29th March 2024
Share

TUMAKURU: SHAKTHIPEETA FOUNDATION

 ದಿನಾಂಕ:06.09.2020 ರಿಂದ ದಿನಾಂಕ:06.10.2020 ರವರೆಗೆ ಸಂಸದರ ಆದರ್ಶ ಗ್ರಾಮ ಮಾಸ ಆಚರಣೆ ಅಂದೋಲನ ಹಮ್ಮಿಕೊಳ್ಳಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್  ಅಧಿಕಾರಿಗಳಿಗೆ ಕರೆ ನೀಡಿದರು.

  ದಿನಾಂಕ:06.09.2020  ರಂದು ನಡೆದ ಗುಬ್ಬಿ ವಿಧಾನಸಭಾ ಕ್ಷೇತ್ರದ ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯ ಸಂಸದರ ಆದರ್ಶ ಗ್ರಾಮ ಯೋಜನೆ 5 ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲಾ ವಿಚಾರಗಳನ್ನು ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಚರ್ಚಿಸಲು ಸಮಯ ಅವಕಾಶ ಕೊರತೆ ಇರುವುದರಿಂದ ಇಲಾಖಾವಾರು ಸಭೆಗಳನ್ನು ನಡೆಸುತ್ತಾ ಬಂದಿದ್ದೇನೆ.

  ಕೇಂದ್ರ ಸರ್ಕಾರ ವಿಡಿಯೋ ಕಾನ್‌ನ್ಪೆರೆನ್ಸ್ ಮೂಲಕ ಸಭೆ ನಡೆಸಲು ಸೂಚಿಸಿದೆ, ಈಗಾಗಲೇ ಎನ್.ಐ.ಸಿ ಗೆ ಪತ್ರ ನೀಡಿದ್ದು ದೆಹಲಿಯಿಂದ ಅನುಮೋದನೆ ಆಗಿದೆ. ನಮ್ಮ ಕಚೇರಿಗೆ ಕೆಲವು ಉಪಕರಣ ನೀಡಿ, ಸಂಪರ್ಕ ನೀಡಲು ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆ. ಇನ್ನೂ ಮುಂದೆ ವಿಸಿ ಮೂಲಕ ಸಭೆ ನಡೆಸಲಾಗುವುದು.

 ಸಂಸದರ ಆದರ್ಶ ಗ್ರಾಮ ಯೋಜನೆಯ ಕಾಮಗಾರಿಗಳಿಗೆ ಚಾಲನೆ ನೀಡಲು  ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್‌ರವರ ಸಮಯವನ್ನು ನಿಗದಿಗೊಳಿಸಿ, ಜಿಲ್ಲಾಧಿಕಾರಿ, ಜಿಲ್ಲಾಪಂಚಾಯತ್ ಸಿಇಓ ಸೇರಿದಂತೆ ಪ್ರೋಟೋಕಾಲ್ ಪ್ರಕಾರ ಎಲ್ಲರನ್ನು ಆಹ್ವಾನಿಸಲು ಸೂಚಿಸಿದರು. ಮಾರಶೆಟ್ಟಿಹಳ್ಳಿಯಲ್ಲಿ ಸಭೆ ಆಯೋಜಿಸಿ 18 ಗ್ರಾಮಗಳ ಕನಿಷ್ಠ ಒಂದೊಂದು ಕಾಮಗಾರಿಗೆ ಅಲ್ಲಿಂದಲೇ ಚಾಲನೆ ನೀಡಲು ಅಗತ್ಯ ಕ್ರಮಕೈಗೊಳ್ಳಲು ಸಲಹೆ ನೀಡಿದರು.

 ತುಮಕೂರು ಉಪವಿಭಾಗಾಧಿಕಾರಿ ಶ್ರೀ ಅಜಯ್ ತುಮಕೂರು ಸ್ಮಾರ್ಟ್ ಸಿಟಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ, ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ರವರು ಅವರ ಜೊತೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇವರು ಮಾರಶೆಟ್ಟಿಹಳ್ಳಿ ಸಂಸದರ ಆದರ್ಶ ಗ್ರಾಮ ಮತ್ತು ಹೆಚ್.ಎ.ಎಲ್.ಸ್ಮಾರ್ಟ್ ವಿಲೇಜ್ ಮಾಸ್ಟರ್ ಪ್ಲಾನ್ ಮಾಡಲು ವಿಶೇಷ ಗಮನಹರಿಸಲು ಸಲಹೆ ನೀಡಿದರು.

