22nd December 2024
Share

TUMAKURU:SHAKTHIPEETA FOUNDATIN

 ದಿನಾಂಕ:23.07.2020 ರಂದು ರಾತ್ರಿ ಬಿದ್ದ ಮಳೆಗೆ ಜಲಭಾರತದ ಕ್ಯಾಂಪಸ್‌ನಲ್ಲಿನ ಕೃತಕವಾಗಿ ನಿರ್ಮಿಸಿರುವ ಹಿಂದೂ ಮಹಾಸಾಗರ, ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಗಳಲ್ಲಿ ಮಳೆನೀರು ಸಂಗ್ರಹಿಸಲು ವಿಶ್ವೇಶ್ವರಯ್ಯ ಜಲ ನಿಗಮದವರು ಹೊಸದಾಗಿ ನಿರ್ಮಾಣ ಮಾಡಿರುವ ಪಿಕ್‌ಅಫ್ ಗಂಗಾಮಾತೆಯಿಂದ ತುಂಬಿ ಹರಿಯಿತು.

 ಗುರುವಾರ ಬೆಳಿಗ್ಗೆ ನೀರಿನಿಂದ ತುಂಬಿ ಕೋಡಿಹರಿಯುವ ವಿಷಯ ತಿಳಿಯುತ್ತಿದ್ದಂತೆ ಮುಖ್ಯ ಇಂಜಿನಿಯರ್ ಶ್ರೀ ರಾಘವೇಂದ್ರರವರು, ಉಪಮುಖ್ಯ ಇಂಜಿನಿಯರ್ ಶ್ರೀ ಹೆಚ್.ಬಿ.ಮಲ್ಲೇಶ್‌ರವರು,  ಎಕ್ಸಿಕ್ಯೂಟೀವ್ ಇಂಜನಿಯರ್ ಶ್ರೀ ಚಂದ್ರಹಾಸ್‌ರವರು,  ಸಹಾಯಕ ಎಕ್ಸಿಕ್ಯೂಟೀವ್ ಇಂಜಿನಿಯರ್ ಶ್ರೀ ವೀರಭಧ್ರಯ್ಯನವರು, ಸಹಾಯಕ ಇಂಜಿನಿಯರ್ ಶ್ರೀ ವೆಂಕಟೇಶ್‌ರವರು ಮತ್ತು ಗುತ್ತಿದಾರರಾದ ಶ್ರೀ ಎ.ಬಿ.ಚನ್ನಬಸಪ್ಪನವರಿಗೆ ಗಂಗಾ ಪೂಜೆ ಮಾಡುವ ವಿಷಯ ತಿಳಿಸಿದಾಗ ಬಹುತೇಕ ಎಲ್ಲರಿಗೂ ಆಶ್ಚರ್ಯ ಕಾದಿತ್ತು.

 ನಾನು ಮೊದಲು ಈ ಜಾಗದಲ್ಲಿ ಜಲಸಂಗ್ರಹಾಗಾರ ನಿರ್ಮಾಣ ಮಾಡುವುದಾಗಿ ತಿಳಿಸಿದಾಗ ಅಂದಿನ ಎಕ್ಸಿಕ್ಯೂಟೀವ್ ಇಂಜನಿಯರ್ ಶ್ರೀ ಶಿವಕುಮಾರ್‌ರವರು ಹೇಳಿದ ಮಾತು ಸಾರ್ ನಿಮ್ಮ ಐಡಿಯಾ ಉತ್ತಮವಾಗಿದೆ, ಆದರೇ ನೀವು ನಿರ್ಮಾಣ ಮಾಡುವ ಜಲಸಂಗ್ರಹಾಗಾರಕ್ಕೆ ವಾಣಿವಿಲಾಸ ಡ್ಯಾಂನಿಂದ ನೀರು ತುಂಬಿಸಲು ಇನ್ನೊಂದು ಯೋಜನೆ ಮಾಡಲೇಬೇಕು. ಮಳೆನೀರಿನಿಂದ ಈ ಉದ್ದೇಶಿತ ಜಲಸಂಗ್ರಹಾಗಾರ ತುಂಬುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದರು, ಅವರು ಹೇಳಲು ಕಾರಣವೂ ಇತ್ತು ಈ ಮೂಡ್ಲಹಳ್ಳ ಸಮತಟ್ಟಾಗಿತ್ತು, ಕರಾಬುಹಳ್ಳಗಳು ರೈತರ ಸ್ವಾರ್ಥದಿಂದ ಅತ್ಯಾಚಾರಕ್ಕೆ ಒಳಗಾಗಿ ಮುಚ್ಚಿ ಸಮತಟ್ಟು ಮಾಡಿರುವ  ದೃಶ್ಯ ಅವರ ಕಣ್ಣಿಗೆ ರಾಚಿದ್ದು.

