27th July 2024
Share

TUMAKURU:SHAKTHIPEETA FOUNDATION

ತುಮಕೂರಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸ್ವಂತ ಕಟ್ಟಡ ನಿರ್ಮಾಣಕ್ಕೆ, ತುಮಕೂರು ನಗರದ ಬಿ.ಹೆಚ್.ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ನಿವೇಶನದಲ್ಲಿ ಒಂದು ಎಕರೆ ಮೂರು ಗುಂಟೆ ಜಮೀನಿನ್ನು  ಸ್ವಂತ ಕಟ್ಟಡ ನಿರ್ಮಾಣ ಮಾಡಲು  ಶಿಕ್ಷಣ ಇಲಾಖೆ ಮಂಜೂರು ಮಾಡುವ ಮೂಲಕ ಬಹಳ ವರ್ಷಗಳ ಮಹಿಳಾ ಕಾಲೇಜು ವಿದ್ಯಾರ್ಥಿನಿಯರ ಸಮಸ್ಯೆಗೆ ಪರಿಹಾರ ದೊರಕಿದೆ ಎಂದು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.

 ಹಿನ್ನೆಲೆ:- ಇದೇ ಜಾಗದಲ್ಲಿ ಇರುವ ಹಳೇ ಕಟ್ಟಡದಲ್ಲಿ   ತರಗತಿಗಳು ನಡೆಯುತ್ತಿದ್ದು ಯಾವಾಗ ಯಾರ ಮೇಲೆ ಕುಸಿದು ಬೀಳುತ್ತವೆ ಎಂಬ ಆತಂಕದಲ್ಲಿದ್ದರು. ಮಳೆ ಬಂದರೆ  ವಿದ್ಯಾರ್ಥಿನಿಯರ ಪಾಡು ಹೇಳ ತೀರದಾಗಿತ್ತು.

ತುಮಕೂರು ಸ್ಮಾರ್ಟ್  ಸಿಟಿ ಯೋಜನೆ ರೂಪಿಸುವಾಗ ನಿವೇಶನದಲ್ಲಿ ಅನಗತ್ಯ ಯೋಜನೆಗಳಿಗೆ ಗಮನಹರಿಸಿದರೆ ಹೊರತು, ಇಂಥಹ ಅಗತ್ಯ ಯೋಜನೆ ಕಡೆ ಯೋಚನೆಯನ್ನೇ ಮಾಡದೇ ಇರುವುದು ಒಂದು ಧೌರ್ಭಾಗ್ಯ.

 ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ. ಜ್ಯೋತಿಗಣೇಶ್, ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಮನವಿ ಮೇರೆಗೆ ಶಿಕ್ಷಣ ಸಚಿವರಾದ ಶ್ರೀ ಎಸ್.ಸುರೇಶ್ ಕುಮಾರ್, ಕಾರ್ಯದರ್ಶಿ ಶ್ರೀ ಎಸ್ ಉಮಾಶಂಕರ್ ನಿವೇಶನ ನೀಡಲು ವಹಿಸಿದ ಕಾಳಜಿ  ಸುಮಾರು 1500 ವಿದ್ಯಾರ್ಥಿಗಳ ಬೇಡಿಕೆ ಹೀಡೇರಿದೆ.

 ಜಿಲ್ಲಾಧಿಕಾರಿ ಶ್ರೀ ರಾಕೇಶ್ ಕುಮಾರ್ ಸಹಕಾರ, ಕಾಲೇಜಿನ ಪ್ರಾಂಶುಪಾಲರುಗಳ, ಉಪನ್ಯಾಸಕರ ಜಿಗಣೆಯಂತ ಪಟ್ಟು ಮತ್ತು ಮಹಿಳಾ ವಿದ್ಯಾರ್ಥಿನಿಯರ ಹೋರಾಟಕ್ಕೆ ಕೊನೆಗೂ ಮುಕ್ತಿ ದೊರಕಿದೆ. ಕಾಲ ಮಿತಿ ನಿಗದಿಯೊಂದಿಗೆ ಉತ್ತಮವಾದ ಕಟ್ಟಡ ನಿರ್ಮಾಣ ಮಾಡುವುದು ಅಗತ್ಯವಾಗಿದೆ.

 ಇಲ್ಲಿ ಅನಗತ್ಯವಾಗಿ ತೊಂದರೆ ಕೊಡುತ್ತಿದ್ದ ಒಂದು ಗುಂಪು ಇತ್ತು, ದೇವರು ಅವರಿಗೆಲ್ಲಾ ಒಳ್ಳೆಯ ಬುದ್ದಿಕೊಡಲಿ, ಗ್ರಾಮೀಣ ಪ್ರದೇಶಗಳ ಬಡ ವಿದ್ಯಾರ್ಥಿನಿಯರೇ ಹೆಚ್ಚು ಇರುವ ಕಾಲೇಜು ಒಂದು ತರಹ ಅನಾಥವಾಗಿತ್ತು.

 ಸಾಧ್ಯವೇ ಇಲ್ಲ ಎನ್ನುತ್ತಿದ್ದವರಿಗೆ ಪ್ರಯತ್ನ ಬಿದ್ದರೆ ಎಲ್ಲವೂ ಸಾಧ್ಯಾ ಎಂಬ ಸಂದೇಶವನ್ನು ಶಾಸಕರು ಸಾಧಿಸಿ ತೋರಿಸಿದ್ದಾರೆ. ಭವಿಷ್ಯದ ಹಿತದೃಷ್ಟಿಯಿಂದ ನಗರದ ಹೊರವಲಯದಲ್ಲಿ ಸುಮಾರು 10 ಎಕರೆ ಸರ್ಕಾರಿ ಜಾಗವನ್ನು ಗುರುತಿಸಿ ಮಂಜೂರು ಮಾಡಿಸಿಕೊಳ್ಳುವುದು ಉತ್ತಮ.

ಅಭಿನಂದನೆ:- ನಿವೇಶನ ಮಂಜೂರಾತಿಗೆ ಶ್ರಮಿಸಿದ ಶಾಸಕರಾದ ಶ್ರೀ ಜಿ.ಬಿ. ಜ್ಯೋತಿಗಣೇಶ್, ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಮತ್ತು ಸಹಕರಿಸಿದ ಎಲ್ಲರಿಗೂ ವಿದ್ಯಾರ್ಥಿನಿಯರ ಪರವಾಗಿ ಅಬಿನಂದನೆಗಳನ್ನು ಕುಮಾರಿ ಭವ್ಯಾ ತಿಳಿಸಿದ್ದಾರೆ.