12th July 2024
Share

TUMAKURU:SHAKTHIPEETA FOUNDATION  

  ಯಾವುದೋ ಒಂದು ಕಡೆ ಊಟ ಕೊಟ್ಟು, ಒಂದು ಪ್ಯಾಕೆಟ್ ಆಹಾರ ಕೊಟ್ಟು ಫೋಟೋ ಪೇಪರ್‌ನಲ್ಲಿ ಹಾಕಿದರೇ ಸಾಕು ಒಂದು ಸಮಾಧಾನ. ಎಂಬಂತಹ ಘನ ಕಾರ್ಯಗಳು ನಡೆಯುತ್ತಿವೆ, ತುಮಕೂರು ನಗರದ ಪ್ರತಿ ಮೂಲೆ, ಮೂಲೆಯಲ್ಲಿ ಯಾರು ನಿಜವಾಗಿಯೂ ಹಸಿವಿನಿಂದ ನರಳುತ್ತಿದ್ದಾರೆ, ಅಂಥವರನ್ನು ಹುಡುಕಿ, ಹುಡುಕಿ ಆಹಾರ ನೀಡುವ C0VID-19 VOLUTEERS TUMAKURU  ಈ ತಂಡ ನಿಜಕ್ಕೂ ಒಳ್ಳೆಯ ಕೆಲಸ ಮಾಡುತ್ತಿದೆ.

    ಒಂದು ರಸ್ತೆಯ ಬದಿಯಲ್ಲಿ ಕುಳಿತಿರುವ ಒಂದು ಅಜ್ಜಿಗೂ ಸಹ ಬಿಡದೆ ದುರ್ಭಿನ್ ಹಾಕಿ ಹುಡುಕುವ ರೀತಿಯಲ್ಲಿ ಹುಡುಕುತ್ತಿದ್ದಾರೆ. ತುಮಕೂರು ನಗರದ ಎಲ್ಲಾ ಭಾಗದ ಆಸಕ್ತ ಚಿಂತಕರು ಈ ಕೆಲಸವನ್ನು ಮಾಡುತ್ತಿದ್ದಾರೆ. ಇದನ್ನು ತುಮಕೂರು ನಗರಾಡಳಿತ ಮಾಡಬೇಕಿತ್ತು. ಕೇಂದ್ರ ಸರ್ಕಾರ ಆದೇಶ ನೀಡಿದ್ದರೂ ನಗರಾಡಳಿತ ಈ ರೀತಿ ಮಾಡಿದ ಉದಾಹರಣೆ ಕಾಣಲಿಲ್ಲ.

  ಊಟ, ತಿಂಡಿ, ನೀರು ಮತ್ತು ಕಿಚನ್ ಪ್ಯಾಕೆಟ್‌ನ್ನು ವಿತರಿಸುತ್ತಿದ್ದಾರೆ. ಇಲ್ಲಿ ಪಕ್ಷ, ಜಾತಿ, ಯಾವುದೂ ಕಾಣಲಿಲ್ಲ, ಇಲ್ಲಿ ಮಾನವೀಯತೆ ಮಾತ್ರ ಕಾರ್ಯನಿರ್ವಹಿಸುತ್ತಿದೆ. ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಕೈಜೊಡಿಸಿರುವುದು ಈ ತಂಡಕ್ಕೆ ಆನೆ ಬಲ ಬಂದಿದೆ.

  ಈ ತಂಡಕ್ಕೆ ನಗರದಲ್ಲಿ ಕಡುಬಡವರು ಯಾವ ಭಾಗದಲ್ಲಿದ್ದಾರೆ, ಯಾರು ಎಲ್ಲಿ ನಿರ್ಗತಿಕರಿದ್ದಾರೆ. ಅವರು ಯಾವ ರೀತಿ ವಾಸಮಾಡುತ್ತಿದ್ದಾರೆ ಎಂಬ ತಾಜಾ ಮಾಹಿತಿ ತಿಳಿಯಲಿದೆ. ಶಾಸಕರಿಗೂ ನೈಜತೆ ತಿಳಿಯಲಿದೆ. ಕೊರೊನಾ ಮಹಾಮಾರಿಯ ಧ್ವಂಸದ ತಕ್ಷಣ ಇವರಿಗೆಲ್ಲಾ ಸೂರು ನಿರ್ಮಿಸಲು ಪಟ್ಟಿಯನ್ನು ಸಹ ಮಾಡುತ್ತಿರುವ ಅಂಶ ನಿಜಕ್ಕೂ ಅತ್ಯಂತ ಸ್ವಾಗಾತಾರ್ಹ ವಿಚಾರ.

  ರಾಜ್ಯದ ಎಲ್ಲಾ ಭಾಗದಲ್ಲಿಯೂ ಈ ತರಹವಾದ ನಿರ್ಧಿಷ್ಠವಾದ ಕೆಲಸ ನಡೆಯಬೇಕು, ಪ್ರಧಾನಿಯವರು ಕರೆ ನೀಡಿರುವ ಪ್ರಕಾರ ಇನ್ನೂ ಹದಿನಾಲ್ಕು ದಿವಸವಿದೆ. ನಂತರ ದೇವರಿಗೆ ಗೊತ್ತು.

 ತುಮಕೂರಿನ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಜಿಲ್ಲಾಧಿಕಾರಿಗಳಿಗೆ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಮಾತನಾಡಿ, ತುಮಕೂರು ನಗರದ ಮತ್ತು ಜಿಲ್ಲೆಯ ಎಲ್ಲಾ ನಗರಗಳ ಪ್ರದೇಶದ ಪ್ರತಿಯೊಂದು ವಾರ್ಡ್‌ಗಳಿಗೂ ಮನೆ-ಮನೆ ಬಾಗಿಲಿಗೆ ತರಕಾರಿ, ಹಣ್ಣು ವಿತರಣೆ ಮಾಡಲು ಸೂಚಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ರೈತರು ಬೆಳೆದ ಮಾಲನ್ನು ನೇರವಾಗಿ ಖರೀದಿಸಿ ಮಾರಾಟ ಮಾಡಲು ಸೂಚಿಸಿದ್ದಾರೆ.

  ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸವಾಲಾಗಿ ಸ್ವೀಕರಿಸಿ ಕಾರ್ಯ ಆರಂಭಿಸಿದ್ದಾರೆ. ಇವರ ಜೊತೆಗೂ ಈ ತಂಡ ಕೈಜೋಡಿಸಿದಲ್ಲಿ ನಗರದ ಪ್ರತಿಯೊಂದು ಮನೆಯವರು ತರಕಾರಿಗಾಗಿ ಮನೆ ಬಿಟ್ಟು ಹೊರಗೆ ಬರುವ ಪರಿಸ್ಥಿತಿ ಬರುವುದಿಲ್ಲಾ.