14th July 2024
Share

TUMAKAURU : SHAKTHIPEETA FOUNDATION

ದಿನಾಂಕ:01.08.1988 ರಂದು ನನ್ನ ಹುಟ್ಟೂರು ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ನಿಟ್ಟೂರು ಹೋಬಳಿ, ಕುಂದರನಹಳ್ಳಿ ಗ್ರಾಮದ ಶ್ರೀ ಗಂಗಮಲ್ಲಮ್ಮ ಗ್ರಾಮದೇವತೆಗೆ ಪೂಜೆ ಸಲ್ಲಿಸುವ ಮೂಲಕ ಬಿದರೆಹಳ್ಳಕಾವಲ್‌ನ ಸುಮಾರು 930 ಎಕರೆ ಸರ್ಕಾರಿ ಜಮೀನಿನಲ್ಲಿ ಯಾವುದಾದರೊಂದು ಬೃಹತ್ ಕೈಗಾರಿಕೆ ಸ್ಥಾಪಿಸಲು ಪ್ರತಿಜ್ಞೆ ಮಾಡಿ, ಆರಂಭಿಸಿದ ಅಭಿವೃದ್ಧಿ ಯೋಜನೆಗಳ ಹೋರಾಟದ ಪ್ರತಿಫಲ.

  ಕೇಂದ್ರ ಸರ್ಕಾರ ಸ್ವಾಮ್ಯದ ಹೆಚ್.ಎ.ಎಲ್ ವತಿಯಿಂದ ಸುಮಾರು ರೂ 6300 ಕೋಟಿ ವೆಚ್ಚದ ಹೆಲಿಕ್ಯಾಪ್ಟರ್ ತಯಾರಿಕ ಘಟಕಕ್ಕೆ ದಿನಾಂಕ:03.01.2016 ರಂದು ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಹಾಗೂ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಶಂಕುಸ್ಥಾಪನೆ ಮಾಡುವ ಮೂಲಕ ನಿರ್ಧಿಷ್ಠ ಗುರಿ ತಲುಪಿದ ನೆಮ್ಮದಿ ನನಗಿದೆ. ಘಟಕ ಉದ್ಘಾಟನೆ ಆಗಬೇಕಿದೆ.

  ಜೊತೆಗೆ ತುಮಕೂರಿನ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಅಧಿಕಾರದಲ್ಲಿರಲಿ ಅಥವಾ ಮಾಜಿಯಾಗಿರಲಿ 31  ವರ್ಷ ನಿರಂತರವಾಗಿ ಅವರ ಜೊತೆ ಸೇರಿ ಕುಂದರನಹಳ್ಳಿ ಗ್ರಾಮದ/ ಚಿಕ್ಕನಾಯಕನಹಳ್ಳಿ ತಾಲ್ಲೂಕು ಶ್ರೀ ತೀರ್ಥರಾಮೇಶ್ವರ ವಜ್ರದ/ ಗುಬ್ಬಿ ತಾಲ್ಲೂಕಿನ/ ತುಮಕೂರು ನಗರದ/ ತುಮಕೂರು ಜಿಲ್ಲೆಯ/ಕರ್ನಾಟಕ ರಾಜ್ಯದ/ಭಾರತ ದೇಶದ ಹಾಗೂ ಶಕ್ತಿಪೀಠ ಕ್ಯಾಂಪಸ್ ಸ್ಥಾಪನೆ ಮಾಡುವ ಮೂಲಕ ವಿಶ್ವದ ಹಲವಾರು ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಲು ಮುಂದಾಗಿರುವ ಖುಷಿ ನನಗಿದೆ.

 ದಿನಾಂಕ:18.07.1991 ರಂದು ‘ಅಫಿಕ್ಸ್ ತರಬೇತಿ ಕೇಂದ್ರ’ ಆರಂಭಿಸುವ ಮೂಲಕ  ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಲು ಪಾದಾರ್ಪಣೆ ಮಾಡಲಾಯಿತು.

ದಿನಾಂಕ:04.05.2001 ರಂದು ‘ಅಭಿವೃದ್ಧಿ ರೆವೂಲ್ಯೂಷನ್ ಫೋರಂ’ಜನ್ಮ ತಾಳಿತು, ಅಂದಿನಿಂದ ಈ ಸಂಸ್ಥೆಗೆ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. 04.05.2021 ರಂದು ಈ ಸಂಸ್ಥೆಯಿಂದ ದೂರ ಸರಿಯಲು ದೃಢ ನಿರ್ಧಾರ ಮಾಡಿದ್ದೇನೆ. ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿದರೂ ಯಶಸ್ಸು ಕಂಡಿದ್ದು ಫೋರಂ ಮಾತ್ರ.

