22nd December 2024
Share

TUMAKURU: SHAKTHIPEETA FOUNDATION

ನೂತನವಾಗಿ ತುಮಕೂರು ಮಹಾನಗರಪಾಲಿಕೆಗೆ ಆಯುಕ್ತರಾಗಿ ಬಂದಿರುವ ಶ್ರೀಮತಿ ರೇಣುಕರವರು ದಿನಾಂಕ:04.07.2020 ರಂದು ಅಧಿಕಾರ ಸ್ವೀಕಾರ ಮಾಡಿರಬಹುದು. ಅವರು ದಿನಾಂಕ:09.07.2020 ರಂದು ಕಚೇರಿಯ ಅಧಿಕೃತ ಜ್ಞಾಪನ ಪತ್ರ ಹೊರಡಿಸಿ ತುಮಕೂರು ಸ್ಮಾರ್ಟ್ ಸಿಟಿ ಕೈಗೊಂಡಿರುವ ಜಿಐಎಸ್ ಲೇಯರ್‌ಗಳಿಗೆ ಮಾಹಿತಿ ನೀಡಲು ಪಾಲಿಕೆಯ ವ್ಯಾಪ್ತಿಯ 35 ವಾರ್ಡ್‌ಗಳ ಎಲ್ಲಾ ಹಂತದ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳಿಗೆ ಆದೇಶ ನೀಡಿದ್ದಾರೆ.

 ಜೊತೆಗೆ ತುಮಕೂರು ಸ್ಮಾರ್ಟ್ ಸಿಟಿ ಮತ್ತು ಪಾಲಿಕೆಯ ನಾಲ್ಕು ಜನರಿಗೆ ಎಲ್ಲಾ ವಾರ್ಡ್‌ಗಳ, ಇಲಾಖೆಗಳ ಮಾಹಿತಿ ಕ್ರೋಡೀಕರಿಸಲು  ಹೊಣೆಗಾರಿಕೆ ನೀಡಿದ್ದಾರೆ. ಇವರ ಜೊತೆಗೆ ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ಸೇರ್ಪಡೆ ಮಾಡುವುದು ಅಗತ್ಯವಾಗಿದೆ.

ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಮತ್ತು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು  ತುಮಕೂರು ಸ್ಮಾರ್ಟ್ ಸಿಟಿಯನ್ನು ‘ಡೇಟಾ ಸಿಟಿ’ ಮಾಡಲು ಸೂಚಿಸಿದ ಹಿನ್ನಲೆಯಲ್ಲಿ ಈ ಮಹತ್ತರವಾದ ಕಾರ್ಯ ಆರಂಭಿಸಿದ್ದಾರೆ ಪಾಲಿಕೆ ಆಯುಕ್ತರ ಕ್ರಮ ಸ್ವಾಗಾತಾರ್ಹ. 

 ಕಳೆದ ತುಮಕೂರು ಸ್ಮಾರ್ಟ್‌ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲ್ಲಿ ಯಾವುದೇ ಮೀಡಿಯಾಗಳಲ್ಲಿ ಯಾವುದೇ ಕಾಮಗಾರಿ ಬಗ್ಗೆ ಬರೆದರೆ ಸಮರ್ಪಕ ಉತ್ತರವನ್ನು ನೀಡಲು ನಿರ್ಣಯಿಸಲಾಗಿದೆ.

ಯೋಜನೆಯ ಮೇಲ್ವಿಚಾರಕರಾದ ಶ್ರೀ ಡಿ.ಅಶ್ವಿನ್‌ರವರು ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸುವರೇ?