  ಜಮೀನು ಕ್ರಯಮಾಡಿಕೊಳ್ಳುವ ಮೊದಲು ನಾನು ಮಾಡಿದ ಕೆಲಸ ಈ ಹಳ್ಳದ ವಾಟರ್ ಕ್ಯಾಚ್‌ಮೆಂಟ್ ಏರಿಯಾದ ವಿಸ್ಥೀರ್ಣ, ಹಳ್ಳದಲ್ಲಿ ನೀರು ಹರಿಯುವ ಸಾಮರ್ಥ್ಯದ ನಿಖರವಾದ ಮಾಹಿತಿ ಸಂಗ್ರಹಿಸಿದ್ದು. ಶ್ರೀ ಬಸವರಾಜ್ ಸುರಣಗಿ ಕರಾರುವಕ್ಕಾದ ಮಾಹಿತಿ ನೀಡಿದ್ದರು. ಇದನ್ನು ಶ್ರೀ ಹೆಚ್.ಬಿ.ಮಲ್ಲೇಶ್‌ರವರು ಮತ್ತು ಶ್ರೀ ಡಿ.ಎಸ್.ಹರೀಶ್‌ರವರು ಅನುಮೋದಿಸಿದ್ದರು.

  ಸುಮಾರು 30 ಎಕರೆ ವಿಸ್ಥೀರ್ಣದಲ್ಲಿರುವ ಕ್ಯಾಂಪಸ್‌ನಲ್ಲಿ ಮೊದಲು ಆರಂಭ ಮಾಡಿದ ಕೆಲಸ ಜಮೀನಿಗೆ ನೀರು ಬರುವ 7 ಕರಾಬುಹಳ್ಳಗಳನ್ನು ಗುರುತಿಸಿ ಇವುಗಳಿಗೆ ಸಪ್ತಮಾತೃಕೆಯರು ಎಂದು ಹೆಸರಿಟ್ಟು ಈ ನೀರನ್ನು ಯಾವ ರೀತಿ ಸಂಗ್ರಹಿಸಿಕೊಳ್ಳಬೇಕು ಎಂಬ ಯೋಚನೆಯ ಚಿಂತನೆ.

 ಇದರಲ್ಲಿ ಮೊಟ್ಟ ಮೊದಲನೆಯದಾಗಿ ಹಿಂದೂ ಮಹಾಸಾಗರ, ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಗಳಲ್ಲಿ ನೀರು ಸಂಗ್ರಹಿಸುವ ಮಹತ್ವಾಕಾಂಕ್ಷೆ ಯೋಜನೆ ಫಲಕೊಟ್ಟಿದೆ ಎಂದು ತಿಳಿಸಲು ಹರ್ಷವಾಗುತ್ತಿದೆ.

