22nd December 2024
Share

TUMAKURU:SHAKTHI PEETA FOUNDATION  

ದಿನಾಂಕ:24.03.2020 ರಂದು ಕೊರೊನಾ ಮಹಾಮಾರಿ ಬಗ್ಗೆ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರು ಮಾತನಾಡುವ ಮೂಲಕ ’ಕೊರೊನಾಗೆ ಮನೆಯಲ್ಲಿರುವುದೇ ಮದ್ದು/ಔಷಧಿ’ ಎಂದು ಘೋಶಿಸಿದ್ದಾರೆ. ಏಫ್ರಿಲ್ 21 ರವರೆಗೆ ಇಡೀ ದೇಶವನ್ನೇ ಲಾಕ್‌ಡೌನ್ ಮಾಡುವ ಮೂಲಕ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಜೊತೆಗೆ ರೂ 15000 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.

  ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲ ಸೀತಾರಾಮ್‌ರವರು ಜಿಎಸ್‌ಟಿ/ಐಟಿ ರಿಟರ್ನ್ಸ್ ಸಲ್ಲಿಕೆ ವಿಸ್ತರಣೆ ಮಾಡುವ ಮೂಲಕ ಪ್ರಭುದ್ಧತೆ ಮೆರೆದಿದ್ದಾರೆ. ಇನ್ನೂ ಹಲವಾರು ರಿಯಾಯತಿ ಸುಳಿವು ನೀಡಿದ್ದಾರೆ.

   ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂಪ್ಪನವರು ಮೋದಿಜಿಯವರು ಘೋಷಣೆ ಮಾಡುವ ಒಂದು ದಿವಸ ಮೋದಲೇ ಕರ್ನಾಟಕ ರಾಜ್ಯವನ್ನು ಲಾಕ್‌ಡೌನ್ ಮಾಡುವ ಮೂಲಕ ಪ್ರಧಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

  ಜೊತೆಗೆ ವಿವಿಧ ವರ್ಗದ ಜನತೆಗೆ ಕೆಳಕಂಡ ಪರಿಹಾರ ಘೋಷಿಸುವ ಮೂಲಕ ಕಷ್ಟದ ಕಾಲದಲ್ಲಿ ಜನರ ಜೊತೆಗೆ ನಾವಿದ್ದೇವೆ, ಯಾವುದಕ್ಕೂ ಯಾರು ಹೆದರುವ ಅವಶ್ಯಕತೆಯಿಲ್ಲ ಎಂದು ಬಹಿರಂಗವಾಗಿ ಜನರ ಬೆಂಬಲಕ್ಕೆ ನಿಂತಿದ್ದಾರೆ.

  • ಎಲ್ಲಾ ವಿಧವಾದ ಸಾಮಾಜಿಕ ಭಧ್ರತಾ ಪಿಂಚಣೆಗಳ ಎರಡು ತಿಂಗಳ ಮೊತ್ತವನ್ನು ಮುಂಚಿತವಾಗಿ ಬಿಡುಗಡೆ ಮಾಡಲಿದ್ದಾರೆ. 62 ಲಕ್ಷ ಜನತೆಗೆ ರೂ 1102  ಕೋಟಿ ನೆರವು ದೊರೆಯಲಿದೆ.
  • ಎಲ್ಲಾ 21 ಲಕ್ಷ ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ ತಲಾ ರೂ 1000 ಬಿಡುಗಡೆ ಮಾಡಲಿದ್ದಾರೆ.
  • ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚವರಿ ಮಾನವ ದಿನದ ಮೊತ್ತವನ್ನು ಮುಂಚಿತವಾಗಿ ಬಿಡುಗಡೆ ಮಾಡಲಿದ್ದಾರೆ.
  • ಬಿಪಿಎಲ್ ಕುಟುಂಬಗಳಿಗೆ ಎರಡು ತಿಂಗಳ ಆಹಾರವನ್ನು ಒಟ್ಟಿಗೆ ನೀಡಲಿದ್ದಾರೆ.
  • 21620 ಮಂದಿ ಬಡವರ ಬಂಧು ಒಟ್ಟು ರೂ 13.31  ಕೋಟಿ ಸಾಲ ಮನ್ನಾ ಮಾಡಲಿದ್ದಾರೆ.

  ಪ್ರಸ್ತುತ ಜನತೆ ಧಿಟ್ಟ ನಿಲುವು ಕೈಗೊಂಡು ನಿಗದಿತ ಅವಧಿವರೆಗೆ ಮನೆಯಲ್ಲಿರುವ ಮೂಲಕ ರಾಷ್ಟ್ರಸೇವೆ ಮಾಡುವುದು ಅಗತ್ಯವಾಗಿದೆ. ನಿಮ್ಮ ಪ್ರಾಣದ ಜೊತೆಗೆ ಹಲವಾರು ಜನತೆಯ ಪ್ರಾಣದಾನ ಮಾಡಿದ ಕೀರ್ತಿ ಜನತೆಗೆ ದೊರೆಯಲಿದೆ.

  ಯುದ್ಧ ಸೈನಿಕರು ಬಂದೂಕು ಹಿಡಿದು ಜೀವವನ್ನು ಲೆಕ್ಕಿಸದೆ ದೇಶ ರಕ್ಷಣೆಗೆ ಶ್ರಮಿಸುವಾಗ, ಕೊರೊನಾ ದಿಂದ ದೇಶದ ಜನರ ರಕ್ಷಣೆಗಾಗಿ ನಾವು ತಮ್ಮ ಕುಟುಂಬದವರ ಜೊತೆಯಲ್ಲಿ ಮನೆಯಲ್ಲಿರುವುದು ದೇಶರಕ್ಷಣೆಯ ಕೆಲಸ ಅಲ್ಲವೇ. ಇಟಲಿ ಪ್ರಧಾನಿಯಂತೆ ನಮ್ಮ ಪ್ರಧಾನಿ ಮತ್ತು ಮುಖ್ಯ ಮಂತ್ರಿಗಳ ಕಣ್ಣೀರು ನಿಮಗೆ ಬೇಕೆ. ಬೇಡ ಎಂದಾದರೆ ದಯವಿಟ್ಟು ಜನರೆಲ್ಲರೂ ಮನೆಯಲ್ಲಿರಿ.