22nd November 2024
Share

ಜಿಐಎಸ್ ಲೇಯರ್ ಮಾಡಿ ಸಂಸದ ಜಿಎಸ್‌ಬಿ ಸಲಹೆ

TUMAKURU:SHAKTHIPEETA FOUNDATION

 ಕರ್ನಾಟಕ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ   ಕೋವಿಡ್ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಮತ್ತು ಬೂತ್ ಲೆವೆಲ್ ಟಾಸ್ಕ್ ಪೋರ್ಸ್ ರಚನೆಗೆ ಕಾಲಮಿತಿ ನಿಗದಿಗೊಳಿಸಿ ಕೈಗೊಂಡಿರುವ ಕ್ರಮ ಅತ್ಯಂತ ಸ್ವಾಗಾತಾರ್ಹ.

 ತುಮಕೂರು ಜಿಲ್ಲೆಯಲ್ಲಿರುವ ಎಲ್ಲಾ 11 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಮತ್ತು ಬೂತ್ ಮಟ್ಟದ ಸಮಿತಿಗಳನ್ನು ರಚಿಸಿ, ಜಿಐಎಸ್ ಲೇಯರ್ ಮಾಡಲು ಜಿಲ್ಲಾಡಳಿತಕ್ಕೆ ತುಮಕೂರು ಲೋಕಸಭಾ ಸದಸ್ಯ ಹಾಗೂ ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷರು ಆಗಿರುವ ಶ್ರೀ ಜಿ.ಎಸ್.ಬಸವರಾಜ್ ಸಲಹೆ ನೀಡಿದ್ದಾರೆ.

 ಯಾವುದೇ ನಗರದ ಬೂತ್ ಮತ್ತು ವಾರ್ಡ್ ಕ್ಲಿಕ್ ಮಾಡಿದ ತಕ್ಷಣ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ಮತ್ತು ವಿವಿಧ ಕಾಯಿಲೆಗಳ ರೋಗಿಗಳ ಸಂಖ್ಯೆಯೂ ದೊರೆಯಬೇಕು. ಇದರಿಂದ ನಗರಗಳ ಯಾವ ಪ್ರದೇಶಗಳಲ್ಲಿ ಯಾವ ರೀತಿಯ ರೋಗಗಳು ಬರಲು ಕಾರಣಗಳನ್ನು ಅನಾಲೀಸಿಸ್ ಮಾಡಲು ಅನೂಕೂಲವಾಗಲಿದೆ.

  ಯಾರು ಸಹ ಆಸ್ಪತ್ರೆಗಳಿಗೆ ಹುಡುಕಿಕೊಂಡು ಹೋಗುವ ಪ್ರಮೇಯವೇ ಬರುವುದಿಲ್ಲ, ಬೆರಳ ತುದಿಯಲ್ಲಿ ಎಲ್ಲಾ ಮಾಹಿತಿಯೂ ದೊರೆಯಲಿದೆ. ಮನೆ ಮನೆಯ ಪ್ರತಿಯೊಬ್ಬರ ಆರೋಗ್ಯದ ಮಾಹಿತಿಯನ್ನು ಸಮಿತಿಯ ಕಾರ್ಯಕರ್ತರು ಸಂಗ್ರಹಿಸಲಿದ್ದಾರೆ.

 ಲೇಯರ್‌ಗಳಲ್ಲಿ ಸಾರ್ವಜನಿಕರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸಿ, ಸಾರ್ವಜನಿಕರ ಅಭಿಪ್ರಾಯಗಳಿಗೆ ಉತ್ತರಿಸುವಾಗ ಬಹಳ ಎಚ್ಚರಿಕೆಯಿಂದ ಉನ್ನತ ಮಟ್ಟದ ಅಧಿಕಾರಿಗಳು ಮಾತ್ರ ಉತ್ತರಿಸುವುದು ಸೂಕ್ತವಾಗಿದೆ.

  ತುಮಕೂರು ಸ್ಮಾರ್ಟ್ ಸಿಟಿ ಮತ್ತು ತುಮಕೂರು ಜಿಐಎಸ್ ಈ ಬಗ್ಗೆ ಜಂಟಿಯಾಗಿ ಕಾರ್ಯನಿರ್ವಹಣೆ ಮಾಡುವುದು ಅಗತ್ಯವಾಗಿದೆ. ಯಾವ ನಗರ ಸ್ಥಳೀಯ ಸಂಸ್ಥೆಗಳು ಮೊದಲು ಸಮಿತಿಗಳನ್ನು ರಚಿಸಿ ಜಿಐಎಸ್ ಲೇಯರ್ ಮಾಡುತ್ತವೇಯೋ ಅವುಗಳನ್ನು ಮುಂದಿನ ದಿಶಾ ಸಮಿತಿಯಲ್ಲಿ ಗೌರವಿಸಲಾಗುವುದು. ವಿಳಂಭ ಮಾಡಿದ ಅಧಿಕಾರಿಗಳಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲು ಹಿಂಜರಿಯುವುದಿಲ್ಲಾ ಎಂದು ಎಚ್ಚರಿಸಿದ್ದಾರೆ.

  ಯಾವ ಸಮಿತಿಗಳು ಯಾವ ದಿನ ಸಭೆ ಮಾಡಿವೆ, ಎಷ್ಟು ಮನೆ ಸಮೀಕ್ಷೆ ಮಾಡಿವೆ ಹೀಗೆ ಪ್ರತಿಯೊಂದು ಡಿಜಿಟಲ್ ದಾಖಲೆ ದೊರೆಯಬೇಕು. ಸಮಿತಿಗಳು ಕಾಟಾಚಾರಕ್ಕೆ ಇರಬಾರದು ಈ ಸಮಿತಿಗಳ ಸೋಶಿಯಲ್ ಆಡಿಟ್ ಸಹ ನಡೆಸುವುದು ಸೂಕ್ತವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ನಾನು ದಿಶಾ ಸಮಿತಿಯ ಸಭೆಯಲ್ಲಿ ಅಭಿವೃದ್ಧಿ ಮಾಹಿತಿ ಸಂಗ್ರಹಿಸಲು ಈ ರೀತಿ ಸಮಿತಿ ರಚಿಸಲು ಸೂಚಿಸಿದ್ದೆ ಎಂದಿದ್ದಾರೆ.