 ಕಾಮಗಾರಿಗಳ ಸೂಕ್ತ ಸ್ಥಳ ಆಯ್ಕೆ ಮಾಡಿದ ಸ್ಪೆಕ್ಟ್ರಾ ಅಸೋಯೇಷಿನ್‌ನ ಶ್ರೀ ಸತ್ಯಾನಂದ್‌ರವರು, ಇಐ ಟೆಕ್ನಾಲಾಜಿ ಶ್ರೀ ಎನ್.ರಂಗನಾಥ್‌ರವರು ಮತ್ತು ಇಲಾಖೆಯ ಇಂಜಿನಿಯರ್‌ಗಳಿಗೆ ಧನ್ಯವಾದ ತಿಳಿಯ ಬಯಸುತ್ತೇನೆ. ಇದು ಯಾವುದೇ ರಾಜಕೀಯ ಪಿಕ್‌ಅಫ್ ಆಗದೇ ಇಂಜಿನಿಯರ್‌ಗಳು ಚಿಂತನೆ ನಡೆಸಿ ಮಾಡಿದ ಪಿಕ್‌ಆಫ್ ಆಗಿರುವುದರಿಂದ ಮಳೆ ನೀರಿನಿಂದ ತುಂಬಿದೆ.

 ಅತಿ ಶೀಘ್ರದಲ್ಲಿ ಕ್ಯಾಂಪಸ್ ಜಮೀನಿನ ಕರಾಬುಹಳ್ಳಗಳ ನಿಖರವಾದ ಗುರತು ಮಾಡಿ ಎಲ್ಲಾ ನೀರು ಈ ಜಲಸಂಗ್ರಹಾಗಾರಗಳಿಗೆ ಹರಿದು ಬರುವಂತೆ ಮಾಡಿ ಜಲಸಂಗ್ರಹಾಗಾರಗಳು ಮತ್ತು ಕರಾಬುಹಳ್ಳಗಳನ್ನೇ ಗಂಗಾಮಾತಾ ದೇವಾಲಯ’ ಎಂದು ಪೂಜಿಸಿ, ಇದೇ ಮಾದರಿಯಲ್ಲಿ ರಾಜ್ಯದ ಪ್ರತಿಯೊಂದು ಗ್ರಾಮಗಳಲ್ಲಿ ಜಲಂಗ್ರಹಾರಗಳ ನಿಖರವಾದ ಡೇಟಾಗಳನ್ನು ಜಿಐಎಸ್’ ಆಧಾರದ ನಕ್ಷೆಯಲ್ಲಿ ಗುರುತಿಸುವ ಮೂಲಕ ಕೇಂದ್ರ ಸರ್ಕಾರದ ಅಟಲ್ ಭೂಜಲ್’ ಮತ್ತು ರಾಜ್ಯ ಸರ್ಕಾರದ ’ಜಲಾಮೃತ’ ಯೋಜನೆಗಳ ಅನುಷ್ಠಾನ ಮಾಡಲು  ಜಲಶಕ್ತಿ ಜನಾಂದಾಲೋನ’ ವನ್ನು ಶಕ್ತಿಪೀಠ ಫೌಂಡೇಷನ್’ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಆರಂಭಿಸಲಿದೆ. 

 ರಾಜಕೀಯ ಜಲಸಂಗ್ರಹಗಾರಗಳಿಗೂ ಮತ್ತು ಇಂಜಿನಿಯರ್‌ಗಳು ನಿರ್ಮಾಣ ಮಾಡುವ ಜಲಸಂಗ್ರಹಾರಗಳಿಗೂ ಇರುವ ವ್ಯತ್ಯಾಸವನ್ನು ಜನತೆ ಮತ್ತು ಸರ್ಕಾರದ ಗಮನಕ್ಕೆ ತರುವುದೇ ಆಂದೋಲನದ ಪ್ರಮುಖ ಉದ್ದೇಶವಾಗಿದೆ.

