂಟ್ ಗೋಲ್’ ಬಗ್ಗೆ ಅಧ್ಯಯನ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆಯೂ ಚರ್ಚಿಸಲಾಯಿತು.
ವಿವಿಧ ವಿಷಯಗಳಲ್ಲಿ ಅಧ್ಯಯನ ಮಾಡುವ ವ್ಯಕ್ತಿ, ಸಂಸ್ಥೆಗಳಿಗೆ ಅವಕಾಶ ಕಲ್ಪಿಸುವುದು, ಅಧ್ಯಯನ ವರದಿಯ ಮೂರನೇ ವ್ಯಕ್ತಿ ತಪಾಸಣೆ ಮಾದರಿ ಸೇರಿದಂತೆ ಬಹಳಷ್ಟು ವಿಚಾರಗಳು ಚರ್ಚೆಗೆ ಬಂದವು.
ವಿವಿಯ ಹೊರಭಾಗದಲ್ಲಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠಕ್ಕೆ ಜಮೀನು ಪಡೆಯಲು ಕ್ರಮಕೈಗೊಳ್ಳುವುದು ‘ಮಾರಕ ‘ ಎಂದು ಒಂದು ಪತ್ರಿಕೆ ವರದಿ ಮಾಡಿದೆ, ಇದು ಮಾರಕವೋ ಅಥವಾ ಪೂರಕವೋ ಎಂಬ ಬಗ್ಗೆಯೂ ಸಿಂಡಿಕೇಟ್ ಮತ್ತು ಅಕಡಮಿಕ್ ಸಭೆಗಳಲ್ಲಿ ನಿರ್ಣಯ ಮಾಡಲು ಮನವಿ ಮಾಡಿದೆವು.
ತಾವುಗಳು ಈ ದಿನ ಹಂಚಿಕೊಂಡಿರುವ ವಿಷಯಗಳ ಬಗ್ಗೆ ಸಿಂಡಿಕೇಟ್ ಮತ್ತು ಅಕಡಮಿಕ್ ಸಮಿತಿ ಸಭೆಗಳಲ್ಲಿ ಸೂಕ್ತ ತೀಮಾನವನ್ನು ಕೈಗೊಂಡು ದೇಶದಲ್ಲಿಯೇ ತುಮಕೂರು ವಿವಿಯಲ್ಲಿರುವ ಅಧ್ಯಯನ ಪೀಠಗಳು ಮಾದರಿ ರೀತಿಯಲ್ಲಿ ಕಾರ್ಯನಿರ್ವಹಿಸಲು ಕ್ರಮಕೈಗೊಳ್ಳುತ್ತೇನೆ. ಸಂಸದರು ಈ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲು ವಿವಿಗೆ ಬರುವುದು ಸಹ ಒಂದು ಉತ್ತಮ ಬೆಳವಣಿಗೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಂಸದರ ಸಮ್ಮುಖದಲ್ಲಿ ನಡೆಯವ ಸಭೆ ನಂತರ ಸಿಂಡಿಕೇಟ್ ಮತ್ತು ಅಕಡಮಿಕ್ ಸಮಿತಿ ಸಭೆಗಳಲ್ಲಿ ಸೂಕ್ತ ತೀಮಾನವನ್ನು ಕೈಗೊಂಡು ಅಗತ್ಯವಿದ್ದಲ್ಲಿ ಉನ್ನತ ಶಿಕ್ಷಣ ಸಚಿವರು, ಮಾನ್ಯ ಮುಖ್ಯ ಮಂತ್ರಿಗಳು, ಗೌರವಾನ್ವಿತ ರಾಜ್ಯಪಾಲರು ಮತ್ತು ಯುಜಿಸಿ ಚೇರ್‍ಮನ್‌ರವರ ಸಲಹೆ ಪಡೆದು ನಿಯಾಮನುಸಾರ ಕ್ರಮಕೈಗೊಳ್ಳಲು ವಿಷಯ ಹಂಚಿಕೊಳ್ಳಲಾಯಿತು.
ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಕರ್ನಾಟಕ ರಾಜ್ಯ ಸಮಗ್ರ ನೀರಾವರಿ ಅಧ್ಯಯನ ಮಾಡಲು ಸ್ಥಾಪನೆಯಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ಇಂಜಿನಿಯರ್ ಶ್ರೀ ಕೆ.ಜೈಪ್ರಕಾಶ್ ನೇಮಿಸಿದ್ದೀರಿ ಇದು ತಪ್ಪು ಎನ್ನುವ ರೀತಿಯಲ್ಲಿ ವರದಿಯಾಗಿದೆ ಈ ಬಗ್ಗೆ ಇರುವ ನಿಯಮಗಳ ಬಗ್ಗೆಯೂ ಚರ್ಚಿಸಲಾಗಿದೆ.
ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ನಿರ್ಧೇಶಕ ಶ್ರೀ ರವೀಂದ್ರ ಕುಮಾರ್, ಶ್ರೀ ಸತ್ಯಾನಂದ್ ಮತ್ತು ಶ್ರೀ ಪ್ರಮೋದ್ ಜೊತೆಯಲ್ಲಿದ್ದರು.