ದಿನಾಂಕ:16.08.2019 ರಂದು ‘ಶಕ್ತಿಪೀಠ ಫೌಂಡೇಷನ್ ‘ಟ್ರಸ್ಟ್ ಸ್ಥಾಪಿಸುವ ಮೂಲಕ ಇನ್ನೂ ಮುಂದೆ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳನ್ನು ಟ್ರಸ್ಟ್ ಮೂಲಕ ಶ್ರಮಿಸಲು ನಿರ್ಣಯಿಸಿದ್ದೇನೆ. ಶಕ್ತಿ ದೇವತೆ ಏಕೋ ಏನೋ ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೂಕಿನ, ಜೆಜಿ ಹಳ್ಳಿ ಹೋಬಳಿಯ, ಕೆ.ಆರ್.ಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ, ವಡ್ಡನಹಳ್ಳಿ ಪಕ್ಕದಲ್ಲಿರುವ ಬಗ್ಗನಡು ಕಾವಲ್‌ನಲ್ಲಿ ಕ್ಯಾಂಪಸ್ ಆರಂಭಿಸಲು ಆಜ್ಞೆ ಮಾಡಿದಂತಿದೆ.

ನಾನು ಬರೆದಿರುವ ಪುಸ್ತಕಗಳ ಪರಿಚಯ

  • ದಿನಾಂಕ:06.12.2004 ರಂದು  ಜಿ.ಎಸ್.ಪರಮಶಿವಯ್ಯನವರ ಸಮಗ್ರ ನೀರಾವರಿ ಅಭಿವೃದ್ಧಿ ಯೋಜನೆ
  • ದಿನಾಂಕ: 03.02.2007 ರಂದು ಸಿದ್ಧಗಂಗಾ ಶ್ರೀಗಳ ಜನ್ಮ ದಿನೋತ್ಸವದ ನೆನಪಿಗೆ ಆರ್ಫ್ ಸೇವಾ ಯೋಜನೆ 100 ದಿನಗಳ ವಿಚಾರ ಸಂಕಿರಣ.
  • ದಿನಾಂಕ:04.04.2009 ರಂದು ಮತದಾರರ ಪ್ರಣಾಳಿಕೆ – ಲೋಕಸಭಾ ಚುನಾವಣೆ – 2009
  • ದಿನಾಂಕ: 02.02.2012 ರಂದು ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು.
  • ದಿನಾಂಕ:22.02.2013 ರಂದು ತುಮಕೂರು ನಿಮ್ಜ್
  • ದಿನಾಂಕ: 22.03.2014  ರಂದು ಮತದಾರರ ಪ್ರಣಾಳಿಕೆ – ಲೋಕಸಭಾ ಚುನಾವಣೆ – 2014
  • ದಿನಾಂಕ:22.03.2014  ರಂದು ಎತ್ತಿನಹೊಳೆ ತಪ್ಪು ತಿದ್ದಿಕೊಳ್ಳಿ.
  • ದಿನಾಂಕ:30.06.2015 ರಂದು ಹೆಚ್.ಎ.ಎಲ್ ಉಳಿಸಿ
  • ದಿನಾಂಕ:10.11.2017 ರಂದು ಜನತೆಯ ವಿಷನ್ ಡಾಕ್ಯುಮೆಂಟ್ – 2025

  ಅಭಿವೃದ್ಧಿ ಯೋಜನೆಗಳ ಪರ ಮೇಲ್ಕಂಡ 9 ಪುಸ್ತಕಗಳನ್ನು ಬರೆಯಲಾಗಿದೆ ಮತ್ತು ಪುಸ್ತಕದಲ್ಲಿರುವ ಯೋಜನೆಗಳ ಅನುಷ್ಠಾನಕ್ಕೆ ಅವಿರತವಾಗಿ ಶ್ರಮಿಸಲಾಗಿದೆ. ನನ್ನ 10 ನೇ ಪುಸ್ತಕ ಇದೂವರೆಗೂ ನಾನು ಬರೆದಿರುವ 9 ಪುಸ್ತಕಗಳ ಪ್ರಗತಿ ಪರಿಶೀಲನಾ/ ಸಂಶೋಧನಾ ವರದಿ ಯಾಗಲಿದೆ. 

