27th July 2024
Share

TUMAKURU:SHAKTHI PEETA FOUNDATION

 ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ತುಮಕೂರು ಜಿಐಎಸ್ ಬಗ್ಗೆ ಚರ್ಚೆ ನಡೆಯುತ್ತಿತ್ತು, ಹೇಮಾವತಿ ಇಲಾಖೆಯಿಂದ ಭಾಗವಹಿಸಿದ್ಧ ಒಬ್ಬ ಇಂಜಿನಿಯರ್ ಸಮರ್ಪಕ ಉತ್ತರ ನೀಡಲಿಲ್ಲ, ಆಗ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮುಖ್ಯ ಇಂಜಿನಿಯರ್ ಸಭೆಗೆ ಏಕೆ ಬಂದಿಲ್ಲ ಎಂದು ಪ್ರಶ್ನಿಸಿದಾಗ ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್ ರವರು ಮುಖ್ಯ ಇಂಜಿನಿಯರ್ ಕರೆಸಲು ಆದೇಶ ನೀಡಿದರು.

 ಸ್ವಲ್ಪ ಸಮಯದ ನಂತರ ಹೇಮಾವತಿ ಇಇ ಶ್ರೀ ಮೋಹನ್‌ಕುಮಾರ್‌ರವರು  ಬಂದು ನನ್ನ ಬಳಿ ಕುಳಿತು ಕೊಂಡು ಸರ್ ಯಾಕೆ ಕರೆಸಿದಿರಿ ಎಂದಾಗ ನಾನು ಸಾರ್ ಹೇಮಾವತಿ ಮ್ಯಾಪ್ ಯಾರ ಬಳಿ ಇದೆ ಎಂದಾಗ ಅವರು ಒಂದು ನಕ್ಷೆ ತೋರಿಸಿ ಇಲ್ಲೆ ಇದೆಯಲ್ಲ ಅಂದರು. ನಾನು ತುಮಕೂರು ನಗರದಲ್ಲಿ ಎಷ್ಟು ಕೀಮೀ ಹೇಮಾವತಿ ಕಾಲುವೆ ಇದೆ, ಅಕ್ಕ ಪಕ್ಕ ಭೂಸ್ವಾಧೀನ ಮಾಡಿರುವ ಜಾಗದಲ್ಲಿ ಹೇಮಾವತಿ ಕಾಲುವೆ ಮತ್ತು ಸರ್ವೀಸ್ ರಸ್ತೆ ಹೊರತು ಪಡಿಸಿ ಎಷ್ಟು ಎಕರೆ ಉಳಿಕೆ ಜಾಗ ಇದೆ ಹೇಳಿ ಸಾರ್ ಅಂದೆ.

 ಮಾಹಿತಿ ಇಲ್ಲ ಅಂದಾಗ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಮೀಟಿಂಗ್ ಮಾಡಿ ಮಾಹಿತಿ ನೀಡಲು ಸೂಚಿಸಿದ್ದರು, ನಿಮಗೂ ಫೋನ್ ಮೂಲಕ ಮಾತನಾಡಿದ್ದರು, ಈಗ ಅವರಪ್ಪನವರು (ಜಿ.ಎಸ್.ಬಸವರಾಜ್)ಬಂದು ಕೇಳಿದರು ಮಾಹಿತಿ ಇಲ್ಲ, ಅಂದ್ರೆ ಹೇಗೆ ಸಾರ್. ಹೇಳಲಾ ಸಭೆಯಲ್ಲಿ ಎಂದಾಗ ಅವರಿಗೂ ಸಿಟ್ಟು ಬಂದಿರ ಬಹುದು, ಏನ್ ಸಾರ್ ಬ್ಲಾಕ್ ಮೇಲ್ ಮಾಡ್ತಿರಾ? ಅಂದು ಬಿಟ್ಟರು, ಎಸ್ ಸರ್ ಇದು ಒಂದು ಥರ ಜಿಐಎಸ್ ಡೇಟಾ ಬ್ಲಾಕ್ ಮೇಲ್ ಅಂದೆ.

  ಇಬ್ಬರೂ ನಕ್ಕು ಸುಮ್ಮನಾದೆವು. ಹಿಂದಿನ ಶುಕ್ರವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ಮತ್ತೆ ಮೋಹನ್‌ಕುಮಾರ್ ರವರಿಗೆ ಅದೇ ಪ್ರಶ್ನೆ ಕೇಳಿದೆ, ಆಗ ಅವರು ಸಾರ್ ಒಂದು ವಾರ ಟೈಮ್ ಕೊಡಿ ಎಂದರು.

  ನಿನ್ನೆ ಈ ನಕ್ಷೆ ಕಳುಹಿಸಿ ಸಾರ್ ಹೀಗೆ ಮಾಡಸ್ತಾ ಇದ್ದೇನೆ, ಸರೀನಾ ಸಾರ್ ಅಂದರು ನಿಜಕ್ಕೂ ನನಗೆ ಖುಷಿಯಾಯಿತು. ನಂತರ ಅವರು ಸಾರ್ ಭೂಸ್ವಾಧೀನ ಇಲಾಖೆಯಲ್ಲಿ ಕೆಲವು ಗ್ರಾಮಗಳ ದಾಖಲೆಯೇ ಇಲ್ಲ ಎಂದರು. ಲಿಖಿತವಾಗಿ ವರದಿ ಪಡೆಯಿರಿ ಸಾರ್ ದಾಖಲೆ ಕಳೆದವರ ಮೇಲೆ ಕ್ರಿಮಿನಲ್ ಮೊಕೊದ್ದಮೆ’ ಹೂಡಬೇಕಾಗುತ್ತದೆ ಎಂದು ತಿಳಿಸಿದೆ.

