22nd December 2024
Share
G.S.BASAVARAJ, BASAVRAJENDRA, RAVINDRA & KUNDARANAHALLI RAMESH

TUMAKURU:SHAKTHIPEETA FOUNDATION 

 ವಿವಿಧ ದೇಶಗಳ Industrialists’ಚೀನಾದಿಂದ ಹೊರಬರುವವರನ್ನು ಭಾರತ ದೇಶ ಸೆಳೆಯಲು ರಣತಂತ್ರ ರೂಪಿಸುತ್ತಿದೆ’ ಈ ಹಿನ್ನೆಲೆಯಲ್ಲಿ ಅಗತ್ಯ ಮೂಲಭೂತ ಸೌಲಭ್ಯದ ನೀಲಿ ನಕ್ಷೆ ತಯಾರಿಸಿ ಕರ್ನಾಟಕ್ಕೆ ಆಹ್ವಾನಿಸಲು. ಸಮರೋಪಾದಿಯಲ್ಲಿ ಕ್ರಮಕೈಗೊಳ್ಳಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಕೆ.ಐ.ಎ.ಡಿ.ಬಿ ಸಿಇಓ ಶ್ರೀ ಬಸವರಾಜೇಂದ್ರ ರವರಿಗೆ ಸಲಹೆ ನೀಡಿದರು.

ಕೋವಿಡ್-19 ನಿಂದ ಹೊರಬರಬೇಕಾದರೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ’ ಹೊಸ ಉದ್ದಿಮೆಗಳು ಆರಂಭವಾಗಬೇಕು. ರೈತರ ಬೆಳೆಗಳನ್ನು ಮೌಲ್ಯವರ್ಧಿತ ಉತ್ಪನ್ನಗಳಾಗಿ ಮಾಡುವ ಉತ್ಪನ್ನವಾರು ಕ್ಲಸ್ಟರ್, ಮೆಗಾ ಪಾರ್ಕ್ ಸ್ಥಾಪನೆಯಾಗಲೇ ಬೇಕು.

 ಹೊರ ದೇಶದಲ್ಲಿರುವ ನಮ್ಮ ದೇಶದವರು ಬಂದು ಇಲ್ಲಿಯೇ ಬಂಡವಾಳ ಹೂಡಿಕೆ ಮಾಡಲು ಒಳ್ಳೆಯ ವಾತವಾರಣ ಸೃಷ್ಟಿಯಾಗಬೇಕು. ಪ್ರತಿಯೊಂದಕ್ಕೂ ಲಂಚದ ಬೇಡಿಕೆ’ ಯಿಂದ ಕೈಗಾರಿಕೆಗಳ ಸ್ಥಾಪನೆಗೆ ಅಡ್ಡಿಯಾಗಿರುವ ಸಮೀಕ್ಷೆಗಳ ವರದಿಗಳನ್ನು ಗಂಭೀರವಾಗಿ ಪರಿಗಣಿಸಬೇಕು.

  224 ವಿಧಾನಸಭಾ ಕ್ಷೇತ್ರಗಳಲ್ಲೂ ಕನಿಷ್ಟ ಪಕ್ಷ ಒಂದೊಂದು ಕೈಗಾರಿಕಾ ವಸಾಹತು ಆಗಲೇಬೇಕು, ಅಲ್ಲಿಗೆ ನದಿ ನೀರು ಸರಬರಾಜು ಅತ್ಯಂತ ಪ್ರಮುಖವಾಗಿದೆ. ರಾಜ್ಯದಲ್ಲಿ ಹಾಲಿ ಕೈಗಾರಿಕೆಗಳಿಗೆ ನಿಗದಿಗೊಳಿಸಿರುವ ನದಿ ನೀರು ಮತ್ತು ಮುಂದಿನ 50 ವರ್ಷಗಳಿಗೆ ಅಗತ್ಯವಿರುವ ನದಿ ನೀರಿನ ಮಾಹಿತಿಯನ್ನು ಜಿಐಎಸ್ ಲೇಯರ್‌ವಾರು’ ಮಾಡಿ ನೀಡಲು ಸೂಚಿಸಿದರು.

 ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮತ್ತು ಶ್ರೀ ಜಗದೀಶ್ ಶೆಟ್ಟರ್ ವರವರೊಂದಿಗೂ ಬಗ್ಗೆ ಚರ್ಚಿಸಲಾಗುವುದು. 224 ವಿಧಾನಸಭಾ ಕ್ಷೇತ್ರಗಳ ಸ್ಪಷ್ಟ ಚಿತ್ರಣದ ಮಾಹಿತಿ ನೀಡಲು ಮನವಿ ಮಾಡಿದರು.

    ತುಮಕೂರು ನಗರದ ಒಳಚರಂಡಿ ನೀರನ್ನು ಪುನರ ಬಳಕೆ ಮಾಡಿ ತುಮಕೂರು ವಸಂತನರಸಾಪುರದ ಇಂಡಸ್ಟ್ರಿಯಲ್ ನೋಡ್‌ಗೆ ನೀರು ಸರಬರಾಜು ಮಾಡುವ ಕಾಮಗಾರಿಗೆ ವರ್ಕ್ ಆರ್ಡರ್ ನೀಡಿ’ ಅತೀ ಶೀಘ್ರದಲ್ಲಿ ಯೋಜನೆ ಪೂರ್ಣಗೊಳಿಸಲು ಅಗತ್ಯ ಕ್ರಮಕೈಗೊಳ್ಳುವುದಾಗಿ ಬಸವರಾಜೇಂದ್ರರವರು ಭರವಸೆ ನೀಡಿದರು.

 ಈಗಾಗಲೇ ಎತ್ತಿನಹೊಳೆ ಯೋಜನೆಯಿಂದ ವಸಂತನರಸಾಪುರದ ಇಂಡಸ್ಟ್ರಿಯಲ್ ನೋಡ್‌ಗೆ ಅಲೋಕೇಷನ್ ಆಗಿರುವ 300 ಎಂ.ಸಿ.ಎಂ.ಟಿ ನೀರನ್ನು ಸಮರ್ಪಕವಾಗಿ ಬಳಸಲು’ ಯೋಜನೆ ರೂಪಿಸಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಕೆ.ಐ.ಎ.ಡಿ.ಬಿ ಸಿಇಓ ಶ್ರೀ ಬಸವರಾಜೇಂದ್ರ ರವರಿಗೆ ಸಲಹೆ ನೀಡಿದರು.

ಶ್ರೀ ಜಿ.ಎಸ್.ಬಸವರಾಜ್, ಶ್ರೀ ಬಸವರಾಜೇಂದ್ರ, ಶ್ರೀಮತಿ ಅನುರಾಧ, ಶ್ರೀ ಗಂಗಾಧರಯ್ಯ, ಶ್ರೀ ರವೀಂದ್ರ ಮತ್ತು ಕುಂದರನಹಳ್ಳಿ ರಮೇಶ್ ಉಪಸ್ಥಿತರಿದ್ದರು.