TUMAKURU:SHAKTHI PEETA FOUNDATION
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ – ಸರ್ವರಿಗೂ ಸೂರು PMAY-HFA ಯೋಜನೆಯಡಿಯಲ್ಲಿ ಸುಮಾರು ರೂ 93 ಕೋಟಿ ವೆಚ್ಚದಲ್ಲಿ ಮೂಲಭೂತ ಸೌಕರ್ಯವೂ ಸೇರಿದಂತೆ 1450 ಮನೆಗಳು ಮಂಜೂರಾಗಿವೆ.7
ಕರ್ನಾಟಕ ರಾಜ್ಯದ 43 ನಗರಗಳಿಗೆ ಈ ಯೋಜನೆಯಡಿ ವಸತಿ ಸಚಿವರಾದ ಶ್ರೀ ವಿ.ಸೋಮಣ್ಣನವರು ಮಂಜೂರು ಮಾಡಿದ್ದಾರೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಪಲಾನುಭವಿಗಳ ಬಂಡವಾಳವೂ ಸೇರಿ ಮನೆಗಳನ್ನು ನಿರ್ಮಾಣ ಮಾಡಬೇಕಾಗಿದೆ.
ಪ್ರತಿ ಮನೆಗೆ ರೂ 613000 ರೂಗಳ ವೆಚ್ಚವಾಗಲಿದ್ದು ಇದರಲ್ಲಿ ಎಸ್.ಸಿ/ಎಸ್.ಟಿ ಫಲಾನುಭವಿಗಳು ಶೇಕಡ 10 ರಂತೆ ರೂ 61300 ರೂ ಭರಿಸಬೇಕು. ಕೇಂದ್ರ ಸರ್ಕಾರ ರೂ 150000 ರಾಜ್ಯ ಸರ್ಕಾರ ರೂ 200000 ಅನುದಾನ ನೀಡಿದರೆ, ಫಲಾನುಭವಿಗೆ ’ಕಾರ್ಮಿಕ ಗೃಹ ಭಾಗ್ಯ’ ಸೌಲಭ್ಯದಡಿ ನೋಂದಾಯಿತ ಕಾರ್ಮಿಕರಿಗೆ ರೂ 201700 ಸಾಲ ಅಥವಾ ಬ್ಯಾಂಕುಗಳ ಮೂಲಕ ಸಾಲ ಪಡೆಯಬೇಕಾಗಿದೆ.
ಇದರಲ್ಲಿ ಇತರೆ ಜನಾಂಗದ ಫಲಾನುಭವಿಗಳು ಶೇಕಡ 15 ರಂತೆ ರೂ 92100 ರೂ ಭರಿಸಬೇಕು. ಕೇಂದ್ರ ಸರ್ಕಾರ ರೂ 150000 ರಾಜ್ಯ ಸರ್ಕಾರ ರೂ 120000 ಅನುದಾನ ನೀಡಿದರೆ, ಫಲಾನುಭವಿಗೆ ’ಕಾರ್ಮಿಕ ಗೃಹ ಭಾಗ್ಯ ಸೌಲಭ್ಯದಡಿ’ ನೋಂದಾಯಿತ ಕಾರ್ಮಿಕರಿಗೆ ರೂ 250900 ಸಾಲ ಅಥವಾ ಬ್ಯಾಂಕುಗಳ ಮೂಲಕ ಸಾಲ ಪಡೆಯಬೇಕಾಗಿದೆ.
ತುಮಕೂರು ನಗರದ ಭಾಗ್ಯ ಮಂದಿರ, ದಿಬ್ಬೂರು ಜನತಾ ಕಾಲೋನಿ, ದಿಬ್ಬೂರು, ಜಿಸಿಆರ್ ಕಾಲೋನಿ, ಲೇಬರ್‍ಸ್ ಕಾಲೋನಿ, ಮರಳೂರು ಜನತಾ ಕಾಲೋನಿ, ಎನ್.ಆರ್. ಕಾಲೋನಿ, ನಜರಾಬಾದ್, ರೈಲ್ವೇ ಗೂಡ್ಸ್‌ಷೆಡ್ ಕಾಲೋನಿ, ಶಿರಾ ಗೇಟ್ ಏಕೆ ಕಾಲೋನಿ, ಭಾರತಿ ನಗರ, ಕ್ಯಾತ್ಸಂದ್ರ ಏಕೆ ಕಾಲೋನಿ (ಎಸ್‌ಎಲ್‌ಎನ್‌ನಗರ), ಕ್ಯಾತ್ಸಂದ್ರ ಮಾರುತಿ ನಗರ ಮತ್ತು ಕ್ಯಾತ್ಸಂದ್ರ ಇಂದಿರಾ ಕಾಲೋನಿಗಳು ಸೇರಿದಂತೆ ಸುಮಾರು 14 ಕೊಳಚೆ ಪ್ರದೇಶಗಳಲ್ಲಿನ ಫಲಾನುಭವಿಗಳಿಗೆ ಅನೂಕೂಲವಾಗಲಿದೆ.
