9th October 2024
Share

TUMAKURU:SHAKTHIPEETA FOUNDATION

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿರುವ ರಾಜ್ಯ ಮಟ್ಟದ ದಿಶಾ ಸಮಿತಿಯ ಸಭೆಯನ್ನು ಒಂದು ತಿಂಗಳೊಳಗೆ ನಡೆಸಲು ಕೇಂದ್ರ ಸರ್ಕಾರ, ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯಕಾರ್ಯದರ್ಶಿಯಾದ ಶ್ರೀಮತಿ ಶಾಲಿನಿ ರಜನೀಶ್‌ರವರಿಗೆ  ಸೂಚಿಸಿದ್ದಾರೆ.

  ದಿನಾಂಕ:28.08.2020 ರಂದು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜ್ಯಮಟ್ಟದ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳ ಸಭೆಯಲ್ಲಿ ರಾಜ್ಯವಾರು ಪ್ರಗತಿಪರಿಶೀಲನೆ ನಡೆಸಿದ್ದಾರೆ. ಸದಸ್ಯ ಕಾರ್ಯದರ್ಶಿರವರು ರಾಜ್ಯ ಮಟ್ಟದ ಪ್ರಥಮ ದಿಶಾ ಸಮಿತಿಯ ಸಭೆ ನಡೆಸಲು ಮಾನ್ಯ ಮುಖ್ಯಮಂತ್ರಿಗಳ ಸಮಯಕೋರಿ ಕಡತ ಮಂಡಿಸಿದ್ದಾರೆ.

  ದಿನಾಂಕ:31.08.2020 ರಂದು ತುಮಕೂರು ಲೋಕಸಭಾ ಸದಸ್ಯ ಹಾಗೂ ತುಮಕೂರು ಜಿಲ್ಲಾ ದಿಶಾ ಸಮಿತಿಯ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮಾನ್ಯ ಮುಖ್ಯ ಮಂತ್ರಿಗಳ ಕಚೇರಿಯ ಶ್ರೀ ಚನ್ನಬಸವೇಶ್ವರವರನ್ನು ಭೇಟಿಯಾಗಿ ಮಾನ್ಯ ಪ್ರಧಾನಿಯವರು ದಿಶಾ ಸಮಿತಿಯ ಕಾರ್ಯವೈಖರಿಯನ್ನು ನೇರವಾಗಿ ಗಮನಿಸಿಲಿದ್ದಾರೆ ಆದ್ದರಿಂದ ಶೀಘ್ರವಾಗಿ ಸಭೆಗೆ ದಿನಾಂಕ ನಿಗದಿಗೊಳಿಸಲು ಸಮಾಲೋಚನೆ ನಡೆಸಿದ್ದಾರಂತೆ.

 ತುಮಕೂರಿನ ಶಕ್ತಿಪೀಠ ಫೌಂಡೇಷನ್ ರಾಜ್ಯ ಮಟ್ಟದ ದಿಶಾ ಸಮಿತಿ ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳ ದಿಶಾ ಸಮಿತಿಯ ಕಾರ್ಯವೈಖರಿಗಳನ್ನು ಅಧ್ಯಯನ ಮಾಡಲು ಆರಂಭಿಸಿದೆ.

 ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರವಿರಲಿ, ಕೇಂದ್ರದಲ್ಲಿ ಯಾವುದೇ ಪಕ್ಷದ ಸರ್ಕಾರವಿರಲಿ, ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚಿಗೆ ಅನುದಾನ ಪಡೆಯಲು ಅನುಸರಿಸಬೇಕಾದ ತಂತ್ರಗಳು ಬಹಳ ಮುಖ್ಯವಾಗಿವೆ. ಕೆಲವು ಯೋಜನೆಗಳ ಅನುದಾನಗಳು ಯಾರ ಪ್ರಯತ್ನವೂ ಇಲ್ಲದೆ ನೇರವಾಗಿ ಬರಲಿವೆ.

 ವಿವಿಧ ಯೋಜನೆಗಳ ಪ್ರಸ್ತಾವನೆ ಮತ್ತು ಯೋಜನೆ ಮಂಜೂರಾತಿಗೆ ಪೂರಕವಾದ ವಾತಾವರಣ ಸೃಷ್ಠಿಸುವುದು ರಾಜ್ಯ ಸರ್ಕಾರಗಳ ಎಲ್ಲಾ ಇಲಾಖೆಗಳ ಜವಾಬ್ಧಾರಿಯಾಗಿದೆ. ಕೇಂದ್ರ ಸರ್ಕಾರ ಪೂರಕವಾಗಿ 2020-2021 ನೇ ಸಾಲಿನ ಆಯವ್ಯಯದಲ್ಲಿ ಮೂಲಭೂತ ಸೌಕರ್ಯಗಳ ಪೈಪ್‌ಲೈನ್ ಯೋಜನೆಯನ್ನು ಘೋಶಿಸಿದೆ.