 ಇಂದಿನ ಸಭೆಯಲ್ಲಿನ ಅಜೆಂಡಾ  ಸುಮಾರು 81 ಅಂಶಗಳನ್ನು ಒಳಗೊಂಡಿದೆ, ವಿವಿಧ ಇಲಾಖೆಗಳು ಸಮರೋಪಾದಿಯಲ್ಲಿ ತಮ್ಮ ವ್ಯಾಪ್ತಿಗೆ ಬರುವ ಯೋಜನೆಗಳ ಪ್ರಸ್ತಾವನೆಯನ್ನು ಸಿದ್ಧಪಡಿಸಲೇಬೇಕು. ನಮ್ಮ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರ ಆಶಯದಂತೆ ಎಲ್ಲಾ ಯೋಜನೆಗಳನ್ನು ಜಾರಿ ಮಾಡುವ ಮೂಲಕ ದೇಶಕ್ಕೆ ಮಾದರಿಯಾಗಲೇ ಬೇಕು ಎಲ್ಲರೂ ಶ್ರಮ ಹಾಕಬೇಕು ಎಂದರು.

  ಸಂಸದರ ಆದರ್ಶ ಗ್ರಾಮಕ್ಕೆ ಯಾವುದೇ ನಿರ್ಧಿಷ್ಠ ಅನುದಾನವಿಲ್ಲ, ಆದರೇ ಪ್ರಸ್ತಾವನೆ ಸಲ್ಲಿಸಿದಲ್ಲಿ ವಿಶೇಷ ಒತ್ತು ನೀಡಿ ಕೇಂದ್ರದ ಎಲ್ಲಾ ಇಲಾಖೆಗಳು ಆಯಾ ಇಲಾಖಾ ಯೋಜನೆಗಳಿಗೆ ಮಂಜೂರಾತಿ ನೀಡಲಿವೆ. ಇದೇ ರೀತಿ ರಾಜ್ಯ ಸರ್ಕಾರವೂ ವಿಶೇಷ ಒತ್ತು ನೀಡಲಿದೆ ಎಂದರು.

 ಈಗಾಗಲೇ ಮಾನ್ಯ ಮುಖ್ಯ ಮಂತ್ರಿಗಳು ಹೆಚ್.ಎ.ಎಲ್. ಸ್ಮಾರ್ಟ್ ವಿಲೇಜ್ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿರುವ ಹಿನ್ನಲೆಯಲ್ಲಿ  ದಿನಾಂಕ:06.10.2020 ರಂದು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ದಿಶಾ ಸಮಿತಿಯ ಪ್ರಥಮ ಸಭೆ ನಡೆಯಲಿದೆ. ಅಂದಿನ ಸಭೆಯಲ್ಲಿ ಪೂರ್ಣ ಪ್ರಮಾಣದ ಪ್ರಸ್ತಾವನೆಗೆ ಒಪ್ಪಿಗೆ ಪಡೆದು ಕೇಂದ್ರ ಸರ್ಕಾರಕ್ಕೆ ವಿವಿಧ ಇಲಾಖೆಗಳಿಂದ ವಿಶೇಷ ಅನುದಾನ ಮಂಜೂರು ಮಾಡಲು ಮನವಿ ಸಲ್ಲಿಸಲು ಸೂಚಿಸಿದರು.

 ಸಭೆಯಲ್ಲಿ ಎಸಿ ಅಜಯ್, ತಹಶೀಲ್ಧಾರ್ ಪ್ರದೀಪ್, ಆಡಳಿತಾಧಿಕಾರಿ ಸೋಮಶೇಖರ್, ಪಿಡಿಓ ಗುರುಪ್ರಸಾದ್, ಆರ್.ಐ.ನಾರಾಯಣ್, ನಾಗಭೂಷಣ್, ಸಣ್ಣಪ್ಪ, ನಿಜಗುಣ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.