20th May 2024
Share

TUMAKURU:SHAKTHIPEETA FOUNDATION

  ತುಮಕೂರು ಸ್ಮಾರ್ಟ್ ಸಿಟಿ ಡೇಟಾ ಸಿಟಿ’ ಆಗಲು ದಾಪುಗಾಲು ಹಾಕಿದೆ. ಇದು ಒಂದು ಇಲಾಖೆಯ ಕೆಲಸವಲ್ಲ, ತುಮಕೂರು ನಗರದಲ್ಲಿ ಒಂದು ಇಂಚು ಜಮೀನಿನ ಮಾಲೀಕತ್ವ ಇರುವ ಪ್ರತಿಯೊಂದು ಇಲಾಖೆಯು ಅವರ ಕಚೇರಿಗಳ ಸ್ವತ್ತಿನ ಮತ್ತು ಅವರು ನಗರ ವ್ಯಾಪ್ತಿಯಲ್ಲಿ ಕೈಗೊಂಡಿರುವ ಪ್ರತಿಯೊಂದು ಯೋಜನೆಗಳ ಡೇಟಾವನ್ನು ಡಿಜಿಟಲ್ ಮಾಡಿ ಸಾಪ್ಟ್ ಕಾಫಿಯನ್ನು ತುಮಕೂರು ಸ್ಮಾರ್ಟ್ ಸಿಟಿ ಇಂಟಿಗ್ರೇಟೆಡ್ ಕಮ್ಯಾಂಡ್ ಕಂಟ್ರೋಲ್ ಸೆಂಟರ್‌ಗೆ ನೀಡಬೇಕು.  

 ಅವರು ಒಂದೇ ಜಿಐಎಸ್ ನಕ್ಷೆಯಲ್ಲಿ ಎಲ್ಲಾ ಇಲಾಖೆಯ ಡೇಟಾವನ್ನು ಇತಿಹಾಸದೊಂದಿಗೆ ಅಫ್‌ಲೋಡ್ ಮಾಡುತ್ತಿದ್ದಾರೆ. ಇನ್ನೂ ಮುಂದೆ ಯಾವುದೇ ಇಲಾಖೆ ನಗರದಲ್ಲಿ ಯಾವುದೇ ಯೋಜನೆ ಕೈಗೊಂಡರು ಒಂದೇ ನಕ್ಷೆಯಲ್ಲಿ ನಮೂದಿಸುವುದು ಕಡ್ಡಾಯವಾಗಲಿದೆ, ಶೀಘ್ರವಾಗಿ ಜಿಲ್ಲಾಧಿಕಾರಿಗಳಾದ ಶ್ರೀ ಡಾ.ರಾಕೇಶ್ ಕುಮಾರ್‌ರವರು ಆದೇಶ ನೀಡಲಿದ್ದಾರೆ.

  ‘ಇದು ದೇಶದಲ್ಲಿ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಕನಸು, ರಾಜ್ಯದಲ್ಲಿ ಮುಖ್ಯಕಾರ್ಯದರ್ಶಿಯವರಾದ ಶ್ರೀ ವಿಜಯಭಾಸ್ಕರ್‌ರವರ ಕನಸು, ಯಾಕೋ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ  ಯೋಜನೆಯ ಮಹತ್ವದ ಅರಿವು ಇರುವ ಹಾಗಿಲ್ಲ, ಇದ್ದಲ್ಲಿ ಅವರು ಸಹ ಅಧಿಕಾರಿಗಳ ನಿದ್ದೆ ಕೆಡೆಸುತ್ತಿದ್ದರು. ಅವರ ಅಧ್ಯಕ್ಷತೆಯಲ್ಲಿರುವ ರಾಜ್ಯಮಟ್ಟದ ದಿಶಾ ಸಮಿತಿಯ ಸಭೆಯನ್ನೇ ಇನ್ನೂ ಮಾಡಿದ ಹಾಗೆ ಕಾಣಿಸಲಿಲ್ಲ, ಯಾಕೆ ಸಭೆ ನಡೆದಿಲ್ಲ ಎನ್ನುವುದನ್ನು ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್‌ರವರು ತಿಳಿಸಬೇಕು’.

  ತುಮಕೂರಿನಲ್ಲಿ ಸಂಸದ ಹಾಗೂ ದಿಶಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಕನಸು ಇದಾಗಿದೆ. ಈ ಯೋಜನೆಯ ಮಹತ್ವ ಅತಿ ಕಡುಬಡವನಿಂದ ಆರಂಭಿಸಿ ಶ್ರೀ ಮಂತರವರೆಗೂ ಅಭಿವೃದ್ಧಿಯಲ್ಲಿ ಮತ್ತು ಸರ್ಕಾರದ ಸವಲತ್ತು ನೀಡಲು ಸಾಮಾಜಿಕ ನ್ಯಾಯ ದೊರಕಿಸಲು ಮಹತ್ವದ ದಾಖಲೆಯಾಗಲಿದೆ. 