  ಕ್ಯಾಂಪಸ್‌ನ ನೀರಿನ ಆಡಿಟ್, ನೀರಿನ ಬಡ್ಜೆಟ್ ಮತ್ತು ನೀರಿನ ಸ್ಟ್ರಾಟಜಿಯನ್ನು ಸರ್ಕಾರಿ ಇಂಜಿನಿಯರ್ ಆಗಿ, ರೈತರ ಮಗನಾಗಿ ಅವರ ಜಮೀನಿನಲ್ಲಿ ಪ್ರಾತ್ಯಕ್ಷಿಕವಾಗಿ ಆಧ್ಯಯನ ಆರಂಭಿಸಿರುವ ಶ್ರೀ ಮಂಜುಪ್ರಸಾದ್ ಮತ್ತು ಅವರ ಕುಟುಂಬ ಮಾಡುವುದಾಗಿ ತಿಳಿಸಿದ್ದಾರೆ. ಅವರು ನೀಡುವ ತಾಂತ್ರಿಕ ಅಂಶಗಳನ್ನು ಜಾರಿಗೆ ತರುವ ಮೂಲಕ ಮೊದಲು ನಾವು ಮಾಡಿದ್ದೇವೆ, ನೀವು ಇದೇ ರೀತಿ ಮಾಡಿ ಎಂದು ಪ್ರಾತ್ಯಾಕ್ಷಿಕೆ ಪ್ರದರ್ಶನದೊಂದಿಗೆ ಜಿಲ್ಲಾವಾರು ಆಸಕ್ತರಿಗೆ ತರಬೇತಿ ನೀಡಲಾಗುವುದು.

  ಜಲಸಂಪನ್ಮೂಲ ಸಚಿವಾಲಯದ ಅಪರಮುಖ್ಯ ಕಾರ್ಯದರ್ಶಿ ಶ್ರೀ ರಾಕೇಶ್‌ಸಿಂಗ್ ರವರು, ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರ್ಯದರ್ಶಿ ಶ್ರೀ ಎನ್.ಲಕ್ಷಣರಾವ್ ಪೇಶ್ವೆರವರು, ಗ್ರಾಮೀಣಾಭಿವೃದ್ಧಿ ಪ್ರಧಾಮ ಕಾರ್ಯದರ್ಶಿ ಶ್ರೀ ಎಲ್.ಕೆ.ಅತೀಕ್‌ರವರು, ಸಣ್ಣನೀರಾವರಿ ಇಲಾಖೆ ಕಾರ್ಯದರ್ಶಿ ಶ್ರೀ ಮೃತ್ಯುಂಜಯ ಸ್ವಾಮಿರವರು, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಕೆ.ಜೈಪ್ರಕಾಶ್‌ರವರು, ಕರ್ನಾಟಕ ನೀರಾವರಿ ನಿಗಮದ ವ್ಯಸ್ಥಾಪಕ ನಿರ್ದೇಶಕ ಶ್ರೀ ಮಲ್ಲಿಕಾರ್ಜುನ್ ಗುಂಗೆರವರು, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಮುಖ್ಯ ಇಂಜಿನಿಯರ್ ಶ್ರೀ ರಾಜೇಂದ್ರರವರು, ವಾಲ್ಮಿ ನಿರ್ದೇಶಕ ಶ್ರೀ ಪೋತ್ದಾರ್ ಸೇರಿದಂತೆ ನೀರಿಗೆ ಸಂಬಂಧಿಸಿದ ಎಲ್ಲಾ ಉನ್ನತ ಮಟ್ಟದ ಅಧಿಕಾರಿಗಳ ಸಲಹೆಗಳನ್ನು ಪಡೆದುಕೊಂಡು ಪ್ರಸ್ತಾವಾನೆಯನ್ನು ಇಐ ಟೆಕ್ನಾಲಾಜಿ ಅಂತಿಮಗೊಳಿಸಲಿದೆ.

 ಆಸಕ್ತರು ಸಹಕರಿಸಲು ಮನವಿ.