  ಪುಸ್ತಕದ ಹೆಸರು ಬಗ್ಗೆ ಇನ್ನೂ ಚಿಂತನೆ ಮಾಡಿಲ್ಲ ಆದರೇ TUMAKAURU GIS – DISHA R & D  ಸಂಶೋಧನಾ ವರದಿ ಯಂತಿರಬೇಕು ಎಂಬ ಚಿಂತನೆ ಮಾಡಿದ್ದೇನೆ. ಈ ಪುಸ್ತಕವನ್ನು ಜನತಾ ಕರ್ಫ್ಯೂ ಆಚರಿಸಿದ ದಿನ ಹಾಗೂ ವಿಶ್ವಜಲ ದಿನಾಚರಣೆ (ದಿನಾಂಕ:22.03.2020) ಯಂದು ಬರೆಯಲು ಆರಂಭಿಸಿದ್ದೇನೆ

   ಈ ಸಂಶೋಧನಾ ವರದಿಯನ್ನು ತುಮಕೂರು ಜಿಲ್ಲಾಡಳಿತ ಒಪ್ಪಿದರೆ ಜಿಲ್ಲಾಡಳಿತದ ಮೂಲಕ ಅಥವಾ ತುಮಕೂರು ಜಿಲ್ಲಾ ದಿಶಾ ಸಮಿತಿ ಒಪ್ಪಿದರೆ ದಿಶಾ ಮೂಲಕ ಅಥವಾ ತುಮಕೂರು ವಿಶ್ವವಿದ್ಯಾನಿಲಯ ಒಪ್ಪಿದರೆ ವಿವಿ ಮೂಲಕ ಅಥವಾ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮೂಲಕ ಅಥವಾ ಶಕ್ತಿಪೀಠ ಫೌಂಡೇಷನ್ ಟ್ರಸ್ಟ್ ಮೂಲಕ ಬರೆದು ಬಿಡುಗಡೆ ಮಾಡಲು ಯೋಚಿಸಿದ್ದೇನೆ.

ತಮ್ಮ ಸಲಹೆಗಳಿಗಾಗಿ ಮನವಿ.

   ನಾನು ಹೋರಾಟ ಮಾಡಿದ ಯೋಜನೆಗಳ ಬಗ್ಗೆ ಮೊದಲು ಪುಸ್ತಕ ಬರೆದು ನಂತರ ಯೋಜನೆಯ ಜಾರಿಗೆ ಶ್ರಮಿಸುವುದು ನನಗೆ ಕರಗತವಾಗಿದೆ. ಬಹಳ ಜನರಿಂದ ಬಹಳಷ್ಟು ಟೀಕೆ-ಟಿಪ್ಪಣೆಗಳು ಬಂದರೂ ನಾನೂ ಯಾವತ್ತೂ ತಲೆಕಡೆಸಿಕೊಳ್ಳುವುದಿಲ್ಲಾ.

  ಆರಂಭದ ದಿನದಿಂದ ಹಿಡಿದು ಇಲ್ಲಿಯವರೆಗೂ ನನ್ನ ಸ್ಪೀಡ್ ಕಡಿಮೆ ಆಗಿಲ್ಲ. ನನ್ನ ಹೋರಾಟ ಆನೆ ನಡೆದಿದ್ದೇ ದಾರಿಯಂತಿದೆ. ನನಗೆ ಜೀವನದಲ್ಲಿ ದೇವರಾಗಿ ಶಕ್ತಿಪೀಠಗಳ, ಮಾನವರಾಗಿ ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ನನ್ನ ಕುಟುಂಬದವರ ಸಹಕಾರ ನಿಜಕ್ಕೂ ಅವಿಸ್ಮರಣಿಯ. ನನ್ನ ಹುಟ್ಟೂರು ಕುಂದರನಹಳ್ಳಿ ಜನತೆಗೆ ಸದಾ ಋಣಿಯಾಗಿರುತ್ತೇನೆ. ಅವರು ಕಲಿಸಿದ ಪಾಠ ನಿಜಕ್ಕೂ ಅದ್ಭುತ

  ಆದರೇ ಕುಂದರನಹಳ್ಳಿ ಗ್ರಾಮದ ಜನರಿಂದ ಆರಂಭಿಸಿ, ನನ್ನ ಸಂಬಂಧಿಗಳು, ಮಾಧ್ಯಮ ಮಿತ್ರರು ಸೇರಿದಂತೆ ಕುಂದರನಹಳ್ಳಿ ರಮೇಶ್ ನೂರಾರು ಕೋಟಿ ಹಣ ಮಾಡಿದ್ದಾನೆ  ಎಂಬ ಭಾವನೆಯಿಂದ  ಬೆರಳಣಿಕೆಯಷ್ಟು  ಜನರು ಸದಾ ನನಗೆ ಅವರ ಅಮೃತ ವಾಣಿಯಿಂದ ಆಶಿರ್ವಾದ ಮಾಡುತ್ತಿದ್ದಾರೆ ಎಂಬ ತೃಪ್ತಿಯೂ ಇದೆ. ಆದರೇ ವಿನಾಕರಣ ನನ್ನಿಂದ ದೂರವಾಗುತ್ತಿದ್ದಾರೆ ಎನ್ನುವ ಸಂಕಟವೂ ಇದೆ.