12th September 2024
Share

TUMAKURU:SHAKTHIPEETA FOUNDATION

  ಕೊರೊನಾ, ಸಿಡುಬು, ಪೋಲಿಯೋ, ಪ್ಲೇಗು, ಬರಗಾಲ, ಅತಿಹೆಚ್ಚು ಮಳೆಯಿಂದ ಪ್ರವಾಹ ಹೀಗೆ ಒಂದಲ್ಲಾ ಒಂದು ಪಿಡುಗಿನಿಂದ ರಾಜ್ಯದ ಮೂಲೆ, ಮೂಲೆ ಜನ ತೊಂದರೆಗೆ ಈಡಾಗುವುದು ಸಹಜವಾಗಿದೆ.

  ಈ ಕೊರೊನಾ ಎಷ್ಟು ತಿಂಗಳ ಕಾಲ ಇರುತ್ತದೆ, ಇದರಿಂದ ಹೊರಬರುವುದು ಯಾವಾಗ? ಯಾರ್‍ಯಾರು ಬದುಕಿ ಉಳಿಯುತ್ತಾರೆ, ಯಾರ್‍ಯಾರು ಸಾಯುತ್ತಾರೆ ಎಂಬುದು ಸಹ ನಿಗೂಢ ರಹಸ್ಯವಾಗಿದೆ.

  ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಒಂದೊಂದು ಹೈಟೆಕ್ ಆಸ್ಪತ್ರೆ, ಧರ್ಮಚತ್ರ, ಗೋಶಾಲೆ ನಿರ್ಮಿಸುವುದು ಭವಿಷ್ಯದ ದೃಷ್ಟಿಯಿಂದ ಅಗತ್ಯವಾಗಿದೆ. ಪ್ರಸ್ತುತ ರಾಜ್ಯದ 225 ವಿಧಾನಸಭಾ ಸದಸ್ಯರು, 75  ಜನ ವಿಧಾನಪರಿಷತ್ ಸದಸ್ಯರು, 28  ಜನ ಲೋಕಸಭಾ ಸದಸ್ಯರು ಮತ್ತು 12  ಜನ ರಾಜ್ಯಸಭಾ ಸದಸ್ಯರು ಸೇರಿದಂತೆ 340  ಜನ ಚುನಾಯಿತ ಜನಪ್ರತಿನಿಧಿಗಳು ಸಹ ಗಂಭೀರವಾಗಿ ತೆಗೆದುಕೊಳ್ಳಬೇಕು.

 ಕನಿಷ್ಟ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಹಾಗೂ ಅಗತ್ಯವಿರುವಕಡೆ ಇನ್ನೂ ಹೆಚ್ಚಿಗೆ ಕಡೆ ಅಂದರೆ 340  ಜನರು ಒಂದೊಂದು ಕಡೆ ನಿರ್ಮಾಣ ಮಾಡಲು ಹೊಣೆಗಾರಿಕೆ ಪಡೆದು ಅಗತ್ಯ ಕ್ರಮಕೈಗೊಂಡು ಸಮರೋಪಾದಿಯಲ್ಲಿ ಪೂರ್ಣಗೊಳಿಸುವುದು ಅನಿವಾರ್ಯವಾಗಿದೆ.

ರಾಜ್ಯ ಸರ್ಕಾರ ಏನು ಮಾಡಬೇಕು?

