TUMAKURU:SHAKTHIPEETA FOUNDATION
ತುಮಕೂರು ಲೋಕಸಭಾ ಕ್ಷೇತ್ರದ, ಗುಬ್ಬಿ ವಿಧಾನಸಭಾ ಕ್ಷೇತ್ರದ, ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯತ್ ಸಂಸದರ ಆದರ್ಶ ಗ್ರಾಮ ವ್ಯಾಪ್ತಿಯಲ್ಲಿನ ನಿರುದ್ಯೋಗಿಗಳಿಗೆ ಸೂಕ್ತ ತರಬೇತಿ ನೀಡಿ, ಸ್ವಯಂ ಉದ್ಯೋಗಕ್ಕೆ ಅವಕಾಶ ಒದಗಿಸಲು ಸಂಸದ ಶ್ರೀ ಜಿ.ಎಸ್.ಬಸವರಾಜ್‌ರವರು ಯೋಜನೆ ರೂಪಿಸಲು ಸೂಚಿಸಿದ್ದಾರೆ.
ಕೇಂದ್ರ ಸರ್ಕಾರದ ಮಿಷನ್ ಅಂತ್ಯೋದಯ ಯೋಜನೆಯಲ್ಲಿಯೇ ಈ ಕೆಲಸ ಮಾಡಲು ಮೋದಿಯವರು ದೇಶಾದ್ಯಾಂತ ಕರೆ ನೀಡಿದ್ದಾರೆ, ಈ ಯೋಜನೆ ಪ್ರಕಾರ ಈ ಪಂಚಾಯಿತಿ ವ್ಯಾಪ್ತಿಯಲ್ಲೂ ಈಗಾಗಲೇ ಈ ಯೋಜನೆ ಜಾರಿಯಾಗಲು ಪಟ್ಟಿ ಸಿದ್ಧವಾಗಿರಬಹುದು ಅಥವಾ ಕೇಂದ್ರ ಸರ್ಕಾರದ ಕಣ್ಣಿಗೆ ಮಣ್ಣೆರಚಿ ಯಾವುದೋ ಒಂದು ಬೋಗಸ್ ಪಟ್ಟಿ ನೀಡಿ ಕೈ ತೊಳೆದುಕೊಂಡಿರಬಹುದು. ಅದೇನೆ ಇರಲಿ.
ಹೆಚ್.ಎ.ಎಲ್ ಅಧಿಕಾರಿಗಳ ಪಾತ್ರ ಏನು?:-ಇದೇ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ರೂ 6400 ಕೋಟಿ ವೆಚ್ಚದ ಹೆಲಿಕ್ಯಾಪ್ಟರ್ ಘಟಕ ಆರಂಭವಾಗಲಿದೆ, ಘಟಕಕ್ಕೆ ಪೂರಕವಾದ ಅನ್ಸಿಲರಿ ಘಟಕ ಹಾಗೂ ಇತರೆ ಉದ್ದಿಮೆಗಳ ಸ್ಥಾಪನೆಗೆ ಹಾಗೂ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಏನು ಕ್ರಮ ಕೈಗೊಂಡಿದ್ದೀರಿ ಸ್ವಾಮಿ.
ಈ ಕೆಳಕಂಡ ವಿವಿಧ ಇಲಾಖೆ ಅಧಿಕಾರಿಗಳು, ಮಿಷನ್ ಅಂತ್ಯೋದಯ ಯೋಜನೆ ಅಡಿಯಲ್ಲಿ ಏನು ಮಾಡಿದ್ದೀರಿ ಸ್ವಾಮಿ. ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಏನು ಮಾಡಲು ಉದ್ದೇಶಿಸಿರುವಿರಿ ಪ್ರಕಟ ಮಾಡಿ ಸ್ವಾಮಿ.
ತುಮಕೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಶ್ರೀ ನಾಗೇಶ್‌ರವರ ಪಾತ್ರ ಏನು?:- ಈ ಯೋಜನೆಯ ಜಾರಿಗೆ ಪ್ರಮುಖ ಪಾತ್ರ ವಹಿಸಬೇಕಾದ ಇಲಾಖೆ, ಗುಬ್ಬಿಯಲ್ಲಿರುವ ಅಧಿಕಾರಿಗಳು ಕಂಕಣ ಕಟ್ಟಿ ನಿಲ್ಲಬೇಕು.
ಮಾರಶೆಟ್ಟಿಹಳ್ಳಿ ಆಡಳಿತಾಧಿಕಾರಿ ಸೋಮಶೇಖರ್ ಪಾತ್ರ ಏನು?
ಮಾರಶೆಟ್ಟಿಹಳ್ಳಿ ಪಿಡಿಓ ಶ್ರೀ ಗುರುಮೂರ್ತಿರವರ ಪಾತ್ರ ಏನು?
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಯಾದ ಶ್ರೀನಿವಾಸ್‌ರವರ ಪಾತ್ರ ಏನು?
ಗುಬ್ಬಿ ತಾಲ್ಲೂಕು ಪಂಚಾಯತ್ ಇಓ ಶ್ರೀ ನರಸಿಂಹಮೂರ್ತಿರವರ ಪಾತ್ರ ಏನು?
ಲೋಕಲ್ ಏರಿಯಾದ ರಾಷ್ಟ್ರೀಕೃತ ಬ್ಯಾಂಕ್ ಯಾವುದು, ಬ್ಯಾಂಕ್ ಮ್ಯಾನೇಜರ್ ಪಾತ್ರ ಏನು?
ತುಮಕೂರು ಜಿಲ್ಲಾ ಲೀಡ್‌ಬ್ಯಾಂಕ್ ಮ್ಯಾನೇಜರ್ ಶ್ರೀ ಜ್ಯೋತಿಗಣೇಶ್ ಪಾತ್ರ ಏನು?
