15th September 2024
Share

TUMAKURU: SHAKTHI PEETA FOUNDATION

 ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ರಾಜ್ಯದ ಎಲ್ಲಾ 6021 ಗ್ರಾಮ ಪಂಚಾಯಿತಿಗಳು ಮತ್ತು 29340 ಗ್ರಾಮಗಳಲ್ಲೂ  VILLAGE TASK FORCE   ರಚಿಸುವ ಮೂಲಕ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

  ನಿಜಕ್ಕೂ ಮೆಚ್ಚುವಂತ ಕೆಲಸ ಪ್ರತಿ ಮನೆ ಮನೆಯ ಮೇಲೆ, ಪ್ರತಿ ವ್ಯಕ್ತಿಯ ಮೇಲೆ ಕೊರೊನಾ ವೈರಸ್ ನಿಗಾ ಇಡಲು ಈ ಟಾಸ್ಕ್ ಫೋರ್ಸ್ ಸಹಕಾರಿಯಾಗಲಿದೆ. ವಿಶೇಷವಾಗಿ ವಿದೇಶದಲ್ಲಿ ಯಾರ ಮನೆಯವರು ಇದ್ದಾರೆ. ಯಾರು ವಿದೇಶದಿಂದ ಈಗ ಬಂದಿದ್ದಾರೆ ಎಂಬ ತಾಜಾ ಮಾಹಿತಿ ದೊರೆಯಲಿದೆ. ಬೆಂಗಳೂರಿನಲ್ಲಿ ಯಾರ ಮನೆಯವರಿದ್ದಾರೆ, ಯಾರು ಬೆಂಗಳೂರಿನಿಂದ ಈಗ ಬಂದಿದ್ದಾರೆ ಎಂಬ ಮಾಹಿತಿಯೂ ದೊರೆಯಲಿದೆ.

   ಒಂದು ಗ್ರಾಮದ ಜನರ ಜೀವನ ಹಾಳು ಮಾಡಲು ಕೊರೊನಾ ವೈರಸ್ ಸೊಂಕು ಇರುವ  ಕೇವಲ ಒಬ್ಬ ವ್ಯಕ್ತಿ ಸಾಕು. ನಮ್ಮ ಗ್ರಾಮದ ಜನರಿಗೆ ಆ ಊರಿನಲ್ಲಿರುವವರಿಗಿಂತ ಹೊರಭಾಗದಲ್ಲಿ ಇರುವವರ ಮೇಲೆ ಪ್ರೀತಿ ಜಾಸ್ತಿ. ನಮ್ಮ ಹುಡುಗ/ಹುಡುಗಿ ಏನೂ ಅಗಲ್ಲ ಎಂದರೆ ಢಮಾರ್ ನಮ್ಮ ಎಚ್ಚರಿಕೆ ನಮಗೆ ಇರಲೇಬೇಕು ಎಂಬುದು ಸರ್ಕಾರದ ಉದ್ದೇಶ.

  ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಾಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜೊತೆಗೆ ಪಟ್ಟಿಯಲ್ಲಿರುವವರನ್ನು ಸದಸ್ಯರಾಗಿ ಸೇರ್ಪಡೆ ಮಾಡಿದ್ದಾರೆ. ವಿಧ್ಯುತ್ ಪ್ರತಿನಿಧಿ, ಗ್ರಾಮದ ಸರಪಂಚರು, ಗ್ರಾಮದ ತೋಟಿ/ತಳವಾರ/ ದೇವಾಲಯದ ಪೂಜಾರಿರವರನ್ನು ಸೇರ್ಪಡೆ ಮಾಡಬಹುದಿತ್ತು. ಜಾಸ್ತಿ ಜನ ಆಗುತ್ತಾರೆ ಎಂಬ ದೃಷ್ಠಿಯಿಂದ ಕಡಿಮೆ ಮಾಡಿರಬಹುದು.

  ಮಾನ್ಯ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪನವರಲ್ಲಿ ಒಂದು ಮನವಿ, ಪಿಡಿಓಗಳಿಗೆ ಹೇಳಿ ವಿದೇಶದಲ್ಲಿರುವವರ ಮನೆಯ ಲ್ಯಾಟ್‌ಲಾಂಗ್ ಸಹಿತ ವಿವರಗಳನ್ನು ಯಾವ ದೇಶದಲ್ಲಿದ್ದಾರೆ, ಏನುಮಾಡುತ್ತಾರೆ, ಎಂಬ ಕನಿಷ್ಟ ಮಾಹಿತಿಯನ್ನು ಅಫ್‌ಲೋಡ್ ಮಾಡಲಿ. ಈ ಮಾಹಿತಿ ಸಂಗ್ರಹಿಸಲು ಈ ಟಾಸ್ಕ್ ಫೋರ್ಸ್ ಉತ್ತಮ ವೇದಿಕೆ.

   ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಇಡೀ ರಾಜ್ಯದಲ್ಲಿನ ವಿದೇಶದಲ್ಲಿರುವ ಜನರ ಮಾಹಿತಿಯ ಜಿಐಎಸ್ ಆಧಾರಿತ ಲೇಯರ್ ಮಾಡಿದಲ್ಲಿ ಕೊರೊನಾ ವೈರಸ್ ಅನಾಲೀಸಿಸ್ ಮಾಡಲು ಅನೂಕೂಲವಾಗಲಿದೆ.

  ನಗರ ಪ್ರದೇಶಗಳಲ್ಲಿ ವಾರ್ಡ್ ಮಟ್ಟದಲ್ಲಿ ಅಥವಾ ಬಡಾವಣೆ ಮಟ್ಟದಲ್ಲಿ ಈ ರೀತಿ ಟಾಸ್ಕ್ ಫೋರ್ಸ್ ಕಾರ್ಯನಿರ್ವಹಿಸಲಿ. ಎಲ್ಲಾ 224  ವಿಧಾನಸಭಾ ಕ್ಷೇತ್ರದ ಸದಸ್ಯರು ಬಗ್ಗೆ ಮಾತನಾಡಲಿ, ಪ್ರತಿ ದಿನದ ಬುಲೆಟಿನ್‌ಅನ್ನು ಅವರವರ ಕ್ಷೇತ್ರದಲ್ಲಿ ಬಿಡುಗಡೆ ಮಾಡಲಿ.