22nd December 2024
Share

TUMAKURU:SHAKTHI PEETA FOUNDATIN

ತುಮಕೂರಿನ ಶಕ್ತಿಪೀಠ ಫೌಂಡೇಷನ್ ತಾನು ಪ್ರತಿಪಾದಿಸಲು ಹೊರಟಿರುವ ‘ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿಪೀಠ’ ಗಳ ಯೋಜನೆಗಳ ಬಗ್ಗೆ ಮಾದರಿ ಫೈಲಟ್’ ಯೋಜನೆಗಳ ಜಾರಿಗೆ ಸ್ವತಃ ಟ್ರಸ್ಟ್ ವತಿಯಿಂದ ಆಸಕ್ತರ ಸಹಭಾಗಿತ್ವದಲ್ಲಿ 9 ಬೃಹತ್ ಯೋಜನೆಗಳನ್ನು ’ಪಿಪಿಪಿ’ ಮಾದರಿಯಲ್ಲಿ ಆರಂಭಿಸಲು ಮುಂದಾಗಿದೆ ಸರ್ಕಾರಗಳಿಗೆ ಪ್ರಸ್ತಾವನೆ ಸಲ್ಲಿಸುವ ಮುನ್ನ ತಮ್ಮ ಅಭಿಪ್ರಾಯ ಸಲಹೆಗಳಿಗೆ ಮನವಿ.

1.ಕುಂದರನಹಳ್ಳಿ: ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ನಿಟ್ಟೂರು ಹೋಬಳಿ, ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದರನಹಳ್ಳಿ ನನ್ನ ಜನ್ಮ ನೀಡಿದ ಗ್ರಾಮವಾದ್ದರಿಂದ 1980 ರಿಂದ ಕಾರ್ಯನಿರ್ವಹಿಸುತ್ತಿರುವುದರಿಂದ ಹಾಗೂ 5 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯನ್ನು ಈಗಾಗಲೇ ಹೆಚ್.ಎ.ಎಲ್ ಸ್ಮಾರ್ಟ್ ವಿಲೇಜ್, ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಆಯ್ಕೆ ಮಾಡಿದ್ದು ಸುಮಾರು 71 ಗ್ರಾಮಗಳ ಸಮಗ್ರ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳನ್ನು ಅಭಿವೃದ್ಧಿ ಪಡಿಸುವುದು. (ಒಂದು ಸ್ಮಾರ್ಟ್ ವೀಲೇಜ್  ಸಮಗ್ರ ಅಭಿವೃದ್ಧಿ)

ಕಚೇರಿ: ಸರ್ಕಾರಿ ಅಥವಾ ಪಾವಗಡ ಮಾದರಿ ರೈತರಿಂದ ಬಾಡಿಗೆ ಅಥವಾ ಟ್ರಸ್ಟ್

2.ತುಮಕೂರುನಗರ: ತುಮಕೂರು ನಗರದಲ್ಲಿ ನಮ್ಮ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕಚೇರಿ 2001 ರಿಂದ ಕಾರ್ಯನಿರ್ವಹಿಸುತ್ತಿರುವುದರಿಂದ ಹಾಗೂ ತುಮಕೂರು ನಗರ ಸ್ಮಾರ್ಟ್ ಸಿಟಿ ಯಾಗಿರುವುದರಿಂದ ಸಮಗ್ರ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳನ್ನು ಅಭಿವೃದ್ಧಿ ಪಡಿಸುವುದು. (ಒಂದು ಸ್ಮಾರ್ಟ್ ಸಿಟಿ ಸಮಗ್ರ ಅಭಿವೃದ್ಧಿ)

ಕಚೇರಿ:-ಸರ್ಕಾರಿ ಅಥವಾ ಪಾವಗಡ ಮಾದರಿ ರೈತರಿಂದ ಬಾಡಿಗೆ ಅಥವಾ ಟ್ರಸ್ಟ್

3.ಬಗ್ಗನಡು ಕ್ಯಾಂಪಸ್: ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಕೆ.ಆರ್.ಹಳ್ಳಿ ಗ್ರಾಮ ಪಂಚಾಯಿತಿ, ವಡ್ಡನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಬಗ್ಗನಡು ಕಾವಲ್‌ನಲ್ಲಿ ನಮ್ಮ ಟ್ರಸ್ಟ್ ವತಿಯಿಂದ ಬಹುಪಯೋಗಿ ಕ್ಯಾಂಪಸ್ ಆರಂಭಿಸಿರುವುದರಿಂದ ಗ್ರಾಮದಲ್ಲಿ ವಾಸವಿರುವ ಜಾತಿಗೆ ಕನಿಷ್ಟ ಒಬ್ಬರಂತೆ 5 ಜನ ರೈತರ ಜಮೀನೀನ ಸಮಗ್ರ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳನ್ನು ಅಭಿವೃದ್ಧಿ ಪಡಿಸುವುದು. (ಒಂದು ಸ್ಮಾರ್ಟ್ ಕ್ಯಾಂಪಸ್  ಸಮಗ್ರ ಅಭಿವೃದ್ಧಿ)

