24th July 2024
Share

TUMAKURU:SHAKTHIPEETA FOUNDATION

ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ  ಒಂದು ಪಕ್ಷಿ ನೋಟ

ದಿನಾಂಕ:16.03.2017  ರಂದು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಮಾನ್ಯ ಶ್ರೀ ರಾಜಾಸಾಬ್‌ರವರಿಗೆ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಸ್ಥಾಪಿಸಲು ಮನವಿ ಮಾಡಿತ್ತು.

ದಿನಾಂಕ:22.03.2017  (ವಿಶ್ವ ಜಲ ದಿನಾಚರಣೆ ದಿವಸ) ರಂದು ನಡೆದ ತುಮಕೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿ ಮತ್ತು ಸಿಂಡಿಕೇಟ್ ಸಭೆಯಲ್ಲಿ ಕರ್ನಾಟಕ  ರಾಜ್ಯ ಸಮಗ್ರ ನೀರಾವರಿ ಅಧ್ಯಯನ ಮಾಡಲು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಮಾಡಲು ನಿರ್ಣಯ ಕೈಗೊಳ್ಳಲಾಗಿತ್ತು.

ದಿನಾಂಕ:08.06.2017 ರಂದು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸರ್ಕಾರದ ಕಾರ್ಯದರ್ಶಿಗಳು ಜಲಸಂಪನ್ಮೂಲ ಇಲಾಖೆ ಇವರಿಗೆ ಮನವಿ ಮಾಡಿ ತುಮಕೂರು ವಿಶ್ವವಿದ್ಯಾನಿಲಯ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸಹಭಾಗಿತ್ವದಲ್ಲಿ ಕರ್ನಾಟಕ  ರಾಜ್ಯ ಸಮಗ್ರ ನೀರಾವರಿ ಅಧ್ಯಯನ ಮಾಡಲು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಮಾಡಲು ನಿರ್ಣಯ ಮಾಡಲಾಗಿದ್ದು ತಾವು ರೂ 50 ಲಕ್ಷ ಅನುದಾನ ನೀಡಲು ಮನವಿ ಮಾಡಲಾಗಿತ್ತು.

ದಿನಾಂಕ:25.07.2017 ರಂದು ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಉದ್ಯಮವಾದ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ವತಿಯಿಂದ ರೂ 50 ಲಕ್ಷವನ್ನು ತುಮಕೂರು ವಿಶ್ವವಿದ್ಯಾನಿಲಯ ಹಣಕಾಸು ಅಧಿಕಾರಿ ಹೆಸರಿನಲ್ಲಿ ಡಿಡಿ ನೀಡಲಾಗಿತ್ತು.

ದಿನಾಂಕ:12.02.2020 ರಂದು ತುಮಕೂರು ವಿಶ್ವವಿದ್ಯಾನಿಲಯದಲ್ಲಿರುವ  ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ಮುಖಾಂತರ ನಡೆದ ಕಾರ್ಯಕ್ರಮದಲ್ಲಿ ಒಂದು ತಿಂಗಳೊಳಗಾಗಿ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಫೋರಂ ಸಂಸದರಿಗೆ ಮನವಿ ಮಾಡಿತ್ತು.

ದಿನಾಂಕ:15.02.2020 ರಂದು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮಾನ್ಯ ಉಪಕುಲಪತಿಗಳಿಗೆ ಮೌಖಿಕವಾಗಿ ಮನವಿ ಮಾಡಿ ಜಿಲ್ಲಾಧಿಕಾರಿಗಳಿಗೆ ಗಂಗಸಂದ್ರದಲ್ಲಿ ಜಮೀನನ್ನು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠಕ್ಕೆ ಪಡೆಯಲು ಮನವಿ ಮಾಡಿದಾಗ, ಅವರು ಈ ಸಂಭಂದ ಸಂಸದರ ಪತ್ರ ನೀಡಲು ಸೂಚಿಸಿದಾಗ ಪತ್ರ ನೀಡಲಾಯಿತು.

ದಿನಾಂಕ:05.03.2020 ರಂದು ಜಿಲ್ಲಾಧಿಕಾರಿಗಳು ಗಂಗಸಂದ್ರ ಗ್ರಾಮದಲ್ಲಿ 30 ಗುಂಟೆ ಜಮೀನನ್ನು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಮಾಡಲು ತುಮಕೂರು ವಿಶ್ವ ವಿದ್ಯಾಲಯಕ್ಕೆ ಕಾಯ್ದಿರಿಸಿದೆ.

ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಶ್ರೀ ವೈ.ಎಸ್. ಸಿದ್ದೇಗೌಡರವರಿಗೆ ನಾನು ಖುದ್ದಾಗಿ ಹೋಗಿ ತಿಳಿಸಿದ್ದರೂ ಈವರೆಗೂ ಲೋಕಸಭಾ ಸದಸ್ಯರು ಅಥವಾ ಜಿಲ್ಲಾಧಿಕಾರಿ ಬಳಿ ಚರ್ಚಿಸಿಲ್ಲ. ದಿನಾಂಕ:21.03.2020 ನಡೆದ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ವಿಶ್ವವಿದ್ಯಾನಿಲಯದವರ ಅಭಿಪ್ರಾಯ ಪಡೆದು ನೀರಾವರಿ ಡಿಜಿಟಲ್ ಗ್ರಂಥಾಲಯ ಸ್ಥಾಪಿಸುವ ಸಂಬಂದ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.

ದಿನಾಂಕ:22.03.2020  ರಂದು ವಿಶ್ವ ಜಲ ದಿನಾಚರಣೆ’ ಅಂಗವಾಗಿ ನಡೆದ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸಭೆಯಲ್ಲಿ ಮತ್ತೊಮ್ಮೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಶ್ರೀ ವೈ.ಎಸ್. ಸಿದ್ದೇಗೌಡರವರಲ್ಲಿ ಮನವಿ ಮಾಡಿ ಅಧ್ಯಯನ ಪೀಠದ ಕಾರ್ಯ ವೈಖರಿ ಚುರುಕುಗೊಳಿಸಿ ಹಾಗೂ ಕಳೆದ ಮೂರು ವರ್ಷದ ಸಾಧನೆ ಬಗ್ಗೆ ರಾಜ್ಯದ ಜನತೆಗೆ ಮನವರಿಕೆ ಮಾಡಲು ಕೋರಿದೆ.

  ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರು ಮಾಜಿಯಾಗಿದ್ದಾಗ ಅಧ್ಯಯನ ಪೀಠ ಸ್ಥಾಪಿಸಲು ಸರ್ಕಾರದಿಂದ ರೂ 50  ಲಕ್ಷ ಅನುದಾನ ನೀಡಲು ಸಹಕರಿಸಿದರು. ಈಗ ಲೋಕಸಭಾ ಸದಸ್ಯರಾಗಿ ರೂ 3 ಕೋಟಿ ಬೆಲೆಬಾಳುವ ಜಮೀನನ್ನು ಮಂಜೂರು ಮಾಡಿಸಿದ್ದಾರೆ. ಕಟ್ಟಡಕ್ಕೆ ಬೇಕಾಗಿರುವ ಆರ್ಥಿಕ ನೆರವನ್ನು ಕೊಡಿಸಲು ಮುಂದಾಗಿದ್ದಾರೆ.

   ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಸಹಕಾರವನ್ನು ಬಳಸಿಕೊಳ್ಳುವುದು, ಬಿಡುವುದು ತುಮಕೂರು ವಿಶ್ವವಿದ್ಯಾಲಯಕ್ಕೆ ಬಿಟ್ಟಿದ್ದು.

 ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದಲ್ಲಿ ಕನಿಷ್ಟ ಪಕ್ಷ ನಾನು ‘ಜವಾನ/ಸೇವಕ’ನಾಗಿರದಿದ್ದರೂ, ನೋಡಿ ನನಗೆ ಇದ್ಯಾವ ಕರ್ಮ.

ಶ್ರೀ ಜಿ.ಎಸ್.ಬಸವರಾಜ್ ರವರೊಂದಿಗೆ ಕಳೆದ 30 ವರ್ಷದ ನನ್ನ ಒಡನಾಟ ನನಗೆ ಒಂದು ಅಭಿವೃದ್ಧಿ ಪಿಹೆಚ್‌ಡಿ ನೀಡಿದಂತಾದರೆ. ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರೊಂದಿಗಿನ 20  ವರ್ಷದ ನನ್ನ ಒಡನಾಟ ನನಗೆ ಇನ್ನೊಂದು ನೀರಾವರಿ ಪಿಹೆಚ್‌ಡಿ ನೀಡಿದಂತಾಗಿದೆ’

 ಇವರಿಬ್ಬರ ಕನಸು ನನಸು ಮಾಡಲು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಸ್ಥಾಪಿಸಲು ಶ್ರಮಿಸಿದೆ. ಬಹುಷಃ ಇದು ಯಾವ ಹಂತಕ್ಕೆ ತಲುಪಲಿದೆ ಗೊತ್ತಿಲ್ಲ.