22nd November 2024
Share

TUMAKURU : SHAKTHIPEETA FOUNDATION GIS

 ಬೆಂಗಳೂರಿನಲ್ಲಿರುವ ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಕಚೇರಿಗೆ  ತುಮಕೂರಿನ ಅಧ್ಯಯನ ತಂಡ ಬೇಟಿ TUMAKURU – GIS ಬಗ್ಗೆ ಸಮಾಲೋಚನೆ ಸಭೆ ನಡೆಸಿತು.

   NATIONAL – GIS, K – GIS  ಮತ್ತು TUMAKURU – GIS  ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ಬಗ್ಗೆ ಅಧಿಕಾರಿಗಳು/ತಜ್ಞರೊಂದಿಗೆ ಮಾಹಿತಿ ಪಡೆಯಲಾಯಿತು.

  ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ರಾಜ್ಯ ಸರ್ಕಾರದ ಯಾವುದೇ ಇಲಾಖೆಯು ಅವರಿಗೆ ಬೇಕಾದ ಜಿಐಎಸ್ ಆಧಾರಿತ ಲೇಯರ್‍ಸ್ ಕೋರಿದಲ್ಲಿ ಮಾಡಿಕೊಡುವುದಾಗಿ ತಿಳಿಸಿದರು. ಉಳಿದಂತೆ ಕರ್ನಾಟಕ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿ ನಿರ್ಧಿಷ್ಟ ಕೆಲಸ ವಹಿಸಿದರೆ ಮಾಡಲಾಗುವುದು ಎಂಬ ಸ್ಪಷ್ಟ ಮಾಹಿತಿಯನ್ನು ಅಧಿಕಾರಿಗಳು ನೀಡಿದರು.

  ಅಧ್ಯಯನ ತಂಡದಲ್ಲಿ ನನ್ನ ಜೊತೆ ಶ್ರೀ ಸತ್ಯಾನಂದ್, ಶ್ರೀ ಪ್ರಮೋದ್, ಶ್ರೀ ರಾಜಸೇವನ್, ಶ್ರೀ ಪ್ರದೀಪ್ ಇನ್ನೂ ಮುಂತಾದವರು ಭಾಗವಹಿಸಿದ್ದರು.

ಪರಿಣಿತ ತಜ್ಞರೊಂದಿಗೆ ಸಮಾಲೋಚನೆ

  ನಂತರ ಪರಿಣಿತ ತಜ್ಞರ ತಂಡ ಪ್ರತ್ಯೇಕ ಸಭೆ ನಡೆಸಿ, TUMAKURU – GIS  ಯಶಸ್ವಿಯಾಗ ಬೇಕಾದಲ್ಲಿ  ತುಮಕೂರು ಜಿಲ್ಲಾಧಿಕಾರಿಯವರು ಮತ್ತು ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ರವರು ಮಹತ್ತರ ಪಾತ್ರ ವಹಿಸ ಬೇಕಾಗಿದೆ. ಆದ್ದರಿಂದ ತುಮಕೂರು ಲೋಕಸಭಾ ಸದಸ್ಯರು ಹಾಗೂ ತುಮಕೂರು ಜಿಲ್ಲಾ ದಿಶಾ ಸಮಿತಿಯ ಅಧ್ಯಕ್ಷರು ಆದ ಶ್ರೀ ಜಿ.ಎಸ್.ಬಸವರಾಜ್ ರವರಿಗೆ ಮನವಿ ನೀಡಿ, ದಿಶಾ ಸಮಿತಿಯಲ್ಲಿ ಈ ವಿಚಾರಗಳಲ್ಲಿ ಬಗ್ಗೆ ಚರ್ಚಿಸಿ ನಿರ್ಣಯ ಮಾಡಿಸಲು ಪರಿಣಿತರ ತಂಡ ನಿರ್ಧಾರ ಕೈಗೊಳ್ಳಲಾಯಿತು.

