22nd December 2024
Share

TUMAKURU: SHAKTHIPEETA FOUNDATION

 ಸೋಶಿಯಲ್ ಮೀಡಿಯಾದಲ್ಲಿ ನನಗೆ ಬಂದ ಚಿತ್ರ, ಮಗು ನರೇಂದ್ರ 2022 ಕ್ಕೆ ಮನೆ ಇಲ್ಲದವರಿಗೆ ಮನೆ ಕೊಡುತ್ತೇನೆ ಅಂದಿದ್ದೆ,  ಆದರೆ ಲಿಸ್ಟ್‌ನಲ್ಲಿ ನನ್ನ ಹೆಸರು ಇರುತ್ತೆ ಅಂದುಕೊಂಡಿರಲಿಲ್ಲ ಕಂದ’

 ಹೌದು ಪ್ರತಿಯೊಬ್ಬ ಭಾರತೀಯನು ಇದನ್ನು ಸ್ವಾಗತಿಸಲೇ ಬೇಕು. ಎರಡು ಮಾತಿಲ್ಲ, ಆದರೇ ಮೋದಿಯವರ ಹೌಸಿಂಗ್ ಫಾರ್ ಆಲ್ – 2022 ಘೋಷಣೆಯನ್ನೂ  ಸಮರೋಪಾದಿಯಲ್ಲಿ ಜಾರಿಗೊಳಿಸುತ್ತಿರೋ ಅಥವಾ ಕಥೆ ಹೇಳುತ್ತಿರಾ ರಾಜ್ಯದ 40 ಜನ ಸಂಸದರೇ?

 ಬಾಕಿ ಉಳಿದಿರುವುದು ಕೇವಲ 730 ದಿನಗಳು ಮಾತ್ರ, ಈ ಬಗ್ಗೆ ತಾವುಗಳೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಏನೇನು ಮಾಡಿದ್ದೀರಿ ಎಂದು ಸ್ಪಷ್ಟ ಪಡಿಸುವಿರಾ? 2022 ಕ್ಕೆ ತಮ್ಮ ಕ್ಷೇತ್ರದ ಎಲ್ಲಾ ವಸತಿ ರಹಿತರಿಗೆ ವಸತಿ ನೀಡಲು ಶ್ರಮಿಸದಿದ್ದರೇ ಹೇಗೆ ಸ್ವಾಮಿ, ನೀವೇ ಯೋಚಿಸಿ?

ಆರ್.ಎಸ್.ಎಸ್ ಪಾತ್ರ ?

 ಶ್ರೀರಾಮನ ಜನ್ಮಸ್ಥಳದಲ್ಲಿಯೇ? ರಾಮನಿಗೆ ಸೂರು ನೀಡಲು ಇಡೀ ದೇಶದ ಆರ್.ಎಸ್.ಎಸ್ ಸಂಘ ಪರಿವಾರದವರೂ ಸುಮಾರು 500 ವರ್ಷಗಳ ಕಾಲ ಸುಧೀರ್ಘ ತಪಸ್ಸು ಮಾಡಿದ್ದಾರೆ ಎಂದರೆ ತಪ್ಪಾಗಲಾರದು.

 ಸಂಘ ಪರಿವಾರದ ಸಾವಿರಾರು ಸ್ವಯಂ ಸೇವಕರಿಗೂ ಇನ್ನೂ ಸೂರಿಲ್ಲ, ದೇಶದ ಪ್ರಧಾನಿ ಶ್ರೀ ನರೇಂದ್ರಮೋದಿಯವರೇ ಕಾಲಮಿತಿ ಗೊಳಿಸಿ ಸರ್ವರಿಗೂ ಸೂರು ಎಂದಿದ್ದರೂ, ತಾವೂ ಸಹ ಈ ಬಗ್ಗೆ ಏಕೆ ಗಮನ ಹರಿಸಿಲ್ಲ ಎಂಬುದು ಯಕ್ಷ ಪ್ರಶ್ನೆ?

 ತುಮಕೂರಿನ ಸಂಘಪರಿವಾದ ಕೆಲವು ಪ್ರಮುಖರು ಕಳೆದ ಲೋಕಸಭಾ ಚುನಾವಣೆಗೆ ಮುನ್ನ ಈ ಬಗ್ಗೆ ಮಾತನಾಡಿ ಈ ಯೋಜನೆಗೆ ಶ್ರಮಿಸಲೇ ಬೇಕು ಎಂದಿದ್ದರು. ನಾನು ಕಳೆದ 8-10 ತಿಂಗಳಿನಿಂದ ಕೆಲವರ ಜೊತೆ ಮಾತನಾಡುತ್ತಿದ್ದೇನೆ.

ಶ್ರೀ ರಾಮನ ಸೂರಿಗೆ ಭೂಮಿಪೂಜೆ ಮಾಡುವ ದಿವಸ ತುಮಕೂರು ನಗಾರಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಬೇಕು ಎಂದು ಓಡಾಡುತ್ತಿರುವ ಸಂಘಪರಿವಾರದ ಪ್ರಮುಖರೊಬ್ಬರೂ ನನಗೆ ಹೇಳಿದ ಮಾತು, ರಮೇಶ್ ಅವರೇ ಇನ್ನೂ ಒಂದು ವಾರದಲ್ಲಿ ಇಡೀ ನಗರದ ಎಲ್ಲಾ ವರ್ಗದ ವಸತಿ ರಹಿತರ ಪಟ್ಟಿಯನ್ನು ಅಂತಿಮಗೊಳಿಸುತ್ತೇವೆ, ಎಲ್ಲಾ ವರ್ಗದವರಲ್ಲೂ ಸಹ ಸಂಘದ ಸ್ವಯಂ ಸೇವಕರಿದ್ದಾರೆ ಎಂದು ಹೇಳಿದ್ದರು.

 ಶ್ರೀರಾಮನ ಸೂರಿನ ಗ್ರಹ ಪ್ರವೇಶದ ವೇಳೆಗಾದರೂ ಎಲ್ಲರಿಗೂ ವಸತಿ ನೀಡಲು ಶ್ರಮಿಸಿ ಎಂದಿದ್ದೆ, ನಿಮ್ಮವರೇ ಶಾಸಕರೂ, ಸಂಸದರೂ, ಮುಖ್ಯ ಮಂತ್ರಿಗಳು ಮತ್ತು ಪ್ರಧಾನ ಮಂತ್ರಿಗಳು ಹಾಗೂ ಕಾಲಮಿತಿ ಘೋಷಣೆಯೂ ನಿಮ್ಮದೇ ಆದರೂ ಏಕಿಲ್ಲ ಸ್ವಾಮಿ ಸಾಧನೆ? ಮೌನ ಮುರಿಯುವುದು ಯಾವಾಗ?