 ನಂತರ ಅವರು ಹೇಳಿದ್ದು ಸಾರ್ ನಿಮ್ಮ ಮೇಲೆ ನಾನು ಮೊದ ಮೊದಲು ಎಕೆ ಇವರು ಜಿಐಎಸ್ ಲೇಯರ್ ಅಂತ ಒಂದೆ ಸಮನೆ ಹೀಗೆ ಅನುಸರಣೆ ಮಾಡುತ್ತಿದ್ದಾರೆ ಅಂದು ಕೊಂಡಿದ್ದೆ. ಈಗ ನನಗೆ ಅರ್ಥವಾಯಿತು ನಿಜಕ್ಕೂ ಇದೊಂದು ಉತ್ತಮ ಯೋಜನೆ ಸಾರ್, ನೋಡಿ ಇದೂವರೆಗೂ ನಮ್ಮ ಇಲಾಖೆ  ‘ಹೇಮಾವತಿ ಕಚೇರಿಯ ಸ್ವತ್ತಿನ ಪಿಐಡಿ ನಂಬರ್ ‘ ಪಡೆದಿರಲಿಲ್ಲ ಅದನ್ನು ಮಾಡಿಸಿದೆವು.

 ಈಗ ತುಮಕೂರು ನಗರದ ವ್ಯಾಪ್ತಿಯಲ್ಲಿ ಸುಮಾರು 5.5 ಕೀಮೀ ಹೇಮಾವತಿ ಮುಖ್ಯ ಕಾಲುವೆ ಇದೆ, ಟೂಡಾ ಲೋಕಲ್ ಪ್ಲಾನಿಂಗ್ ಏರಿಯಾ ವ್ಯಾಪ್ತಿಯಲ್ಲಿ ಸುಮಾರು 13.5 ಕೀಮೀ ಉದ್ದ ಬರಲಿದೆ, ಈ ವ್ಯಾಪ್ತಿಯಲ್ಲಿ ಸುಮಾರು 40 ಮೀಟರ್ ನಿಂದ 100 ಮೀಟರ್ ಅಗಲ ಭೂ ಸ್ವಾಧೀನ ಆಗಿದೆ, ಸಾಕಷ್ಟು ನಮ್ಮ ಇಲಾಖೆ ಜಮೀನು ಇದೆ, ಒಂದು ವಾರದೊಳಗೆ ಸ್ಪಷ್ಟ ಮಾಹಿತಿ ನೀಡುತ್ತೇವೆ ಎಂದು ಸಂತೋಷದಿಂದ ಹೇಳಿದರು.

 ಸಾರ್ ಹೇಮಾವತಿ  ಯೋಜನೆಯ ಎಲ್ಲಾ ಕಾಮಗಾರಿಗಳ ಜಿಐಎಸ್ ಲೇಯರ್ ಮಾಡಿಸುತ್ತೇವೆ, ಈಗಾಗಲೇ ನಾನೇ ಬೆಂಗಳೂರಿನ ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್‌ಗೆ ಭೇಟಿ ನೀಡಿ ಮಾತನಾಡಿದ್ದೇನೆ ಎಂದರು.

  ನಾನು ಸ್ಪೆಕ್ಟ್ರಾ ಅಸೋಶಿಯೇಷನ್ ಶ್ರೀ ಸತ್ಯಾನಂದ್‌ರವರು ಬಹಳ ಕೆಲಸ ಮಾಡಿದ್ದಾರೆ, ನಿಮ್ಮ ಇಲಾಖೆಯ ಸುಮಾರು ಜನ ಇಂಜಿಯರ್‌ಗಳು ಡೇಟಾ ತುಂಬಿದ್ದಾರೆ ಎಂದೆ. ‘ಹೌದು ಸಾರ್ ಇದರಿಂದ ಆಗುವ ಪ್ರಯೋಜನ ನನಗೆ ಈಗ ತಿಳಿಯಿತು, ಕುಳಿತಲ್ಲೆ ಯಾವುದೇ ಯೋಜನೆಯ ಪಕ್ಕಾ ಅನಾಲೀಸಿಸ್ ಮಾಡಬಹುದಾಗಿದೆ ಅಂದರು’

 ನಾನು ಅವರಿಗೆ ಹೇಳಿದೆ ಇನ್ನೂ ಮುಂದೆ ‘ನೀವೇ ಜಿಐಎಸ್ ಲೇಯರ್ ಮಾಸ್ಟರ್ ‘ಅಂದಾಗ ಅವರು ನಕ್ಕರು. ಇದೂ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಅರ್ಥವಾಗ ಬೇಕು ಎಂದು ಮೋಹನ್ ಕುಮಾರ್ ರವರು ಹೇಳಿದಾಗ ನನಗೆ ಖುಷಿಯಾಯಿತು. ‘ಹೀಗಿದೆ ನೋಡಿ ಬ್ಲಾಕ್ ಮೇಲ್ ಪವಾಡ!’