 ಬಹಳಷ್ಟು ಇಲಾಖಾ ಅಧಿಕಾರಿಗಳು ವಾತಾವರಣ ಸೃಷ್ಠಿ ಮಾಡುವುದು ಇರಲಿ, ಕೇಂದ್ರ ಸರ್ಕಾರ ವಿವಿಧ ಯೋಜನೆಗಳಿಗೆ ಬಿಡುಗಡೆ ಮಾಡಿರುವ ಹಣವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಡಿಪಾಸಿಟ್ ಮಾಡಿಕೊಂಡು ಕುಳಿತಿರುವ ಅಪವಾದಗಳನ್ನು ಹೊತ್ತಿವೆ. ಇದರ ಪರಾಮರ್ಶೆ ದಿಶಾ ಸಮಿತಿಯ ಪ್ರಥಮ ಆಧ್ಯತೆಯಾಗಬೇಕು?

 ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಇದಕ್ಕೆ ಇತಿಶ್ರೀ ಆಡಲೇಬೇಕು, ಕೇಂದ್ರದಿಂದ ಬಂದ ಒಂದು ರೂಪಾಯಿಯ ಲೆಕ್ಕವೂ ಬೆರಳ ತುದಿಯಲ್ಲಿ ಒಂದೇ ಕಡೆ ಇರಬೇಕು ಎಂದು, ಈಗಾಗಲೇ ದಿಶಾ ಸಮಿತಿಯ ಸದಸ್ಯಕಾರ್ಯದರ್ಶಿರವರಿಗೆ ಖಡಕ್ ಸೂಚನೆ ನೀಡಿದ್ದಾರೆ ಎಂದು ದಿಶಾ ಪಡಸಾಲೆಯಲ್ಲಿ ಗುಸು ಗುಸು ಆರಂಭವಾಗಿದೆ.

 ಈ ಹಿನ್ನೆಲೆಯನ್ನು ಅರಿತಿರುವ ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಎಲ್ಲಾ ಪಕ್ಷದ ಮತ್ತು ಪಕ್ಷೇತರ ಶಾಸಕರುಗಳು ಮತ್ತು ಸಂಸದರುಗಳನ್ನು ರಾಜ್ಯ ಮಟ್ಟದ ದಿಶಾ ಸಮಿತಿಗೆ ನಾಮನಿರ್ಧೆಶಿತ ಸದಸ್ಯರನ್ನು ಮಾಡಲು ಮಾರ್ಗಸೂಚಿಯಲ್ಲೆ ಸೂಚಿಸಿದ್ದಾರೆ.

 ಇದೊಂದು ವಿನೂತನ ಪ್ರಯೋಗ, ಪ್ರಧಾನಿಯವರೇ ಅವಕಾಶ ಕಲ್ಪಿಸಿದ್ದಾರೆ. ಅಂಕಿ ಅಂಶಗಳಿಲ್ಲದೆ ಬಾಯಿ ಚಪಲಕ್ಕೆ ವಿರೋಧ ಮಾಡುವ ವಿರೋಧ ಪಕ್ಷಗಳು ಸಹ ಇನ್ನೂ ಮುಂದೆ  ಹೇಳಿಕೆ ನೀಡುವಾಗ ಎಚ್ಚರವಹಿಸ ಬೇಕಿದೆ. ಅವರ ಪಕ್ಷದ ಚುನಾಯಿತ ಜನಪ್ರತಿನಿಧಿಗಳು ಅಧ್ಯಯನ ಮಾಡುವುದು ಅಗತ್ಯವಾಗಿದೆ.

  ಎಲ್ಲಾ ಪಕ್ಷಗಳು ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ರಚಿಸಿರುವ ಅಭಿವೃದ್ಧಿ ಮಾಹಿತಿ ಪ್ರಕೋಷ್ಠದ ಮಾದರಿಯಲ್ಲಿ, ಅಭಿವೃದ್ಧಿ ವಿಭಾಗ ತೆರೆಯುವುದು ಅಗತ್ಯವಾಗಿದೆ. ಬಿಜೆಪಿಯಲ್ಲಿ ಈ ಪ್ರಕೋಷ್ಠಕದ ಪ್ರಥಮ ಸಂಚಾಲಕರಾಗಿ ಶ್ರೀ ಜಿ.ಎಸ್.ಬಸವರಾಜ್‌ರವರನ್ನು ಆಗಿನ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ನೇಮಿಸಿದ್ದರು. ಈ ವಿಚಾರದ ಬಗ್ಗೆಯೂ ಮಾನ್ಯ ಬಿಎಸ್‌ವೈ ರವರೊಂದಿಗೆ   ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸಮಾಲೋಚನೆ ನಡೆಸಿದ್ದು ಇತಿಹಾಸ.