  ‘ಜಿಲ್ಲಾಧಿಕಾರಿಗಳೇ ಎಲ್ಲಾ  ಇಲಾಖೆಗಳಿಗೆ ಪತ್ರಬರೆದು ಮಾಹಿತಿ ನೀಡಲು ಮನವಿ ಮಾಡಿದ್ದಾರೆ. ಅದೇ ರೀತಿ ಹೇಮಾವತಿ ಭೂಸ್ವಾಧಿನ ಇಲಾಖೆಯ ಅಧಿಕಾರಿಗೆ ಹೇಮಾವತಿ ಇಇಯವರಿಂದ  ದಿನಾಂಕ:23.07.2020 ರಂದು ಪತ್ರ ಬರೆದು 23 ಗ್ರಾಮಗಳ ಮಾಹಿತಿ ಕೇಳಿ 15 ದಿವಸ ಕಳೆದಿದೆ, ಇಲಾಖೆಗೆ ಮಾಹಿತಿ ನೀಡಲು ಇಷ್ಟು ದಿವಸ ಯಾಕೆ ವಿಳಂಬವಾಗಿದೆ ಎಂಬುದನ್ನು ಅಧಿಕಾರಿ ಶ್ರೀಮತಿ ಯಶೋದಮ್ಮನವರೇ ತಿಳಿಸಬೇಕು’

 ಬಹುಷಃ ಜಿಲ್ಲಾಧಿಕಾರಿಗಳು ಈ ಯೋಜನೆಗೆ ಇಲಾಖಾ ಅಧಿಕಾರಿಗಳು ಡಿಜಿಟಲ್ ಮಾಹಿತಿ ನೀಡಲು ಸಕಾಲ ಯೋಜನೆ ಅಥವಾ ಮಾಹಿತಿಹಕ್ಕು ಅಧಿನಿಯಮದ ಪ್ರಕಾರ ವಿಶೇಷ ಯೋಜನೆ’ ರೂಪಿಸಬೇಕಾಗುವುದು ಎಂದು ಅನಿಸುತ್ತಿದೆ.

 ಯಾವುದೇ ಇಲಾಖೆಯ ಅಧಿಕಾರಿಗಳು ಡೇಟಾವನ್ನು ಸಕಾಲದಲ್ಲಿ ನೀಡದೇ ಇದ್ದಲ್ಲಿ ನಮ್ಮ ಸಂಸ್ಥೆ ಅಂಥಹ ಇಲಾಖಾ ಅಧಿಕಾರಿಗಳ ಜವಾಬ್ಧಾರಿಯನ್ನು ನೆನಪಿಸುವ ಮಹತ್ವದ ಆಂದೋಲನ ಆರಂಭಿಸಿದೆ. ದಿಶಾ ಸಮಿತಿಯಲ್ಲಿ ನಿರ್ಣಯವೂ ಆಗಿದೆ.

 ಯಾವ ಇಲಾಖೆ ಯಾವ ಯಾವ ಜಿಐಎಸ್ ಲೇಯರ್ ಮಾಡಬೇಕು, ಹೊಸದಾಗಿ ಯಾವ ಯೋಜನೆಗೆ ಪ್ರಸ್ತಾವನೆ ಸಲ್ಲಿಸಬೇಕು ಎಂಬ ಮಾಹಿತಿಯೂ ಒಂದೇ ಕಡೇ ಲಭ್ಯವಾಗಬೇಕು, ಇದನ್ನು ಯೋಜನೆವಾರು ದಿಶಾ ಸಮಿತಿಯ ಸಭೆಯಲ್ಲಿ ಪ್ರಗತಿಪರೀಶಿಲನೆ ಮಾಡಲಾಗುವುದು.

 ‘ಎಲ್ಲಾ ಮಾಹಿತಿಯೂ ಬೆರಳು ತುದಿಯಲ್ಲಿ ದೊರೆಯಬೇಕು. ಯಾವ ಇಲಾಖೆಯು ಸಹ ಯಾವೊದೋ ಹಳೆ ಬೋಗಸ್ ಡೇಟಾವನ್ನು ಇಟ್ಟುಕೊಂಡು ಕಥೆ ಹೇಳುವ ಹಾಗಿಲ್ಲ ಎಂದು ಜಿಲ್ಲಾಧಿಕಾರಿಗಳು ಖಡಕ್ ಸಂದೇಶ ನೀಡಿದ್ದಾರೆ. ದಯವಿಟ್ಟು ಬಗ್ಗೆ ವಿಶೇಷ ಗಮನಹರಿಸಲು ನಮ್ರತೆಯ ಮನವಿ’.