27th July 2024
Share

TUMAKURU:SHAKTHIPEETA FOUNDATION

ದಿನಾಂಕ:16.08.2019 ಕ್ಕೆ ಶಕ್ತಿಪೀಠ ಫೌಂಡೇಷನ್ ನೋಂದಣಿಯಾಗಿ ಒಂದು ವರ್ಷ ತುಂಬಿದ ಶುಭ ಸಂದರ್ಭದ ದಿನದಿಂದ ನಿಮಗಿದು ಗೊತ್ತೆ? ಇ ಪೇಪರ್ ಶಕ್ತಿಪೀಠ.ಇನ್ ಆಂಗ್ಲ ಭಾಷೆಯಲ್ಲಿಯೂ ಬರಲಿದೆ. ದಿನಾಂಕ:19.12.2019 ರಂದು ಮೌನವಾಗಿ ಕನ್ನಡದಲ್ಲಿ ಆರಂಭವಾಗಿ ಆಮೆ ವೇಗದಲ್ಲಿ ಸಾಗುತ್ತಿದೆ.

 ದಿನಾಂಕ:04.05.2001 ರಂದು ಸ್ಥಾಪನೆಯಾದ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ದಿನಾಂಕ: 16.08.2019  ರಂದು ಸ್ಥಾಪನೆಯಾದ ಶಕ್ತಿಪೀಠ ಫೌಂಡೇಷನ್  ಇದೂವರೆಗೂ ತುಮಕೂರು ನಗರ, ತುಮಕೂರು ಜಿಲ್ಲೆಗೆ ಸೀಮೀತವಾಗಿತ್ತು. ನೀರಾವರಿ ವಿಷಯಕ್ಕೆ ಮಾತ್ರ ರಾಜ್ಯಮಟ್ಟದಲ್ಲಿ ಶ್ರಮಿಸುತ್ತಿದ್ದು, ಕಳೆದ 2016 ರಿಂದ ಕರ್ನಾಟಕ ರಾಜ್ಯ ಮಟ್ಟದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಗಮನ ಹರಿಸಿದರೂ ಸಾಧನೆ ಸಮಾಧಾನ ತಂದಿಲ್ಲ.

 ಪ್ರಸ್ತುತ ಕರ್ನಾಟಕ ರಾಜ್ಯದ ದೆಹಲಿ ವಿಶೇಷ ಪ್ರತಿನಿಧಿ ಮತ್ತು ದೆಹಲಿಯಲ್ಲಿನ ಕರ್ನಾಟಕ ಭವನದ ರೆಸಿಡೆಂಟ್ ಕಮೀಷನರ್ ಮಾಡಬೇಕಾದ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿಶೇಷ ಗಮನಹರಿಸಲಿದೆ. ಈ ಹಿನ್ನಲೆಯಲ್ಲಿ ರಾಜ್ಯದ 30  ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಪಂಚಾಯತ್ ಸಿಇಓಗಳಿಗೆ ನಮ್ಮ ಪತ್ರಿಕೆ ಅವರ ಹೊಣೆಗಾರಿಕೆಯನ್ನು ಆಗಿಂದಾಗ್ಗೆ ನೆನಪಿಸುವ ಕೆಲಸ ಮಾಡಲಿದೆ.

 ರಾಜ್ಯದ 30 ಜಿಲ್ಲೆಗಳ ವ್ಯಾಪ್ತಿಯಲ್ಲೂ ಆಸಕ್ತ ಸಂಘಸಂಸ್ಥೆಗಳು, ವ್ಯಕ್ತಿಗಳು, ಪರಿಣಿತರು ನಮ್ಮೊಂದಿಗೆ ಕೈಜೋಡಿಸಲು ಅವಕಾಶ ಕಲ್ಪಿಸಲಾಗಿದೆ. ಆಂಗ್ಲ ಬಾಷೆಯಲ್ಲಿ ನಮ್ಮ ಕನ್ನಡದ ಬರಹಗಳನ್ನು ಭಾಷಾಂತರ ಮಾಡಲು ಆಸಕ್ತಿ ಇರುವವರು ಸಂಪರ್ಕಿಸ ಬಹುದು. ಉಚಿತವಾಗಿ ಸೇವೆ ಮಾಡುವವರು ಮತ್ತು ಸೇವೆಗೆ ತಕ್ಕ ಸಂಭಾವನೆ ಪಡೆದು ನಿಮ್ಮ ಸ್ಥಳದಿಂದಲೇ ಕಾರ್ಯನಿರ್ವಹಿಸ ಬಹುದು.

 ಹಲವಾರು ಇಲಾಖೆಯ ಅಧಿಕಾರಿಗಳು ನನಗೆ ಬಹಳಪೀಡ್ ಬ್ಯಾಕ್ ನೀಡುತ್ತಿದ್ದಾರೆ, ಅವರಿಗೂ ಅಭಿವೃದ್ಧಿ ವಿಷಯಗಳ ಬಗ್ಗೆ ತಮ್ಮ ಅನುಭವವನ್ನು ಬರೆಯಲು ಅವಕಾಶ ಕಲ್ಪಿಸಲಾಗುವುದು. ಕಾನೂನು ಮತ್ತು ನಿಯಮಗಳ ಬಗ್ಗೆ ಸರ್ಕಾರದ ಸಲಹೆ ಪಡೆದು ಮುಂದುವರೆಯಲು ಬಹಳಷ್ಟು ಅಧಿಕಾರಿಗಳು ವಿಷಯ ಹಂಚಿಕೊಂಡಿದ್ದಾರೆ. ನಮ್ಮ ಸಂಸ್ಥೆಯೇ ಈ ಬಗ್ಗೆ ವ್ಯವಹರಿಸಲು ತೀರ್ಮಾನಿಸಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.