ತುಮಕೂರು ಜಿಲ್ಲಾ ನಬಾರ್ಡ್ ಅಧಿಕಾರಿಯಾದ ಶ್ರೀಮತಿ ಕೀರ್ತಿಪ್ರಭರವರ ಪಾತ್ರ ಏನು
ಕೆಎಸ್‌ಎಸ್‌ಐಡಿಸಿ/ಕೆಐಡಿಬಿಬಿ ಅಧಿಕಾರಿಗಳೇ ನಿಮ್ಮ ಪಾತ್ರ ಏನು?
ಕೃಷಿ ಅಧಿಕಾರಿಗಳೇ ನಿಮ್ಮ ಪಾತ್ರ ಏನು?
ತೋಟಗಾರಿಕೆ ಅಧಿಕಾರಿಗಳೇ ನಿಮ್ಮ ಪಾತ್ರ ಏನು?
ರೇಷ್ಮೆ ಅಧಿಕಾರಿಗಳೇ ನಿಮ್ಮ ಪಾತ್ರ ಏನು?
ಅರಣ್ಯ ಅಧಿಕಾರಿಗಳೇ ನಿಮ್ಮ ಪಾತ್ರ ಏನು?
ಆಯುಷ್ ಅಧಿಕಾರಿಗಳೇ ನಿಮ್ಮ ಪಾತ್ರ ಏನು?
ಪಶುಸಂಗೋಪನಾ ಅಧಿಕಾರಿಗಳೇ ನಿಮ್ಮ ಪಾತ್ರ ಏನು?
ಮಿನುಗಾರಿಕೆ ಅಧಿಕಾರಿಗಳೇ ನಿಮ್ಮ ಪಾತ್ರ ಏನು?
ಖಾಧಿ ಗ್ರಾಮೋದ್ಯೋಗ ಅಧಿಕಾರಿಗಳೇ ನಿಮ್ಮ ಪಾತ್ರ ಏನು?
ಪ್ರವಾಸೋದ್ಯೋಮ ಅಧಿಕಾರಿಗಳೇ ನಿಮ್ಮ ಪಾತ್ರ ಏನು?
ಯುವಜನ ಮತ್ತು ಕ್ರೀಡಾ ಅಧಿಕಾರಿಗಳೇ ನಿಮ್ಮ ಪಾತ್ರ ಏನು?
ಹೀಗೆ ವಿವಿಧ ಇಲಾಖಾ ಅಧಿಕಾರಿಗಳು 2022 ರ ವೇಳೆಗೆ ರೈತರ ಆದಾಯ ದುಪಟ್ಟು ಮಾಡಲು ಏನು ಮಾಡಿದ್ದೀರಿ, ಈ ಯೋಜನೆಗೆ ಪೂರಕವಾಗಿ ತಿಪಟೂರು ತಾಲ್ಲೂಕು ಕೊನೆಹಳ್ಳಿ ಕೆವಿಕೆ ಅಧಿಕಾರಿಗಳು ಏನು ಮಾಡಿದ್ದಾರೆ. ಸಂಸದರ ಆದರ್ಶ ಗ್ರಾಮದಲ್ಲಿ ಎಲ್ಲಾ ಇಲಾಖೆಗಳು ಸಕ್ರೀಯ ಪಾತ್ರವಹಿಸಬೇಕು.
ನೋಡೆಲ್ ಅಧಿಕಾರಿ ಯಾರು?:- ಈ ಯೋಜನೆ ಅನುಷ್ಠಾನ ಆಗಬೇಕಾದಲ್ಲಿ ಒಬ್ಬ ಅಧಿಕಾರಿಯನ್ನು ನೋಡೆಲ್ ಅಧಿಕಾರಿಯಾಗಿ ಸಂಸದರ ಆದರ್ಶ ಗ್ರಾಮದ ನೋಡೆಲ್ ಅಧಿಕಾರಿಯಾದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಯಾದ ಶ್ರೀ ರಮೇಶ್‌ರವರು ಸಂಬಂಧಿಸಿದವರ ಅನುಮತಿ ಪಡೆದು ನೇಮಕ ಮಾಡುವುದು ಸೂಕ್ತವಾಗಿದೆ.
ಇಷ್ಟು ಇಲಾಖೆಗಳು ಬೀದಿಗಿಳಿದರೆ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲವೇ?
ಇವೆರೆಲ್ಲಾ ವಿಶೇಷ ಆಸಕ್ತಿ ವಹಿಸಿದರೂ ಸ್ವಯಂ ಉದ್ಯೋಗ ಬೇಕು ಎನ್ನುವ ಎಷ್ಟು ಮಂದಿ ಇದ್ದೀರಿ, ನೀವೂ ಮುಂದೆ ಬರಬೇಕಲ್ಲವೇ, ಆಸಕ್ತಿ ಇದ್ದಲ್ಲಿ ಗ್ರಾಮ ಪಂಚಾಯಿತಿಗೆ ಮನವಿಕೊಡಿ, ನಿಮಗೆ ಸೂಕ್ತ ತರಬೇತಿ, ಸಾಲ, ನಿವೇಶನ, ಮಾರುಕಟ್ಟೆ, ಮೂಲಭೂತ ಸೌಲಭ್ಯ, ಇತ್ಯಾದಿ ಅಗತ್ಯವಿರುವ ಎಲ್ಲಾ ಸೌಲಭ್ಯ ಮನೆ ಬಾಗಿಲಗೆ ತಲುಪಿಸುವುದೇ ಸಂಸದರ ಆದರ್ಶ ಗ್ರಾಮ ಯೋಜನೆ ಕನಸು.