22nd December 2024
Share

TUMAKURU:SHAKTHIPEETA FOUNDATION

ತುಮಕೂರಿನ ಶಕ್ತಿಪೀಠ ಫೌಂಡೇಷನ್ ಮೊದಲನೇ ಹಂತದಲ್ಲಿ 18 ಯೋಜನೆಗಳ ಬಗ್ಗೆ ಅಧ್ಯಯನ ಮಾಡಲು ನಿರ್ಣಯಿಸಿದೆ. ಪ್ರಾಯೋಗಿಕವಾಗಿ, ತುಮಕೂರು ನಗರ, ತುಮಕೂರು ಜಿಲ್ಲೆ, ಕರ್ನಾಟಕ ರಾಜ್ಯ, ಭಾರತ ದೇಶ ಮತ್ತು ವಿಶ್ವ ಮಟ್ಟದ ಕೆಳಕಂಡ ಯೋಜನೆಗಳ ಅಧ್ಯಯನ ಮಾಡಲು ಆಸಕ್ತಿ ಇರುವ ವ್ಯಕ್ತಿ, ವಿದ್ಯಾರ್ಥಿ, ಶಿಕ್ಷಣ ಸಂಸ್ಥೆ, ಎಲ್ಲಾ ವಿಧವಾದ ಸಂಘ ಸಂಸ್ಥೆಗಳು ನೊಂದಾಯಿಸಿಕೊಳ್ಳಲು ಮನವಿ. ಅಧ್ಯಯನ ಮಾಡುವವರಿಗೆ ಎಲ್ಲಾ ವಿಧವಾದ ಅಗತ್ಯ ನೆರವು ದೊರಕಿಸುವ ಕಾಮನ್ ಸ್ಪೆಸಿಲಿಟಿ ವೇದಿಕೆಯಾಗಿ ಶಕ್ತಿಪೀಠ ಫೌಂಡೇಷನ್ ಕಾರ್ಯ ನಿರ್ವಹಿಸಲಿದೆ.

 ಕೇಂದ್ರ ಸರ್ಕಾರ 2020-2021 ನೇ ಸಾಲಿನ ಆಯವ್ಯಯದಲ್ಲಿ ಪ್ರಕಟಿಸಿರುವ ಡೇಟಾ ಪಾರ್ಕ್ ಯೋಜನೆಯಡಿಯಲ್ಲಿ ಪಿಪಿಪಿ ಮಾದರಿಯಲ್ಲಿ ಒಂದೊಂದು ಯೋಜನೆಗೂ ಪ್ರತ್ಯೇಕವಾಗಿ ಪ್ರಸ್ತಾವನೆಯೊಂದಿಗೆ ಮನವಿ ಸಲ್ಲಿಸಲು ಕೋರಿದೆ.

ಈ ಕೆಳಕಂಡ ವಿಷಯಗಳನ್ನು ಹೊರತುಪಡಿಸಿ ಬೇರೆ ವಿಷಯಗಳ ಬಗ್ಗೆ ಅಧ್ಯಯನ ಮಾಡಲು ಆಸಕ್ತಿ ಇರುವವರು ನೊಂದಾಯಿಸಿಕೊಳ್ಳಲು ಮನವಿ.

  1. ಶಕ್ತಿಪೀಠಗಳು – ವಿಶ್ವ
  2. ದಿಶಾ – ಭಾರತ ದೇಶ
  3. ನದಿ ಜೋಡಣೆ – ಭಾರತ ದೇಶ
  4. ಸಂಸದರ ಆದರ್ಶ ಗ್ರಾಮ – ಕರ್ನಾಟಕ ರಾಜ್ಯ
  5. ರೈಲ್ವೇ – ಕರ್ನಾಟಕ ರಾಜ್ಯ
  6. ಹೈವೆ – ಕರ್ನಾಟಕ ರಾಜ್ಯ
  7. 342 ಚುನಾಯಿತ ಮತ್ತು ನಾಮ ನಿರ್ಧೇಶನ ಸದಸ್ಯರು – ಕರ್ನಾಟಕ ರಾಜ್ಯ
  8. 342 ಬಹುಪಯೋಗಿ ಕ್ಯಾಂಪಸ್ – ಕರ್ನಾಟಕ ರಾಜ್ಯ
  9. ಜಿಲ್ಲಾವಾರು ಸಂಪನ್ಮೂಲ ಕೇಂದ್ರ – ಕರ್ನಾಟಕ ರಾಜ್ಯ
  10. ವಿಶ್ವ ವಿದ್ಯಾನಿಲಯಗಳಲ್ಲಿರುವ ಅಧ್ಯಯನ ಕೇಂದ್ರಗಳು – ಕರ್ನಾಟಕ ರಾಜ್ಯ
  11. ಎಐಸಿಟಿ ಮಾರ್ಗದರ್ಶಿ ಆಕ್ಟಿವಿಟಿ ಪಾಯಿಂಟ್ಸ್ – ತುಮಕೂರು ಜಿಲ್ಲೆ
  12. ಡೇಟಾ-1 ತುಮಕೂರು -1  – ತುಮಕೂರು ಜಿಲ್ಲೆ
  13. ಕುಡಿಯುವ ನೀರು –  ತುಮಕೂರು ಜಿಲ್ಲೆ
  14. ಜಲಸಂಗ್ರಹಾಗಾರಗಳು – ತುಮಕೂರು ಜಿಲ್ಲೆ
  15. ಸರ್ಕಾರಿ ಕಟ್ಟಡಗಳು – ತುಮಕೂರು ಜಿಲ್ಲೆ
  16. ವಸತಿ – ತುಮಕೂರು ಜಿಲ್ಲೆ
  17. ಹೂಡಿಕೆ ದಾರರ ಸಮಾವೇಶ – ತುಮಕೂರು ಜಿಲ್ಲೆ
  18. ಮಳೆ ನೀರಿನ ಚರಂಡಿಗಳು – ತುಮಕೂರು ನಗರ