22nd December 2024
Share

 TUMAKURU:SHAKTHIPEETA FOUNDATION

 ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು, ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಸೇರಿದಂತೆ ಭಾರತ ದೇಶದ ಸಚಿವರು, ಸಂಸದರು ನೇರವಾಗಿ ಅವರ ಕೈಗೊಳ್ಳುವ ಅಭಿವೃದ್ಧಿ ಚಟುವಟಿಕೆಗಳನ್ನು ನಮೋ ಆಪ್‌ಗೆ ಅಫ್ ಲೋಡ್ ಮಾಡುವ ಮೂಲಕ ಪ್ರಧಾನಿಯವರಿಗೆ ದಿನ ನಿತ್ಯದ ಕೆಲಸಗಳನ್ನು ಒಪ್ಪಿಸಬೇಕಿದೆ.

 ಇದು ಪಕ್ಷದ ಕಾರ್ಯಕ್ರಮ, ಈ ಬಗ್ಗೆ ನಾನು ವಿಶೇಷ ಗಮನ ಹರಿಸಿರಲಿಲ್ಲ, ಆದರೆ ನಿನ್ನೆ ಬೆಳಿಗ್ಗೆ ತುಮಕೂರು ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ದೂರವಾಣಿ ಮೂಲಕ ಕರೆಮಾಡಿ ರಾಷ್ಟ್ರೀಯ ಬಿ.ಜೆ.ಪಿ ಅಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾರವರು ಪೋನ್ ಮೂಲಕ ತರಾಟೆ ತೆಗೆದುಕೊಂಡರಪ್ಪ, ಏಕೆ ನಾವು ಇದೂವರೆಗೂ ನಮೋ ಆಪ್‌ಗೆ ಅಫ್‌ಲೋಡ್ ಮಾಡುತ್ತಿಲ್ಲವಾ ಎಂದರು.

 ಇಲ್ಲ ಸಾರ್ ನನಗೂ ಸರಿಯಾದ ಮಾಹಿತಿ ಇಲ್ಲ. ನನಗೂ ಈ ಬಗ್ಗೆ ಕೇಂದ್ರ ಬಿಜೆಪಿ ಕಚೇರಿಯಿಂದ ಫೋನ್ ಮಾಡಿದ್ದರು ಎಂದೆ. ಅವರು ತಿಳಿಸಿದ ಪ್ರಕಾರ ನಾಳೆಯಿಂದಲೇ ಚಾಲನೆ ನೀಡಲು ಮುಂದಾಗಿದ್ದಾರೆ.  ಬಿಜೆಪಿ ಜಿಲ್ಲಾ ಐಟಿ ಸೆಲ್ ಘಟಕದ ಸಂಚಾಲಕರಾದ  ಶ್ರೀ ಗುರುಪ್ರಸಾದ್ ರವರಿಗೆ ಎಲ್ಲಾ ಮಾಹಿತಿಯೊಂದಿಗೆ   ಆಗಮಿಸಲು ಸೂಚಿಸಿದ್ದಾರೆ.

 ದಿನಾಂಕ:15.08.2020 ರಿಂದ ನಮೋ ಆಫ್ ಮೂಲಕ ಸಂಸದರು ತಮ್ಮ ಕನಸಿನ ಯೋಜನೆಯನ್ನು ಹಂಚಿಕೊಳ್ಳಲಿದ್ದಾರೆ. ಇಷ್ಟೆಲ್ಲಾ ಕೆಲಸ ಮಾಡಿಯೂ ವರದಿ ಒಪ್ಪಿಸದೇ ಇರುವುದು ನನಗೂ ಅರ್ಥವಾಗುತ್ತಿಲ್ಲ. ಅವರು ಮೋದಿಯವರಿಗೆ ಒಪ್ಪಿಸುವ ವರದಿಯನ್ನು ಲೋಕಸಭಾ ಕ್ಷೇತ್ರದ ಜನತೆಗೂ ಡಿಜಿಟಲ್ ಮೂಲಕ ತಲುಪಿಸಲು ಯೋಜನೆ ರೂಪಿಸಲು ಸಂಸದರು ಮುಂದಾಗಿದ್ದಾರೆ. ಆಸಕ್ತರು ಸೂಕ್ತ ಸಲಹೆ ನೀಡ ಬಹುದು.