![](https://epaper.shakthipeeta.in/wp-content/uploads/2020/07/Capture-1.png)
TUMAKURU:SHAKTHIPEETA FOUNDATION
ತುಮಕೂರು ಮಹಾನಗರ ಪಾಲಿಕೆ ಜಿಐಎಸ್ ಆಧಾರಿತ ಡೇಟಾ ಸಂಗ್ರಹಿಸಲು ಚುನಾವಣಾ ವಾರ್ಡ್, ರೆವಿನ್ಯೂ ವಾರ್ಡ್, ಬಡಾವಾಣೆ, ಚುನಾವಣಾ ಬೂತ್, ಡಿವಿಸನ್ಸ್, ವಿಲೇಜ್ ಹೀಗೆ ಹಲವಾರು ಏರಿಯಾಗಳ ಬಗ್ಗೆ ಚರ್ಚೆ ನಡೆಸಿ ಅಂತಿಮವಾಗಿ ರೆವಿನ್ಯೂ ವಾರ್ಡ್‌ವಾರು ನಿಗದಿಗೊಳಿಸಿ ಪಾಲಿಕೆಯ ಎಲ್ಲಾ ವಿಭಾಗದವರಿಗೂ ಹೊಣೆಗಾರಿಕೆ ಹಂಚಿಕೆ ಮಾಡಲು ತೀರ್ಮಾನಿಸಿದೆ. ನಂತರ ಯಾವ ಏರಿಯಾದ ಮಾಹಿತಿ ಬೇಕೋ ಆಯಾ ಪ್ರದೇಶಗಳ ಲೇಯರ್ ಮಾಡಿ ಅಗತ್ಯಕ್ಕೆ ತಕ್ಕಂತೆ ಮಾಹಿತಿ ಪಡೆಯಬಹುದಾಗಿದೆ.
ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕರವರು ತುಮಕೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಂಗಸ್ವಾಮಿರವರು ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶ್ರೀ ಯೋಗಾನಂದ್‌ರವರು ಜಂಟಿಯಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದು ಬಂದಿದೆ.
ಪಾಲಿಕೆಯ ಆಯುಕ್ತೆ ಶ್ರೀಮತಿ ರೇಣುಕರವರ ನಿರ್ದೇಶನದ ಮೇರೆಗೆ ಪಾಲಿಕೆಯ ಐಟಿ ವಿಭಾಗದ ಸೀನಿಯರ್ ಪ್ರೋಗ್ರಾಮರ್ ಶ್ರೀ ಹನುಮಂತರಾಜುರವರು ರೆವಿನ್ಯೂ ವಾರ್ಡ್ ಪ್ರಕಾರ ಯಾವ ವಿಭಾಗದವರು ಯಾವ ಲೇಯರ್ ಮಾಹಿತಿಗಳನ್ನು ಅಫ್‌ಡೇಟ್ ಮಾಡಬೇಕು ಎಂಬ ಬಗ್ಗೆ ಪಟ್ಟಿಮಾಡಲು ಆರಂಭಿಸಿದ್ದಾರೆ. ಅದೇ ರೀತಿ ತುಮಕೂರು ಸ್ಮಾರ್ಟ್ ಸಿಟಿ ಐಸಿಸಿಸಿ ಮುಖ್ಯಸ್ತರಾದ ಶ್ರೀ ಅಶ್ವಿನ್‌ರವರು ಪಟ್ಟಿ ಮಾಡಲು ಆರಂಭಿಸಿದ್ದಾರೆ.
ವಾರ್ಡ್‌ವಾರು ಅಗತ್ಯವಿರುವ ಜಿಐಎಸ್ ಲೇಯರ್‌ಗಳ ಹೊಣೆಗಾರಿಕೆ ಮತ್ತು ನಗರವಾರು ಜಿಐಎಸ್ ಲೇಯರ್‌ಗಳವಾರು ಹೊಣೆಗಾರಿಕೆಯನ್ನು ಹಂಚಿಕೆ ಮಾಡಿ ಜಿಲ್ಲಾಧಿಕಾರಿಗಳಿಂದ ಆದೇಶ ಮಾಡಿಸಿ ಪ್ರತಿ ಶುಕ್ರವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ಪ್ರತಿಯೊಬ್ಬರಿಗೂ ನೀಡಿರುವ ಹೊಣೆಗಾರಿಕೆಯಲ್ಲಿ ಯಾರು ಯಾರು, ಶೇಕಡವಾರು ಎಷ್ಟು ಪೂರ್ಣಗೊಳಿಸಿದ್ದಾರೆ ಎಂಬ ಕರಾರುವಕ್ಕಾದ ಮಾಹಿತಿಯೊಂದಿಗೆ ಪ್ರಗತಿ ಪರಿಶೀಲನೆ ಮಾಡಲು ಆಯುಕ್ತರು ಚಿಂತನೆ ನಡೆಸುತ್ತಿದ್ದಾರೆ.