  • ಮೊದಲು ತುಮಕೂರು ಜಿಲ್ಲೆಯಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಗಳು ಅವರ ಇಲಾಖೆಗಳ ಮುಖಾಂತರ ಮಾಡಿರುವ ಯೋಜನೆಗಳ ಡೇಟಾವನ್ನು TUMAKURU – GIS  ಗೆ ಅಫ್ ಲೋಡ್ ಮಾಡಬೇಕು ಅಥವಾ ಲಿಂಕ್ ಮಾಡಬೇಕು.
  • ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಇಲಾಖಾವಾರು ಮಾಡಿರುವ ಎಲ್ಲಾ ಲೇಯರ್‍ಸ್‌ಗಳನ್ನು TUMAKURU – GIS  ಗೆ ಅಫ್ ಲೋಡ್ ಮಾಡಬೇಕು
  • ಪ್ರತಿಯೊಂದು ಇಲಾಖೆಯು ಅಗತ್ಯವಿರುವ ಜಿಐಎಸ್ ಆಧಾರಿತ ಲೇಯರ್‍ಸ್‌ನ್ನು ಮಾಡಲು ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್‌ಗೆ ಮನವಿ ಮಾಡುವುದು.
  • ಹಾಲಿ ಇರುವ ಇಲಾಖಾವಾರು ಆಪ್‌ಗಳ ಮೂಲಕ ಡೇಟಾವನ್ನು ಇಲಾಖೆಗಳ ಅಧಿಕಾರಿಗಳು ಅಫ್ ಲೋಡ್ ಮಾಡಬೇಕು
  • ಅಗತ್ಯವಿದ್ದಲ್ಲಿ ಇಲಾಖಾವಾರು ಹೊಸದಾಗಿ ಆಪ್ ಮಾಡಿಸ ಬಹುದು.
  • ತುಮಕೂರು ಜಿಲ್ಲೆಯಲ್ಲಿರುವ 330 ಗ್ರಾಮ ಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳವಾರು ಮಾಹಿತಿ ಅಫ್ ಲೋಡ್ ಮಾಡಬೇಕು.
  • ಪ್ಯಾರೀಸ್ ಒಪ್ಪಂದ, ಸಸ್ಟೆನಬಲ್ ಡೆವಲಪ್‌ಮೆಂಟ್ ಗೋಲ್, ಮಿಷನ್ ಅಂತ್ಯೋದಯ, ಜಲಗ್ರಾಮ ಕ್ಯಾಲೆಂಡರ್, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಮ್ಮ ಗ್ರಾಮ- ನಮ್ಮ ಯೋಜನೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಿಐಎಸ್ ಆಧಾರಿತ ಮಾಸ್ಟರ್ ಪ್ಲಾನ್ ಯೋಜನೆಗೆ ಅಗತ್ಯವಿರುವ ಮಾಹಿತಿಯನ್ನು ಮೊದಲ ಹಂತದಲ್ಲಿ ಅಫ್ ಲೋಡ್ ಬೇಕು.
  • ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಐಸಿಎಸ್‌ಟಿ ಯವರು ಸಂಗ್ರಹಿಸಿರುವ ಮಾದರಿಯಲ್ಲಿ ಡೇಟಾ ಸಂಗ್ರಹಿಸಲು ಅಗತ್ಯ ಕ್ರಮ ಕೈಗೊಳ್ಳುವುದು.
  • ತುಮಕೂರು ಜಿಲ್ಲಾ ಪಂಚಾಯತ್ ಆವರಣದಲ್ಲಿ ನಿರ್ಮಿಸಿರುವ ಸಂಪನ್ಮೂಲ ಕೇಂದ್ರದಲ್ಲಿ TUMAKURU – GIS  ಲ್ಯಾಬ್ ಮಾಡಿ, ಅಧಿಕಾರಿಗಳಿಗೆ, ಚುನಾಯಿತ ಜನಪ್ರತಿನಿಧಿಗಳಿಗೆ ಮತ್ತು ಆಸಕ್ತ ಸಂಘಸಂಸ್ಥೆಗಳಿಗೆ, ವ್ಯಕ್ತಿಗಳಿಗೆ ತರಬೇತಿ ನೀಡುವ ಮೂಲಕ ಯೋಜನೆ ಯಶಸ್ವಿಗೆ ಶ್ರಮಿಸಬೇಕು.