ಕಚೇರಿ: ಸರ್ಕಾರಿ ಅಥವಾ ಪಾವಗಡ ಮಾದರಿ ರೈತರಿಂದ ಬಾಡಿಗೆ ಅಥವಾ ಟ್ರಸ್ಟ್

4.ಬೆಂಗಳೂರು: ನೀರಾವರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಸಮನ್ವಯ ಸಾಧಿಸಲು ಕಚೇರಿ ಅಗತ್ಯವಾಗಿರುವದರಿಂದ ತುಮಕೂರು ನಗರದ ಶಾಸಕರ ಕಚೇರಿ ಅಥವಾ ಸರ್ಕಾರಿ ಅಥವಾ ಬಾಡಿಗೆ ಪಡೆದು ಕಾರ್ಯ ನಿರ್ವಹಿಸಲಾಗುವುದು.

5.ದೆಹಲಿ: ನೀರಾವರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಸಮನ್ವಯ ಸಾಧಿಸಲು ಕಚೇರಿ ಅಗತ್ಯವಾಗಿರುವದರಿಂದ ತುಮಕೂರು ಲೋಕಸಭಾ ಸದಸ್ಯರ ವಸತಿ ಅಥವಾ ಸರ್ಕಾರಿ ಅಥವಾ ಬಾಡಿಗೆ

6.ವಜ್ರ: ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ತೀರ್ಥಪುರ ಗ್ರಾಮ ಪಂಚಾಯಿತಿಯ, ಎರೆಕಟ್ಟೆ ಗ್ರಾಮದಲ್ಲಿರುವ ಶ್ರೀ ತೀರ್ಥ ರಾಮೇಶ್ವರ ವಜ್ರದಲ್ಲಿನ ಸರ್ಕಾರಿ ಜಮೀನಿನ ಸಮಗ್ರ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳನ್ನು ಅಭಿವೃದ್ಧಿ ಪಡಿಸುವುದು. (ಒಂದು ಪ್ರವಾಸಿ ಕೇಂದ್ರದ ಸಮಗ್ರ ಅಭಿವೃದ್ಧಿ)

ಕಚೇರಿ: ಮುಜರಾಯಿ ದೇವಾಲಯ ಅಥವಾ ಸರ್ಕಾರಿ ಅಥವಾ ಪಾವಗಡ ಮಾದರಿ ರೈತರಿಂದ ಬಾಡಿಗೆ ಅಥವಾ ಟ್ರಸ್ಟ್

7.ವಿಶ್ವ ಸಂಸ್ಥೆ: ನೀರಾವರಿಗೆ ಸಂಬಂಧಿಸಿದ ಎಲ್ಲಾ ಯೋಜನೆಗಳ ಅಧ್ಯಯನ ಮಾಡಲು ಒಂದು ಕಚೇರಿ ಅಗತ್ಯವಾಗಿರುವುದರಿಂದ

