TUMAKURU:SHAKTHIPEETA FOUNDATION
ಕೊರೊನಾ ಈ ಪಾಸ್ ನೋಡಿದರೆ, ಕೊರೊನಾ ಎಷ್ಟು ಗಂಭಿರವಾಗಿದೆ, ಎಷ್ಟು ದಿವಸ ಮುಂದುವರೆಯಲಿದೆ, ಎಂಬುದು ಯಾರಿಗೂ ಅಂದಾಜು ಸಿಕ್ಕಿಲ್ಲ. ಜನರು ಇದೇ ರೀತಿ ಹಾದಿ, ಬೀದಿಯಲ್ಲಿ ಓಡಾಡಿದರೆ ಯಾರಿಗೂ ನೆಮ್ಮದಿಯಿಲ್ಲ. ಪೋಲೀಸ್ ಸಿಬ್ಬಂದಿಗೆ ಸಂಪೂರ್ಣ ನೆಮ್ಮದಿ ಕೆಡಿಸುವ, ಈ ಜನರಿಗೆ ಏನು ಶಿಕ್ಷೆ ನೀಡಬೇಕು ಎಂಬ ಬಗ್ಗೆ ಅವರಿಗೆ ಗೊಂದಲವಾಗಿದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ಇನ್ನೋವೇಟೀವ್ ಶಿಕ್ಷೆ ಕೊಡಲು ಆರಂಭಿಸಿದ್ದಾರೆ. ಆದರೂ ಜನರು ಕೇರ್ ಮಾಡದೇ ಇರುವ ರಹಸ್ಯ ಏನು? ಎಂಬುದೇ ಅರ್ಥವಾಗುತ್ತಿಲ್ಲ.
ಡಾಕ್ಟರ್, ನರ್ಸ್, ಲ್ಯಾಬ್ ಟೆಕ್ನಿಷಿಯನ್, ಇವರುಗಳು ದೇಶದ ಗಡಿ ಕಾಯುವ ಸೈನಿಕರಿಗಿಂತಲೂ ಕಷ್ಟ ಅನುಭವಿಸುತ್ತಿದ್ದಾರೆ. ಬಾಡಿಗೆ ಮನೆ ಖಾಲಿ ಮಾಡಿಸುವ ಜನರನ್ನು ನೋಡುತ್ತಿದ್ದೇವೆ. ಅವರು ಅವರ ಗ್ರಾಮಗಳಿಗೆ ಮತ್ತು ಬಡಾವಣೆಗಳಿಗೆ ಬರುವುದು ಬೇಡ ಎಂದು ಜನರು ಬೀದಿಗೀಳಿಯುವುದನ್ನು ನೋಡಿದ್ದೇವೆ.
ಇಂತಹ ಸಂದರ್ಭದಲ್ಲಿಯೂ ಅವರು ಜನರ ಸೇವೆಯೇ ದೇವರ ಸೇವೆ ಎಂದು ಜೀವ ಕೈಲಿ ಹಿಡಿದುಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಆದರೂ ನಮ್ಮ ಜನಕ್ಕೆ ಬುದ್ದಿ ಬರಬೇಡವೇ?