  • ಕೊರೊನಾ ವಿಲೇಜ್ ಟಾಸ್ಕ್ ಪೋರ್‍ಸ್ ಸಮಿತಿಗಳಿಗೆ  ಆಯಾ ಗ್ರಾಮದಲ್ಲಿ ಅತಿ ಹೆಚ್ಚು ಸರ್ಕಾರಿ ಜಮೀನು ಇರುವ ಮಾಹಿತಿ ಸಂಗ್ರಹಿಸುವುದು.
  • ಸರ್ಕಾರಿ ಜಮೀನು ಇಲ್ಲದೆ ಕಡೆ ಇಚ್ಚೆ ಪಡುವ ರೈತರ ಜಮೀನನ್ನು ಪಾವಗಡ ಸೋಲಾರ್ ಮಾದರಿಯಲ್ಲಿ ಬಾಡಿಗೆ ಪಡೆಯಲು ಮಾಹಿತಿ ಸಂಗ್ರಹಿಸುವುದು.
  • ಜಿಲ್ಲಾಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳು ಇಚ್ಚಿಸುವ ಜಮೀನಿನ ವಿವರವಾದ ಮಾಹಿತಿಯೊಂದಿಗೆ ಜಿಐಎಸ್ ಲೇಯರ್ ಮಾಡುವುದು.
  • ಹೈಟೆಕ್ ಆಸ್ಪತ್ರೆ, ಧರ್ಮಚತ್ರ, ಗೋಶಾಲೆಗಳನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು ಆಸಕ್ತ ಹೂಡಿಕೆದಾರರನ್ನು ಆಹ್ವಾನಿಸುವುದು.
  • ಸಿಎಸ್‌ಆರ್ ಫಂಢ್‌ನಿಂದ ನಿರ್ಮಿಸುವವರಿಗೂ ಅವಕಾಶ ಕಲ್ಪಿಸುವುದು.
  • ತುಮಕೂರು, ಚಿತ್ರದುರ್ಗ ಮತ್ತು ಬಳ್ಳಾರಿ ಮೂರು ಜಿಲ್ಲೆಗಳ ಗಣಿ ಆಭಾದಿತ ಹಣವನ್ನು ಬಳಕೆ ಮಾಡುವ ಬಗ್ಗೆ ಸುಪ್ರಿಂ ಕೋರ್ಟ್‌ನಲ್ಲಿ  ನೆನೆಗುದಿಗೆ ಬಿದ್ದಿದೆ. ಕೊರೊನಾ ಮಹಾಮಾರಿಯಲ್ಲಿ ತೊಂದರೆಗಿಡಾದವರಿಗೆ ಅನೂಕೂಲ ಕಲ್ಪಿಸಲು ಸಾಲವಾಗಿ ರಾಜ್ಯ ಸರ್ಕಾರ ರೂ 25000 ಕೋಟಿ ಹಣವನ್ನು ಬಳಸಿಕೊಂಡು ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿಯೂ ಕನಿಷ್ಟಪಕ್ಷ ಒಂದೊಂದು ಹೈಟೆಕ್ ಆಸ್ಪತ್ರೆ, ಧರ್ಮಚತ್ರ, ಗೋಶಾಲೆಗಳನ್ನು ನಿರ್ಮಿಸುತ್ತೇವೆ. ಈ ಹಣ ಬಳಸಲು ಅನುಮತಿ ನೀಡಿ. ನಂತರ ಮುಂದಿನ ಮೂರು ವರ್ಷಗಳಲ್ಲಿ ಆಯಾ ಜಿಲ್ಲೆಗೆ ನಿಗಧಿ ಮಾಡಿರುವ ಗಣಿ ಆಭಾದಿತ ಹಣವನ್ನು ಆಯಾ ಜಿಲ್ಲೆಗೆ ಖರ್ಚು ಮಾಡುತ್ತೇವೆ ಎಂದು ಸುಪ್ರಿಂ ಕೋರ್ಟ್‌ನಲ್ಲಿ ಅಫಿಡೆವಿಟ್ ಹಾಕಿ ಮನವಿ ಮಾಡಿದರೆ ವಿಶೇಷ ಪ್ರಕರಣ ಎಂದು ನ್ಯಾಯಾಮೂರ್ತಿಗಳು ವರ ನೀಡಬಹುದು.
  • ರೂ 25000 ಕೋಟಿ ಹಣವನ್ನು 340 ಕ್ಕೆ ಹಂಚಿದರೆ ತಲಾ 73.52 ಕೋಟಿಹಣವಾಗಲಿದೆ.
  • ನಂತರ ಟೆಂಡರ್ ಕರೆದು ಕಟ್ಟಡ ನಿರ್ಮಾಣ ಆರಂಭಿಸಿ, ಕೇಂದ್ರ ಸರ್ಕಾರದ ಅನುದಾನವನ್ನು ಪಡೆಯಲು ಮನವಿ ಸಲ್ಲಿಸ ಬಹುದು.

 ಗಣಿ ಅಭಾದಿತ ಹಣ ದಿಶಾ ಸಮಿತಿಯ ವ್ಯಾಪ್ತಿಗೆ ಬರಲಿದೆ, ಶ್ರೀಮತಿ ಶಾಲಿನಿರಜನೀಶ್‌ರವರೇ ಮಾನ್ಯ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನರ ಗಮನಕ್ಕೆ ತಂದು ಪ್ರಯತ್ನಿಸಬಹುದು ಇದೊಂದು ಐತಿಹಾಸಿಕ ಯೋಜನೆಯಾಗಲಿದೆ.