ಕಚೇರಿ:ಸರ್ಕಾರಿ ಅಥವಾ ಬಾಡಿಗೆ ಅಥವಾ ಟ್ರಸ್ಟ್

8.340 ಜನ ಚುನಾಯಿತ ಜನ ಪ್ರತಿನಿದಿಗಳ ದತ್ತು : ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಒಂದೊಂದು ಬಹುಪಯೋಗಿ ಕ್ಯಾಂಪಸ್’ ನಿರ್ಮಿಸುವುದು ಭವಿಷ್ಯದ ದೃಷ್ಟಿಯಿಂದ ಅಗತ್ಯವಾಗಿದೆ. ಪ್ರಸ್ತುತ ರಾಜ್ಯದ 225 ವಿಧಾನಸಭಾ ಸದಸ್ಯರು, 75 ಜನ ವಿಧಾನಪರಿಷತ್ ಸದಸ್ಯರು, 28 ಜನ ಲೋಕಸಭಾ ಸದಸ್ಯರು ಮತ್ತು 12 ಜನ ರಾಜ್ಯಸಭಾ ಸದಸ್ಯರು ಸೇರಿದಂತೆ 340 ಜನ ಚುನಾಯಿತ ಜನಪ್ರತಿನಿಧಿಗಳು ಸಹ ಗಂಭೀರವಾಗಿ ತೆಗೆದುಕೊಳ್ಳಬೇಕು. ಕನಿಷ್ಟ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಹಾಗೂ ಅಗತ್ಯವಿರುವಕಡೆ ಇನ್ನೂ ಹೆಚ್ಚಿಗೆ ಕಡೆ ಅಂದರೆ 340 ಜನರು ಒಂದೊಂದು ಕಡೆ ನಿರ್ಮಾಣ ಮಾಡಲು ಹೊಣೆಗಾರಿಕೆ / ದತ್ತು ಪಡೆದು’ ಅವರು ಸೂಚಿಸುವ ವ್ಯಾಪ್ತಿಯಲ್ಲಿ ಅಗತ್ಯ ಕ್ರಮಕೈಗೊಂಡು ಸಮರೋಪಾದಿಯಲ್ಲಿ ಪೂರ್ಣಗೊಳಿಸುವುದು ಅನಿವಾರ್ಯವಾಗಿದೆ. ಆದ್ದರಿಂದ ಈ ಕ್ಯಾಂಪಸ್‌ಗೆ ಆಯ್ಕೆಯಾಗುವ ಗ್ರಾಮಪಂಚಾಯಿತಿ ಅಥವಾ ನಗರ ಪ್ರದೇಶಗಳಲ್ಲಿ ಬಡಾವಾಣೆ ಆಯ್ಕೆ ಮಾಡಿಕೊಂಡು ಸಮಗ್ರ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳನ್ನು ಅಭಿವೃದ್ಧಿ ಪಡಿಸುವುದು. (ಚುನಾಯಿತ ಜನಪ್ರತಿನಿಧಿಗಳ ದತ್ತು ಯೋಜನೆ)

ಬಹುಪಯೋಗಿ ಕ್ಯಾಂಪಸ್‌ನಲ್ಲಿ ಮಾಡಬಹುದಾದ ಯೋಜನೆಗಳು

ಕೇಂದ್ರ ಸರ್ಕಾರದ 2020-21 ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿರುವ ಯೋಜನೆಗಳ ಜಾರಿ.

ಮಾನ್ಯ ಪ್ರಧಾನ ಮಂತ್ರಿಯವರ ಕೋವಿಡ್ ವಿಶೇಷ ಪ್ಯಾಕೇಜ್ ರೂ 20 ಲಕ್ಷ ಕೋಟಿ ಯೋಜನೆ.

ಇವೆಲ್ಲಾ ಕೇಂದ್ರ ಸರ್ಕಾರದ ಯೋಜನೆಗಳಾಗಿರುವುದರಿಂದ ಕೇಂದ್ರದಿಂದ ಹೆಚ್ಚಿಗೆ ಅನುದಾನ ಪಡೆಯಬಹುದು. 

1.ಡಿಸ್ಟ್ರಿಕ್-1 ಪ್ರಾಡಕ್ಟ್-1  :- ರಾಜ್ಯದ 30 ಜಿಲ್ಲೆಗಳಲ್ಲೂ ಒಂದು ಎಸ್.ಇ.ಝಡ್/ಮೆಗಾ ಪಾರ್ಕ್

2.ಡಿಸ್ಟ್ರಿಕ್-1 ಮೆಡಿಕಲ್ ಕಾಲೇಜ್-1

3.ಡಿಸ್ಟ್ರಿಕ್-1 ರಫ್ತು ಹಬ್-1  :- ರಾಜ್ಯದ 30 ಜಿಲ್ಲೆಗಳಲ್ಲೂ ಒಂದೊಂದು ಕಡೆ ಅಥವಾ ವಿಧಾನಸಭಾ ಕ್ಷೇತ್ರಕ್ಕೊಂದು ರಫ್ತು ಹಬ್-1 

4.ವಿಧಾನಸಭಾ ಕ್ಷೇತ್ರಕ್ಕೊಂದು ಡೇಟಾ ಪಾರ್ಕ್:- ಆಯಾ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಡೇಟಾ.

5.ವಿಧಾನಸಭಾ ಕ್ಷೇತ್ರಕ್ಕೊಂದು ಗೋಡಾನ್ :- ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಬೆಳೆಯುವ ಬೆಳೆ – ಸಂಗ್ರಹ ಮಾಡವಂತಹ ಬೃಹತ್ ಮಟ್ಟದಲ್ಲಿರಬೇಕು.

6.ವಿಧಾನಸಭಾ ಕ್ಷೇತ್ರಕ್ಕೊಂದು ಕೋಲ್ಡ್ ಸ್ಟೋರೇಜ್:- ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಬೆಳೆಯುವ ಬೆಳೆ – ಸಂಗ್ರಹ ಮಾಡವಂತಹ ಬೃಹತ್ ಮಟ್ಟದಲ್ಲಿರಬೇಕು.