ಫಲಾನುಭವಿಗಳಿಗೆ ಸ್ವಂತ ನಿವೇಶನವಿರಬೇಕು ಅಥವಾ ಸರ್ಕಾರಿ ಜಾಗವಾಗಿದ್ದಲ್ಲಿ ಮಾಲೀಕತ್ವದ ಇಲಾಖೆ ಮಂಜೂರು ಮಾಡಬೇಕಿದೆ. ಫಲಾನುಭವಿಗಳ ಬಂಡವಾಳ ಹಾಗೂ ಸಾಲ ಮಂಜೂರಾತಿ ಅಗತ್ಯವಾಗಿದೆ.
ಫಲಾನುಭವಿಗಳ ಆಯ್ಕೆಗೆ ಕೆಲವು ಮಾನದಂಡಗಳಿರುತ್ತವೆ, ಫಲಾನುಭವಿಗಳ ಆಯ್ಕೆಯನ್ನು ಅಧಿಕಾರಿಗಳು ಮಾಡುವುದರ ಜೊತೆಗೆ, ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಜಾತಿವಾರು ಸಂಘಟನೆಗಳು, ಪಕ್ಷಗಳ ನಾಯಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳ ಸಹಕಾರದೊಂದಿಗೆ ಮೌನವಾಗಿ ಚಾಲನೆ ನೀಡಿದ್ದಾರೆ. ಇದರಿಂದ ಶೀಘ್ರವಾಗಿ ಯೋಜನೆ ಪೂರ್ಣಗೊಳಿಸ ಬಹುದಾಗಿದೆ.
ಕನಿಷ್ಟ 10 ರಿಂದ 20 ಫಲಾನುಭವಿಗಳಿಗೆ ಒಬ್ಬ ಸ್ವಯಂ ಕಾರ್ಯಕರ್ತರನ್ನು ಗುರುತಿಸಿ ಅಗತ್ಯ ಸಹಕಾರ ದೊರಕಿಸಲು ಶ್ರಮಿಸಬೇಕಿದೆ. ಅವರು ಜನರಿಂದ ವಸೂಲಿ ದಂಧೆಗೆ ಇಳಿಯದಂತೆ ಎಚ್ಚರವಹಿಸುವುದು ಅಗತ್ಯವಾಗಿದೆ. ಈ ಹಿಂದೆ ಇಂಥಹ ಪ್ರಕರಣಗಳು ನಡೆದಿರುವುದರಿಂದ ಗಂಭೀರವಾಗಿ ಪರಿಗಣಿಸಬೇಕಾಗಿದೆ.
DC. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು, ಜಮೀನು ಮಾಲೀಕತ್ವದ ಇಲಾಖಾ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು, ಕಾರ್ಮಿಕ ಇಲಾಖೆ ಅಧಿಕಾರಿಗಳು ಮತ್ತು ಇತರೆ ಜಾತಿವಾರು ನಿಗಮಗಳು, ಅನಧಿಕೃತವಾಗಿ ಜಾತಿವಾರು ಪತ್ತಿನ ಸಹಕಾರ ಸಂಘಗಳ ಸಭೆ ಕರೆದು ಸಮಾಲೋಚನೆ ನಡೆಸುವ ಮೂಲಕ ಶೀಘ್ರವಾಗಿ ಪಲಾನುಭವಿಗಳ ಆಯ್ಕೆ ಮಾಡುವುದು ಅಗತ್ಯವಾಗಿದೆ.
ತುಮಕೂರು ಸ್ಮಾರ್ಟ್ ಸಿಟಿ ಐಸಿಸಿಸಿ ಮೂಲಕ ಜಿಐಎಸ್ ಲೇಯರ್ ಮಾಡಿ ಇತಿಹಾಸ ಸಹಿತ ಕೊಳಗೇರಿಗಳ ಮತ್ತು ಫಲಾನುಭವಿಗಳ ಮಾಹಿತಿ ಸಂಗ್ರಹಿಸುವುದು ಸೂಕ್ತವಾಗಿದೆ.