1. ತುಮಕೂರು ಜಿಐಎಸ್‌ನಲ್ಲಿ ತುಮಕೂರು-1 ಮ್ಯಾಪ್-1 ಮಾಡುವುದರ ಮೂಲಕ ಎಲ್ಲಾ ಇಲಾಖೆಗಳ ಯೋಜನೆಗಳು ಒಂದೇ ನಕ್ಷೆಯಲ್ಲಿ ಬರಬೇಕಿದೆ. ಇನ್ನೂ ಮುಂದೆ ತುಮಕೂರು ನಗರದಲ್ಲಿ ಯಾವುದೇ ಇಲಾಖೆಯ, ಯಾವುದೇ ಕಾಮಗಾರಿ ನಡೆದರೂ ಇದೇ ನಕ್ಷೆಯಲ್ಲಿ ಡಿಜಿಟಲ್ ದಾಖಲೆಯಾಗಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರು ಎಲ್ಲಾ ಇಲಾಖೆಗಳಿಗೆ ಆದೇಶ ನೀಡಲು ಕಡತ ಸಲ್ಲಿಸಲು ಪ್ರತಿ ಶುಕ್ರವಾರ ನಡೆಯುವ ಸಭೆಯಲ್ಲಿ ಸೂಚಿಸಿದ್ದರು ಮುಂದೆ ಏನಾಯಿತು?

2.ತುಮಕೂರು  ಮಹಾನಗರ ಪಾಲಿಕೆಯಲ್ಲಿ 18 ಜನ ಬಿಲ್‌ಕಲೆಕ್ಟರ್ ಕಾರ್ಯನಿರ್ವಹಿಸುತ್ತಿದ್ದಾರೆ ಒಬ್ಬೊಬ್ಬ ಬಿಲ್ ಕಲೆಕ್ಟರ್ ವ್ಯಾಪ್ತಿಗೆ ಮೊದಲು ಯಾವ ವಿಧವಾದ ಎಷ್ಟೆಷ್ಟು ಸ್ವತ್ತುಗಳಿದ್ದವು? ಡ್ರೋಣ್ ಸಮೀಕ್ಷೆ ಮುಗಿದ ನಂತರ ಬಿಲ್ ಕಲೆಕ್ಟರ್‌ವಾರು ಯಾವ ವಿಧವಾದ ಎಷ್ಟೆಷ್ಟು ಸ್ವತ್ತುಗಳಿವೆ?

3.ತುಮಕೂರು ನಗರದಲ್ಲಿರುವ ಬಡಾವಾಣೆವಾರು ಯಾವ ವಿಧವಾದ, ಎಷ್ಟೆಷ್ಟು ಕೀಮೀ ರಸ್ತೆ ಯಾವ ಇಂಜಿನಿಯರ್‌ಗಳ ವ್ಯಾಪ್ತಿಗೆ ಬರಲಿದೆ ಜಿಐಎಸ್ ಲೇಯರ್‌ನೊಂದಿಗೆ ಮಾಹಿತಿ ನೀಡಿ.

4.ತುಮಕೂರು ನಗರದಲ್ಲಿ ಮೊದಲು ಎಷ್ಟು ಬಡಾವಾಣೆಗಳಿದ್ದವು? ಡ್ರೋಣ್ ಸಮೀಕ್ಷೆ ಮುಗಿದ ನಂತರ ಎಷ್ಟು ಬಡಾವಾಣೆಗಳಿವೆ ಜಿಐಎಸ್ ಲೇಯರ್‌ನೊಂದಿಗೆ ಮಾಹಿತಿ ನೀಡಿ.

5.ಪ್ರತಿ ಶುಕ್ರವಾರ ನಡೆಯುತ್ತಿದ್ದ ಸಭೆಯನ್ನು ಆನ್‌ಲೈನ್ ಮೂಲಕ ಮಾಡುವುದಾಗಿ ತಿಳಿಸಿದ್ದೀರಿ, ಎರಡುವಾರದಿಂದ ಸಭೆ ಏಕೆ ನಡೆದಿಲ್ಲ?

ಕುಂದರನಹಳ್ಳಿ ರಮೇಶ್.

ಸದಸ್ಯರು, ದಿಶಾ ತುಮಕೂರು ಜಿಲ್ಲೆ.

ಸದಸ್ಯರು, ತುಮಕೂರು ಸ್ಮಾರ್ಟ್‌ಸಿಟಿ ಅಡ್ವೈಸರಿ ಫೋರಂ