7.ವಿಧಾನಸಭಾ ಕ್ಷೇತ್ರಕ್ಕೊಂದು ಸ್ಮಾರ್ಟ್ ಎಕನಾಮಿಕ್ಸ್ ಸಿಟಿ/ವಿಲೇಜ್.

8.ವಿಧಾನಸಭಾ ಕ್ಷೇತ್ರಕ್ಕೊಂದು ಪ್ರಾಡಕ್ಟ್ ವೈಸ್ ಕ್ಲಸ್ಟರ್:- ಪುದುಚೇರಿಯ ಏರೋವೆಲ್ಲಿ ಮಾಡೆಲ್

9.ನಿರ್ಧಿಷ್ಠ ಬೆಳೆ ಕ್ಲಸ್ಟರ್.   :- ಒಂದೇ ಕಡೆ ಈ ಬಹುಯೋಗಿ ಕ್ಯಾಂಪಸ್ ಸುತ್ತ-ಮುತ್ತ ವಿರುವ ಕನಿಷ್ಠ 5 ಗ್ರಾಮ ಪಂಚಾಯಿತಿಗಳಲ್ಲಿ ಒಂದು ಬೆಳೆ ಕ್ಲಸ್ಟರ್.

ರಾಜ್ಯ ಸರ್ಕಾರದ 2020-21 ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿರುವ ಯೋಜನೆಗಳ ಜಾರಿ.

  1. ಗ್ರಾಮ-1 ಮತ್ತು ಜಲಗ್ರಾಮ ಕ್ಯಾಲೆಂಡರ್ ಯೋಜನೆ ಅನುಷ್ಠಾನ
  2. ರಾಜ್ಯದಲ್ಲಿನ ಅತಿವೃಷ್ಟಿ ಅಥವಾ ಅನಾವೃಷ್ಟಿ ಸಮಯದ ಬಳಕೆಗಾಗಿ
  3. ವಿಧಾನಸಭಾ ಕ್ಷೇತ್ರಕ್ಕೊಂದು ಹೆಲ್ತ್ ಹಬ್ (ಹೈಟೆಕ್ ಆಸ್ಪತ್ರೆ.).
  4. ವಿಧಾನಸಭಾ ಕ್ಷೇತ್ರಕ್ಕೊಂದು ಧರ್ಮಛತ್ರ.
  5. ವಿಧಾನಸಭಾ ಕ್ಷೇತ್ರಕ್ಕೊಂದು ಗೋಶಾಲೆ.
  6. ವಿಧಾನಸಭಾ ಕ್ಷೇತ್ರಕ್ಕೊಂದು ಆಯುಷ್ ರೆಸಾರ್ಟ್.
  7. ವಿಧಾನಸಭಾ ಕ್ಷೇತ್ರಕ್ಕೊಂದು ಸಂಪನ್ಮೂಲ ಕೇಂದ್ರ ಕ್ಯಾಂಪಸ್.
  8. ವಿಧಾನಸಭಾ ಕ್ಷೇತ್ರಕ್ಕೊಂದು ಗುರುಕುಲ.
  9. ವಿಧಾನಸಭಾ ಕ್ಷೇತ್ರಕ್ಕೊಂದು ಸ್ಕಿಲ್ ಸಿಟಿ.

ವಿಧಾನಸಭಾ ಕ್ಷೇತ್ರಕ್ಕೊಂದು ಸಿ.ಎಸ್.ಆರ್ ಫಂಡ್ ಬಳಸುವ ಕ್ಯಾಂಪಸ್ ಆಗಲೂ ಬಹುದು.

9. ವಾಣಿ ವಿಲಾಸ ಡ್ಯಾಂ: ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಡ್ಯಾಂ’ ವ್ಯಾಪ್ತಿಯ ಜಲಾನಯನ ಮತ್ತು ಅಚ್ಚುಕಟ್ಟು ಪ್ರದೇಶದ ಸಮಗ್ರ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳನ್ನು ಅಭಿವೃದ್ಧಿ ಪಡಿಸುವುದು. (ಒಂದು ಡ್ಯಾಂನ ಸಮಗ್ರ ಅಭಿವೃದ್ಧಿ)

ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ 9 ದೀಪಗಳಿಗೆ, ನವದುರ್ಗೆಯರಿಗೆ, ನವಗ್ರಹಗಳಿಗೆ ಒಂದೊಂದು ಯೋಜನೆ ಸಮರ್ಪಣೆಗೆ ಚಿಂತನೆ’

ವಿಶ್ವದ 108 ಶಕ್ತಿದೇವತೆಗಳ ಆಶೀರ್ವಾದವೇ ಪರಿಕಲ್ಪನೆಗೆ ಸ್ಪೂರ್ತಿ’