13th June 2024
Share

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ರವರ ಮನವಿ.

   ಕೊರೊನಾ ಮಹಾಮಾರಿ ಇಡೀ ವಿಶ್ವವನ್ನೆ ಬೆಚ್ಚಿಬೀಳಿಸಿದೆ. ಮುಂದುವರೆದ ದೇಶಗಳೆಲ್ಲಾ ತತ್ತರಿಸಿ ಹೋಗಿವೆ. ನಮ್ಮ ಬಾರತ ಶಕ್ತಿದೇವತೆಯ ಕೃಪಾಕಟಾಕ್ಷದಿಂದ ಕೊರೊನಾ ಮಹಾಮಾರಿಯನ್ನು ಒಡೆದು ಓಡಿಸಲು ಸಜ್ಜಾಗಿ ನಿಂತಿದೆ. ನಮ್ಮ ದೇಶದಲ್ಲಿ ಪ್ರತಿಯೊಂದಕ್ಕೂ ರಾಜಕಾರಣ ಮಾಡುತ್ತಿದ್ದ ನಾವೆಲ್ಲರೂ ಒಂದಾಗಿದ್ದೇವೆ.

 ನಮ್ಮಲ್ಲಿ ಪಕ್ಷಬೇದವಿಲ್ಲ, ಜಾತಿಯಿಲ್ಲ, ಬಡತನ-ಶ್ರೀ ಮಂತಿಕೆ ಇಲ್ಲ, ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಭಾರತ ದೇಶದ ಲಾಕ್‌ಡೌನ್ ಮತ್ತು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಕರ್ನಾಟಕ ರಾಜ್ಯದ ಲಾಕ್‌ಡೌನ್‌ಗೆ ಕರೆ ನೀಡುವ ಮುನ್ನವೇ ಅದೆಷ್ಟೋ ಜನ ಲಾಕ್‌ಡೌನ್‌ಗೆ ಸಿದ್ಧತೆ ಮಾಡಿದ್ದು ಮೋದಿಜಿ ಕರೆ ನೀಡಿದ್ದ ಜನತಾ ಕರ್ಫ್ಯೂ ಪ್ರತಿಫಲ ಎಂದರೆ ಅತಿಶಯೋಕ್ತಿಯಲ್ಲ.

  ವಿಶ್ವ, ದೇಶ ಮತ್ತು ರಾಜ್ಯ ಸಂಕಷ್ಠದಲ್ಲಿದೆ ಬಡವರ ಸೇವೆ ಮಾಡುವುದು ಸರ್ಕಾರದ ಆಧ್ಯ ಕರ್ತವ್ಯ. ಕೋವಿಡ್-19 ಮೊದಲನೆ ಟೆಸ್ಟ್ (ಪಾಸಿಟಿವ್-ನೆಗೆಟೀವ್)ಮಾಡಲು ರೂ 6000 ಹಣವನ್ನು ಸರ್ಕಾರ ವ್ಯಯಿಸುತ್ತಿದೆ. 21 ದಿವಸಗಳ ಕಾಲ ಕೂಲಿ ಮಾಡದ ಅದೆಷ್ಟೋ ಜನ ನಮ್ಮ ಸಹೋದರಿ- ಸಹೋದರರಿಗೆ ಸರ್ಕಾರ ವಿವಿಧ ನೆರವು ನೀಡುವ ಮೂಲಕ ಸಾಮಾಜಿಕ ಹೊಣೆಗಾರಿಕೆ ಹೊರಲು ನಮ್ಮ ಸರ್ಕಾರಗಳು ಸಿದ್ಧವಾಗಿವೆ

 ಉಳ್ಳವರು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಉದಾರವಾಗಿ ಪತ್ರದಲ್ಲಿರುವ ಖಾತೆಗೆ ದೇಣಿಗೆ ನೀಡಲು ಈ ಮೂಲಕ ಮನವಿ ಮಾಡಲಾಗಿದೆ.  ಲಾಕ್‌ಡೌನ್ ನಂತರ ನನ್ನ ಭೇಟಿಗಾಗಿ ಬರುವ ತಾವು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ ಹಣದ ದಾಖಲೆಗಳೊಂದಿಗೆ ಬಂದರೆ ಅದೇ ನನಗೆ ತೃಪ್ತಿ.

ತಾವೂ ಶ್ರೀ ಸಾಯಿಬಾಬಾನಿಗೆ ಮಾಡುವ ಪೂಜೆಗಿಂತ ಹೆಚ್ಚು ಸೇವೆ ಆಗಲಿದೆ. ನೀವೂ ದೇಣಿಗೆ ನೀಡಿದ ನಾಲ್ಕು ಪಟ್ಟು ಜಾಸ್ತಿ ಬಾಬಾ ನಿಮಗೆ ನೀಡುತ್ತಾನೆ ಎಂಬ ನಂಬಿಕೆ ನನ್ನದು.

ನಾವು ನೀವೂ ಕೊರೊನಾ ಮಾಹಾಮರಿ ಗೆಲ್ಲಬೇಕಾದರೇ   ಮನೆಯಲ್ಲಿರಲೇಬೇಕು.

   ದಯವಿಟ್ಟು ಸರ್ಕಾರದೊಂದಿಗೆ ಕೈಜೋಡಿಸಿ

ಜಿ.ಎಸ್.ಬಸವರಾಜ್