ತುಮಕೂರು ಮಹಾನಗರ ಪಾಲಿಕೆ, ತುಮಕೂರು ಸ್ಮಾರ್ಟ್ ಸಿಟಿ ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುವ ಜೊತೆಗೆ ಇತರೆ ಇಲಾಖೆಗಳಿಂದ ಅಗತ್ಯ ಮಾಹಿತಿ ಸಂಗ್ರಹಿಸಲು ಯೋಚಿಸಿದ್ದಾರೆ.
ಕರ್ನಾಟಕ ನಗರನೀರು ಸರಬರಾಜು ಮಂಡಳಿ 24/7 ಕುಡಿಯುವ ನೀರಿನ ಯೋಜನೆಯಡಿ 37 ಡಿಸ್ಟ್ರಿಕ್ ಮೀಟರಿಂಗ್ ಏರಿಯಾ ವಿಭಾಗ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ, ಅವರಿಗೂ ಸಹ ರೆವಿನ್ಯೂವಾರ್ಡ್‌ವಾರು ಮಾಹಿತಿ ನೀಡಲು ಸೂಚಿಸಲು ತೀರ್ಮಾನಿಸಿದ್ದಾರೆ.
ಎನ್‌ಐಸಿ, ಎನ್‌ಆರ್‌ಡಿಎಂಎಸ್, ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್, ಕೆಎಂಡಿಎಸ್, ತುಮಕೂರು ಜಿಐಎಸ್, ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಏನೇನು ಮಾಡಿದೆ. ಹಾಲಿ ಇರುವ ಎಂಐಎಸ್ ಮಾಹಿತಿಗಳ ಅನಾಲೀಸಿಸ್, ತುಮಕೂರು ಮಹಾನಗರ ಪಾಲಿಕೆಗೆ ಸಲಹಾಗಾರ ಸಂಸ್ಥೆ ನೀಡಿರುವ ರೂ 1.96 ಕೋಟಿ ವೆಚ್ಚದಲ್ಲಿ ಮಾಡಿರುವ ಡ್ರೋನ್ ಸಮೀಕ್ಷೆ ಮಾಹಿತಿ. ತುಮಕೂರು ಸ್ಮಾರ್ಟ್ ಸಿಟಿಗೆ ಸಲಹಾಗಾರ ಸಂಸ್ಥೆ ನೀಡಿರುವ ರೂ 0.86 ಕೋಟಿ ವೆಚ್ಚದಲ್ಲಿ ಮಾಡಿರುವ ಡ್ರೋನ್ ಸಮೀಕ್ಷೆ ಮಾಹಿತಿ ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ರೂ 1.17 ಕೋಟಿ ವೆಚ್ಚದಲ್ಲಿ ಮಾಡುವ ತುಮಕೂರು ನಗರದ ಜಿಐಎಸ್ ಆಧಾರಿತ ಮಾಸ್ಟರ್ ಪ್ಲಾನ್‌ನಲ್ಲಿ ಏನೇನು ಇರಲಿದೆ. ಹೊಸದಾಗಿ ಟೆಂಡರ್ ಕರೆದಿರುವ ಕೆಎಂಡಿಎಸ್ ಮಾಡಲು ಉದ್ದೇಶಿಸಿರುವ ಯೋಜನೆಯಲ್ಲಿ ಏನೇನು ಸ್ಕೋಪ್ ಇದೆ ಮತ್ತು ಐಸಿಸಿಸಿ ಜವಾಬ್ಧಾರಿ ಏನು? ಎಂಬ ಬಗ್ಗೆ ವಿವರವಾದ ವರದಿಗಳನ್ನು ಕ್ರೋಢಿಕರಿಸಲು ಮೂರು ಜನ ಅಧಿಕಾರಿಗಳು ಒಮ್ಮತದ ನಿರ್ಣಯಕ್ಕೆ ಬಂದಿದ್ದಾರೆ.
