TUMAKURU:SHAKTHIPEETA FOUNDATION
ತುಮಕೂರು ಜಿಲ್ಲಾ ದಿಶಾ ಸಮಿತಿಯು ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಮೂಲಕ ತುಮಕೂರು ಜಿಐಎಸ್ ಪೋರ್ಟಲ್ ಮಾಡಿ ಜಿಲ್ಲೆಯ ಎಲ್ಲಾ ಇಲಾಖೆಗಳ ಮಾಹಿತಿಗಳನ್ನು ಡಿಜಿಟಲ್ ಮಾಡಲು ಚಾಲನೆ ನೀಡಿದೆ. ದಿನಾಂಕ:30.06.2020 ರಂದು ನಡೆದ ದಿಶಾ ಸಮಿತಿ ಸಭೆಯಲ್ಲಿ 2050 ರ ವೇಳೆಗೆ ತುಮಕೂರಿನಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಎಲ್ಲಾ ಯೋಜನೆಗಳನ್ನು ಇನ್‌ವೆಸ್ಟ್ ತುಮಕೂರು ಯೋಜನೆಯಡಿ ಜಿಐಎಸ್ ಲೇಯರ್ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.
ದಿನಾಂಕ:21.09.2019 ರಂದು ನಡೆದ ದಿಶಾ ಸಮಿತಿ ಸಭೆಯಿಂದ ಆರಂಭಿಸಿ ಇದೂವರೆಗೂ ಚರ್ಚಿಸಿರುವ ಮತ್ತು ಮುಂದೆ ಪ್ರತಿಯೊಂದು ಸಭೆಯಲ್ಲಿ ಚರ್ಚಿಸುವ ಎಲ್ಲಾ ಯೋಜನೆಗಳನ್ನು ಡಿಜಿಟೈಲೈಸ್ ಮಾಡಲು ಮತ್ತು ಈಗಾಗಲೇ ನಿರ್ಣಯ ಕೈಗೊಂಡಿರುವಂತೆ ’ತುಮಕೂರು-1 ಡೇಟಾ-1 ಮತ್ತು ತುಮಕೂರು-1 ಮ್ಯಾಪ್-1’ ಯೋಜನೆಯಡಿಯಲ್ಲಿ ಎಲ್ಲಾ ಮಾಹಿತಿಗಳನ್ನು ಒಂದೇ ಕಡೆ ಕ್ರೋಢೀಕರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಗುರುಪೂರ್ಣಿಮಾ ದಿವಸ(05.06.2020) ಭಾನುವಾರ ಲಾಕ್‌ಡೌನ್ ಮಾಡಿದ್ದರಿಂದ ಈ ದಿವಸ ತುಮಕೂರು ಜಿಲ್ಲೆಯಲ್ಲಿರುವ ಎಲ್ಲಾ ಇಲಾಖೆಗಳಿಗೂ ಮೊದಲ ಹಂತದಲ್ಲಿ ಯಾವ ಯಾವ ಜಿಐಎಸ್ ಲೇಯರ್ ಮಾಡಬೇಕು ಎಂಬ ಬಗ್ಗೆ ಇಲಾಖಾವಾರು ಮತ್ತು ಯೋಜನಾವಾರು ಮಾಹಿತಿ ಸಂಗ್ರಹಿಸುವ ಪಟ್ಟಿ ಸಿದ್ಧಪಡಿಸಲು ಸಂಕಲ್ಪ ಮಾಡಿ ಡ್ರಾಪ್ಟ್ ಪಟ್ಟಿಯನ್ನು ಸುಮಾರು 1.30 ಕ್ಕೆ ಅಂತಿಮಗೊಳಿಸಲಾಯಿತು.
2.01 ನಿಮಿಷಕ್ಕೆ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಸೋಶಿಯಲ್ ಮೀಡಿಯಾ ಮೂಲಕ ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾದ ಶ್ರೀ ನರೇಂದ್ರಸಿಂಗ್ ತೋಮರ್‌ರವರು ದಿನಾಂಕ:23.06.2020 ರಂದು ತುಮಕೂರಿನ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರಿಗೆ ಬರೆದಿರುವ ಈ ಪತ್ರವನ್ನು ಕಳುಹಿಸಿದರು.
ದಿಶಾ ಸಮಿತಿ ’ತುಮಕೂರು ಜಿಲ್ಲೆಯನ್ನು ಡೇಟಾ ಜಿಲ್ಲೆ’ ಯಾಗಿ ಮತ್ತು ತುಮಕೂರು ಸ್ಮಾರ್ಟ್ ಸಿಟಿಯನ್ನು ’ಡೇಟಾ ಸಿಟಿ’ ಯಾಗಿ ಘೋಶಿಸಲು ಅವಿರತವಾಗಿ ಶ್ರಮಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸಚಿವರ ಈ ಪತ್ರ ಅಧಿಕಾರಿಗಳಿಗೆ ಇನ್ನೂ ಹೆಚ್ಚಿನ ಸ್ಪೂರ್ತಿ ಬರಲಿದೆ.
ಡ್ರಾಪ್ಟ್ ಪಟ್ಟಿಯನ್ನು ದಿಶಾ ಸಮಿತಿಯ ಸದಸ್ಯರಾದ ಶ್ರೀ ಟಿ.ಆರ್.ರಘೋತ್ತಮರಾವ್‌ರವರಿಗೆ ಕಳುಹಿಸಿದ್ದು ಅವರ ಸಲಹೆಗಳ ನಂತರ, ಶ್ರೀ ಜಿ.ಎಸ್.ಬಸವರಾಜ್‌ರವರು ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಿಗೆ ಕಳುಹಿಸಿ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿಲಿದ್ದಾರೆ. ಅವರು ಮತ್ತು ಜಿಲ್ಲಾಧಿಕಾರಿಗಳು ಪರಿಶೀಲಿಸಿ ಎಲ್ಲಾ ಇಲಾಖೆಗಳಿಗೂ ಸುತ್ತೋಲೆ ಕಳುಹಿಸುವ ಮೂಲಕ ಕಾಲಮಿತಿ ನಿಗದಿಗೊಳಿಸಿ ಮಾಹಿತಿ ಅಫ್ ಡೇಟ್ ಮಾಡುವ ಮೊದಲನೇ ಹಂತದ ಯೋಜನೆಗೆ ಚಾಲನೆ ದೊರೆಯಲಿದೆ.
ತಾವು ನೀಡುವ ಸಲಹೆಗಳನ್ನು ಸೇರ್ಪಡೆ ಮಾಡಲಾಗುವುದು ಆಸಕ್ತರು ಸಲಹೆ ನೀಡಲು ಮನವಿ.