  • ಡೇಟಾ ಸಂಗ್ರಹಿಸಲು ತುಮಕೂರು ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಐಸಿಟಿ ಮಾರ್ಗದರ್ಶಿ ಪ್ರಕಾರ ಆಕ್ಟಿವಿಟಿ ಪಾಯಿಂಟ್ಸ್, ಪ್ರಾಜೆಕ್ಟ್ ವರ್ಕ್ಸ್  ಮತ್ತು ಪ್ರತಿಯೊಂದು ಗ್ರಾಮದಲ್ಲಿರುವ ಪ್ರೌಢ ಶಾಲೆಯಿಂದ ಪೋಸ್ಟ್ ಗ್ರಾಜುಯೇಟ್ ವರೆಗಿನ ವಿದ್ಯಾರ್ಥಿಗಳ ತಂಡ ಅವರ ಹುಟ್ಟೂರಿನ ತಾಜಾ ಡೇಟಾವನ್ನು ಅಫ್ ಲೋಡ್ ಮಾಡಲು ಅಗತ್ಯ ಕ್ರಮಕೈಗೊಳ್ಳುವುದು.
  • ತುಮಕೂರು ವಿಶ್ವ ವಿದ್ಯಾಲಯದಲ್ಲಿರುವ ಎಲ್ಲಾ ಅಧ್ಯಯನ ಕೇಂದ್ರಗಳು ಮತ್ತು ರೀಸರ್ಚ್ ಸೆಂಟರ್‌ಗಳು ನಿರ್ಧಿಷ್ಠ ಇಲಾಖಾವಾರು, ವ್ಯಾಪ್ತಿವಾರು ಅಧ್ಯಯನ ಮಾಡಿ ವರದಿ ನೀಡುವುದು.
  • ನಿರ್ವಹಣೆಗಾಗಿ ಮುಂದಿನ 10  ವರ್ಷಗಳ ಅವಧಿಗೆ  ಹೊರಗುತ್ತಿಗೆ ನೀಡುವುದು.
  • ತುಮಕೂರು ಜಿಲ್ಲೆಯಲ್ಲಿ ಯಾವುದೇ ಭಾಗದಲ್ಲಿ ಯಾವುದೇ ಕಾಮಗಾರಿಯನ್ನು, ಯಾವುದೇ ಇಲಾಖೆ ಅಥವಾ ಖಾಸಗಿಯವರು ಕಾಮಗಾರಿ ಮಾಡುವ ಮುನ್ನ ಮತ್ತು ಕಾಮಗಾರಿ ಪೂರ್ಣ ಗೊಳಿಸಿದ ನಂತರ ಜಿಐಎಸ್ ಆಧಾರಿತ ಅನುಮೋದಿತ ನಕ್ಷೆ ಪಡೆಯುವುದನ್ನು ಕಡ್ಡಾಯಗೊಳಿಸಬೇಕು. ಅಗತ್ಯವಿದ್ದಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಸೂಕ್ತ ಆದೇಶ ಹೊರಡಿಸಬೇಕು.
  • ಒಂದು ಪ್ರತ್ಯೇಕ ವಾಹನ ಜಿಪಿಎಸ್ ನೊಂದಿಗೆ ಪ್ರತಿ ಇಲಾಖೆ, ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಮತ್ತು ಜಾಗೃತಿ ಮಾಡಿಸುವ ನಿರಂತರ ಕೆಲಸ ಆಗಬೇಕು.
  • ಕೇಂದ್ರ ಸರ್ಕಾರದ ಅನುದಾನ ನಿಖರ ಮಾಹಿತಿಗಾಗಿ, ಕೇಂದ್ರ ಸರ್ಕಾರಕ್ಕೆ ಯುಟಿಲಿಟಿ ಪತ್ರ ನೀಡುವ ಮುನ್ನ ದಿಶಾ ಸಮಿತಿಯ ನಿರ್ಣಯ ಕಡ್ಡಾಯ ಮಾಡಬೇಕು. ಅಗತ್ಯವಿದ್ದಲ್ಲಿ ಮಾನ್ಯ ಮುಖ್ಯ ಮಂತ್ರಿಗಳಿಂದ ಅಥವಾ ಕೇಂದ್ರ ಸರ್ಕಾರದಿಂದ ನಿಯಮಾವಳಿ ಮಾಡಿಸಬೇಕು.
  • ಇಲಾಖಾವಾರು ಜಿಐಎಸ್ ಆಧಾರಿತ ಲೇಯರ್‍ಸ್ ಸರಿಯಾಗಿದೆಯೇ ಎಂಬ ಬಗ್ಗೆ ಸೋಶಿಯಲ್ ಆಡಿಟ್ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳುವುದು.

ತಾವು ಸೂಕ್ತ ಸಲಹೆ, ಮಾರ್ಗದರ್ಶನ  ನೀಡಿದಲ್ಲಿ ಅವುಗಳನ್ನು ಸೇರ್ಪಡೆ ಮಾಡಲು ಅವಕಾಶವಿದೆ.