ಒಬ್ಬ ಜಿಐಎಸ್ ಪರಿಣಿತರನ್ನು ನೇಮಕ ಮಾಡಿಕೊಳ್ಳಬೇಕೆ? ಒಂದು ಸಂಸ್ಥೆಗೆ ಥರ್ಡ್ ಪಾರ್ಟಿ ಇನ್‌ಸ್ಪೆಕ್ಷನ್‌ಗೆ ನೀಡಬೇಕೆ ಅಥವಾ ಮುಂದಿನ 10 ವರ್ಷದ ಅವಧಿಗೆ ಒಂದೇ ಜಿಐಎಸ್ ಮ್ಯಾಪ್‌ನಲ್ಲಿ ನಗರದಲ್ಲಿ ನಡೆಯುವ ಪ್ರತಿಯೊಂದು ಇಲಾಖೆಯ ಯೋಜನೆಗಳು ಮತ್ತು ಸ್ವಾತಂತ್ರ್ಯ ಪೂರ್ವದಿಂದ ಮಾಡಿರುವ ಯೋಜನೆಗಳ ಜಿಐಎಸ್ ಮಾಹಿತಿಯನ್ನು ಅಫ್ ಲೋಡ್ ಮಾಡಿ ನಿರ್ವಹಣೆ ಮಾಡಬೇಕೆ ಎಂಬ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ.
ಎಲ್ಲಾ ವಿಭಾಗದ ಅಧಿಕಾರಿಗಳು, ಇಂಜಿನಿಯರ್‌ಗಳಿಗೂ ಸೂಕ್ತ ತರಬೇತಿ ನೀಡಲು ಪೂರಕ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ವಿವಿಧ ಯೋಜನೆಗಳ ಮಾಹಿತಿ ಸಂಗ್ರಹಕ್ಕೆ ವಿವಿಧ ಆಪ್ ಮಾಡಿಸಲು ಸಹ ಚಿಂತನೆ ಮಾಡುತ್ತಿದ್ದಾರೆ.
ಪಾಲಿಕೆಯ ಪ್ರಾಪರ್ಟಿ ರಿಜಿಸ್ಟರ್‌ನಲ್ಲಿ ಹಾಲಿ ಏನೇನು ಇದೆ ಮತ್ತು ಜಿಐಎಸ್ ಆಧಾರಿತ ಏನೇನು ಮಾಡಬೇಕು ಎಂಬ ವರದಿಯನ್ನು ಸಹ ಸಂಗ್ರಹ ಮಾಡುವ ಕೆಲಸ ಆರಂಭಿಸಲಾಗಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ನಗರದ ನಾಗರೀಕ ಸಮೀತಿಗಳು ಮತ್ತು ಸ್ವತ್ತಿನ ಮಾಲೀಕರು ಸಹ ಈ ಆಂದೋಲನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಡೇಟಾಗಳನ್ನು ಜನತೆಯೇ ತಪಾಸಣೆ ಮಾಡಿ ನೀಡಲು ಸಹ ಚಿಂತನೆ ನಡೆಸುತ್ತಿದ್ದಾರೆ.
ಮುಂದಿನ ಶುಕ್ರವಾರ ನಡೆಯುವ ಸಭೆಯಲ್ಲಿ ಸ್ಪಷ್ಟ ಮಾಹಿತಿಯೊಂದಿಗೆ ಜಿಲ್ಲಾಧಿಕಾರಿಗಳಿಗೆ ಪಿಪಿಟಿ ಪ್ರದರ್ಶಿಸಿ ಅವರ ಅನುಮತಿಯೊಂದಿಗೆ ದೇಶದ 100 ಸ್ಮಾರ್ಟ್ ಸಿಟಿಗಳಿಗೂ ವಿನೂತನ ಎನ್ನುವ ಹಾಗೆ ಜಿಐಎಸ್ ಡೇಟಾ ಸಂಗ್ರಹಿಸುವ ಕೆಲಸಕ್ಕೆ ಎಲ್ಲಾ ಇಲಾಖೆಗಳ ಸಹಭಾಗಿತ್ವದಲ್ಲಿ ಅಂದೋಲನದ ರೀತಿಯಲ್ಲಿ ನಡೆಸಲು ಭರದ ಸಿದ್ಧತೆ ನಡೆಯುತ್ತಿದೆ.